ಎನ್​ಜಿಟಿ ಆದೇಶಕ್ಕೆ ಬದಲಾವಣೆ ತರಲು ಸರ್ಕಾರ ಚಿಂತನೆ; ಕ್ರೆಡಾಯ್​ ಮುಖ್ಯಸ್ಥರೊಂದಿಗೆ ಚರ್ಚಿಸಿರುವ ಡಿಸಿಎಂ


Updated:August 31, 2018, 10:25 PM IST
ಎನ್​ಜಿಟಿ ಆದೇಶಕ್ಕೆ ಬದಲಾವಣೆ ತರಲು ಸರ್ಕಾರ ಚಿಂತನೆ; ಕ್ರೆಡಾಯ್​ ಮುಖ್ಯಸ್ಥರೊಂದಿಗೆ ಚರ್ಚಿಸಿರುವ ಡಿಸಿಎಂ

Updated: August 31, 2018, 10:25 PM IST
ನ್ಯೂಸ್​18 ಕನ್ನಡ

ಬೆಂಗಳೂರು (ಆ. 31): ಎನ್‌ಜಿಟಿ ಆದೇಶಕ್ಕೆ ಕಾನೂನಾತ್ಮಕ ಬದಲಾವಣೆ ತರಲು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ನೇತೃತ್ವದ ಸಭೆಯಲ್ಲಿ ಚಿಂತನೆ ನಡೆಸಲಾಗಿದೆ.

ಕೆರೆ, ರಾಜಕಾಲುವೆ ಬಫರ್ ಜೋನ್‌ ವಿಚಾರದಲ್ಲಿ ಎನ್‌ಜಿಟಿ ಆದೇಶವನ್ನು ಕಾನೂನಾತ್ಮಕವಾಗಿ ಸಡಿಲಗೊಳಿಸುವ ಸಂಬಂಧ ಪರಿಶೀಲಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಈ ಕುರಿತು ಕ್ರೆಡಾಯ್ ಮುಖ್ಯಸ್ಥರೊಂದಿಗೆ ವಿಧಾನಸೌಧದಲ್ಲಿ ಸಭೆ ನಡೆಸಿರುವ ಪರಮೇಶ್ವರ್, ಎನ್‌ಜಿಟಿ ಅವರು ಬೆಂಗಳೂರಿಗೆ ಮಾತ್ರ ಕೆರೆ ಸಮೀಪ 75, 50, 25 ಮೀಟರ್ ಬಫರ್ ಜೋನ್‌ ಎಂದು ಹೇಳಿದ್ದಾರೆ. ದೇಶದ ಬೇರಾವ ನಗರಗಳಿಗೂ ಈ‌ ನಿಯಮ‌ವಿಲ್ಲ. ಆದರೆ ಎನ್‌ಜಿಟಿ ಅಧಿಕಾರಿಗಳು ಬೆಂಗಳೂರಿಗೆ ಮಾತ್ರ ನಿಯಮ ಅನ್ವಯವಾಗುವಂತೆ ಆದೇಶ ನೀಡಿದ್ದಾರೆ.‌ ಈ ನಿಯಮವನ್ನು ನಗರದಲ್ಲಿ ಅಳವಡಿಸಿಕೊಳ್ಳಲು‌ ಸಾಧ್ಯವಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಸಾಕಷ್ಟು ಮನೆಗಳು ನಿರ್ಮಾಣವಾಗಿವೆ. ನಿಯಮವನ್ನು ಅನುಸರಿಸಲು ಹೋದರೆ ನಗರದ ಅರ್ಧದಷ್ಟು ಮನೆಗಳನ್ನು ತೆರವು ಮಾಡಬೇಕಾಗುತ್ತದೆ. ಹೀಗಾಗಿ, ಈ ನಿಯಮಕ್ಕೆ ಕಾನೂನಾತ್ಮಕ ಬದಲಾವಣೆ ಮಾಡುವಂತೆ ಕ್ರೆಡಾಯ್​ಗೆ ಪರಮೇಶ್ವರ್ ಮನವಿ ಮಾಡಿದ್ದಾರೆ.

ಈ ಬಗ್ಗೆ ಪರಿಶೀಲಿಸಿ ಆದಷ್ಟು ಬೇಗ ತಿಳಿಸುವಂತೆ ಕ್ರೆಡಾಯ್ ಸಿಬ್ಬಂದಿ ತಿಳಿಸಿದ್ದಾರೆ.
First published:August 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...