Karnataka Politics: ಮನ್ಸೂರ್ ಖಾನ್ಗೆ ಜಟ್ಕಾ ಮಾಡಿ ಬಿಟ್ರು, ನಾನು ಗಂಡಸಾಗಿ HDK ಪಕ್ಕ ಬಂದೆ ಕೂತೆ: ಸಿ ಎಂ ಇಬ್ರಾಹಿಂ
ಪಾಪ ಮನ್ಸೂರ್ ಖಾನ್ ಗೆ ಜಟ್ಕಾ ಮಾಡಿ ಬಿಟ್ಟರು. ಹಲಾಲ್ ಮಾಡಿದ್ದಾದರೂ ನಡಿತಿತ್ತು. ಆದರೆ ಜಟ್ಕಾ ಮಾಡಿಬಿಟ್ಟರ. ನನಗೂ ಕಾಂಗ್ರೆಸ್ ನವರು ಜಟ್ಕಾ ಮಾಡೋದಕ್ಕೆ ಹೊರಟಿದ್ದರು. ನಾನು ತಪ್ಪಿಸಿಕೊಂಡು ಬಂದು ಕುಮಾರಸ್ವಾಮಿ ಪಕ್ಕದಲ್ಲಿ ಗಂಡಸಾಗಿ ಕುಳಿತಿದ್ದೀನಿ
2023ಕ್ಕೆ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಸಿಎಂ ಆಗೋದಕ್ಕೆ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ಸೇರಿ ಫೌಂಡೇಶನ್ ಹಾಕಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ (JDS State President CM Ibrahim) ಹೇಳಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಇಬ್ರಾಹಿಂ, ಇವತ್ತಿನ ಮುಹೂರ್ತ ಬರೆದಿಟ್ಟುಕೊಳ್ಳಿ. ಬಿಜೆಪಿಯವರಿಗೆ ಜೆಡಿಎಸ್ ನಂಬರ್ 1 ಬರತ್ತೆ ಅನ್ನೋದು ಗೊತ್ತಾಗಿದೆ. ಕಾಂಗ್ರೆಸ್ (Congress) ಮೂರನೇ ಸ್ಥಾನಕ್ಕೆ ಹೋಗೋದು ಗೊತ್ತಾಗಿದೆ. ನಮ್ಮವರು 10 ಜನ ಜೆಡಿಎಸ್ ಗೆ (JDS) ಬರುತ್ತಾರೆ ಎಂದು ಹೇಳಿಕೆ ನೀಡಿದರು. ರಮೇಶ್ ಕುಮಾರ್ (Ramesh Kumar) ಭಾರೀ ಸಿದ್ಧಾಂತ ಮಾತಾಡ್ತಾರೆ. ಇದೇ ಡಿಕೆಶಿವಕುಮಾರ್ ಕಾಂಗ್ರೆಸ್ ನ ಒಂದು ವೋಟು, ಬಿಜೆಪಿ ಒಂದು ಓಟು ಹಾಕಿಸಿದ್ದು ಅಂತ ಹೇಳಿದರು. ಇಬ್ಬರು ಧರ್ಮಪತ್ನಿಯರು ಒಂದೇ ಗಂಡ ಏನು ನಾಟಕನಪ್ಪ ನಿಮ್ಮದು ಎಂದು ವ್ಯಂಗ್ಯ ಮಾಡಿದರು.
ಕುಪೇಂದ್ರ ರೆಡ್ಡಿ ವೋಟು ಕೇಳಕ್ಕೇ ಹೋದಾಗ ಸತೀಶ್ ರೆಡ್ಡಿ ಏನು ಹೇಳಿದ್ರಿ? ಸಿದ್ದರಾಮಯ್ಯಗೆ ಉಸಿರಿರಲಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಜೆಪಿಗೆ ಮತ ಹಾಕಿಸಿದ್ದಾರೆ. ಹಾಗಾಗಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಡಿಕೆ ಶಿವಕುಮಾರ್ ಅವರನ್ನು ಪಕ್ಷದಿಂದ ಕಿತ್ತು ಹಾಕಬೇಕು ಎಂದು ಆಗ್ರಹಿಸಿದರು.
ಸೂಟ್ ಕೇಸ್ ಇಸ್ಕೊಳ್ಳೋದು ಬಹುತ್ ಅಚ್ಚಾ ಹೈ ಅನ್ನೋದು
ಸಿದ್ದರಾಮಯ್ಯ ಅವರನ್ನು ವಿರೋಧ ಪಕ್ಷದಿಂದ ತೆಗೆದು ಹಾಕೋ ತಾಕತ್ತಿದೆಯಾ? ಸುರ್ಜೆವಾಲಾ ಎಲ್ಲಿ ಹೋದ್ಯಪ್ಪ ಡಬರಿವಾಲಾ? ಅವರವರ ಪಾಲು ಇಸ್ಕೊಂಡು ಊರು ಬಿಟ್ಟರು ಅವನು ಬಂದ ಸೂಟ್ ಕೇಸ್, ಇವನು ಬಂದ ಸೂಟ್ ಕೇಸು. ಸೂಟ್ ಕೇಸ್ ಇಸ್ಕೊಳ್ಳೋದು ಬಹುತ್ ಅಚ್ಚಾ ಹೈ ಅನ್ನೋದು ದೆಹಲಿಯಿಂದ ಬಂದವರೆಲ್ಲ ಹೀಗೆ ಸೂಟ್ ಕೇಸ್ ಎತ್ಕೊಂಡು ಹೋಗೋದು ಎಂದು ಆರೋಪಿಸಿದರು.
ಕುಪೇಂದರ ರೆಡ್ಡಿ ಅವರನ್ನು ಸೋಲಿಸಿದ್ದಕ್ಕೆ ಜೆಡಿಎಸ್ ಕಾರ್ಯಕರ್ತರಿಗೆ ನೋವಿದೆ, ಜನರಲ್ಲಿ ಆಕ್ರೋಶ ಇದೆ. ಇವರು ಬಿಬಿಎಂಪಿ ಚುನಾವಣೆ ಮಾಡಲ್ಲ ಗೊತ್ತಿದೆ. ಗುಬ್ಬಿ ಶ್ರೀನಿವಾಸ್ ಕುಮಾರಸ್ವಾಮಿ ಬಗ್ಗೆ ಮಾತಾಡ್ತಿದ್ದಾನೆ ಅಂತ ಯಾರೂ ತಲೆ ಕೆಡಿಸಿಕೊಳ್ಳಬೇಡಿ. ನಾಯಿ ಮನ್ಯುಷ್ಯನಿಗೆ ಕಚ್ಚುತ್ತದೆ ಹೊರತು ಮನುಷ್ಯ ನಾಯಿಗೆ ಕಚ್ಚುವುದಿಲ್ಲ ಎಂದು ಕಿಡಿಕಾರಿದರು.
ಯಡಿಯೂರಪ್ಪ ಜೊತೆ ಸಿದ್ದರಾಮಯ್ಯ ಡೀಲ್
12 ಜನರನ್ನು ಸಿದ್ದರಾಮಯ್ಯ ಮುಂಬೈಗೆ ಕಳಿಸಿ ಮಂಚದ ಮೇಲೆ ಮಲಗಿಸಿ ವೀಡಿಯೋ ಮಾಡ್ಸಿ ಯಡಿಯೂರಪ್ಪನ ಸಿಎಂ ಮಾಡದರು. ಸಿದ್ದರಾಮಯ್ಯ ಯಡಿಯೂರಪ್ಪ ನ ಜೊತೆಗೆ ಈಗಲೂ ವಿಮಾನ ನಿಲ್ದಾಣದಲ್ಲಿ ಡೀಲ್ ಮಾಡಿಕೊಂಡರು. ಅದಕ್ಕೆ ಸಿ.ಟಿ.ರವಿ ಕಾಂಗ್ರೆಸ್ ಆಫಿಸ್ ಗೆ ಹೋಗಿ ಅಭಿನಂದನೆ ಸಲ್ಲಿಸಿದರು.
ಮನ್ಸೂರ್ ಖಾನ್ ಗೆ ಜಟ್ಕಾ ಮಾಡಿ ಬಿಟ್ಟರು
ಒಬ್ಬರ ಹತ್ತಿರ ತಾಳಿ ಕಟ್ಟಿಸಿಕೊಳ್ಳೋದು, ಇನ್ನೊಬ್ಬರ ಹತ್ತಿರ ಬಾಳೆ ಮಾಡ್ತೀರಲ್ಲ ನೀವೂ ನಾಚಿಕೆಗಟ್ಟವರು, ಮಾನಗೆಟ್ಟವರು ಎಂದು ಆಕ್ರೋಶ ಹೊರ ಹಾಕಿದರು. ಪಾಪ ಮನ್ಸೂರ್ ಖಾನ್ ಗೆ ಜಟ್ಕಾ ಮಾಡಿ ಬಿಟ್ಟರು. ಹಲಾಲ್ ಮಾಡಿದ್ದಾದರೂ ನಡಿತಿತ್ತು. ಆದರೆ ಜಟ್ಕಾ ಮಾಡಿಬಿಟ್ಟರ. ನನಗೂ ಕಾಂಗ್ರೆಸ್ ನವರು ಜಟ್ಕಾ ಮಾಡೋದಕ್ಕೆ ಹೊರಟಿದ್ದರು. ನಾನು ತಪ್ಪಿಸಿಕೊಂಡು ಬಂದು ಕುಮಾರಸ್ವಾಮಿ ಪಕ್ಕದಲ್ಲಿ ಗಂಡಸಾಗಿ ಕುಳಿತಿದ್ದೀನಿ ಎಂದರು.
ರಾಜ್ಯಸಭೆ ಚುನಾವಣೆಯಲ್ಲಿ (Rajya Sabhe Election) ಅಡ್ಡ ಮತದಾನ ಮಾಡಿದ ಇಬ್ಬರು ಶಾಸಕರಿಗೆ (Legislators) ನೋಟಿಸ್ (Notice) ನೀಡಿದ್ದೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಹೇಳಿದ್ದಾರೆ.
Published by:Mahmadrafik K
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ