Fishing: ಕರಾವಳಿಯಲ್ಲಿ ಮತ್ಸ್ಯ ಕ್ಷಾಮ ಆತಂಕ; ಏಷ್ಯಾದ ಅತೀ ದೊಡ್ಡ ಸರ್ವಋತು ಬಂದರು ಸ್ಥಬ್ಧ

ಸದ್ಯ ಹೊರ ರಾಜ್ಯದಿಂದ ಅಂಜಲ್, ಡಿಸ್ಕೋ, ಬಂಗುಡೆ ಮೀನು ಖರೀದಿ ಮಾಡಿ ಇಲ್ಲಿ ವ್ಯಾಪಾರ ನಡೆಸಲಾಗುತ್ತಿದ್ದರೂ ಬೆಲೆ ದುಬಾರಿ ಕಾರಣ ಹಾಗೂ ಮೀನು ಫ್ರೆಶ್ ಇಲ್ಲದ ಕಾರಣ ಗ್ರಾಹಕರಿಲ್ಲದೇ ಮೀನು ಮಾರುಕಟ್ಟೆ ಬಿಕೋ ಎನ್ನುತ್ತಿದೆ.

ಮಲ್ಪೆ

ಮಲ್ಪೆ

  • Share this:
ಏಷ್ಯಾದಲ್ಲೇ ಅತೀ ದೊಡ್ಡ ಸರ್ವ ಋತು ಬಂದರು ಇದೀಗ ಅಕ್ಷರಶಃ ಸ್ಥಬ್ದವಾಗಿದೆ. ಮತ್ಸ್ಯ ಕ್ಷಾಮದಿಂದ ಉಡುಪಿ ಜಿಲ್ಲೆಯ ಮೀನುಗಾರ ಸಮುದಾಯ (Fisherman) ತತ್ತರಿಸಿದೆ. ಮೀನುಗಾರಿಕೆಗೆ (Fishing) ತೆರಳಿದ್ದ ಬೋಟುಗಳು ಅವಘಡಕ್ಕೆ ತುತ್ತಾಗುತ್ತಿದೆ. ಮೀನಿಲ್ಲದೇ ಮೀನು ಪ್ರಿಯರು ಹೈರಾಣಾಗಿದ್ದಾರೆ. ಕರಾವಳಿಯಲ್ಲಿ ಆರ್ಥಿಕತೆಗೆ (Economy) ಬಹುದೊಡ್ಡ ಪಾಲು ಮೀನುಗಾರಿಕೆ ಅಂದ್ರೆ ತಪ್ಪಾಗಲ್ಲ. ದಿನಕ್ಕೆ ಹತ್ತು ಕೋಟಿ ವಹಿವಾಟು ಮಲ್ಪೆ ಬಂದರಿನಲ್ಲೇ (Malpe) ನಡೆಯುತ್ತೆ. ಈ ಮೀನುಗಾರಿಕೆಯನ್ನೇ ಸುಮಾರು ಐವತ್ತು ಸಾವಿರ ಮಂದಿ ಅವಲಂಬಿಸಿದ್ದಾರೆ. ಮೀನುಗಾರಿಕೆಯೊಂದಿಗೆ ಹೋಟೆಲ್, ಐಸ್ ಪ್ಲಾಂಟ್, ಆಟೋ ಚಾಲಕರು, ಮೀನು ಸಾಗಾಟ ಟೆಂಪೋಗಳೆಲ್ಲ ಅವಲಂಬನೆಯಾಗಿದೆ.‌ ಒಳ್ಳೆಯ ಮೀನುಗಾರಿಕೆ ನಡೆದಾಗ ಆರ್ಥಿಕ ಓಡಾಟವೂ ಚೆನ್ನಾಗಿ ನಡೆಯುತ್ತೆ. ಹೀಗೆ ಬಹುತೇಕ ಉದ್ಯಮ ಮೀನುಗಾರಿಕೆಯನ್ನೇ ಅವಲಂಬಿಸಿವೆ. ಸದ್ಯ ಮೀನುಗಾರಿಕೆ ಸ್ಥಗಿತದಿಂದ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿದ್ದು, ಹತ್ತು ದಿನದಲ್ಲಿ ಸುಮಾರು ನೂರಾರು ಕೋಟಿ ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ.

ಅತೀ ದೊಡ್ಡ ಸರ್ವಋತು ಬಂದರಿನಲ್ಲಿ ಮೀನು ವ್ಯಾಪಾರ ಜೋರಾಗಿಯೇ ನಡೆಯಬೇಕಾದ ದಿನಗಳಲ್ಲಿ ಮೀನುಗಾರ ಕೈಕಟ್ಟಿ ಕುಳಿತುಕೊಳ್ಳುವ ಸಂಕಷ್ಟ ಎದುರಿಸುವಂತಾಗಿದೆ. ಸಮುದ್ರದಲ್ಲಿ ಮೀನುಗಾರಿಕೆ ನಡೆಸಬೇಕಿದ್ದ ಬೋಟುಗಳು ಬಂದರಿನಲ್ಲೇ ಲಂಗರು ಹಾಕಿವೆ. ಇದಕ್ಕೆಲ್ಲ ಅರಬ್ಬೀ ಸಮುದ್ರದಲ್ಲಿ‌ ಎದ್ದಿರುವ ತೂಫಾನ್ ಕಾರಣ.

Deep sea fishing faces hurdles malpe beach psud mrq
ಮಲ್ಪೆ ಬಂದರು


ಹತ್ತು ದಿನಗಳಿಂದ ಮೀನುಗಾರಿಕೆ ಬ್ರೇಕ್

ಕಳೆದ ಹತ್ತು ದಿನಗಳಿಂದ ತೂಫಾನ್ ಹಿನ್ನೆಲೆ ಮೀನುಗಾರಿಕೆಗೆ ಬ್ರೇಕ್ ಹಾಕಿದೆ ಜಿಲ್ಲಾಡಳಿತ. ಸಮುದ್ರದಲ್ಲಿ ಗಾಳಿಯ ಒತ್ತಡದಿಂದ‌ ಮೀನುಗಾರಿಕೆ ನಡೆಸಲಾಗದೇ ಮೀನುಗಾರರು ಖಾಲಿ ಕೈಯಲ್ಲಿ ಮರಳುತ್ತಿದ್ದಾರೆ.‌ ಅಲ್ಲಲ್ಲಿ ಬೋಟುಗಳು ಮುಳುಗಡೆಯಾಗುತ್ತಿದೆ. ಇನ್ನು ಹಲವು ಮೀನುಗಾರರು ಮಲ್ಪೆ ಗೆ ವಾಪಾಸ್ಸಾಗಲು ಸಾಧ್ಯವಾಗದೇ ಕಾರವಾರ ಹಾಗೂ ಗೋವಾ ಬಂದರಿನಲ್ಲೇ ಲಂಗರು ಹಾಕಿ ತಲೆ ಮೇಲೆ‌ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.

24 ದಿನ ಮೀನುಗಾರಿಕೆ ಸ್ಥಗಿತ

ಮೀನುಗಾರ ಸಮುದಾಯಕ್ಕೆ ಅತೀ ದೊಡ್ಡ ಸಂಕಷ್ಟದ ಸಮಯವಿದು.‌ ಈ ಹೊತ್ತಿನಲ್ಲಿ ಮೀನುಗಾರಿಕೆ ನಡೆಸಿ ಒಳ್ಳೆ ವ್ಯಾಪಾರ ನಡೆಸಬೇಕಿದ್ದ ಮೀನುಗಾರ ಸುಮ್ಮನೆ ಕುಳಿತಿದ್ದಾನೆ. ಬರೋಬ್ಬರಿ 24 ದಿನಗಳ ಮೀನುಗಾರಿಕೆ ಸ್ಥಗಿತವಾಗಿದೆ. ಇನ್ನೂ ಮೂರ್ನಾಲ್ಕು ದಿನಗಳವರೆಗೆ ಮೀನುಗಾರಿಕೆ ನಡೆಸದಂತೆ ಹವಾಮಾನ ಇಲಾಖೆ ಹಾಗೂ ಜಿಲ್ಲಾಡಳಿತ ಸೂಚನೆ ನೀಡಿದೆ.

Deep sea fishing faces hurdles malpe beach psud mrq
ಮೀನುಗಾರಿಕೆ ಬಂದರು


ಇದನ್ನೂ ಓದಿ:  Whale shark day: ಬಾಯಿ ಇದೆ, ಹಲ್ಲು ಇದೆ, ಆದ್ರೆ ಈ ಮೀನಿಗೆ ಜಗಿಯಲು ಬರಲ್ವಂತೆ!

ಹೀಗಾಗಿ ಇನ್ನಷ್ಟು ನಷ್ಟ ಸಂಕಷ್ಟ ಎದುರಿಸುವಂತಾಗಿದೆ. ಮಾರುಕಟ್ಟೆಯಲ್ಲಿ ಮೀನುಗಳೇ‌ ಸಿಗದೇ ತಿಂಗಳು ಕಳೆಯುತ್ತಿದೆ. ಮೀನುಗಳಿಲ್ಲದೆ ಮೀನು ವ್ಯಾಪಾರಿ ಸಂಕಷ್ಡ  ಅನುಭವಿಸಿದರೆ ಮೀನು ಪ್ರಿಯರು ಮೀನಿಲ್ಲದೆ ಪರದಾಡುವಂತಾಗಿದೆ.

ಗ್ರಾಹಕರಿಲ್ಲದೇ ಬಿಕೋ ಎನ್ನುತ್ತಿದೆ ಮಾರುಕಟ್ಟೆ

ಸದ್ಯ ಹೊರ ರಾಜ್ಯದಿಂದ ಅಂಜಲ್, ಡಿಸ್ಕೋ, ಬಂಗುಡೆ ಮೀನು ಖರೀದಿ ಮಾಡಿ ಇಲ್ಲಿ ವ್ಯಾಪಾರ ನಡೆಸಲಾಗುತ್ತಿದ್ದರೂ ಬೆಲೆ ದುಬಾರಿ ಕಾರಣ ಹಾಗೂ ಮೀನು ಫ್ರೆಶ್ ಇಲ್ಲದ ಕಾರಣ ಗ್ರಾಹಕರಿಲ್ಲದೇ ಮೀನು ಮಾರುಕಟ್ಟೆ ಬಿಕೋ ಎನ್ನುತ್ತಿದೆ.

Deep sea fishing faces hurdles malpe beach psud mrq
ಮೀನುಗಾರಿಕೆ ಬೋಟ್​​ಗಳು


ಒಟ್ಟಾರೆ ಜಿಲ್ಲೆಯಲ್ಲಿ ಮತ್ಸ್ಯ ಕ್ಷಾಮ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಮೀನುಗಾರ ಸಮುದಾಯ ದೇವರ ಮೊರೆ ಹೋಗುವಂತಾಗಿದೆ. ಆದಷ್ಡು ಬೇಗ ಕಡಲು ಶಾಂತವಾಗಿ ಮೀನುಗಾರಿಕೆ ಮತ್ತೆ ಪುಟಿದೇಳಬೇಕು ಅನ್ನೋದು ಎಲ್ಲರ ಪ್ರಾರ್ಥನೆ.

ಇದನ್ನೂ ಓದಿ:  Fishing Port: ಬಹು‌ಕೋಟಿ ವೆಚ್ಚದ ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಸ್ಥಳೀಯ ಮೀನುಗಾರರಿಂದಲೇ ವಿರೋಧ!

ಮೀನುಗಾರರ ಆರ್ಥಿಕ ಸ್ಥಿತಿ ಗಂಭೀರ

ಇನ್ನು ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಮೀನುಗಾರರ ಸ್ಥಿತಿ ಹೇಳೋದಾದ್ರೆ ಕಳೆದ ಹದಿನೈದು ದಿನಗಳಿಂದ ಬೋಟ್ ಗಳು ಬಂದರಿನಲ್ಲೆ ಲಂಗರು ಹಾಕಿವೆ.. ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ ಎನ್ನುತ್ತಿದ್ದಾರೆ ಮೀನುಗಾರರು. ಹೊರ ರಾಜ್ಯದ ಮೀನುಗಾರ ಕಾರ್ಮಿಕರನ್ನ ಸಂಬಳ ನೀಡಿ ಇಲ್ಲಿ ಉಳಿಸಿಕೊಳ್ಳುವುದೆ ದೊಡ್ಡ ಸವಾಲಾಗಿದೆ ಎನ್ನುತ್ತಿದ್ದಾರೆ.
Published by:Mahmadrafik K
First published: