ನವದೆಹಲಿ(ಫೆ. 20): ಕರ್ನಾಟಕ ಮೂಲದ ಡೆಕನ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ದಿವಾಳಿ ಸ್ಥಿತಿ ತಲುಪಿರುವ ಹಿನ್ನೆಲೆಯಲ್ಲಿ ಆರ್ಬಿಐ ಈ ಬ್ಯಾಂಕ್ನಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಹಣ ಹಿಂಪಡೆಯಲು ಒಂದು ಸಾವಿರ ರೂ ಮಿತಿ ಹೇರಿದೆ. ನಿನ್ನೆಯೇ ಈ ಆದೇಶ ಜಾರಿಗೆ ಬಂದಿದೆ. ನಿನ್ನೆಯಿಂದ ಪ್ರಾರಂಭವಾಗಿ ಆರು ತಿಂಗಳವರೆಗೆ ಆರ್ಬಿಐನ ನಿರ್ದೇಶನಗಳು ಚಾಲನೆಯಲ್ಲಿರಲಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ನೋಟೀಸ್ನಲ್ಲಿ ತಿಳಿಸಿದೆ.
ಬ್ಯಾಂಕ್ನಲ್ಲಿ ಠೇವಣಿ ಹೊಂದಿರುವ ಗ್ರಾಹಕರು ಈ ಆರು ತಿಂಗಳ ಅವಧಿಯಲ್ಲಿ ತಮ್ಮ ಠೇವಣಿ ಮೇಲೆ ಸಾಲಗಳನ್ನ ಪಡೆಯಲು ಅವಕಾಶ ನೀಡಲಾಗಿದೆ. ಅದೂ ಆರ್ಬಿಐನಿಂದ ಪೂರ್ವಾನುಮತಿ ಪಡೆದುಕೊಂಡು ಈ ಸಾಲ ಪಡೆಯಬಹುದು. ಹಾಗೆಯೇ, ಈ ಆರು ತಿಂಗಳ ನಿರ್ಬಂಧ ಅವಧಿಯಲ್ಲಿ ಡೆಕನ್ ಅರ್ಬನ್ ಸಹಕಾರ ಬ್ಯಾಂಕ್ ಹೊಸ ಠೇವಣಿಗಳನ್ನ ಪಡೆಯುವುದಾಗಲೀ, ಆಸ್ತಿ ಮಾರುವುದಾಗಲೀ ಮಾಡುವಂತಿಲ್ಲ ಎಂದು ರಿಸರ್ವ್ ಬ್ಯಾಂಕ್ ನೀಡಿದ ನಿರ್ದೇಶನಗಳಲ್ಲಿ ಇದೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ ಹೊರಗುತ್ತಿಗೆ ವಂಚನೆ ಹಗರಣ ಬೆಳಕಿಗೆ
ಆರ್ಬಿಐನ ಈ ನಿರ್ದೇಶನಗಳನ್ನ ಡೆಕನ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ನ ಪರವಾನಿಗೆಯ ರದ್ದು ಎಂದು ಪರಿಭಾವಿಸುವ ಅಗತ್ಯ ಇಲ್ಲ ಎಂದು ತಿಳಿಸಲಾಗಿದ್ದು, ಈ ಆರು ತಿಂಗಳಲ್ಲಿ ಅಗತ್ಯ ಬಿದ್ದ ಸಂದರ್ಭದಲ್ಲಿ ನಿರ್ದೇಶನಗಳನ್ನ ಬದಲಾಯಿಸುವ ಸಾಧ್ಯತೆ ಇದೆ ಎಂದೂ ನೋಟೀಸ್ನಲ್ಲಿ ಹೇಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ