ಬಂಡಾಯ ಶಾಸಕರ ಬೆದರಿಕೆ ನಡುವೆಯೂ ಕೆಜಿಎಫ್​ ಚಿತ್ರ ಮೆಚ್ಚಿ ಟ್ವೀಟ್​ ಮಾಡಿದ ಡಿಸಿಎಂ ಪರಮೇಶ್ವರ್​

ಸಿನಿಮಾ ಬಿಡುಗಡೆಯಾದ ಮಾರನೇ ದಿನವೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿದ್ದು, ಸಚಿವ ಸ್ಥಾನ ತಪ್ಪಿದ ಹಿನ್ನಲೆ ಬಂಡಾಯ ಶಾಸಕರ ನಡೆ ಪಕ್ಷದ ಎಲ್ಲರ ನಿದ್ದೆಗೆಡಿಸಿದೆ. ಈ ನಡುವೆಯೂ ಡಿಸಿಎಂ ಕೆಜಿಎಫ್​ ಚಿತ್ರವನ್ನು ಮೆಚ್ಚಿ ಕೊಂಡಾಡಿರುವುದು ಸಂತಸದ ವಿಷಯವಾಗಿದೆ. 

Seema.R | news18
Updated:December 24, 2018, 5:05 PM IST
ಬಂಡಾಯ ಶಾಸಕರ ಬೆದರಿಕೆ ನಡುವೆಯೂ ಕೆಜಿಎಫ್​ ಚಿತ್ರ ಮೆಚ್ಚಿ ಟ್ವೀಟ್​ ಮಾಡಿದ ಡಿಸಿಎಂ ಪರಮೇಶ್ವರ್​
ಪ್ರಾತಿನಿಧಿಕ ಚಿತ್ರ
  • News18
  • Last Updated: December 24, 2018, 5:05 PM IST
  • Share this:
ಬೆಂಗಳೂರು (ಡಿ.24): ಸಂಪುಟ ವಿಸ್ತರಣೆ ಹಿನ್ನಲೆ ಸಚಿವ ಸ್ಥಾನ ಕೈ ತಪ್ಪಿದ ಶಾಸಕರು ಬಂಡಾಯ ಸಾರಿರುವ ನಡುವಿನ ಬಿಕ್ಕಟ್ಟಿನ ನಡುವೆ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್​,  ರಾಜಕೀಯ ಜಂಜಾಟ ಮರೆತು ಕನ್ನಡ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಂಪುಟ ವಿಸ್ತರಣೆಗೂ ಒಂದು ದಿನ ಮುನ್ನ ಬಿಡುಗಡೆಯಾದ ಕೆಜಿಎಫ್​ ಚಿತ್ರದ ಬಗ್ಗೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡ ಸಿನಿಮಾವೊಂದು ಅದ್ಬುತವಾಗಿ ಚಿತ್ರೀಕರಿಸುವ ಮೂಲಕ ಯಾವ ಸಿನಿಮಾ ಇಂಡಸ್ಟ್ರಿಗೂ ಕಡಿಮೆ ಇಲ್ಲ ಎಂಬ ಮಾತು ಸಿನಿ ಜಗತ್ತು ಹಾಗೂ ಜನರ ಬಾಯಲ್ಲಿ ಕೇಳಿ ಬರುತ್ತಿದೆ.

ಪಂಚ ಭಾಷೆಗಳಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ ಬೇರೆ ಭಾಷೆಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಈಗ ಉಪಮುಖ್ಯಮಂತ್ರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಿನಿಮಾವೊಂದು ರಾಜ್ಯದ ಗಡಿ ದಾಟಿ ದೇಶ ವಿದೇಶದ ಜನರ ಮನಗೆಲ್ಲುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ನಮ್ಮ ಕನ್ನಡ ಚಿತ್ರರಂಗ ಬೇರಾರಿಗೂ ಕಮ್ಮಿಯಿಲ್ಲ ಎಂದು ಕೆಜಿಎಫ್​ ಚಿತ್ರ ಸಾರಿದೆ ಎಂದು ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.

ಸಿನಿಮಾ ಬಿಡುಗಡೆಯಾದ ಮಾರನೇ ದಿನವೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿದ್ದು, ಸಚಿವ ಸ್ಥಾನ ತಪ್ಪಿದ ಹಿನ್ನಲೆ ಬಂಡಾಯ ಶಾಸಕರ ನಡೆ ಪಕ್ಷದ ಎಲ್ಲರ ನಿದ್ದೆಗೆಡಿಸಿದೆ. ಈ ನಡುವೆಯೂ ಡಿಸಿಎಂ ಕೆಜಿಎಫ್​ ಚಿತ್ರವನ್ನು ಮೆಚ್ಚಿ ಕೊಂಡಾಡಿರುವುದು ಸಂತಸದ ವಿಷಯವಾಗಿದೆ.

ಬಿಡುಗಡೆಯಾದ ಮೂರೇ ದಿನಕ್ಕೆ ಕೆಜಿಎಫ್​ ಚಿತ್ರ ಕೂಡ ದೊಡ್ಡ ಮಟ್ಟದಲ್ಲಿ ದೇಶಲದಲ್ಲಿ ಸದ್ದು ಮಾಡುತ್ತಿದ್ದು 100 ಕೋಟಿ ಗಳಿಸುವ ಮೂಲಕ ದಾಖಲೆ ನಿರ್ಮಿಸಿದೆ. ಹಾಲಿವುಡ್​ ಮಟ್ಟಿನ ಚಿತ್ರ ಇದು ಎಂಬ ಮೆಚ್ಚುಗೆ ಎಲ್ಲೆಡೆ ಕೇಳಿ ಬರುತ್ತಿದೆ.

First published: December 24, 2018, 5:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading