• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • JOC ಕೋರ್ಸ್ ಪಿಯುಸಿಗೆ ತತ್ಸಮಾನ; ಆಕ್ಸಿಜನ್ ಘಟಕ ನಿರ್ಮಾಣಕ್ಕೆ ಉತ್ತೇಜನ: ಸಂಪುಟ ಸಭೆಯಲ್ಲಿ ಬಂದ ನಿರ್ಣಯಗಳಿವು

JOC ಕೋರ್ಸ್ ಪಿಯುಸಿಗೆ ತತ್ಸಮಾನ; ಆಕ್ಸಿಜನ್ ಘಟಕ ನಿರ್ಮಾಣಕ್ಕೆ ಉತ್ತೇಜನ: ಸಂಪುಟ ಸಭೆಯಲ್ಲಿ ಬಂದ ನಿರ್ಣಯಗಳಿವು

cm ಬಸವರಾಜ ಬೊಮ್ಮಾಯಿ

cm ಬಸವರಾಜ ಬೊಮ್ಮಾಯಿ

ಆಕ್ಸಿಜನ್ ಘಟಕಗಳ ಸಂಖ್ಯೆ ಹೆಚ್ಚಿಸಲು ವಿವಿಧ ಉತ್ತೇಜಕ ಕ್ರಮಗಳಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ವಿಧಾನಸೌಧದಲ್ಲಿ ಬಸವಣ್ಣ ಪ್ರತಿಮೆ ನಿರ್ಮಾಣ, ಫೆಬ್ರವರಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜನೆ ಇತ್ಯಾದಿ ಕ್ರಮಗಳಿಗೆ ಸಭೆ ಅನುಮೋದನೆ ಕೊಟ್ಟಿದೆ.

  • Share this:

ಬೆಂಗಳೂರು(ಜುಲೈ 15): ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೆಲ ಮಹತ್ವದ ನಿರ್ಧಾರಗಳನ್ನ ಕೈಗೊಳ್ಳಲಾಗಿದೆ. ಕೋವಿಡ್​ನ ಮೂರನೇ ಅಲೆಯನ್ನು ಎದುರಿಸಲು ಸಜ್ಜಾಗುವ ನಿಟ್ಟಿನಲ್ಲಿ ಆಕ್ಸಿಜನ್ ಉತ್ಪಾದನೆಗೆ ಪುಷ್ಟಿ ಕೊಡಲು ವಿವಿಧ ಕ್ರಮಗಳಿಗೆ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆದಿದೆ. ಹಾಗೆಯೇ, ಎಸ್ಸೆಸ್ಸೆಲ್ಸಿ ಬಳಿಕ ಮಾಡಲಾಗುವ ಜೆಒಸಿ (JOC – Job Oriented Course) ಕೋರ್ಸ್​ಗಳನ್ನ ಪಿಯುಸಿಗೆ ಸಮಾನವೆಂದು ಪರಿಗಣಿಸಲು ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದೆ. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್​ಆರ್​ಪಿ) ಯಿಂದ ಸಿವಿಲ್ ಪೊಲೀಸ್​ಗೆ ಬರಬೇಕಾದರೆ ದೈಹಿಕ ಕ್ಷಮತೆಯ ಪರೀಕ್ಷೆ (ಫಿಸಿಕಲ್ ಎಕ್ಸಾಂ) ನಡೆಸಲು ನಿರ್ಧರಿಸಲಾಗಿದೆ. ವಿಧಾನಸೌಧದಲ್ಲಿ ಬಸವಣ್ಣ ಪ್ರತಿಮೆ ಸ್ಥಾಪನೆಗೆ ಒಪ್ಪಿಗೆ ನೀಡಲಾಗಿದೆ. ಸಹಕಾರ ಸಂಘ, ಬ್ಯಾಂಕ್​ಗಳ ಅಧ್ಯಕ್ಷ ಉಪಾಧ್ಯಕ್ಷ, ಪದಾಧಿಕಾರಿಗಳ ಚುನಾವಣೆಗೆ ಸಹಕಾರ ಇಲಾಖೆ ಬಂದ ಪ್ರಸ್ತಾವನೆಗೆ ಸಂಪುಟ ಸಭೆ ಅನುಮೋದನೆ ನೀಡಿದೆ.


ಇಂದು ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಸಭೆಯಲ್ಲಿ ಕೈಗೊಂಡ ಕೆಲ ನಿರ್ಣಯ ಮತ್ತು ಅನುಮೋದನೆಗಳ ಮಾಹಿತಿ ನೀಡಿದರು. ರಾಜ್ಯದಲ್ಲಿ ಆಮ್ಲಜನಕ ಉತ್ಪಾದನೆಯ (Oxygen Manufacturing Units) 9 ಘಟಕಗಳಿವೆ. ಇವುಗಳು 800 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದನೆಯ ಸಾಮರ್ಥ್ಯ ಹೊಂದಿವೆ. ಈ ಘಟಕಗಳ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಆಕ್ಸಿಜನ್ ಘಟಕ ಸ್ಥಾಪನೆಗೆ ಮುಂದೆ ಬಂದವರಿಗೆ ಶೇ. 25ರಷ್ಟು ಕ್ಯಾಪಿಟಲ್ ಸಬ್ಸಿಡಿ ನೀಡಲಾಗುತ್ತದೆ. ಮೂರು ವರ್ಷ ವಿದ್ಯುತ್ ಬಿಲ್​ನಲ್ಲಿ ವಿನಾಯಿತಿ ನೀಡಲಾಗುತ್ತದೆ. ಮೆಟ್ರಿಕ್ ಟನ್​ಗೆ 1 ಸಾವಿರ ರೂ ಪವರ್ ಟಾರಿಫ್ ಕೊಡಲಾಗುತ್ತದೆ. ಹಾಗೆಯೇ, ಭೂಮಿಯ ರಿಜಿಸ್ಟ್ರೇಷನ್​ನಲ್ಲೂ ವಿನಾಯಿತಿ ನೀಡಲಾಗುತ್ತದೆ ಎಂದು ಬೊಮ್ಮಾಯಿ ಅವರು ತಿಳಿಸಿದರು.


ರಾಜ್ಯದಲ್ಲಿ ವಿದೇಶೀ ನೇರ ಬಂಡವಾಳವನ್ನ ಆಕರ್ಷಿಸಲು ಮುಂದಿನ ವರ್ಷ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲಾಗುತ್ತದೆ. ಇನ್ವೆಸ್ಟ್ ಕರ್ನಾಟಕ 2022 ಅನ್ನು ಫೆಬ್ರವರಿ 9ರಿಂದ 12ರವರೆಗೆ ನಡೆಸಲು ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು. ಇನ್ನು, ದಾಸನಪುರದಲ್ಲಿ ನಿರ್ಮಾಣವಾಗಿರುವ ಎಪಿಎಂಸಿಯಲ್ಲಿಇ 93 ಲೀಸ್ ಕಂ ಸೇಲ್ ಮಳಿಗೆಗಳಿವೆ. ಇವುಗಳ ಪೈಕಿ 54 ಮಳಿಗೆಗಳನ್ನ ಬಾಡಿಗೆಗೆ ನೀಡಲಾಗಿದೆ. ಈಗ ಲೀಸ್ ಕಂ ಸೇಲ್ ಮೊತ್ತವನ್ನು 20 ಲಕ್ಷಕ್ಕೆ ಕಡಿತ ಮಾಡಲಾಗಿದೆ. 20 ಸಾವಿರ ರೂ ಇದ್ದ ಮಾಸಿಕ ಬಾಡಿಕೆ ದರವನ್ನು 12 ಸಾವಿರಕ್ಕೆ ಇಳಿಸಿದ್ದೇವೆ ಎಂದು ಬೊಮ್ಮಾಯಿ ಹೇಳಿದರು.


ಇದನ್ನೂ ಓದಿ: Rishabh Pant - ಇಂಗ್ಲೆಂಡ್​ನಲ್ಲಿ ಇಬ್ಬರು ಭಾರತೀಯ ಕ್ರಿಕೆಟಿಗರಿಗೆ ಕೋವಿಡ್ ಸೋಂಕು? ಕ್ವಾರಂಟೈನ್​ನಲ್ಲಿ ಪಂತ್


ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಕೆಲ ನಿರ್ಧಾರಗಳು:


* ಜೆಒಸಿ ಕೋರ್ಸ್​ಗಳನ್ನ ಪಿಯುಸಿ ತತ್ಸಮಾನವೆಂದು ಪರಿಗಣನೆ


* ವಿಧಾನಸೌಧದಲ್ಲಿ ಬಸವಣ್ಣ ಪ್ರತಿಮೆ ಸ್ಥಾಪನೆಗೆ ಒಪ್ಪಿಗೆ


* ಕೆಎಸ್​ಆರ್​ಪಿಯಿಂದ ಸಿವಿಲ್ ಪೊಲೀಸ್​ಗೆ ಬರಲು ಫಿಸಿಕಲ್ ಎಕ್ಸಾಂ ಕಡ್ಡಾಯ


* ಗದಗ್ ನಗರದಲ್ಲಿ ಪಶು ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಹೆಚ್ಚವರಿ 30 ಕೋಟಿ ಸೇರಿದಂತೆ 80 ಕೋಟಿ ರೂ ಅನುದಾನ


* 2022ರ ಫೆಬ್ರವರಿ 9ರಿಂದ 12ರವರೆಗೆ ವಿಶ್ವ ಬಂಡವಾಳ ‘ಹೂಡಿಕೆದಾರರ ಸಮಾವೇಶ ಇನ್ವೆಸ್ಟ್ ಕರ್ನಾಟಕ 2021 ಅನ್ನು ಆಯೋಜಿಸಲು ಒಪ್ಪಿಗೆ


* ರಾಜ್ಯದಲ್ಲಿ ಆಕ್ಸಿಜನ್ ಉತ್ಪಾದನೆ ಘಟಕಗಳನ್ನ ಹೆಚ್ಚಿಸಲು ವಿವಿಧ ಉತ್ತೇಜನಗಳಿರುವ ಕ್ರಮಕ್ಕೆ ಅನುಮೋದನೆ


* ದಾಸನಪುರ ಎಪಿಎಂಸಿ ಮಳಿಗೆಗಳ ಬಾಡಿಗೆ ದರ ಇಳಿಕೆ


* ಸಹಕಾರ ಸಂಘ, ಬ್ಯಾಂಕ್​ಗಳ ಪದಾಧಿಕಾರಿಗಳ ಚುನಾವಣೆ ನಡೆಸುವ ಪ್ರಸ್ತಾವನೆಗೆ ಒಪ್ಪಿಗೆ


* 139 ಕೈದಿಗಳನ್ನ ಸನ್ನಡತೆ ಆಧಾರದಲ್ಲಿ ಬಿಡುಗಡೆಗೆ ರಾಜ್ಯಪಾಲರಿಗೆ ಶಿಫಾರಸು

top videos


    * ಬೆಳೆ ಸರ್ವೆಗೆ ಹೊಸ ಆ್ಯಪ್ ರಚನೆಗೆ ಒಪ್ಪಿಗೆ

    First published: