Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಿದ್ದರಾಮಯ್ಯ, ಸಿಎಂ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ

ಸಿದ್ದರಾಮಯ್ಯ, ಸಿಎಂ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ

  • Share this:
1.ಜನತಾ ಜನಾರ್ದನರಿಂದ 11 ಅನರ್ಹರಿಗೆ ಶಾಪವಿಮೋಚನೆ; ಬಿಎಸ್​ವೈ ಸರ್ಕಾರ ಸುಭದ್ರ

ಸರ್ಕಾರ ಪತನ ನಿಶ್ಚಿತ ಎಂಬ ವಿಶ್ವಾಸದಲ್ಲಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಮುಜುಗರ ಉಂಟಾಗಿದೆ. 15 ಕ್ಷೇತ್ರಗಳಲ್ಲಿ ಬಿಜೆಪಿ ಬರೋಬ್ಬರಿ 12 ಸ್ಥಾನ ಗೆದ್ದು ಬಹುತೇಕ ಸ್ವೀಪ್ ಮಾಡಿದೆ. ಕನಿಷ್ಠ ಏಳೆಂಟಾದರೂ ದಕ್ಕುತ್ತದೆಂಬ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್​ಗೆ ಎರಡು ಮಾತ್ರ ಸಿಕ್ಕಿದೆ. ಹತ್ತು ಸ್ಥಾನಗಳನ್ನು ಕಳೆದುಕೊಂಡಿದೆ.

2.ಕಾಂಗ್ರೆಸ್​ಗೆ ಕರ್ನಾಟಕದ ಮತದಾರರು ತಕ್ಕ ಪಾಠ ಕಲಿಸಿದ್ದಾರೆ; ಪ್ರಧಾನಿ ಮೋದಿ

ಕರ್ನಾಟಕದಲ್ಲಿ ಜನಾದೇಶಕ್ಕೆ ಮೋಸ ಮಾಡಿದವರಿಗೆ ಅಲ್ಲಿನ ಮತದಾರರು ಪ್ರಜಾಪ್ರಭುತ್ವ ರೀತಿಯಲ್ಲೇ ಉತ್ತರ ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ಜಾರ್ಖಂಡ್ ವಿಧಾನಸಭೆ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಕರ್ನಾಟಕ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಉಲ್ಲೇಖಿಸಿದ ಪ್ರಧಾನಿ ಮೋದಿ ಅವರು, ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರಲಿದೆಯೇ ಅಥವಾ ಇಲ್ಲವೇ ಎಂಬುದನ್ನು ಇಂದು ನಿರ್ಧರಿಸಿಲ್ಲ. ಅಲ್ಲಿನ ಜನರು ಕಾಂಗ್ರೆಸ್​ಗೆ ತಕ್ಕಶಾಸ್ತಿ ಮಾಡಿದ್ದಾರೆ. ಭಾರತದ ಯಾವುದೇ ರಾಜ್ಯದಲ್ಲಾದಲ್ಲಿ ಆಗಲಿ, ಜನಾದೇಶದ ವಿರುದ್ಧ ನಡೆದುಕೊಂಡರೆ ಅವರಿಗೆ ಜನತೆ ಅವಮಾನ ಮಾಡಬೇಕು ಹಾಗೂ ಮತದಾರರು ಅವರಿಗೆ ಸರಿಯಾದ ಪಾಠ ಕಲಿಸಬೇಕು ಎಂದರು.

3.ಬಾತ್​ರೂಂಗೆ ಕರೆದೊಯ್ದು 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಆರೋಪಿ ಬಂಧನ

ತೆಲಂಗಾಣದ ಪಶುವೈದ್ಯೆ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ, ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಬರ್ಬರ ಹತ್ಯೆ, ರಾಂಚಿ ಕಾನೂನು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರದಂತಹ ವಿಕೃತಿಗಳು ನಡೆದು ಒಂದು ವಾರವೂ ಕಳೆದಿಲ್ಲ. ಅಷ್ಟರಲ್ಲಾಗಲೇ ಮತ್ತೊಂದು ಹೀನ ಕೃತ್ಯ ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿಯನ್ನು ಮದುವೆ ಸಭಾಂಗಣದ ಬಾತ್​ರೂಂಗೆ ಕರೆದುಕೊಂಡು ಹೋಗಿ ವ್ಯಕ್ತಿಯೋರ್ವ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ.

4.ಉಪಚುನಾವಣೆ ಶಾಕ್: ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ರಾಜೀನಾಮೆ

ಉಪಚುನಾವಣೆಯಲ್ಲಿ ಹೀನಾಯ ಸೋಲುಂಡ ಕಾಂಗ್ರೆಸ್ ಪಕ್ಷದಲ್ಲಿ ಅಲ್ಲೋಲಕಲ್ಲೋಲದ ಸ್ಥಿತಿ ನಿರ್ಮಾಣವಾಗಿದೆ. ಸೋಲಿನ ಹೊಣೆ ಹೊತ್ತು ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಅವರು ಕಾಂಗ್ರೆಸ್​ ಶಾಸಕಾಂಗ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರಿಬ್ಬರೂ ತಮ್ಮ ರಾಜೀನಾಮೆ ಪತ್ರವನ್ನು ಪಕ್ಷದ ಹೈಕಮಾಂಡ್​ಗೆ ಸಲ್ಲಿಸಿದ್ದಾರೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ಈ ರಾಜೀನಾಮೆಯನ್ನು ಅಂಗೀಕರಿಸಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ.

5. ಉಪ ಚುನಾವಣೆಯಲ್ಲಿ ಸೋತ ಎಂಟಿಬಿ ನಾಗರಾಜ್​​​ಗೆ ಪಕ್ಷ ಸಂಘಟನೆ ಜವಾಬ್ದಾರಿ?

ಹೊಸಕೋಟೆಯಲ್ಲಿ ಬಿಜೆಪಿಯಿಂದ ಬಂಡಾಯವಾಗಿ ನಿಂತು ಗೆದ್ದ ಶರತ್​​ ಬಚ್ಚೇಗೌಡ ಅವರನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯಲು ಬಿಜೆಪಿ ನಾಯಕರಿಂದ ಸಾಧ್ಯವಾಗಿಲ್ಲ ಎಂಬ ಅಸಮಾಧಾನ ಎಂಟಿಬಿಗೆ ಇದೆ. ಈ ಹಿನ್ನೆಲೆಯಲ್ಲಿ ಅವರನ್ನು ಕೈ ಬಿಟ್ಟರೆ ಸರಿಯಲ್ಲ ಎನ್ನುವುದನ್ನು ಮನಗಂಡು ಅವರಿಗೆ ಪಕ್ಷದ ಸಂಘಟನೆಯ ಜವಾಬ್ದಾರಿಯನ್ನು ಕೊಟ್ಟು ಅವರ ಮಗ ನಿತೀಶ್ ಪುರುಷೋತ್ತಮ ಅವರಿಗೆ ನಿಗಮ ಮಂಡಳಿ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ.

6. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆ ಶಿವಕುಮಾರ್​ ಉತ್ತಮ ಆಯ್ಕೆ; ಜನಾರ್ದನ ಪೂಜಾರಿ

ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್​ ಮತ್ತು ಜೆಡಿಎಸ್​ಗೆ ಭಾರೀ ಮುಖಭಂಗವಾಗಿದೆ. ಸೋಲಿನ ನೈತಿಕ ಹೊಣೆ ಹೊತ್ತು ಮಾಜಿ ಸಿಎಂ ಸಿದ್ದರಾಮಯ್ಯ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ದಿನೇಶ್​ ಗುಂಡೂರಾವ್​ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.  ಹಿರಿಯ ಕಾಂಗ್ರೆಸ್​ ಮುಖಂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.  ದಿನೇಶ್​ ಗುಂಡೂರಾವ್​ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಮಂಗಳೂರಿನಲ್ಲಿ ಮಾತನಾಡಿದ ಜನಾರ್ದನ ಪೂಜಾರಿ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಡಿಕೆ  ಶಿವಕುಮಾರ್​ ಉತ್ತಮ ಆಯ್ಕೆ ಎಂದು ಹೇಳಿದ್ಧಾರೆ.

7.ಪವಿತ್ರ, ಸುಭದ್ರ ಸರ್ಕಾರಕ್ಕೆ ಮುದ್ರೆ ಒತ್ತಿದ ಪ್ರಜ್ಞಾವಂತ ಮತದಾರರಿಗೆ ಮನದಾಳದ ಅಭಿನಂದನೆ ತಿಳಿಸಿದ ಎಚ್​ಡಿಕೆ

ರಾಜ್ಯ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಜೆಡಿಎಸ್​ಗೆ ಭಾರೀ ಮುಖಭಂಗವಾಗಿದೆ. ಕನಿಷ್ಠ ಎರಡು ಕ್ಷೇತ್ರದಲ್ಲಿ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದ ಜೆಡಿಎಸ್​ ಒಂದರಲ್ಲೂ ಖಾತೆ ತೆರೆಯುವಲ್ಲಿಯೂ ವಿಫಲವಾಗಿದೆ. ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್​ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರು ಅನರ್ಹ ಶಾಸಕರನ್ನು ಗೆಲ್ಲಿಸಿದ ಮತದಾರರಿಗೆ ಮಾರ್ಮಿಕವಾಗಿ ಅಭಿನಂದನೆ ತಿಳಿಸಿದ್ದಾರೆ.

8.ಇದು ನಮ್ಮ ಗೆಲುವಿಗಿಂತ ಯಡಿಯೂರಪ್ಪ, ಅಮಿತ್​ ಷಾ ಗೆಲುವು; ರಮೇಶ್​ ಜಾರಕಿಹೊಳಿ

ಇದು ನಮ್ಮ ಗೆಲುವಿಗಿಂತ ಯಡಿಯೂರಪ್ಪ, ಅಮಿತ್​ ಷಾ ಗೆಲುವು. ಈ ಗೆಲುವು ಹೊಸ ಇತಿಹಾಸ ಸೃಷ್ಟಿಸಿದೆ. ಅನರ್ಹಗೊಂಡಿದ್ದ ನಮಗೆ ಜನತಾ ನ್ಯಾಯಾಲಯದಲ್ಲಿ ನ್ಯಾಯ ಸಿಕ್ಕಿದೆ ಎಂದು ಬಿಜೆಪಿ ಶಾಸಕರ ರಮೇಶ್​ ಜಾರಕಿಹೊಳಿ ತಿಳಿಸಿದರು.  ತಮ್ಮ ಗೆಲುವಿನಗ ಕುರಿತು ಹರ್ಷ ವ್ಯಕ್ತಪಡಿಸಿ ಮಾತನಾಡಿದ ಅವರು, ತಮ್ಮನ್ನು ಗೆಲ್ಲಿಸಿದ ಗೋಕಾಕ್​ ಕ್ಷೇತ್ರದ ಮತದಾರರಿಗೆ ಧನ್ಯವಾದಗಳು. ತಮ್ಮ ಗೆಲುವಿನ ಮೂಲಕ ನಮ್ಮನ್ನು ಅನರ್ಹಗೊಳಿಸಿದ್ದ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಮುಖಕ್ಕೆ ಹೊಡೆದಂತೆ ಆಗಿದೆ ಎಂದರು.

9.ಮತ್ತೊಮ್ಮೆ ಕನ್ನಡದಲ್ಲಿ ಮಾತನಾಡಿದ ಸಲ್ಲು ಭಾಯಿ: ಸಲ್ಲು, ಸುದೀಪ್ ಫ್ಯಾನ್ಸ್​ ಸಿಕ್ತಲ್ಲಾ ಸಿಹಿ ಮಿಠಾಯಿ !

ಕನ್ನಡದ ಬಿಗ್‍ಬಾಸ್ ಕಿಚ್ಚ ಸುದೀಪ್ ಹಾಗೂ ಹಿಂದಿ ಬಿಗ್‍ಬಾಸ್ ಸಲ್ಮಾನ್ ಖಾನ್, ದಬಾಂಗ್ ಚಿತ್ರದಲ್ಲಿ ನಟಿಸಿರೋದು ಗೊತ್ತೇಯಿದೆ. ಇನ್ನು ಕೆಲವೇ ದಿನಗಳಲ್ಲಿ ಆ ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಆದರೆ ವಿಶೇಷ ಅಂದ್ರೆ ಈ ಇಬ್ಬರೂ ಬಿಗ್‍ಬಾಸ್‍ಗಳು, ಬಿಗ್‍ಬಾಸ್ ವೇದಿಕೆಯಲ್ಲೇ ಮುಖಾಮುಖಿಯಾಗಿದ್ದಾರೆ.

10.ಉದ್ದೀಪನ ಮದ್ದು ಸೇವನೆ: ಒಲಿಂಪಿಕ್​ನಿಂದ ರಷ್ಯಾ 4 ವರ್ಷ ನಿಷೇಧ!

ದ್ದೀಪನ ಮದ್ದು ಸೇವನೆ ನಿಯಮ ಕಡೆಗಣಿಸಿದಕ್ಕಾಗಿ ವಿಶ್ವ ಉದ್ದೀಪನ ಮದ್ದು ಸೇವನೆ ತಡೆ ಏಜನ್ಸಿ (ವಾಡಾ) ರಷ್ಯಾವನ್ನು ನಾಲ್ಕು ವರ್ಷ ಒಲಿಂಪಿಕ್​ನಿಂದ ನಿಷೇಧ ಮಾಡಿದೆ. ಉದ್ದೀಪನ ಮದ್ದು ಸೇವನೆಗೆ ಸಂಬಂಧಿಸಿದ ಪ್ರಯೋಗಾಲಯದ ವರದಿಗಳನ್ನು ತಿರುಚಿರುವ ಜೊತೆಗೆ ಸುಳ್ಳು ದಾಖಲಾತಿಗಳನ್ನು ನೀಡಿದೆ ಎಂಬ ಕಾರಣಕ್ಕೆ ವಿಶ್ವ ಉದ್ದೀಪನ ನಿಗ್ರಹ ಘಟಕ ಈ ತೀರ್ಮಾನ ಕೈಗೊಂಡಿದೆ.
First published: