ಪೆಟ್ರೋಲ್​​-ಡೀಸೆಲ್​​ ಬೆಲೆಯಲ್ಲಿ ತುಸು ಇಳಿಕೆ; ಇಲ್ಲಿದೆ ದರ ವಿವರ

Today's Fuel Price: ದೈನಂದಿನ ಬೆಲೆ ಬದಲಾವಣೆ ಪ್ರಕ್ರಿಯೆಯಲ್ಲಿ ಇಂದು ಮಾತ್ರ ಪೆಟ್ರೋಲ್​​-ಡೀಸೆಲ್​ ದರದಲ್ಲಿ ಕಡಿಮೆಯಾಗಿದೆ. ಅಲ್ಲದೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ ಇಂದಿನ ಬೆಲೆ 4,317 ರೂ ತಲುಪಿದೆ.

ಪೆಟ್ರೋಲ್​​ ಬಂಕ್​​​

ಪೆಟ್ರೋಲ್​​ ಬಂಕ್​​​

  • News18
  • Last Updated :
  • Share this:
ಬೆಂಗಳೂರು(ಮೇ.12): ಪೆಟ್ರೋಲ್​​-ಡೀಸೆಲ್​​ ಬೆಲೆಯಲ್ಲಿ ಇಂದು ತುಸು ಇಳಿಕೆಯಾಗಿದೆ. ಕರ್ನಾಕದಲ್ಲೀಗ ಪೆಟ್ರೋಲ್‌ ದರ ಲೀಟರ್‌ಗೆ 73.47 ರೂ, (26 ಪೈಸೆ ಇಳಿಕೆ) ಮತ್ತು ಡೀಸೆಲ್‌ ದರ 67.98 ರೂ (12 ಪೈಸೆ ಇಳಿಕೆ) ಆಗಿದೆ. ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ ದರ 71.18 ರೂ (25 ಪೈಸೆ ಇಳಿಕೆ), ಡೀಸೆಲ್‌ 65.86 ರೂ (12 ಪೈಸೆ ಇಳಿಕೆ) ಇದೆ ಎನ್ನಲಾಗಿದೆ.

ದೇಶದ ವಾಣಿಜ್ಯ ನಗರ ಮುಂಬೈನಲ್ಲಿ ಇಂದಿನ ಪೆಟ್ರೋಲ್‌ ದರ 76.77 ರೂ (24 ಪೈಸೆ ಇಳಿಕೆ) ಮತ್ತು ಡೀಸೆಲ್ ಬೆಲೆ 68.98 ರೂ (12 ಪೈಸೆ ಇಳಿಕೆ) ಆಗಿದೆ. ಕೋಲ್ಕತದಲ್ಲಿ ಇಂದಿನ ಪೆಟ್ರೋಲ್‌ ಬೆಲೆ 73.23 ರೂ (24 ಪೈಸೆ ಇಳಿಕೆ) ಮತ್ತು ಡೀಸೆಲ್ ಬೆಲೆ 67.59 ರೂ (12 ಪೈಸೆ ಇಳಿಕೆ) ಇದೆ. ಚೆನ್ನೈನಲ್ಲಿ ಇಂದಿನ ಪೆಟ್ರೋಲ್‌ ಬೆಲೆ 73.85 ರೂ (24 ಪೈಸೆ ಇಳಿಕೆ) ಹಾಗೂ ಡೀಸೆಲ್‌ ಬೆಲೆ 69.59 ರೂ (12 ಪೈಸೆ ಇಳಿಕೆ) ಆಗಿದೆ.

ದೈನಂದಿನ ಬೆಲೆ ಬದಲಾವಣೆ ಪ್ರಕ್ರಿಯೆಯಲ್ಲಿ ಇಂದು ಮಾತ್ರ ಪೆಟ್ರೋಲ್​​-ಡೀಸೆಲ್​ ದರದಲ್ಲಿ ಕಡಿಮೆಯಾಗಿದೆ. ಅಲ್ಲದೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ ಇಂದಿನ ಬೆಲೆ 4,317 ರೂ ತಲುಪಿದೆ.

ಇದನ್ನೂ ಓದಿ: ಬಿಎಸ್​​ವೈಗೆ ವಯಸ್ಸಾಗಿದೆ, ಆದರೂ ಮಲಗಿದಾಗ ಸಿಎಂ ಖುರ್ಚಿಯದ್ದೇ ಕನಸು; ಮಾಜಿ ಸಿಎಂ ಸಿದ್ದರಾಮಯ್ಯ

ಇತ್ತೀಚೆಗಷ್ಟೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಿಲ್ಲದ ಕಾರಣ ಕೊಂಚ ನಿರಾಳವಾಗಿದ್ದ ವಾಹನ ಸವಾರರಿಗೆ ಕಹಿಸುದ್ದಿ ಸಿಕ್ಕಿತ್ತು. ಮೂರು ತಿಂಗಳ ಮುನ್ನ ಬೆಲೆ ಏರಿಕೆಗೆ ತತ್ತರಿಸಿ ಹೋಗಿದ್ದ ವಾಹನ ಸವಾರರಿಗೆ ಮತ್ತೆ ಸಂಕಷ್ಟ ಎದುರಾಗಲಿದೆ ಎನ್ನಲಾಗಿತ್ತು. ಮುಂದಿನ ದಿನಗಳಲ್ಲಿ ಇಂಧನ ದರದಲ್ಲಿ ಭಾರೀ ಏರಿಕೆಯಾಗಲಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕೂಡ ಲೀಟರ್​​ಗೆ 5 ರೂ.ನಿಂದ 10 ರೂ. ಏರಿಕೆಯಾಗಬಹುದು ಎಂದು ಹೇಳಲಾಗುತ್ತಿತ್ತು.

ಇದನ್ನೂ ಓದಿ: ರಾತ್ರೋರಾತ್ರಿ ಫೇಮಸ್ ಆದ ಮತಗಟ್ಟೆ ಅಧಿಕಾರಿ: ಹಳದಿ ಸೀರೆಯಲ್ಲಿ ಮಿಂಚಿದ ಈ ಸುಂದರಿ ಯಾರು?

ಇರಾನ್​​ನಿಂದ ತೈಲ ಆಮದು ಮಾಡಿಕೊಳ್ಳಲು ಅಮೆರಿಕ ನೀಡಿದ್ದ ವಿನಾಯಿತಿ ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ. ಇದು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಗೆ ಕಾರಣವಾಗಿದೆ. ಈ ಆಮದು ಮೇಲಿನ ನಿರ್ಬಂಧ ಹೇರಿದ ಪರಿಣಾಮ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 5 ರಿಂದ 10 ರೂ.ವರೆಗೆ ಏರಿಕೆಯಾಗಲಿದೆ ಎನ್ನುತ್ತಿದ್ದವು ಮೂಲಗಳು.
First published: