• Home
  • »
  • News
  • »
  • state
  • »
  • Hubballi: ದೀಪಕ್ ಕೊಲೆ ಆರೋಪಿಗಳಿಗೆ ಸಿಐಡಿ ಡ್ರಿಲ್; ಮತ್ತೊಂದೆಡೆ SDPI, PFI ಮುಖಂಡರು ಅಂದರ್​

Hubballi: ದೀಪಕ್ ಕೊಲೆ ಆರೋಪಿಗಳಿಗೆ ಸಿಐಡಿ ಡ್ರಿಲ್; ಮತ್ತೊಂದೆಡೆ SDPI, PFI ಮುಖಂಡರು ಅಂದರ್​

ಪೊಲೀಸ್​ ಠಾಣೆ

ಪೊಲೀಸ್​ ಠಾಣೆ

ಹುಬ್ಬಳ್ಳಿಯಲ್ಲಿ ಒಂದು ಕಡೆ ಸಿಐಡಿ ತಂಡ ಗ್ರಾ.ಪಂ. ಸದಸ್ಯ ದೀಪಕ್ ಕೊಲೆ ಆರೋಪಿಗಳಿಗೆ ಸಿಐಡಿ ಅಧಿಕಾರಿಗಳು ಡ್ರಿಲ್ ಮಾಡ್ತಿದ್ದಾರೆ. ಮತ್ತೊಂದೆಡೆ ಪಿಎಫ್ಐ, ಎಸ್.ಡಿ.ಪಿ.ಐ. ಮುಖಂಡರ ಮನೆಗಳ ಮೇಲೆ ದಾಳಿ ಮಾಡಿದ್ದು, 9 ಜನರನ್ನು ವಶಕ್ಕೆ ಪಡೆಯಲಾಗಿದೆ.

  • Share this:

ಹುಬ್ಬಳ್ಳಿ (ಸೆ.27): ಗ್ರಾಮ ಪಂಚಾಯ್ತಿ ಸದಸ್ಯ ದೀಪಕ್ ಪಟದಾರಿ ಕೊಲೆ  ಪ್ರಕರಣಕ್ಕೆ (Deepak Murder Case) ಸಂಬಂಧಿಸಿದಂತೆ ಆರೋಪಿಗಳಿಗೆ ಸಿಐಡಿ ಅಧಿಕಾರಿಗಳು (CID Officers) ಫುಲ್ ಡ್ರಿಲ್ ಮಾಡ್ತಿದ್ದಾರೆ. ದೀಪಕ್ ಕೊಲೆ ಆರೋಪಿಗಳ ವಿಚಾರಣೆ ನಡೆಸ್ತಿರೋ ಕಸಬಾ ಪೇಟ್ ಪೊಲೀಸ್ ಠಾಣೆಯಲ್ಲಿಯೇ ಪಿಎಫ್ಐ ಹಾಗೂ ಎಸ್.ಡಿ.ಪಿ.ಐ.  ಮುಖಂಡರ (SDPI Leaders) ವಿಚಾರಣೆಯೂ ನಡೆದಿದೆ. ಧಾರವಾಡ ಜಿಲ್ಲೆಯಲ್ಲಿ ಒಟ್ಟು ಒಂಬತ್ತು ಜನರನ್ನು ವಶಕ್ಕೆ ಪಡೆದು ವಿಚಾರಣೆ (Questioned) ನಡೆಸಲಾಗಿದೆ.


ದೀಪಕ್ ಪಟದಾರಿ ಕೊಲೆ ಪ್ರಕರಣದ ತನಿಖೆ


ಗ್ರಾಮ ಪಂಚಾಯಿತಿ ಸದಸ್ಯ ದೀಪಕ್ ಪಟದಾರಿ ಕೊಲೆ ಪ್ರಕರಣದ ವಿಚಾರಣೆಯನ್ನು ಸಿಐಡಿಯಿಂದ ತೀವ್ರಗೊಳಿಸಿದೆ. ಕೊಲೆ ಆರೋಪಿಗಳನ್ನು ಮೂರು ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿರೊ ಸಿಐಡಿ ವಿಚಾರಣೆ ತೀವ್ರಗೊಳಿಸಿದೆ. ಆರೋಪಿಗಳನ್ನು 3 ದಿನಗಳ ಕಾಲ ಸಿಐಡಿ ವಶಕ್ಕೆ ಪಡೆದಿದೆ. ಕಸಬಾ ಪೇಟೆ ಪೊಲೀಸ್ ಠಾಣೆಯಲ್ಲಿ ಆರೋಪಿಗಳಿಗೆ ಡ್ರಿಲ್ ನಡೆಸಿದೆ.


ಆರೋಪಿಗಳಿಗೆ ಡ್ರಿಲ್


ಜುಲೈ 04 ರಂದು ರಾಯನಾಳದಲ್ಲಿ ಕೊಲೆ ಪ್ರಕರಣ ನಡೆದಿದೆ. ಕೊಲೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸಿಲ್ಲ.
ಸಮರ್ಪಕ ತನಿಖೆ ನಡೆಯುತ್ತಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿತ್ತು. ಹುಬ್ಬಳ್ಳಿಗೆ ಆಗಮಿಸಿರುವ 6 ಜನ ಸಿಐಡಿ ಅಧಿಕಾರಿಗಳ ತಂಡ, ವಿವಿಧ ಆಯಾಮಗಳಲ್ಲಿ ದೀಪಕ್ ಪಟದಾರಿ ಕೊಲೆ ಪ್ರಕರಣದ ತನಿಖೆ ನಡೆಸಿದೆ. ಸಿಐಡಿ ತಂಡದ ಆಗಮನದ ಹಿನ್ನೆಲೆಯಲ್ಲಿ ಕೆಲವರಲ್ಲಿ ನಡುಕ ಹುಟ್ಟಿದೆ.


ಪಿಎಫ್ಐ, ಎಸ್.ಡಿ.ಪಿ.ಐ. ಮುಖಂಡರು ವಶಕ್ಕೆ


ರಾಜ್ಯಾದ್ಯಂತ ಎಸ್.ಡಿ.ಪಿ.ಐ ಮತ್ತು ಪಿಎಫ್ಐ ಮುಖಂಡರ ಮನೆ ಮೇಲೆ ದಾಳಿ ಮುಂದುವರಿದಿದೆ. ಧಾರವಾಡ ಜಿಲ್ಲೆಯಲ್ಲಿಯೂ ಪ್ರತ್ಯೇಕ ಕಡೆ ದಾಳಿ ಮಾಡಿ ಒಂಬತ್ತು ಜನರನ್ನ ವಶಕ್ಕೆ ಪಡೆಯಲಾಗಿದೆ. ಹಳೇ ಹುಬ್ಬಳ್ಳಿಯ ಕಸಬಾಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ಮಾಡಿ ಏಳು ಜನ  ಎಸ್.ಡಿ.ಪಿ.ಐ ಮತ್ತು ಪಿಎಫ್ಐ ಮುಖಂಡರು ವಶಕ್ಕೆ ಪಡೆಯಲಾಗಿದೆ. ಕಸಬಾಪೇಟ್ ಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಳುಜನ ಅಂದರ್ ಆಗಿದ್ದಾರೆ. ಹೆಚ್ಚಿನ ವಿಚಾರಣೆಗೆ ಪೊಲೀಸರು‌ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ.


ಇದನ್ನೂ ಓದಿ: Sudha Murthy: ರಾಜಮಾತೆ ಕಾಲಿಗೆ ನಮಸ್ಕರಿಸಿದ ಸುಧಾ ಮೂರ್ತಿ; ನೀವು ಮಾಡಿದ್ದು ಸರೀನಾ ಎಂದು ನೆಟ್ಟಿಗರ ಪ್ರಶ್ನೆ!


ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿ ಮಿಶ್ರಿಕೋಟಿ ಗ್ರಾಮದ ಇಬ್ಬರು ವಶಕ್ಕೆ ಪಡೆಯಲಾಗಿದೆ. ಮಿಶ್ರಕೋಟಿ ಗ್ರಾಮದ ಸಿಕಂದರ್ ಶಾಲಗಾರ್ ಹಾಗೂ ಫಾರೂಕ್ ಕುಂಬಿ ವಶಕ್ಕೆ ಪಡೆಯಲಾಗಿದೆ. ಕಳೆದ‌ ನಾಲ್ಕು‌ ದಿನಗಳ ಹಿಂದೆ ಎನ್ ಐ ಎ‌ ತಂಡ ಪಿ‌ಎಫ್ ಐ ಕಾರ್ಯಕರ್ತರನ್ನ ವಶಕ್ಕೆ ಪಡೆದಿತ್ತು. ಈ‌ ವೇಳೆ  ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದ್ದ ಪಿ ಎಫ್ ಐ ಕಾರ್ಯಕರ್ತರು, ಪ್ರತಿಭಟನೆ ವೇಳೆ‌ ಸಿಕಂದರ್ ಹಾಗೂ ಫಾರೂಕ್ ಪೊಲೀಸರಿಗೆ‌ ತಳ್ಳಾಟ‌ ನಡೆಸಿದ್ದರು. ಸಿ ಆರ್ ಪಿ ಸಿ 107 ಅಡಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಧಾರವಾಡ ಗ್ರಾಮೀಣ ಡಿವೈಎಸ್ ಪಿ ಸಂಕದ ತಂಡದಿಂದ ವಶಕ್ಕೆ ಪಡೆದಿದ್ದು, ಕಲಘಟಗಿ ಠಾಣೆಯಲ್ಲಿ ವಿಚಾರಣೆ‌ ನಡೆಸುತ್ತಿದ್ದಾರೆ.


ಇದನ್ನೂ ಓದಿ: Uttara Kannada: ಅಡಿಕೆ ಕೊಳೆರೋಗಕ್ಕೆ ಮನೆಮದ್ದು! ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್


ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ


ಬೆಳೆ ಹಾನಿ, ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಕೊಡ್ಲಿವಾಡ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಹನುಮಪ್ಪ ಯಲ್ಲಪ್ಪ ಬಾಲೆಹೊಸೂರು(65) ಎಂದು ಗುರುತಿಸಲಾಗಿದೆ. ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್‌‌ಗೆ ಕರೆದೊಯ್ದರು ಪ್ರಯೋಜನವಾಗಿಲ್ಲ. ಬರದ್ವಾಡ ಕೆನರಾ ಬ್ಯಾಂಕ್ ಶಾಖೆಯಲ್ಲಿ ಹನುಮಂತಪ್ಪ 1.50 ಲಕ್ಷ ರೂಪಾಯಿ ಸಾಲ ಹೊಂದಿದ್ದ.


ಸಾಲ ಮರುಪಾವತಿಗೆ ಬ್ಯಾಂಕ್ ಒತ್ತಡ ಹೇರಿತ್ತೆನ್ನಲಾಗಿದೆ. 2 ಎಕರೆ 13 ಗುಂಟೆ ಹೊಲದ ಜೊತೆಗೆ ಹನುಮಂತಪ್ಪ, 9 ಎಕರೆ ಗುತ್ತಿಗೆ ಮಾಡಿಕೊಂಡಿದ್ದ. ಇತ್ತೀಚೆಗೆ ಸುರಿದ ಮಳೆ ಮತ್ತು ಪ್ರವಾಹಕ್ಕೆ ಎಲ್ಲಾ ಬೆಳೆಗಳು ಕೊಚ್ಚಿಕೊಂಡು ಹೋಗಿತ್ತು. ಇದರಿಂದ ತೀವ್ರವಾಗಿ ಮನನೊಂದಿದ್ದ ಹನುಮಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Published by:ಪಾವನ ಎಚ್ ಎಸ್
First published: