• Home
  • »
  • News
  • »
  • state
  • »
  • Tanveer Saith: ಭಜರಂಗದಳದ ನಾಯಕನಿಂದ ತನ್ವೀರ್​ ಸೇಠ್​ಗೆ ಜೀವ ಬೆದರಿಕೆ; ದೂರು ದಾಖಲು

Tanveer Saith: ಭಜರಂಗದಳದ ನಾಯಕನಿಂದ ತನ್ವೀರ್​ ಸೇಠ್​ಗೆ ಜೀವ ಬೆದರಿಕೆ; ದೂರು ದಾಖಲು

ಶಾಸಕ ತನ್ವೀರ್ ಸೇಠ್​ಗೆ ಜೀವ ಬೆದರಿಕೆ

ಶಾಸಕ ತನ್ವೀರ್ ಸೇಠ್​ಗೆ ಜೀವ ಬೆದರಿಕೆ

ಕೆಂಪೇಗೌಡರ ಪ್ರತಿಮೆ (Kempegowda Statue) ನಿರ್ಮಾಣದ ಬಳಿಕ ತನ್ವೀರ್ ಸೇಠ್ ನೀಡಿದ ಹೇಳಿಕೆ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿತ್ತು.

  • Share this:

ಟಿಪ್ಪು ಸುಲ್ತಾನ್ ಪ್ರತಿಮೆ (Tipu Sultan Statue) ನಿರ್ಮಿಸ್ತೀನಿ ಎಂದಿದ್ದ ಕಾಂಗ್ರೆಸ್​​ ಶಾಸಕ ತನ್ವೀರ್​ ಸೇಠ್​ಗೆ (Congress MLA Tanveer Saith) ಜೀವಬೆದರಿಕೆ ಹಾಕಲಾಗಿದೆ. ಟಿಪ್ಪು ಸುಲ್ತಾನ್ ಪ್ರತಿಮೆ ಬಿಟ್ಟು ಮೊದ್ಲು ಹಿಂದೂಗಳ (Hindu) ಕ್ಷಮೆ ಕೇಳಿ, ಕ್ಷಮೆ ಕೇಳದಿದ್ರೆ 3 ಅಡಿ-6 ಅಡಿ ಫಿಕ್ಸ್ ಎಂದು ಜೀವಬೆದರಿಕೆ ಹಾಕಿದ್ದಾರೆ. ಸಕಲೇಶಪುರ ನಿವಾಸಿ ಭಜರಂಗದಳದ ನಾಯಕ ರಘು (Bhajarangadala Leader) ಎಂಬಾತನಿಂದ ಬೆದರಿಕೆ ಆರೋಪ ಕೇಳಿ ಬಂದಿದ್ದು, ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೈಸೂರು ಬೀಡಿ ಮಜ್ದೂರ್ ಅಸೋಸಿಯೇಷನ್​ ಈ ಬಗ್ಗೆ ದೂರು ನೀಡಿದೆ. ಕೆಂಪೇಗೌಡರ ಪ್ರತಿಮೆ (Kempegowda Statue) ನಿರ್ಮಾಣದ ಬಳಿಕ ತನ್ವೀರ್ ಸೇಠ್ ನೀಡಿದ ಹೇಳಿಕೆ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿತ್ತು.


ಏನು ಬೆದರಿಕೆ?


ಶಾಸಕ ತನ್ವೀರ್ ಸೇಠ್​ಗೆ ನಮ್ಮ ಸಂಘಟನೆಯಿಂದ ಎಚ್ಚರಿಕೆ ನೀಡುತ್ತಿದ್ದೇನೆ. 108 ಅಲ್ಲ 1 ಅಡಿಯ ಟಿಪ್ಪು ಮೂರ್ತಿ ಸ್ಥಾಪನೆ ಮಾಡಿದ್ರೆ ಅದು ನಿಮ್ಮ ಅಂತಿಮ ಯಾತ್ರೆ ಆಗಲಿದೆ. ಟಿಪ್ಪು ಈ ದೇಶ ಮತ್ತು ರಾಜ್ಯಕ್ಕೆ ಅಪಾಯಕಾರಿ. ಇಂತಹ ವ್ಯಕ್ತಿಯ ಮೂರ್ತಿ ಸ್ಥಾಪನೆಗೆ ನಮ್ಮ ವಿರೋಧವಿದೆ. ಟಿಪ್ಪು ಪ್ರತಿಮೆ ಸ್ಥಾಪನೆ ಮಾಡಲು ಯೋಚಿಸುವ ಜನರಿಗೂ ನಾವು ಉತ್ತರ ಕೊಡುತ್ತೇವೆ ಎಂದು ರಘು ಹೇಳಿರುವ ವಿಡಿಯೋ ವೈರಲ್ ಆಗಿದೆ.


108 ಅಡಿ ಎತ್ತರದ ನಾಡಪ್ರಭುವಿನ ಪ್ರತಿಮೆ


ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda Interntional Airport) ಸಮೃದ್ಧತೆಯ ಪ್ರತೀಕ ಎನ್ನಲಾಗುವ ಸ್ಟ್ಯಾಚ್ಯೂ ಆಫ್ ಪ್ರಾಸ್ಪೆರಿಟಿಯನ್ನು (Statue of Prosperity) ಪ್ರಧಾನಿ ಅನಾವರಣಗೊಳಿಸಿದರು. ಇನ್ನು, ಈ ಪ್ರತಿಮೆಯ ಬಗ್ಗೆ ಹೇಳುವುದಾದರೆ ಒಂದೇ ಕುಟುಂಬದ ಮೂರು ತಲೆಮಾರಿನ ಶಿಲ್ಪಿಗಳು ಹಾಗೂ ಇತರೆ 200 ಶಿಲ್ಪಿಗಳು ಸತತ ಒಂಭತ್ತು ತಿಂಗಳ ಕಾಲ ಇದರ ಕೆತ್ತನೆಯಲ್ಲಿ ತೊಡಗಿದ್ದು ವಿಶೇಷ.


ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತರಾದ ರಾಮ್ ವಿ ಸುತಾರ್ ಅವರು ಪ್ರತಿಮೆ ಕಾಣುವ ಬಗೆ, ಪರಿಕಲ್ಪನೆಯನ್ನು ಅಂತಿಮಗೊಳಿಸಿದರೆ ಅವರ ಸತತ ಮೇಲ್ವಿಚಾರಣೆಯಲ್ಲಿ ಪ್ರತಿಮೆಯ ಕೆತ್ತನೆ ಅಥವಾ ನಿರ್ಮಾಣದ ಕೆಲಸದ ಜವಾಬ್ದಾರಿಯನ್ನು ಅವರ ಸುಪುತ್ರರಾದ ಅನೀಲ್ ಸುತಾರ್ ಅವರು ನಿರ್ವಹಿಸಿದ್ದಾರೆ.



ಒಂದೇ ಕುಟುಂಬದ ಮೂರು ತಲೆಮಾರುಗಳು


ಇನ್ನು, ಇದರ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಸರ್ಕಾರದೊಂದಿಗೆ ಸಹಯೋಗ ನಡೆಸಿಕೊಂಡು ಹಾಗೂ ಅಂತಿಮವಾಗಿ ಅದರ ಪ್ರತಿಷ್ಠಾಪನೆಯನ್ನು ಮೊಮ್ಮಗನಾದ ಸಮೀರ್ ಸುತಾರ್ ನಿರ್ವಹಿಸುವುದರ ಮೂಲಕ ಒಂದೇ ಕುಟುಂಬದ ಮೂರು ತಲೆಮಾರುಗಳು ಇದರಲ್ಲಿ ಭಾಗಿಯಾದಂತಾಗಿದೆ.


ಇದನ್ನೂ ಓದಿ:   Bengaluru: ಪಾಕ್ ಪರ ಘೋಷಣೆ ಕೂಗಿದ್ದ ವಿದ್ಯಾರ್ಥಿಗಳು ಕಾಲೇಜಿನಿಂದ ಸಸ್ಪೆಂಡ್


ದೇವೇಗೌಡರ ಕಡೆಗಣನೆಗೆ ಬಿಜೆಪಿ ವಿರುದ್ಧ ಡಿಕೆಶಿ ಗರಂ


ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಹೆಚ್​​.ಡಿ ದೇವೇಗೌಡರನ್ನು (H. D Devegowda) ನಿರ್ಲಕ್ಷಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D K Shivakumar)​, ಬಿಜೆಪಿ ಸರ್ಕಾರದ (BJP Government) ವಿರುದ್ಧ ಕಿಡಿಕಾರಿದ್ದಾರೆ.


ಇದನ್ನೂ ಓದಿ:  Explained: ಅಜಾನ್​ಗೆ ನೃತ್ಯ ಮಾಡಿದವರಲ್ಲಿ ಹಿಂದೂ ಮಕ್ಕಳು, ಕೋಮು ಸೂಕ್ಷ್ಮ ಜಿಲ್ಲೆಯಲ್ಲಿ ಮತ್ತೊಂದು ವಿವಾದ


ಬಿಜೆಪಿ ಅವರು ಮಾಜಿ ಪ್ರಧಾನಿ ದೇವೇಗೌಡ ಅವರಿಗೆ 12 ಗಂಟೆ ರಾತ್ರಿಗೆ ಆಹ್ವಾನ ಕೊಟ್ಟಿದ್ದಾರಂತೆ, ಅವರಿಗೆ ಡಿಕೆ ಶಿವಕುಮಾರ್ ಆಗಲಿ ದೇವೇಗೌಡ್ರು ಆಗಲಿ ಯಾರು ಬೇಡ, ಅವರಿಗೆ ಬೇಕಿರೋದು ಎಲೆಕ್ಷನ್ (Election), ಅವರಿಗೆ ಬೇಕಿರೋದು ವೋಟ್ ನಾವು ಅವರಿಂದ ಏನನ್ನೂ ಸಹ ಎಕ್ಸ್​ಪೆಕ್ಟ್​ ಮಾಡ್ಬಾರದು ಎಂದು ಹೇಳಿದ್ರು.

Published by:Mahmadrafik K
First published: