Kolar Clock Tower: ಸಂಸದ ಮುನಿಸ್ವಾಮಿಗೆ ಕೊಲೆ ಬೆದರಿಕೆ,  ಭಯೋತ್ಪಾದಕ ಕೃತ್ಯ ಸಹಿಸಲ್ಲ ಅಂದ್ರು ಗೃಹ ಸಚಿವ ಅರಗ ಜ್ಞಾನೇಂದ್ರ

ಶನಿವಾರ ರಾತ್ರಿ ಕಿಡಿಗೇಡಿಗಳು ಸಂಸದರ ಮೊಬೈಲ್‍ ಗೆ ವಾಯ್ಸ್ ಮೆಸೇಜ್‍ (Voice Message) ಗಳನ್ನ ಕಳಿಸಿದ್ದು, ಸಂಸದರನ್ನು ಸೇರಿದಂತೆ ಕುಟುಂಬಸ್ಥರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಸಂಸದ ಮುನಿಸ್ವಾಮಿ ಮತ್ತು ಗೃಹ ಸಚವ ಅರಗ ಜ್ಞಾನೇಂದ್ರ

ಸಂಸದ ಮುನಿಸ್ವಾಮಿ ಮತ್ತು ಗೃಹ ಸಚವ ಅರಗ ಜ್ಞಾನೇಂದ್ರ

  • Share this:
74 ವರ್ಷಗಳ ನಂತರ ಕೋಲಾರ (Kolar) ನಗರದ ವಿವಾದಿತ ಪ್ರದೇಶ ಕ್ಲಾಕ್ ಟವರ್ (Clock Tower) ಮೇಲೆ ತ್ರಿವರ್ಣ ಧ್ವಜ (National Flag) ಹಾರಿಸಲು ಒತ್ತಾಯಿಸಿ, ಹೋರಾಟ ನಡೆಸಿದ್ದ ಕೋಲಾರ ಸಂಸದ ಮುನಿಸ್ವಾಮಿಗೆ (MP Muniswamy) ಕಿಡಿಗೇಡಿಗಳು ಕೊಲೆ ಬೆದರಿಕೆ ಹಾಕಿದ್ದಾರೆ. 74 ವರ್ಷಗಳ ಬಳಿಕ ರಾಷ್ಟ್ರ ಧ್ವಜಾರೋಹಣ ನೆರವೇರಿದ ನಂತರ, ಸಂಸದ ಮುನಿಸ್ವಾಮಿ ಪರವಾಗಿ ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಗಳು ವ್ಯಕ್ತವಾಗುತ್ತಿದೆ. ಶನಿವಾರ ರಾತ್ರಿ ಕಿಡಿಗೇಡಿಗಳು ಸಂಸದರ ಮೊಬೈಲ್‍ ಗೆ ವಾಯ್ಸ್ ಮೆಸೇಜ್‍ (Voice Message) ಗಳನ್ನ ಕಳಿಸಿದ್ದು, ಸಂಸದರನ್ನು ಸೇರಿದಂತೆ ಕುಟುಂಬಸ್ಥರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಕೋಲಾರ ಎಸ್ ಪಿ ದೇವರಾಜ್‍ ಅವರಿಗೆ ಫೋನ್ ಕರೆ ಮಾಡಿ ಮಾಹಿತಿ ನೀಡಿರುವ ಸಂಸದ ಮುನಿಸ್ವಾಮಿ, ಲಿಖಿತ ದೂರನ್ನು ನೀಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಕೋಲಾರದಲ್ಲಿ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಭಯೋತ್ಪಾದನೆಯನ್ನ ನಾವು ಸಹಿಸಲ್ಲ, ಬೆದರಿಕೆ ಹಾಕೋರಿಗೆ ಪೊಲೀಸ್ ಇಲಾಖೆ ಇದೆಯೆಂದು ತೋರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಈ ಬಗ್ಗೆ ಮಾತನಾಡಿದ ಸಂಸದ ಮುನಿಸ್ವಾಮಿ, ಇಂತಹ ಬೆದರಿಕೆಗೆ ನಾನು ಹೆದರಲ್ಲ. ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಇದರ ಬಗ್ಗೆ ಹೆಚ್ಚು ಮಾತಾಡಲ್ಲ ಎಂದು ಪ್ರತಿಕ್ರಿಯೆ ನೀಡಿದರು.

ಒಂದು ವಾರ 144 ಸೆಕ್ಷನ್

ಇನ್ನು ಕ್ಲಾಕ್ ಟವರ್ ನಲ್ಲಿ ಶನಿವಾರ ಭಾರತ ಧ್ವಜ ಹಾರಿಸಿದ ನಂತರ,  ನಗರದಲ್ಲಿ 144 ಸೆಕ್ಷನ್ ಒಂದು ವಾರದ ಕಾಲ ಮುಂದುವರಿಸಲಾಗಿದೆ. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದ್ದು, ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸಲಾಗಿದೆ.

ಇದನ್ನೂ ಓದಿ:  Kolar: ಕ್ಲಾಕ್ ಟವರ್ ಮೇಲೆ ಹಾರಿದ ತ್ರಿವರ್ಣ ಧ್ವಜ

ಮಳೆಯಲ್ಲೂ ಭಾಷಣ ಮುಂದುವರಿಸಿದ ಗೃಹ ಸಚಿವರು

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ನೂತನ ಕಟ್ಟಡ ಗುದ್ದಲಿ ಪೂಜೆಯನ್ನ ಗೃಹ ಸಚಿವ ಅರಗ ಜ್ಞಾನೇಂದ್ರ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸಂಸದ ಮುನಿಸ್ವಾಮಿ, ಶಾಸಕರಾದ  ಶ್ರೀನಿವಾಸಗೌಡ, ಎಮ್ .ಎಲ್.ಸಿ  ಗೋವಿಂದರಾಜು, ಎಸ್ಪಿ ದೇವರಾಜ್ ಭಾಗಿಯಾಗಿದ್ದರು.

2 ಕೋಟಿ ವೆಚ್ಚದಲ್ಲಿ ಹೈಟೆಕ್ ಪೊಲೀಸ್ ಠಾಣೆ‌ ನಿರ್ಮಾಣವಾಗಲಿದ್ದು, ಕಾರ್ಯಕ್ರಮಕ್ಕೆ ಮಳೆ ಅಡ್ಡಿಯುಂಟು ಮಾಡಿತು.. ಛತ್ರಿ ಸಹಾಯದಿಂದ ಮಳೆಯನ್ನು ಲೆಕ್ಕಿಸದೇ ಸಚಿವ ಆರಗ ಜ್ಞಾನೇಂದ್ರ ಭಾಷಣ ಮಾಡಿದರು.

ವೇದಿಕೆಯ ಪೆಂಡಾಲ್ ಸಂಪೂರ್ಣವಾಗಿ ನೆನದಿದ್ದ ಕಾರಣ ಕಾರ್ಯಕ್ರಮವನ್ನ ಬೇಗನೆ ಮುಗಿಸಲಾಯಿತು. ಬಳಿಕ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಸಚಿವ ಸಂಪುಟದ ವಿಸ್ತರಣೆ ಕುರಿತು ಮುಂದಿನ ಚುನಾವಣೆ ದೃಷ್ಟಿಯಿಂದ ಎಲ್ಲವನ್ನು ಹೈ ಕಮಾಂಡ್ ನೋಡಿಕೊಳ್ಳಲಿದೆ.

ಕಾಂಗ್ರೆಸ್ ಗೆ ಕಿವಿಮಾತು

ರಾಜೀವ್ ಗಾಂಧೀ ಅವರ ಕಾಲದಲ್ಲಿ ದೂರದರ್ಶನದಲ್ಲಿ ರಾಮಾಯಣ ಮಹಾಭಾರತ ಪ್ರಸಾರ ಮಾಡಿರೊ ಕುರಿತು, ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆಗೆ ನಾನು ಅಭಿನಂದಿಸುವೆ. ಪಠ್ಯಕ್ರಮದಲ್ಲಿ ಭಗವದ್ಗೀತೆ ವಿಚಾರವಾಗಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಎಲ್ಲವು ರಾಜಕೀಯ ದೃಷ್ಟಿಯಲ್ಲೇ ನೋಡುವುದು ಸರಿಯಲ್ಲ ಎಂದು ಕಾಂಗ್ರೆಸ್‍ಗೆ ಕಿವಿಮಾತು ಹೇಳಿದರು.

ಇದನ್ನೂ ಓದಿ:  Bhagavad Gita: ಭಗವದ್ಗೀತೆ ಜನರ ಹೊಟ್ಟೆ ತುಂಬಿಸಲ್ಲ, ಬಿಜೆಪಿ ನಾಯಕರಿಗೆ HDK ಟಾಂಗ್ 

ಕ್ಲಾಕ್ ಟವರ್ ಇತಿಹಾಸ ಏನು?

ಇನ್ನೂ ಕ್ಲಾಕ್ ಟವರ್‍ ನಲ್ಲಿ ರಾಷ್ಟ್ರ ಧ್ವಜಾರೋಹಣಕ್ಕೆ ಈ ಮಟ್ಟಿಗೆ ಭದ್ರತೆ ಕೈಗೊಳ್ಳಲು, ಕೋಮು ಸೌಹಾರ್ಧತೆಗೆ ಧಕ್ಕೆ ಉಂಟಾಗುವ ವಾತಾವರಣ ಕಾರಣವಾಗಿದೆ. 1930ರ ಆಸುಪಾಸಿನಲ್ಲಿ ಗುತ್ತಿಗೆದಾರರಾಗಿದ್ದ ಕೋಲಾರದ ಶ್ರೀಮಂತ ವ್ಯಕ್ತಿ ಹಾಜಿ ಮೊಹಮದ್ ಮುಸ್ತಾಫಾ ಸಾಬ್, ನರಸಿಂಹರಾಜ ಒಡೆಯರ್ ಸೂಚನೆಯಂತೆ, ಕ್ಲಾಕ್ ಟವರ್ ನಿರ್ಮಾಣ ಮಾಡಿದ್ದಾರೆ. ಇದಲ್ಲದೆ ಹಳೇ ಬಸ್ ನಿಲ್ದಾಣ ಬಳಿಯು ಮತ್ತೊಂದು ಕ್ಲಾಕ್ ಟವರ್ ಕಟ್ಟಿಸಿದ್ದು, ಖುದ್ದು ನರಸಿಂಹರಾಜ ಒಡೆಯವರ್ ಅವರೇ ಎರಡನ್ನು ಉದ್ಘಾಟಿಸಿದ್ದು ವಿಶೇಷವಾಗಿದೆ.
Published by:Mahmadrafik K
First published: