ಬೆಂಗಳೂರು: ದೇವರು (God) ಎಂದರೆ ಯಾರು ತಾನೆ ನಂಬಲ್ಲ? ಎಲ್ಲರೂ ನಂಬಿಕೊಳ್ಳುತ್ತಾರೆ. ಇಲ್ಲೂ ಕೂಡ ಜನರನ್ನು ನಂಬಿಸಿ ದೋಖ ಮಾಡಿದ್ದಾರೆ. ಅದರಲ್ಲೂ ಕೆಲವೊಂದು ಚಮತ್ಕಾರಗಳನ್ನು ಮಾಡಿ ತೋರಿಸುತ್ತಾರೆ. ಹಿಂದೂ (Hindu) ಸಂಪ್ರದಾಯದಲ್ಲಿ ನೂರು ಶಿವ ಲಿಂಗಗಳನ್ನ (Lingam) ಪೂಜಿಸುವುದರ ಬದಲು ಒಂದು ಸಾಲಿಗ್ರಾಮ (Shaligram) ಪೂಜಿಸಿದರೆ ಸಾಕು ಅನ್ನೋ ಪ್ರತೀತಿ ಇದೆ. ಆದರೆ ಈ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು ಜನರಿಗೆ ಮಕ್ಮಲ್ ಟೋಪಿ ಹಾಕಲು ಹೊರಟಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದಾರೆ.
‘ವಿಷ್ಣುವಿನ ಪ್ರತಿರೂಪ.. 100 ಶಿವಲಿಂಗಕ್ಕೆ ಸಮ’
ಸಾಲಿಗ್ರಾಮ ವಿಷ್ಣುವಿನ ಪ್ರತಿ ರೂಪ, ನೂರು ಶಿವಲಿಂಗಗಳ ಪೂಜೆಗಿಂತ ಒಂದು ಸಾಲಿಗ್ರಾಮ ಪೂಜೆ ಲೇಸು, ವಜ್ರ ಕೀಟ ವಾಸಿಸುವ ಪವಿತ್ರ ಕಲ್ಲು. ಹೀಗೆ ಸಾಲಿಗ್ರಾಮ ಕಲ್ಲಿಗೆ ಹಿಂದೂಗಳಲ್ಲಿ ನಂಬಿಕೆ ಇದೆ. ನೇಪಾಳದ ಗಂಡಕಿ ನದಿಯಲ್ಲಿ ಯಥೆಚ್ಚವಾಗಿ ದೊರಕುವ ಈ ಕಲ್ಲನ್ನು ಅದೃಷ್ಟದ ಕಲ್ಲು ಎಂದು ಬಿಂಬಿಸಿ ಎರಡು ಕೋಟಿಗೆ ಮಾರಲು ಯತ್ನಿಸಿದ್ದಾರೆ ಮನೋಜ್ ಹಾಗೂ ಆದಿತ್ಯ ಸಾಗರ್.
ಇದನ್ನೂ ಓದಿ: BS Yediyurappa: ಮಹಿಳೆ ಧರಿಸಿದ್ದ ನೆಕ್ಲೇಸ್ ನೋಡಿ ಸೂಪರ್ ಎಂದ ಬಿಎಸ್ವೈ; ಮಾಜಿ ಸಿಎಂಗೆ ಮುಸ್ಲಿಮರಿಂದ ಜೈಕಾರ!
ಈ ಸಾಲಿಗ್ರಾಮ ಕಲ್ಲು ಮನೆಯಲ್ಲಿದ್ದರೆ ರೋಗ ರುಜಿನಗಳು ಬರಲ್ಲ, ವಜ್ರ ಕೀಟ ವಾಸಿಸುವ ಸಾಲಿಗ್ರಾಮವಾದರೆ ಇದು ಸಾಧ್ಯ ಎನ್ನಲಾಗುತ್ತೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡು ಹಲವರು ವಜ್ರ ಕೀಟ ಓಡಾಡಿದಂತೆ ಕಲ್ಲಿನ ಮೇಲೆ ಕೃತಕವಾಗಿ ಚಿತ್ರಿಸಿ ಮಾರಾಟ ಮಾಡುವುದು ಕೂಡ ಸರ್ವೇ ಸಾಮಾನ್ಯವಾಗಿದೆ.
ಮಹಾರಾಷ್ಟ್ರ ಮೂಲದ ಮನೋಜ್ ಹಾಗೂ ಆದಿತ್ಯ ಸಾಗರ್ ಗೋಮತಿ ನದಿಯಿಂದ ತಂದ ಕಲ್ಲನ್ನು ನಿಜವಾದ ಸಾಲಿಗ್ರಾಮ ಎಂದು ನಂಬಿಸಿ ಎರಡು ಕೋಟಿಗೆ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಖಚಿತ ಮಾಹಿತಿ ಸಂಗ್ರಹಿಸಿದ ಸಿಸಿಬಿ ಅಧಿಕಾರಿಗಳನ್ನು ಬಂಧಿಸಿದ್ದಾರೆ.
ನಂಬಿಕೆ ಮೇಲೆ ಜಗತ್ತು ನಡೆಯುತ್ತದೆ ಅನ್ನೋದು ಸರಿ. ಆದರೆ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು ಮೋಸ ಮಾಡುವ ಜನರ ಬಗ್ಗೆ ಎಚ್ಚರಿಕೆಯೂ ಇರಬೇಕು. ಹಣ ಸಂಪಾದನೆ ಮಾಡೋದು ಎಷ್ಟು ಮುಖ್ಯವೋ ವಂಚಕರ ಜಾಲದಲ್ಲಿ ಬೀಳದೆ ಇರೋದು ಕೂಡ ಅಷ್ಟೇ ಮುಖ್ಯ.
ಡ್ರಮ್ನಲ್ಲಿ ಸಿಕ್ಕ ಮಹಿಳೆಯ ಮೃತದೇಹದ ಗುರುತು ಪತ್ತೆ; ಮೂವರು ಅರೆಸ್ಟ್
ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದ ಡ್ರಮ್ ನಲ್ಲಿ ಮಹಿಳಾ ಶವ ಪತ್ತೆ ಪ್ರಕರಣವನ್ನು ಪೊಲೀಸರು ಬೇದಿಸಿದ್ದು, ಮೃತ ಮಹಿಳೆಯನ್ನು 27 ವರ್ಷದ ತಮನ್ನಾ ಎಂದು ಗುರುತಿಸಲಾಗಿದೆ. ಅಲ್ಲದೆ ಪ್ರಕರಣದ ಪ್ರಮುಖ ಮೂವರು ಆರೋಪಿಗಳನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಕಮಾಲ್, ತನ್ವೀರ್, ಶಾಕೀಬ್ ಬಂಧಿತರಾಗಿದ್ದಾರೆ. ಮೃತ ಮಹಿಳೆ ತಮನ್ನಾ ಎರಡನೇ ಬಾರಿಗೆ ಇಂತಿಕಾಮ್ ಎಂಬಾತನನ್ನು ಮದುವೆಯಾಗಿದ್ದರು. ಆದರೆ ಇದು ಇಂತಿಕಾಮ್ ಹಾಗೂ ಸಹೋದರರ ನಡುವೆ ವೈಮನಸ್ಸು ಮೂಡಿತ್ತು.
ಇದೇ ಕಾರಣಕ್ಕೆ ಕಳೆದ ತಿಂಗಳು 12ರಂದು ಕಲಾಸಿಪಾಳ್ಯದ ಮನೆಗೆ ಊಟಕ್ಕೆ ಕರೆದು ವೇಲ್ ನಿಂದ ಬಿಗಿದು ತಮನ್ನಾಳನ್ನು ಕೊಲೆ ಮಾಡಿದ್ದರು. ನಂತರ ಮೃತದೇಹವನ್ನು ಡ್ರಮ್ ನಲ್ಲಿಟ್ಟು ಬಿಹಾರಕ್ಕೆ ಸಾಗಿಸಲು ಯತ್ನಿಸಿದ್ದರು. ಆದರೆ ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದ ಬಳಿ ಶವ ಬಿಟ್ಟು ಪರಾಗಿಯಾಗಿದ್ದರು. ಆರೋಪಿಗಳು ಎಲ್ಲರೂ ಬಿಹಾರ ಮೂಲದವರಾಗಿದ್ದು, ಇನ್ನೂ ಐವರು ನಾಪತ್ತೆಯಾಗಿದ್ದಾರೆ. ಡ್ರಮ್ ಮೇಲೆ ಪತ್ತೆಯಾದ ಹೆಸರಿನ ಸುಳಿವಿನ ಮೇಲೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ