ಮಂಡ್ಯ: ಮದ್ದೂರಿನ (Maddur) ತಹಶೀಲ್ದಾರ್ ಕಚೇರಿಯಲ್ಲಿ (Tehsildar Office) ರಕ್ತದೋಕುಳಿಯೇ ಹರಿದಿದೆ. ಕಚೇರಿಗೆ ಬಂದಿದ್ದ ಎಲ್ಲಾ ಸಾರ್ವಜನಿಕರ (Public) ಎದುರಲ್ಲೇ ವ್ಯಕ್ತಿಯೊಬ್ಬ ಇನ್ನೊಬ್ಬನ ನೆತ್ತರನ್ನ ಹರಿಸಿದ್ದಾನೆ. ಮಚ್ಚು ಹಿಡಿದು ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ದಾಳಿ (Fatal Attack) ಮಾಡಲಾಗಿದ್ದು, ಭೀಕರ ಅಟ್ಯಾಕ್ ಕಂಡ ಜನರು ಕೆಲ ಸಮಯ ಶಾಕ್ ಆಗಿ ನೋಡುತ್ತಲೇ ನಿಂತಿದ್ದರು. ಕೊನೆಗೆ ಮಚ್ಚು ಬೀಸಿದ್ದವನನ್ನು ಹಿಡಿದು ಬಡಿದ ಸಾರ್ವಜನಿಕರು ಆರೋಪಿಯನ್ನು ಪೊಲೀಸ್ ವಶಕ್ಕೆ ನೀಡಿರುವ ಘಟನೆ ಮಂಡ್ಯ (Mandya) ಜಿಲ್ಲೆ ಮದ್ದೂರು ತಾಲೂಕು ಕಚೇರಿಯಲ್ಲಿ ನಡೆದಿದೆ.
ಹಾಡಹಗಲೇ ತಾಲೂಕು ಕಚೇರಿಯಲ್ಲಿ ಡೆಡ್ಲಿ ಅಟ್ಯಾಕ್
ಮದ್ದೂರಿನ ತಾಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ರಕ್ತ ಹರಿದಿದೆ. ವೈಯಕ್ತಿಕ ದ್ವೇಷಕ್ಕೆ ಈ ಭಯಾನಕ ದಾಳಿ ನಡೆದಿದ್ದು ಎಂಬ ಮಾಹಿತಿ ಲಭ್ಯವಾಗಿದ್ದು, ಚೆನ್ನ ರಾಜ್ ಎಂಬಾತನನ್ನು ನಂದನ್ ಎಂಬಾತ ಅಟ್ಟಾಡಿಸಿಕೊಂಡು ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಸಾರ್ವಜನಿಕರೂ ಸೇರಿಕೊಂಡು ಹಲ್ಲೆ ಮಾಡಿದ ನಂದನ್ನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ, ಪೊಲೀಸರ ವಶಕ್ಕೆ ನೀಡಿದ್ದಾರೆ.
ಇದನ್ನೂ ಓದಿ: Bengaluru: ಬೆಂಗಳೂರಿನಲ್ಲಿ ಹಣದ ಮಳೆ ಸುರಿಸಿದ ಅಸಾಮಿ; ಕೆ.ಆರ್ ಮಾರ್ಕೆಟ್ ಫ್ಲೈ ಓವರ್ನಿಂದ ದುಡ್ಡು ಎಸೆದ ಭೂಪ!
ವೈಯುಕ್ತಿಕ ದ್ವೇಷಕ್ಕೆ ವ್ಯಕ್ತಿಯ ಕೊಲೆಗೆ ಯತ್ನ
ಅಸಲಿಗೆ ಹಲ್ಲೆಗೊಳಗಾದ ಚೆನ್ನರಾಜು ಪುತ್ರಿ ಪ್ರವೀಣ್ ಎಂಬಾತನನ್ನು ಪ್ರೀತಿಸುತ್ತಿದ್ದಳಂತೆ. ಪ್ರವೀಣ್ ಸ್ನೇಹಿತ ಈ ನಂದನ್, ನಂದನ್ ಹಾಗೂ ಇನ್ನಿತರ ಸ್ನೇಹಿತರು ಸೇರಿ ಅಪ್ರಾಪ್ತೆಯಾಗಿದ್ದ ಬಾಲಕಿಯನ್ನು ಪ್ರವೀಣ್ ಜೊತೆ ಮದುವೆ ಮಾಡಿಸಿದ್ದರಂತೆ. ಈ ಹಿನ್ನೆಲೆಯಲ್ಲಿ ಆ ವೇಳೆ ಬಾಲ್ಯ ವಿವಾಹ ಪ್ರಕರಣ ನಂದನ್ ಹಾಗೂ ಆತನ ಸ್ನೇಹಿತರ ಮೇಲೆ ದಾಖಲಾಗಿ, ಕಾನೂನು ಕುಣಿಕೆಗೆ ಸಿಲುಕಿದ್ದರಂತೆ.
ಇದರ ಜೊತೆಗೆ ನಂದನ್ ಹಾಗೂ ಚೆನ್ನರಾಜ್ ಅವರ ನಡುವೆ ಆಸ್ತಿ ವಿವಾದ ಕೂಡ ಇತ್ತಂತೆ. ಈ ಹಿನ್ನೆಲೆಯಲ್ಲಿ ಪ್ರಕರಣ ಬಗ್ಗೆ ಮದ್ದೂರು ತಹಶೀಲ್ದಾರ್ ಕಚೇರಿಯಲ್ಲಿ ಆಸ್ತಿ ಕೇಸ್ ಬಗ್ಗೆ ತೀರ್ಪು ಬರಬೇಕಿತ್ತಂತೆ. ಇದೇ ವೇಳೆ ನಂದನ್, ಚೆನ್ನರಾಜ್ನನ್ನು ಅಟ್ಟಾಡಿಸಿ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.
ಸದ್ಯ ಚೆನ್ನರಾಜುಗೆ ಕತ್ತಿನ ಭಾಗಕ್ಕೆ ತೀವ್ರ ಪೆಟ್ಟು ಬಿದ್ದು ಮಾರಣಾಂತಿಕ ಗಾಯಗಳಾಗಿದೆ. ಅವರನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಯ ಐಸಿಯುಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸಾರ್ವಜನಿಕರಿಂದ ಹಲ್ಲೆಗೊಳಗಾದ ನಂದನ್ನನ್ನೂ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಲ್ಲೆಗೆ ನಿಖರ ಕಾರಣ ಏನು ಅನ್ನೋದು ಆರೋಪಿ ಚೇತರಿಸಿಕೊಂಡ ಬಳಿಕ ವಿಚಾರಣೆ ನಡೆಸಲು ಮುಂದಾಗಿದ್ದಾರೆ.
ಭೀಕರ ಅಪಘಾತ; ಖಾಸಗಿ ಬಸ್ ಹರಿದು ಮಹಿಳೆ ತಲೆ ಛಿದ್ರ ಛಿದ್ರ
ಬೆಂಗಳೂರಿನ ಯಶವಂತಪುರ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ, ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ಮಹಿಳೆ ಮೇಲೆ ಖಾಸಗಿ ಬಸ್ ಹರಿದಿದೆ. ತಲೆಯ ಮೇಲೆ ಬಸ್ ಹರಿದ ಪರಿಣಾಮ ವಿನುತಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಯಶವಂತಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಮೃತ ವಿನುತಾ ಕಾಮಾಕ್ಷಿಪಾಳ್ಯದಲ್ಲಿರುವ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ