ಗೌರಿ ದೂರಾದರೂ, ನೆನಪುಗಳು ನಮ್ಮೊಂದಿಗಿವೆ: ಕವಿತಾ ಲಂಕೇಶ್​

news18
Updated:September 5, 2018, 7:19 AM IST
ಗೌರಿ ದೂರಾದರೂ, ನೆನಪುಗಳು ನಮ್ಮೊಂದಿಗಿವೆ: ಕವಿತಾ ಲಂಕೇಶ್​
  • Advertorial
  • Last Updated: September 5, 2018, 7:19 AM IST
  • Share this:
ಅನಿತಾ ಈ, ಮಂಜುನಾಥ್​ ಎನ್​


ಪತ್ರಕರ್ತೆ ಗೌರಿ ಇಂದು ಭೌತಿಕವಾಗಿ ನಮ್ಮೊಂದಿಗಿಲ್ಲ. ಆದರೂ ಅವರ ಧ್ಯೇಯ, ಹೋರಾಟ, ಉದ್ದೇಶ ಹಾಗೂ ಚಿಂತನೆಗಳು ಸದಾ ನಮ್ಮೊಂದಿಗಿರಲಿದೆ. ಗೌರಿ ಹತ್ಯೆ ನಡೆದು ಇಂದಿಗೆ (ಸೆ.5) ಒಂದು ವರ್ಷ. ವರ್ಷಕ್ಕೆ ಒಂದು ದಿನ ಇರುವಾಗಲೇ ಎಸ್​ಐಟಿ ಪೊಲೀಸರು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಆರೋಪಿ ಪರಶುರಾಮ್​ ವಾಘ್ಮೋರೆಯೇ ಗೌರಿ ಲಂಕೇಶ್ ಹತ್ಯೆ ಮಾಡಿದ್ದು ಎಸ್​ಎಫ್​ಎಲ್​ ವರದಿ ಸಾಬೀತು ಪಡಿಸಿದೆ.

ಈ ಸುದ್ದಿ ಹೊರ ಬಿದ್ದ ಸಂದರ್ಭದಲ್ಲಿ ಗೌರಿ ತಂಗಿ ಕವಿತಾ ಲಂಕೇಶ್ ನ್ಯೂಸ್​ 18 ಜತೆ ಅಕ್ಕನಿಲ್ಲದೆ ಕಳೆದ ಒಂದು ವರ್ಷದ ಅನುಭವವನ್ನು ಹಂಚಿಕೊಂಡಿದ್ದಾರೆ. ​

ಮನೆಯಲ್ಲಿ ಅವ್ವ ಎಂದ ಕೂಡಲೇ ಓಗೊಡುತ್ತಿದ್ದದ್ದು ಗೌರಿ. ಹೀಗೆಂದು ಮಾತಿಗಿಳಿದ ಕವಿತಾ, ಗೌರಿ ದೈಹಿಕವಾಗಿ ದೂರಾಗಿರಬಹುದು. ಆದರೆ ಇವತ್ತಿಗೂ ಅವರ ನೆನಪುಗಳು ನಮ್ಮಿಂದ ದೂರವಾಗಿಲ್ಲ. ನನ್ನ ಮಗಳು ಅರ್ಧ ರಾತ್ರಿ ಎದ್ದು ಅವ್ವ (ಗೌರಿ) ಬೇಕು, ಕರೆದುಕೊಂಡು ಬನ್ನಿ ಎಂದು ಕಣ್ಣೀರಿಡುತ್ತಾಳೆ ಎನ್ನುವಾಗ ಗೌರಿ ಇಲ್ಲದ ಕೊರತೆ ಅವರ ಕಣ್ಣು ತುಂಬಿತ್ತು.

'ಗೌರಿ ವಾರಕ್ಕೊಮ್ಮೆ ಒಮ್ಮೆಯಾದರೂ ನಮ್ಮ ಮನೆಗೆ ಬಂದು ಹೋಗುತ್ತಿದ್ದಳು. ನಾನು ಮತ್ತು ಅವಳು ಪ್ರತಿನಿತ್ಯ ಕಚೇರಿಯಲ್ಲಿ 2-3 ಗಂಟೆ ಮಾತನಾಡುತ್ತಿದ್ದೆವು. ಪತ್ರಿಕೆಯ ವಿಚಾರವಾಗಿಯೂ ಚರ್ಚಿಸುತ್ತಿದ್ದೆವು. ಆಗಾಗ ತಮಾಷೆಗೆ ಗೌರಿ ನಾನು ಹಿಟ್​ ಲಿಸ್ಟ್​ನಲ್ಲಿ ಇದ್ದೀನಿ ಎಂದು ನಗುತ್ತಿದ್ದಳು. ಅವಳ ಜೀವನದಲ್ಲಿ ಕೊನೆಗೆ ಅದೇ ನಿಜವಾಯಿತು' ಎಂದು ಬೇಸರದಿಂದ ಹೇಳಿದರು.

'ಗೌರಿಗೆ ತರಕಾರಿಯಿಂದ ಮಾಡಿದ ಪಲ್ಯ ಎಂದರೆ ತುಂಬಾ ಇಷ್ಟ. ಅದಕ್ಕೆ ಮನೆಯಲ್ಲಿ  ಅಮ್ಮ ಪಲ್ಯ ಮಾಡುವುದನ್ನೇ ಬಿಟ್ಟಿದ್ದಾರೆ.  ನಿತ್ಯ ಊಟಕ್ಕೆ ಅವಳಿಗೆ ತುಪ್ಪ ಬೇಕಿತ್ತು. ಅವಳ ಅಗಲಿಕೆಯ ನಂತರ ನಾನು ತುಪ್ಪ ತಿನ್ನುವುದನ್ನೇ  ನಿಲ್ಲಿಸಿದ್ದೇನೆ. ಅವಳಿಗೆ ಇಷ್ಟವಾದದ್ದನ್ನು ನೋಡಿದರೆ ಅವಳ ನೆನಪಾಗುತ್ತದೆ. ಅವಳ ನೆನಪು ಮನಸ್ಸಿನಲ್ಲಿ ಕಾಡುತ್ತಿವೆ' ಎಂದು ಬೇಸರ ವ್ಯಕ್ತಪಡಿಸಿದರು.ಎಸ್​ಐಟಿ ಕೆಲಸದಿಂದ ಸಂತೋಷವಾಗಿದೆ

'ಸಂಶೋಧಕ ಎಂ.ಎಂ. ಕಲ್ಬುರ್ಗಿ, ಮಹಾರಾಷ್ಟ್ರದ ಚಿಂತಕರಾದ ಗೋವಿಂದ್ ಪನ್ಸಾರೆ, ನರೇಂದ್ರ ದಾಬೋಲ್ಕರ್​ ಹತ್ಯೆ ಪ್ರಕರಣಗಳು ಇನ್ನೂ ತನಿಖಾ ಹಂತದಲ್ಲಿವೆ. ಸಿಬಿಐಗೆ ನೀಡಲಾಗಿರುವ  ಪ್ರಕರಣಗಳಿಗಿಂತ ಬೇಗನೆ ಎಸ್​ಐಟಿ ಗೌರಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದೆ. ಆರೋಪಿಯ ಬಗ್ಗೆ ಮಾಧ್ಯಮಗಳಲ್ಲಿಇಂದು ಪ್ರಕಟವಾಗುತ್ತಿರುವ ವಿಷಯ ನಿಜವಾದರೆ ನಿಜಕ್ಕೂ ನನಗೆ ಖುಷಿ ಇದೆ. ಎರಡು ದಿನಗಳಲ್ಲಿ ಎಸ್​ಐಟಿ ಅಧಿಕಾರಿಗಳನ್ನು ಭೇಟಿ ಮಾಡಲಿದ್ದೇನೆ. ಈ ಹಿಂದೆಯೂ ವಾರಕ್ಕೊಮ್ಮೆ ಅಧಿಕಾರಿಗಳನ್ನು ಭೇಟಿ ಮಾಡುತ್ತಿದ್ದೆ. ಆದಷ್ಟು ಬೇಗ ತನಿಖೆ ಪೂರ್ಣ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ'ಎಂದು ಹೇಳಿದರು.

 

 
First published:September 5, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ