Lovers Suicide: ಪ್ರೇಮಿಗಳನ್ನು ದೂರ ಮಾಡಿದ್ರು ಪೋಷಕರು; ಸಾವಿನಲ್ಲಿ ಒಂದಾದ ಲವ್ ಬರ್ಡ್ಸ್

ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಡಬೇಕೆಂದುಕೊಂಡಿದ್ದ ಪ್ರೇಮಿಗಳನ್ನು ದೂರ ಮಾಡಿದ ಪೋಷಕರು. ಮನನೊಂದ ಪ್ರೇಮಿಗಳು ಸಾವಿನ ಕದ ತಟ್ಟಿದ್ದಾರೆ. ವಿಷ ಕುಡಿದಿದ್ದ ಪ್ರೇಮಿಗಳು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು

ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು

  • Share this:
ಹುಬ್ಬಳ್ಳಿ  (ಜು.19); ಪ್ರೀತಿ ಮಾಯೆ ಅನ್ನೋ ಮಾತಿದೆ. ಪ್ರೀತಿಗಾಗಿ (Love) ಅನೇಕರು ಏನು ಬೇಕಾದ್ರೂ ಮಾಡೋಕೆ ಸಿದ್ಧರಾಗಿ ಇರ್ತಾರೆ. ಏನೂ ಆಗದೇ ಇದ್ದಾಗ ಕೆಲವೊಬ್ಬರು ಆತ್ಮಹತ್ಯೆ (Suicide) ಹಾದಿ ಹಿಡಿದು ಬಿಡುತ್ತಾರೆ. ಈ ಪ್ರೇಮಿಗಳ ಕಥೆಯೂ ಇದೇ ಆಗಿದೆ. ತಮ್ಮ ಪ್ರೀತಿಗೆ ಪೋಷಕರೇ (Parents) ವಿಲನ್ ಅಂತ ತಿಳಿದು, ನಾವೆಂದೂ ಮುಂದೆ ಸೇರೋಕೆ ಆಗಲ್ಲ, ಪೋಷಕರು ಮದುವೆ (Marriage) ಆಗೋಕು ಬಿಡಲ್ಲ ಅಂದುಕೊಂಡು ಸಾವಿನ ಕದ ತಟ್ಟಿದ್ದಾರೆ. ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರೇಮಿಗಳು ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯ ಕಿಮ್ಸ್ (KIMS of Hubli) ಆಸ್ಪತ್ರೆಯಲ್ಲಿ ನಡೆದಿದೆ. 

 ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರೇಮಿಗಳು

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ರಿಕೇಶ್ ಹಾಗೂ ಜ್ಯೋತಿ ಮೃತ ದುರ್ದೈವಿಗಳಾಗಿದ್ದಾರೆ. ಕಳೆದ ಶುಕ್ರವಾರ ಹಳಿಯಾಳ ಪಟ್ಟಣದ ಜ್ಯೋತಿ ಸುರೇಶ್ ಅಂತ್ರೊಳಕರ್ ಹಾಗೂ ರಿಕೇಶ್ ಸುರೇಶ್ ಮಿರಶಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆತ್ಮಹತ್ಯೆಗೆ ಯತ್ನಿಸಿದ್ದ ಪ್ರೇಮಿಗಳನ್ನು ಪೋಷಕರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದ್ದರು. ಆದರೆ ಚಿಕೆತ್ಸೆ ಪಲಕಾರಿಯಾಗದೆ ಇಂದು ಕಿಮ್ಸ್ ನಲ್ಲಿ ಸಾವನ್ನಪ್ಪಿದ್ದಾರೆ.

ಕಾಲೇಜಿನಲ್ಲಿ ಶುರುವಾಗಿತ್ತು ಪ್ರೀತಿ

ಜ್ಯೋತಿ ಹಾಗೂ ರಿಕೇಶ್ ಕಾಲೇಜ್ ದಿನಗಳಲ್ಲಿ ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ. ಹೀಗಿರುವಾಗ ಕೆಲ ದಿನಗಳ ಹಿಂದೆ ಜ್ಯೋತಿ ಕುಟುಂಬಸ್ಥರು ಬೇರೊಬ್ಬ ಯುವಕನ ಜೊತೆ ಅವಳನ್ನ ಮದುವೆ ಮಾಡಿಕೊಟ್ಟಿದ್ದರು. ಜ್ಯೋತಿ ಹಾಗೂ ರಿಕೇಶ್​ ತಾವು ವೈವಾಹಿಕ ಜೀವನಕ್ಕೆ ಕಾಲಿಟ್ಟು, ಹಾಯಾಗಿ ಜೀವನ ಮಾಡಬೇಕೆಂದುಕೊಂಡು ಕಟ್ಟಿಕೊಂಡಿದ್ದ ಕನಸು ನುಚ್ಚು ನೂರಾಗಿದೆ.

ಸಾವಿನಲ್ಲಿ ಒಂದಾದ ಪ್ರೇಮಿಗಳು

ತಾವಿಬ್ಬರೂ ದೂರ ಆಗಿದ್ದೇವೆ, ನಮ್ಮ ಪ್ರೇಮ ವಿಫಲ ಅಗಿದೆ ಎಂದು ಮನನೊಂದಿದ್ದ ಪ್ರೇಮಿಗಳಿಬ್ಬರು ಸಾಯಲು ನಿರ್ಧರಿಸಿದ್ದರು. ಕೊನೆಗೆ ಸಾವಿನೊಂದಿಗೆ ಜೊತೆಯಾಗಿ ಹೋಗೋಣ ಅಂತ ನಿರ್ಧರಿಸಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ದೇಹದ ಬಹುತೇಕ ಭಾಗ ವಿಷ ಪ್ರವಹಿಸಿದ್ದರಿಂದ ವೈದ್ಯರಿಂದ ಪ್ರೇಮಿಗಳನ್ನು ಬದುಕಿಸಲಾಗಿಲ್ಲ.

ಇದನ್ನೂ ಓದಿ: Karnataka Politics: ಡಿಕೆಶಿ-HDK ದೋಸ್ತಿ, ಡಿಕೆಗಾಗಿ ಕಾದು ಕುಳಿತ ಕುಮಾರಣ್ಣ; ನೀವೇ ನನ್ನ ಬ್ರದರ್ ಎಂದ್ರು ಡಿಕೆ ಶಿವಕುಮಾರ್

ಉಣಕಲ್ ಕೆರೆಗೆ ಹಾರಿ ವರ್ತಕ ಆತ್ಮಹತ್ಯೆ 

ಕೆರೆಗೆ ಜಿಗಿದು ವರ್ತಕ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಹುಬ್ಬಳ್ಳಿಯ ಉಣಕಲ್ ಕೆರೆಯಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಕೇಶ್ವಾಪುರದ ನಿವಾಸಿ ಸುನಿಲ್ ದೋಂಗಡೆ(39) ಎಂದು ಗುರುತಿಸಲಾಗಿದೆ. ಸುನಿಲ್ ಬಟ್ಟೆ ವ್ಯಾಪಾರಿಯಾಗಿದ್ದು, ಸಾಲಗಾರರ ಕಾಟ ಹೆಚ್ಚಾಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಮೀಟರ್ ಬಡ್ಡಿದಾರರಲ್ಲಿ ಸುನಿಲ್ ಸಾಲ ಮಾಡಿದ್ದ ಎನ್ನಲಾಗಿದೆ. ಸಾಲ ಕೊಟ್ಟವರು ವಾಪಸ್ ಮರಳಿಸುವಂತೆ ಪದೇ ಪದೇ ಪೀಡಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತು ಸುನಿಲ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Student Arrest: ಎಕ್ಸಾಂ ಮುಂದೂಡಲು ಬಾಂಬ್​ ಬೆದರಿಕೆ; ಅದೇ ಶಾಲೆಯ ಬಾಲಕ ಪೊಲೀಸ್​ ವಶಕ್ಕೆ

ಸುನಿಲ್ ಸಾಯುವ ಮುನ್ನ ವೀಡಿಯೋ ಮಾಡಿಟ್ಟಿದ್ದನೆಂಬ ಮಾಹಿತಿ ಸಿಕ್ಕಿದೆ. ಘಟನಾ ಸ್ಥಳಕ್ಕೆ ಪೊಲೀಸರು, ಶ್ವಾನ ದಳ ಭೇಟಿ ನೀಡಿದ್ದು, ಪರಿಶೀಲನೆ ಮಾಡಲಾಗಿದೆ. ಕುಟುಂದ ಸದಸ್ಯರಿಂದ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ. ಅಗ್ನಿ ಶಾಮಕ ದಳ ಸಿಬ್ಬಂದಿಯಿಂದ ಶವ ಹೊರ ತೆಗೆಯೋ ಕಾರ್ಯ ನಡೆಯಿತು. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.
Published by:Pavana HS
First published: