Evening Digest: ಈ ದಿನದ ನೀವು ಓದಲೇಬೇಕಾದ ಟಾಪ್ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

G Hareeshkumar | news18-kannada
Updated:December 13, 2019, 6:22 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • Share this:
1.ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಕಾಂಗ್ರೆಸ್​​​

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೂತನ ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಕಾಂಗ್ರೆಸ್​​ ಸುಪ್ರೀಂಕೋರ್ಟ್​ ಮೆಟ್ಟಿಲೇರಿದೆ. ಈ ಪೌರತ್ವ ತಿದ್ದುಪಡಿ ಮಸೂದೆಯೂ ಸಂವಿಧಾನದ 14ನೇ ವಿಧಿಯ ಉಲ್ಲಂಘನೆ ಮಾಡಿದೆ ಎಂದು ಸುಪ್ರೀಂಕೋರ್ಟ್​ಗೆ ಹೇಳಿದೆ. 

2.ಅತ್ಯಾಚಾರ ಅಪರಾಧಿಗೆ 21 ದಿನದಲ್ಲಿ ಶಿಕ್ಷೆ 

ಅತ್ಯಾಚಾರ ಆಪಾದಿತರು, ಮಹಿಳೆಯರ ಮೇಲೆ ಅಪರಾಧ ಕೃತ್ಯ ಎಸಗುವವರಿಗೆ 21 ದಿನದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಪಡಿಸುವ ಮಸೂದೆಗೆ ಆಂಧ್ರಪ್ರದೇಶ ವಿಧಾನಸಭೆ ಶುಕ್ರವಾರ ಅಂಗೀಕಾರ ನೀಡಿದೆ. ಪಕ್ಕದ ತೆಲಂಗಾಣ ರಾಜ್ಯದಲ್ಲಿ ಪಶುವೈದ್ಯೆ ಅತ್ಯಾಚಾರ ಮತ್ತು ಕೊಲೆ ನಡೆದ ಒಂದು ವಾರದ ಬಳಿಕ ಆಂಧ್ರ ಪ್ರದೇಶ ದಿಶಾ ಮಸೂದೆ ಹೆಸರಿನಲ್ಲಿ ಕಾನೂನು ಜಾರಿಗೆ ಮುಂದಾಗಿದೆ.

3.ಮುಕ್ತಿಗಾಗಿ ತಿಮ್ಮಪ್ಪನ ಸನ್ನಿಧಿಯಲ್ಲಿ ವ್ಯಕ್ತಿ ಆತ್ಮಹತ್ಯೆ; ತಾತ್ಕಲಿಕವಾಗಿ ಸ್ಥಗಿತಗೊಂಡ ದರ್ಶನ

ತಿರುಪತಿಯ ವೆಂಕಟೇಶ್ವರ ಸನ್ನಿಧಿಗೆ ಭೇಟಿ ನೀಡಿದ ಭಕ್ತರೊಬ್ಬರು ತಿರುಮಲದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರುವ ವಿಷಾದದ ಘಟನೆ ನಡೆದಿದೆ. ತಮಿಳುನಾಡು ಮೂಲಕ ಭಕ್ತರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ತಿರುಮಲಕ್ಕೆ ಹಾಲು ಸರಬರಾಜು ಮಾಡುತ್ತಿದ್ದ ವ್ಯಾನ್​ ಕೆಳಗೆ ಉದ್ದೇಶಪೂರ್ವಕವಾಗಿ ಬಿದ್ದು, ಇವರು ಸಾವನ್ನಪ್ಪಿದ್ದಾರೆ. ವೆಂಕಟೇಶ್ವರ ಸನ್ನಿಧಿ ಸಮೀಪವೇ ಈ ಘಟನೆ ನಡೆದಿದೆ.

 4.ರಾಹುಲ್​ ಗಾಂಧಿ ರೇಪ್​ ಇನ್​ ಇಂಡಿಯಾ ಹೇಳಿಕೆ; ಕ್ಷಮೆಯಾಚಿಸುವಂತೆ ಬಿಜೆಪಿ ಪಟ್ಟು

ಕೇಂದ್ರ ಸರ್ಕಾರವನ್ನು ಟೀಕಿಸುವ ಭರದಲ್ಲಿ ರೇಪ್​ ಇನ್​ ಇಂಡಿಯಾ ಎಂದಿದ್ದ ರಾಹುಲ್​ ಗಾಂಧಿ ಮಾತಿಗೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದ್ದು, ಈ ಕುರಿತು ಕಾಂಗ್ರೆಸ್​ ನಾಯಕ ಕ್ಷಮೆಯಾಚಿಸಬೇಕು ಎಂದು ಸಚಿವೆ ಸ್ಮೃತಿ ಇರಾನಿ ಪಟ್ಟು ಹಿಡಿದರು

5.ಪ್ರಧಾನಿ ಬೋರಿಸ್ ಜಾನ್ಸನ್ ಪುನರಾಯ್ಕೆ; ಎಡಪಂಥೀಯ ಪಕ್ಷಕ್ಕೆ ಮುಖಭಂಗ

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ನೇತೃತ್ವದ ಕನ್ಸರ್ವೇಟಿವ್ ಪಕ್ಷ ಹೊಸ ದಾಖಲೆಯೊಂದಿಗೆ ಮತ್ತೊಮ್ಮೆ ಅಧಿಕಾರ ಹಿಡಿದಿದೆ. ಅವಧಿಗೆ ಮುನ್ನ ನಡೆದ ಬ್ರಿಟನ್ ಸಾರ್ವತ್ರಿಕ ಚುನಾವಣೆಯಲ್ಲಿ 650 ಸ್ಥಾನಗಳ ಪೈಕಿ ಕನ್ಸರ್​ವೇಟಿವ್ ಪಕ್ಷ 360ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಅಭೂತಪೂರ್ವ ದಿಗ್ವಿಜಯ ಸಾಧಿಸಿದೆ. ಎಡಪಂಥೀಯ ಲೇಬರ್ ಪಾರ್ಟಿ ನಿರಾಸೆ ಅನುಭವಿಸಿದೆ.

6.ಆಸ್ಪತ್ರೆಯಲ್ಲಿ ಸಿದ್ದರಾಮಯ್ಯ ಜೊತೆ ರಮೇಶ್ ಜಾರಕಿಹೊಳಿ ರಹಸ್ಯ ಮಾತುಕತೆ

ಆಂಜಿಯೋಪ್ಲಾಸ್ಟಿ ಶಸ್ತ್ರ ಚಿಕಿತ್ಸೆ ಪಡೆದು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪಕ್ಷಾತೀತವಾಗಿ ಅನೇಕ ರಾಜಕೀಯ ಮುಖಂಡರು ಭೇಟಿ ಮಾಡಿದರು. ಈ ವೇಳೆ, ರಮೇಶ್ ಜಾರಕಿಹೊಳಿ ಅವರೂ ಸಿದ್ದರಾಮಯ್ಯರನ್ನು ಭೇಟಿಯಾಗುವುದರ ಜೊತೆಗೆ ರಹಸ್ಯ ಮಾತುಕತೆಯನ್ನೂ ನಡೆಸಿದ ಘಟನೆ ವರದಿಯಾಗಿದೆ.

7.ಯಾರೂ ಮಂತ್ರಿ ಸ್ಥಾನಕ್ಕೆ‌ಬೇಡಿಕೆ ಇಟ್ಟಿಲ್ಲ ; ಸಚಿವ ಮಾಧುಸ್ವಾಮಿ

ಉಪ‌ ಚುನಾವಣೆಯಲ್ಲಿ ಗೆದ್ದ ಯಾರೂ ಮಂತ್ರಿ ಸ್ಥಾನಕ್ಕೆ‌ಬೇಡಿಕೆ ಇಟ್ಟಿಲ್ಲ, ಐದಾರು ದಿನ ಕಳೆದು ಮುಖ್ಯಮಂತ್ರಿ ಯಡಿಯೂರಪ್ಪ ನವರು ದೆಹಲಿಗೆ ಹೋಗಿ ಹೈಕಮಾಂಡ್​​ ಒಪ್ಪಿಗೆ ತಂದ ಬಳಿಕ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದ್ದಾರೆ.

8.ಹೊಸಪೇಟೆ ಸೋಲಿನ ಪರಾಮರ್ಶೆ ಸಭೆಯಲ್ಲಿ ಕೈ ಕಾರ್ಯಕರ್ತರ ಆಕ್ರೋಶ

ವಿಜಯನಗರ ಕ್ಷೇತ್ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಹಿನ್ನೆಲೆ ಹೊಸಪೇಟೆಯ ಕಾಂಗ್ರೆಸ್ ಕಚೇರಿಯಲ್ಲಿ ಜರುಗಿದ ಸಭೆಯಲ್ಲಿ ಕೈ ಕಾರ್ಯಕರ್ತರು ಆಕ್ರೋಶಗೊಂಡು ಬ್ಯಾನರ್ ಹರಿದುಹಾಕಿದ್ದಾರೆ. ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ವೇದಿಕೆಗೆ ಹಾಕಲಾಗಿದ್ದ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹಾಗೂ ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ ಇರುವ ಬ್ಯಾನರ್ ಹರಿದು ಹಾಕಿ ತಮ್ಮ ಆಕ್ರೋಶವನ್ನ ಹೊರ ಹಾಕಿದರು.

9.ಗೂಗಲ್​ನಲ್ಲಿ ಟ್ರೆಂಡ್​ ಆದ ಈ ವರ್ಷದ ಟಾಪ್​ 10 ಹಾಡುಗಳು..!

ಇನ್ನೇನು ಹೊಸ ವರ್ಷದ ಸ್ವಾಗತಕ್ಕೆ ಕೆಲವೇ ದಿನಗಳು ಬಾಕಿ ಇವೆ. ಹೀಗಿರುವಾಗಲೇ ಇಡೀ ವರ್ಷ ಹೇಗೆ ಕಳೆಯಿತು, ಆದ ಏಳು ಬೀಳುಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲಿರುತ್ತದೆ. ಹೀಗಿರುವಾಗಲೇ ಗೂಗಲ್​ ಈ ಇಡೀ ವರ್ಷದಲ್ಲಿ ಸಂಗೀತ ಕ್ಷೇತ್ರದಲ್ಲಾದ ವಿಷಯಗಳ ಬಗ್ಗೆಯೂ ಕೊಂಚ ಮಾಹಿತಿ ಹೊರಹಾಕಿದೆ. ಸಿನಿಮಾಗಳ ವಿಷಯಕ್ಕೆ ಬಂದರೆ ಸಂಗೀತ ತುಂಬಾ ಮುಖ್ಯ. ಅದು ಚಿತ್ರದ ಜೀವ ಇದ್ದಂತೆ. ಚಿತ್ರಕ್ಕೆ ಕತೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಹಾಡುಗಳು. ಇತ್ತೀಚೆಗಂತೂ ಬರುತ್ತಿರುವ ಸಿನಿಮಾಗಳಲ್ಲಿ ಹೊಸ ಹಾಡುಗಳ ಜತೆಗೆ ಹಳೇ ಹಾಡುಗಳನ್ನು ರಿಮಿಕ್ಸ್​ ಮಾಡಿ ಬಳಸಿಕೊಳ್ಳಲಾಗುತ್ತಿದೆ.

10.ಏಕದಿನ ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಕ್ಕೆ ಮತ್ತೊಂದು ಆಘಾತ!

ವೆಸ್ಟ್​ ಇಂಡೀಸ್ ವಿರುದ್ಧದ ಟಿ-20 ಸರಣಿಯನ್ನು ಗೆದ್ದು ಬೀಗಿರುವ ಟೀಂ ಇಂಡಿಯಾ ಸದ್ಯ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಇದಕ್ಕಾಗಿ ಈಗಾಗಲೇ ಕೊಹ್ಲಿ ಪಡೆ ಚೆನ್ನೈ ತಲುಪಿದೆ. ಆದರೆ, ಮೊದಲ ಪಂದ್ಯ ಆರಂಭಕ್ಕೂ ಮುನ್ನ ಭಾರತಕ್ಕೆ ಮಗದೊಂದು ಆಘಾತ ಉಂಟಾಗಿದೆ. ಈಗಾಗಲೇ ಇಂಜುರಿಯಿಂದ ಗುಣಮುಖರಾಗದ ಕಾರಣ ಶಿಖರ್ ಧವನ್ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಇವರ ಬದಲು ಮಯಾಂಕ್ ಅಗರ್ವಾಲ್​ಗೆ ಅವಕಾಶ ಕಲ್ಪಿಸಲಾಗಿದೆ.

 

 
Published by: G Hareeshkumar
First published: December 13, 2019, 6:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading