Evening Digest: ಈ ದಿನದ ನೀವು ಓದಲೇಬೇಕಾದ ಟಾಪ್ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

G Hareeshkumar | news18-kannada
Updated:December 31, 2019, 6:52 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • Share this:
1.ಕುಗ್ಗಿದ ಆರ್ಥಿಕತೆಗೆ ಹೊಸವರ್ಷದ ಉಡುಗೊರೆ ; ಮೂಲಸೌಕರ್ಯ ವಲಯದ ಯೋಜನೆಗಳಿಗೆ 105 ಲಕ್ಷ ಕೋಟಿ ಹೂಡಿಕೆ

2024-25ರೊಳಗೆ 5 ಟ್ರಿಲಿಯನ್ ಡಾಲರ್ ಜಿಡಿಪಿ ಗುರಿಯೊಂದಿಗೆ ಮುಂದಿನ ಐದು ವರ್ಷದಲ್ಲಿ ಮೂಲಸೌಕರ್ಯ ವಲಯದಲ್ಲಿ 105 ಲಕ್ಷ ಕೋಟಿ ಹೂಡಿಕೆಗೆ ತೀರ್ಮಾನಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು. ಈ ಮೂಲಕ ಬಸವಳಿದಿರುವ ಆರ್ಥಿಕತೆಗೆ ಸರ್ಕಾರ ಹೊಸ ವರ್ಷದ ಉಡುಗೊರೆ ನೀಡಿದೆ.

2.ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಗೊತ್ತುವಳಿ ನಿರ್ಣಯ ಅಂಗೀಕರಿಸಿದ ಕೇರಳ ವಿಧಾನಸಭೆ

ಕೇಂದ್ರ ಸರ್ಕಾರ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶವ್ಯಾಪಿ ಪ್ರತಿಭಟನೆಗಳು ನಡೆಯುತ್ತಿದ್ದು, ಏತನ್ಮಧ್ಯೆ  ಕೇರಳ ವಿಧಾನಸಭೆ ಸಿಎಎ ವಿರುದ್ಧ ಗೊತ್ತುವಳಿ ನಿರ್ಣಯ ಅಂಗೀಕರಿಸಿದೆ. ಆಡಳಿತ ಪಕ್ಷವಾದ ಸಿಪಿಐ(ಎಂ) ಮತ್ತು ವಿರೋಧ ಪಕ್ಷವಾದ ಕಾಂಗ್ರೆಸ್ ನೇತೃತ್ವದ ಯುಪಿಎಫ್​ ಬೆಂಬಲಿತ ಪಕ್ಷಗಳು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಗೊತ್ತುವಳಿ ನಿರ್ಣಯಕ್ಕೆ ಮತ ಹಾಕಿದವು. ಬಿಜೆಪಿ ಓರ್ವ ಶಾಸಕ, ಕೇಂದ್ರದ ಮಾಜಿ ಸಚಿವ ಒ.ರಾಜಗೋಪಾಲ್ ಅವರು ಮಾತ್ರ ಸಿಎಎ ಪರ ಧ್ವನಿಮತ ಭಿನ್ನಾಭಿಪ್ರಾಯ ಹೊರಹಾಕಿದರು.

3.ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಭುಗಿಲೆದ್ದ ಅಸಮಾಧಾನ

ಮುಖ್ಯಮಂತ್ರಿ ಉದ್ಧವ್​​ ಠಾಕ್ರೆ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೀಗ ಮಹಾರಾಷ್ಟ್ರ ಕಾಂಗ್ರೆಸ್​ ನಾಯಕರು ಅಸಮಾಧಾನ ಹೊರಹಾಕಿದ್ದಾರೆ.​ ಇಂದು ಮಾಜಿ ಸಿಎಂ ಪ್ರಥ್ವಿರಾಜ್ ಚವಾಣ್ ಸೇರಿದಂತೆ ಹಲವರು ಕಾಂಗ್ರೆಸ್​ ಹೈಕಮಾಂಡ್​ ಸೋನಿಯಾ ಗಾಂಧಿ ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

4.ಜನರಲ್ ರಾವತ್ ನಿವೃತ್ತಿ ಬೆನ್ನಲ್ಲೇ ಭೂ ಸೇನಾ ಮುಖ್ಯಸ್ಥರಾಗಿ ಮನೋಜ್ ಮುಕುಂದ್ ನರವಣೆ ನೇಮಕಲೆಫ್ಟಿನೆಂಟ್ ಜನರಲ್ ಮನೋಜ್ ಮುಕುಂದ್ ನರವಣೆ ಅವರು ಭಾರತೀಯ ಭೂಸೇನೆಯ ನೂತನ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ. ಜನರಲ್ ಬಿಪಿನ್ ರಾವತ್ ಅವರ ಅಧಿಕಾರಾವಧಿ ಇವತ್ತು ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭೂ ಸೇನೆಗೆ ನೂತನ ಮುಖ್ಯಸ್ಥರನ್ನು ಆಯ್ಕೆ ಮಾಡಲಾಗಿದೆ. ಭೂಸೇನೆಯ ಮುಖ್ಯಸ್ಥರಾಗಿದ್ದ ರಾವತ್ ಅವರು ನೂತನವಾಗಿ ರಚಿತವಾಗಿರುವ ರಕ್ಷಣಾ ಪಡೆಗಳ ಮುಖ್ಯಸ್ಥರ ಸ್ಥಾನ ಅಲಂಕರಿಸಿದ್ಧಾರೆ.

5.ಯಶವಂತಪುರ ಫ್ಲೈಓವರ್​ನಲ್ಲಿ ಸಿಎಂ ಯಡಿಯೂರಪ್ಪ ಬೆಂಗಾವಲು ಕಾರು ಅಪಘಾತ; ಚಾಲಕನಿಗೆ ಗಂಭೀರ ಗಾಯ

ಪ್ರಧಾನಿ ನರೇಂದ್ರ ಮೋದಿ ಜ. 2ರಂದು ತುಮಕೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳ ಸಿದ್ಧತೆಯ ಪರಿಶೀಲನೆಗೆ ತೆರಳುತ್ತಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರ ಬೆಂಗಾವಲು ಕಾರು ಅಪಘಾತಕ್ಕೀಡಾಗಿದೆ. ಸಿಎಂ ಕಾರಿನ ಹಿಂದೆ ಬರುತ್ತಿದ್ದ ಕಾರು ಯಶವಂತಪುರ ಫ್ಲೈಓವರ್​ ಮೇಲೆ ಅಪಘಾತಕ್ಕೀಡಾಗಿದ್ದು, ಕಾರು ಚಾಲಕನಿಗೆ ಗಂಭೀರ ಗಾಯವಾಗಿದೆ.

6.ಹೊಸ ವರ್ಷಾಚರಣೆಗೆ ಬೆಂಗಳೂರಿನಾದ್ಯಂತ ಬಿಗಿಭದ್ರತೆ; ಪಾನಮತ್ತ ಮಹಿಳೆಯರಿಗೆ ಐಲ್ಯಾಂಡ್ಸ್; 32 ಫ್ಲೈಓವರ್ ಬಂದ್

ಹೊಸ ವರ್ಷಾಚರಣೆಗೆ ಕ್ಷಣಗಣನೆ ನಡೆದಿದೆ. ಕಾಸ್ಮೊಪೊಲಿಟನ್ ಸಿಟಿ ಎನಿಸಿರುವ ಬೆಂಗಳೂರಿನ ನಿವಾಸಿಗಳಿಗೆ ಹೊಸ ವರ್ಷದ ಸಂಭ್ರಮಾಚರಣೆಯೇ ಒಂದು ವಿಶೇಷ. ಕುಣಿದು ಕುಪ್ಪಳಿಸುವವರು, ಕುಡಿದು ತೂರಾಡುವವರು ಇವತ್ತು ಮಧ್ಯರಾತ್ರಿ ಎಲ್ಲೆಡೆ ಕಾಣಸಿಗುತ್ತಾರೆ. ಅದರಲ್ಲೂ ಎಂಜಿ ರಸ್ತೆ, ಕೋರಮಂಗಲ, ಯಲಹಂಕದಂತಹ ಪ್ರತಿಷ್ಠಿತ ಪ್ರದೇಶಗಳಲ್ಲಿ ಈ ದೃಶ್ಯ ತೀರಾ ಸಾಮಾನ್ಯ. ಹಿಂದಿನ ಕೆಲ ವರ್ಷಗಳಲ್ಲಿ ಸಂಭ್ರಮಾಚಾರಣೆಯ ನೆಪದಲ್ಲಿ ಕೆಲ ಕಿಡಿಗೇಡಿಗಳು ಅಸಭ್ಯ ವರ್ತನೆ ತೋರಿದ್ದಿದೆ. ಇದು ರಾಷ್ಟ್ರಾದ್ಯಂತ ಸುದ್ದಿಯಾಗಿ ಬೆಂಗಳೂರಿನ ಬಗ್ಗೆ ಕೆಟ್ಟ ಹೆಸರು ತಂದುಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಪೊಲೀಸರು ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಅದರಲ್ಲೂ ಮಹಿಳೆಯರ ಭದ್ರತೆಗೆ ಸಾಕಷ್ಟು ನಿಗಾ ವಹಿಸಲಾಗಿದೆ.

7.ಮಂಡ್ಯ ರೈತರಿಗೆ ಸಿಹಿ ಸುದ್ದಿ; ಜೂನ್​ನಲ್ಲಿ ಮೈಶುಗರ್ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ನಿರ್ಧಾರ

ಸಕ್ಕರೆ ನಗರಿಯ ರೈತರೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಂಡಿರುವ ಹಾಗೂ ಜಿಲ್ಲೆಯ ಪ್ರತಿಷ್ಠಿತ ಕಾರ್ಖಾನೆಗಳಲ್ಲೊಂದಾದ ಮೈಶುಗರ್ ಸಕ್ಕರೆ ಕಾರ್ಖಾನೆಯ ಪುನಾರಂಭಕ್ಕೆ ಸರ್ಕಾರ ನಿರ್ಧರಿಸಿದೆ. ಇಂದು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ರೈತ ನಾಯಕರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಕ್ಕರೆ ಸಚಿವ ಸಿ.ಟಿ. ರವಿ, ಜೂನ್ ತಿಂಗಳಲ್ಲಿ ಶುಗರ್ ಫ್ಯಾಕ್ಟರಿ ಪ್ರಾರಂಭಿಸುವ ವಿಚಾರವನ್ನು ತಿಳಿಸಿದರು. ಜನವರಿಯಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ

8.ತುಮಕೂರಿಗೆ 4 ಬಾರಿ ಬಂದಿರುವ ಮೋದಿ ಒಂದಾದರೂ ಭರವಸೆ ಈಡೇರಿಸಿದ್ದಾರಾ?; ವಿ.ಎಸ್. ಉಗ್ರಪ್ಪ ಪ್ರಶ್ನೆ

ಪ್ರಧಾನಿ ಮೋದಿ ಅವರು ಹೊಸ ವರ್ಷದ ಆರಂಭದಲ್ಲೇ ರಾಜ್ಯಕ್ಕೆ  ಬರುತ್ತಿದ್ದಾರೆ. ಅದರಲ್ಲೂ ತುಮಕೂರಿಗೆ ಬರುತ್ತಿದ್ದಾರೆ. ಪ್ರಧಾನಿ ಆದ್ಮೇಲೆ ಮೋದಿ ಅವರು  ತುಮಕೂರಿಗೆ ನಾಲ್ಕು ಬಾರಿ ಬಂದಿದ್ದಾರೆ. ನಾಲ್ಕು ಬಾರಿ ಬಾಂದಾಗಲೂ ನೀಡಿದ ಆಶ್ವಾಸನೆಗಳಲ್ಲಿ ಒಂದನ್ನಾದರೂ ಈಡೇರಿಸಿದ್ದೀರಾ? ಎಂದು ಕಾಂಗ್ರೆಸ್​ ನಾಯಕ ವಿ.ಎಸ್.ಉಗ್ರಪ್ಪ ಪ್ರಶ್ನೆ ಮಾಡಿದ್ದಾರೆ.

9.ಮುಂದಿನ ಸಿನಿಮಾ ಘೋಷಿಸಿ ಇಲ್ಲಾಂದ್ರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ; ಶಾರುಖ್ ಖಾನ್​ಗೆ ಅಭಿಮಾನಿ ಬೆದರಿಕೆ

ಬಾಲಿವುಡ್​ ಸ್ಟಾರ್​ ಶಾರುಖ್​ ಖಾನ್​ ನಟನೆಯ ‘ಜೀರೋ’ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಮಕಾಡೆ ಮಲಗಿತ್ತು. ಶಾರುಖ್​ ಹೀರೋಯಿಸಂ ಬಿಟ್ಟು ಭಿನ್ನ ಅವತಾರ ತಾಳಿದ್ದು ಪ್ರೇಕ್ಷಕರಿಗೆ ಇಷ್ಟವಾಗಲೇ ಇಲ್ಲ. ‘ಜೀರೋ’ ತೆರೆಕಂಡು ವರ್ಷವಾದರೂ ಶಾರುಖ್​ ಮುಂದಿನ ಸಿನಿಮಾ ಘೋಷಿಸಿಲ್ಲ. ಇದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಅಚ್ಚರಿಯ ವಿಚಾರ ಎಂದರೆ, ಮುಂದಿನ ಸಿನಿಮಾ ಘೋಷಿಸದ ಕಾರಣ ಶಾರುಖ್​ ಅಭಿಮಾನಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾನೆ!

10.ಆಫ್ರಿಕಾ ನೆಲದಲ್ಲಿ ಭಾರತ ಅಂಡರ್-19 ಹುಡುಗರ ಭರ್ಜರಿ ಆಟ; ಸರಣಿ ಗೆದ್ದು ಬೀಗಿದ ಭಾರತೀಯ ಕಿರಿಯರು!

ದಕ್ಷಿಣ ಆಫ್ರಿಕಾ ಪ್ರವಾಸ ಬೆಳೆಸಿದ್ದ ಭಾರತ ಅಂಡರ್-19 ತಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ದ. ಆಫ್ರಿಕಾ ಅಂಡರ್-19 ವಿರುದ್ಧ ಸರಣಿ ವಶಪಡಿಸಿಕೊಂಡಿದೆ. ನಿನ್ನೆ ನಡೆದ ಅಂತಿಮ ಪಂದ್ಯದಲ್ಲಿ ಸೋಲುಂಡಿತಾದರು, ಮೊದಲೆರಡು ಪಂದ್ಯ ಗೆದ್ದ ಪರಿಣಾಮ 2-1 ಅಂತರದಿಂದ ಸರಣಿ ಗೆದ್ದು ಬೀಗಿದೆ.

 
First published:December 31, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ