ಕೈ ತಪ್ಪಿದ ಕ್ಷೇತ್ರ: ದೇವೇಗೌಡರ ಬಳಿಕ ಕುಮಾರಸ್ವಾಮಿ ಜೊತೆ ಚರ್ಚೆಗೆ ಮುಂದಾದ ಡಿಸಿಎಂ ಪರಮೇಶ್ವರ್​

ತುಮಕೂರು ಕ್ಷೇತ್ರವನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು  ಗೌಡರು ಸರಸಾಗಟಾಗಿ ಅವರ ಬೇಡಿಕೆಯನ್ನು ತಳ್ಳಿಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಪರಮೇಶ್ವರ್​ ಇಂದು ಸಿಎಂ ಕುಮಾರಸ್ವಾಮಿಯವರನ್ನು ಭೇಟಿಯಾಗಿ ಮನವೊಲಿಕೆ ಯತ್ನ ನಡೆಸಿದ್ದಾರೆ.

Seema.R | news18
Updated:March 15, 2019, 11:29 AM IST
ಕೈ ತಪ್ಪಿದ ಕ್ಷೇತ್ರ: ದೇವೇಗೌಡರ ಬಳಿಕ ಕುಮಾರಸ್ವಾಮಿ ಜೊತೆ ಚರ್ಚೆಗೆ ಮುಂದಾದ ಡಿಸಿಎಂ ಪರಮೇಶ್ವರ್​
ಸಿಎಂ, ಡಿಸಿಎಂ
Seema.R | news18
Updated: March 15, 2019, 11:29 AM IST
ಬೆಂಗಳೂರು (ಮಾ.15): ಮೈತ್ರಿ ಪಕ್ಷದ ಜೊತೆ ಸೀಟಿಗಾಗಿ ಹಗ್ಗಜಗ್ಗಾಟ ನಡೆಸಿದ ಕಾಂಗ್ರೆಸ್​ ತುಮಕೂರು ಕ್ಷೇತ್ರವನ್ನು ಜೆಡಿಎಸ್​ಗೆ ನೀಡಿರುವುದು ಉಪಮುಖ್ಯಮಂತ್ರಿ ಪರಮೇಶ್ವರ್​ ಅವರಲ್ಲಿ ಅಸಮಾಧಾನ ಮೂಡಿಸಿದೆ.

ತಮ್ಮ ಕ್ಷೇತ್ರ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಸಿಟ್ಟಾಗಿರುವ ಪರಮೇಶ್ವರ್​ ಈಗಾಗಲೇ ಮಲ್ಲಿಕಾರ್ಜುನ ಖರ್ಗೆ ಮುಂದೆ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿ ಬಾರಿಯೂ ತಮಗೆ ಅನ್ಯಾಯವಾಗಿದೆ  ಎಂದು ಅವರ ಮುಂದೆ ಅಳಲು ತೊಡಿಕೊಂಡಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಮುದ್ದೆ ಹನುಮೇಗೌಡ ಪ್ರಬಲ ನಾಯಕರಾಗಿದ್ದಾರೆ ಎಂದು ಮನವರಿಕೆ ಮಾಡುವ ಯತ್ನ ನಡೆಸಿದರು ವಿಫಲರಾದರು. ಅಲ್ಲದೇ ಕಾಂಗ್ರೆಸ್​ ಸಭೆಯಿಂದ ದೂರ ಉಳಿಯುವ ಮೂಲಕ ಪಕ್ಷದ ವಿರುದ್ಧ ಅಸಮಾಧಾನ ತೋರ್ಪಡಿಸಿದ್ದಾರೆ.

ತುಮಕೂರು ಕ್ಷೇತ್ರವನ್ನು ಬಿಟ್ಟುಕೊಡುವಂತೆ ನಿನ್ನೆ ಸಂಜೆ ದೇವೇಗೌಡರ ಮನವೊಲಿಕೆಗೆ ಮುಂದಾಗಿದ್ದರು. ಆದರೆ, ನಿಮ್ಮ ಹೈಕಮಾಂಡ್​ ನೀಡಿರುವ ತೀರ್ಮಾನ. ಕ್ಷೇತ್ರವನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು  ಗೌಡರು ಸರಸಾಗಟಾಗಿ ಅವರ ಬೇಡಿಕೆಯನ್ನು ತಳ್ಳಿಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಪರಮೇಶ್ವರ್​ ಇಂದು ಸಿಎಂ ಕುಮಾರಸ್ವಾಮಿಯವರನ್ನು ಭೇಟಿಯಾಗಿ ಮನವೊಲಿಕೆ ಯತ್ನ ನಡೆಸಿದ್ದಾರೆ.

ಇದನ್ನು ಓದಿ: ಜೆಡಿಎಸ್​ ಪಾಲಿನ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಬೇಡಿಕೆಯಿಟ್ಟ ಡಿಸಿಎಂ ಪರಮೇಶ್ವರ್​

ನಗರದ ಖಾಸಗಿ ಹೋಟೆಲ್​ನಲ್ಲಿ ಕುಮಾರಸ್ವಾಮಿಯನ್ನು ಭೇಟಿಯಾದ ಪರಮೇಶ್ವರ್​, ಕ್ಷೇತ್ರದಲ್ಲಿ ಕಾಂಗ್ರೆಸ್​ನ ಹಾಲಿ ಸಂಸದರಿದ್ದು, ಅವರು ಗೆಲ್ಲುವ ಸಾಧ್ಯತೆ ಇದೆ. ಕ್ಷೇತ್ರವನ್ನು ನಮಗೆ ಬಿಟ್ಟು ಕೊಡುವಂತೆ ಮನವಿ ಮಾಡಿದರು. ನಿಮ್ಮ ಹೈಕಮಾಂಡ್​​​​ ನಿರ್ಧಾರ ಎಂದು ದೇವೇಗೌಡ ಅವರು ಹೇಳುತ್ತಿದ್ದಾರೆ. ಹೀಗಾಗಿ ನೀವೇ ದೇವೇಗೌಡರ ಜೊತೆ ಮಾತನಾಡಬೇಕು. ದೇವೇಗೌಡರನ್ನು ಒಪ್ಪಿಸಿ ತುಮಕೂರು ಕ್ಷೇತ್ರ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಪರಮೇಶ್ವರ್​ ಸಿಟ್ಟು: 

ತುಮಕೂರು ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್​ ಸಂಸದರಿರುವಾಗ ಜೆಡಿಎಸ್​ಗೆ ಸೀಟು ಬಿಟ್ಟುಕೊಟ್ಟಿರುವ ಕಾಂಗ್ರೆಸ್​ ನಾಯಕರ ನಡೆಗೆ ಪರಮೇಶ್ವರ್​ ಸಿಟ್ಟಾಗಿದ್ದಾರೆ. ಸಿದ್ದರಾಮುಯ್ಯ ಮೈಸೂರನ್ನು ಉಳಿಸಿಕೊಳ್ಳುವ ಸಲುವಾಗಿ ಪರಮೇಶ್ವರ್​ ಕ್ಷೇತ್ರದ ಮೇಲೆ ಕಣ್ಣು ಹಾಕಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಇದರ ಜೊತೆಗೆ ಹೈ ಕಮಾಂಡ್​ನಲ್ಲಿ ಹಾಲಿ ಡಿಸಿಎಂಗಿಂತ ಮಾಜಿ ಸಿಎಂ ಶಕ್ತಿಯುತವಾಗಿದ್ದಾರೆ ಎಂಬುದು ಸಾಬೀತಾಗಿದೆ. ಜೆಡಿಎಸ್​ ಬೇಡಿಕೆ ಇಟ್ಟಿದ್ದ ಮೈಸೂರನ್ನು ಬಿಟ್ಟುಕೊಡದೇ ತುಮಕೂರು ನೀಡಿರುವ ಕ್ರಮದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
Loading...

First published:March 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...