ಕೈ ನಲ್ಲಿ ಎಲ್ಲವೂ ಬೂದಿ ಮುಚ್ಚಿದ ಕೆಂಡ: ಜಾರಕಿಹೊಳಿ, ಡಿಸಿಎಂ ಸಭೆಯಲ್ಲಿ ನಡೆದಿದ್ದೇನು?


Updated:September 11, 2018, 12:43 PM IST
ಕೈ ನಲ್ಲಿ ಎಲ್ಲವೂ ಬೂದಿ ಮುಚ್ಚಿದ ಕೆಂಡ: ಜಾರಕಿಹೊಳಿ, ಡಿಸಿಎಂ ಸಭೆಯಲ್ಲಿ ನಡೆದಿದ್ದೇನು?

Updated: September 11, 2018, 12:43 PM IST
ಶ್ರೀನಿವಾಸ್​ ಹಳಕಟ್ಟಿ, ನ್ಯೂಸ್​ 18 ಕನ್ನಡ

ಬೆಂಗಳೂರು(ಸೆ.11): ಕಾಂಗ್ರೆಸ್​ನಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಜಾರಕಿಹೊಳಿ ಬ್ರದರ್ಸ್​ ಪಕ್ಷ ತೊರೆದು ಬಿಜೆಪಿ ಸೇರುತ್ತಾರೆಂಬ ವದಂತಿಗಳು ಹಬ್ಬಿದ್ದವು. ಇದರ ಬೆನ್ನಲ್ಲೇ ಇದೀಗ ಸದಾಶಿವನಗರದಲ್ಲಿರುವ ಡಿಸಿಎಂ ಪರಮೆಶ್ವರ್​ರವರ ಮನೆಯಲ್ಲಿ ಮಹತ್ವದ ಸಭೆ ನಡೆದಿದ್ದು, ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ರಮೇಶ್​​ ಜಾರಕಿಹೊಳಿ ಜೊತೆ ಮಾತುಕತೆ ನಡೆಸಿದ್ದಾರೆ. ಸಭೆ ಬಳಿಕ ರಮೇಶ್ ಜಾರಕಿಹೊಳಿ ಸಿಟ್ಟಾಗಿ ಹೊರ ನಡೆದಿದ್ದಾರೆ. ಆದರೆ ಪರಮೇಶ್ವವರ್ ಹಾಗೂ ಗುಂಡೂರಾವ್​ರವರು ಮಾತ್ರ ಸರ್ಕಾರ ಸುಭದ್ರವಾಗಿದೆ ಏನೂ ಸಮಸ್ಯೆ ಇಲ್ಲ ಎಂದಿದ್ದಾರೆ. ಅಷ್ಟಕ್ಕೂ ಸಭೆಯಲ್ಲಿ ನಡೆದಿದ್ದೇನು? ಇಲ್ಲಿದೆ ವಿವರ.

ಡಿಸಿಎಂ ನಿವಾಸದಲ್ಲಿ ನಡೆದ ಮಹತ್ವದ ಸಭೆಯ ಬಳಿಕ ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ ಎಂದು ಸ್ಪಷ್ಟನೆ ನೀಡಿರುವ ದಿನೇಶ್ ಗುಂಡೂರಾವ್ "ಕೆಲ ಬೆಳಗಾವಿ ಜಿಲ್ಲಾ ಸಮಸ್ಯೆಗಳಿದ್ವು ಆ ಬಗ್ಗೆ ಚರ್ಚೆಯಾಗಿದೆ. ಬಿಜೆಪಿಯವರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ಆದರೆ ನಾವು ಅವರ ಹಾಗೇ ಮಾಡಿಲ್ಲ. ಡಿಸಿಎಂ ಸ್ಥಾನದ ಆಮಿಷ ನೀಡಿಲ್ಲ, ಡಿಸಿಎಂ ಯಾಕೆ ಸಿಎಂ ಸ್ಥಾನ ಬೇಕಾದರೂ ಕೊಡಲಿ ವ್ಯಂಗ್ಯವಾಡಿದ್ದಾರೆ. ಅಲ್ಲದೇ ಚರ್ಚೆಯಾದ ಎಲ್ಲದರ ಬಗ್ಗೆ ನಾವು ಹೇಳಲು ಸಾಧ್ಯವಿಲ್ಲ. ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಚರ್ಚೆಯಾಗಿರುತ್ತದೆ" ಎಂದಿದ್ದಾರೆ.

ರಮೇಶ್​ ಜಾರಕಿಹೊಳಿ ಪಕ್ಷ ಬಿಡುವುದಿಲ್ಲ

ಸಭೆಯ ಬಳಿಕ ಡಿಸಿಎಂ ಜಿ ಪರಮೇಶ್ವರ್ ಕೂಡಾ ಪ್ರತಿಕ್ರಿಯಿಸಿದ್ದು, "ರಮೇಶ ಜಾರಕಿಹೊಳಿ ಜೊತೆ 20 ಶಾಸಕರು ಹೋಗುವ ವಿಚಾರ ಸುಳ್ಳು. ಬಿಜೆಪಿಯವರು ಸೆಳೆಯೋ ಪ್ರಯತ್ನವೂ ಸುಳ್ಳು. ಇದು‌ ಬಿಜೆಪಿಯವರೇ ಸೃಷ್ಟಿಸಿರುವುದು. ರಮೇಶ ಜಾರಕಿಹೊಳಿ ಕೂಡ ಪಕ್ಷ ಬಿಡುವುದಿಲ್ಲ. ಡಿಕೆ ಶಿವಕುಮಾರ್ ವಿಚಾರದ ಬಗ್ಗೆಯೂ ಅಸಮಾಧಾನ ಹೇಳಿಕೊಂಡಿಲ್ಲ. ಮೈತ್ರಿ ಸರ್ಕಾರ ಹಾಗೂ ಪಕ್ಷದಲ್ಲಿ ಎಲ್ಲವೂ ಕೂಲ್ ಆಗಿದೆ" ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಬಂದ್​ಗೆ ಗೃಹ ಇಲಾಖೆ ದುರ್ಬಳಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಪರಮೆಶ್ವರ್​ "ಅಂತಹುದ್ದೇನಿಲ್ಲ. ದೇಶದಲ್ಲಿಯೇ ಬಂದ್ ಆಗಿದೆ. ಗೃಹ ಇಲಾಖೆ ತನ್ನ ಕೆಲಸ ಮಾಡಿದೆ ಅಷ್ಟೇ" ಎಂದಿದ್ದಾರೆ.

ಕೈ ನಲ್ಲಿ ಎಲ್ಲವೂ ಬೂದಿ ಮುಚ್ಚಿದ ಕೆಂಡ
Loading...

ಪರಮೇಶ್ವರ್ ಹಾಗೂ ದಿನೇಶ ಗುಂಡೂರಾವ್ ಮನವೊಲಿಕೆಗೆ ರಮೇಶ್​ ಜಾರಕಿಹೊಳಿ ಒಲ್ಲದ ಮನಸಿನಿಂದಲೇ ಒಪ್ಪಿ ಬೇಸರದಿಂದಲೇ ಹೊರ ನಡೆದಿದ್ದಾರೆ ಎನ್ನಲಾಗಿದೆ. ಇನ್ನು ಮಾಧ್ಯಮ ಮಂದಿ ಈ ಕುರಿತಾಗಿ ಪ್ರಶ್ನಿಸಿದಾಗ ಕಾಂಗ್ರೆಸ್​ಗೆ ನಾನು, ಸತೀಶ ಏನೂ ಅಲ್ವಾ? ನಿನ್ನೆ,ಮೊನ್ನೆ ಬಂದವರನ್ನ ತಲೆ ಮೇಲೆ ಇಟ್ಕೊಂಡು ಮೆರೆಸಿದ್ರೆ ಹೇಗೆ? ಅವರಿಗೆ ನಮ್ಮ ಪಕ್ಷದ ಪ್ರಭಾವಿ ಲೀಡರ್ ಸಪೋರ್ಟ್ ಕೂಡ ಸಿಕ್ಕಾಪಟ್ಟೆ ಇದೆ. ಜಿಲ್ಲೆಯಲ್ಲಿ ನಮ್ಮ ಪ್ರಭಾವ ಕುಂದಿಸುವ ಕೆಲಸ ನಮ್ಮವರಿಂದಲೇ ನಡೆಯುತ್ತಿದೆ, ಹೀಗಿದ್ದಾಗ ನಾವು ನಮ್ಮ ಹಾದಿ ನೋಡಿಕೊಳ್ಳೋದ್ರಲ್ಲಿ ತಪ್ಪೇನಿದೆ? ಎಂದು ಕಿಡಿ ಕಾರಿದ್ದಾರೆ.

ನಮ್ಮ ಜಿಲ್ಲೆಯ ರಾಜಕಾರಣದಲ್ಲಿ ಡಿಕೆಶಿ ಹಸ್ತಕ್ಷೇಪ ಬೇಡ

ಡಿಸಿಎಂ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಮೇಶ ಜಾರಕಿಹೊಳಿ ಡಿಸಿಎಂ ಪರಮೇಶ್ವರ್​ಗೇ ಸವಾಲೆಸೆದಿದ್ದಾರೆಂದು ಹೇಳಲಾಗಿದೆ. ನೋಡಿ ಸರ್ ಡಿಕೆ ಶಿವಕುಮಾರ್ ನಮ್ಮ ಜಿಲ್ಲೆಯ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುವುದು ಬೇಡ. ಮಾಡಿದ್ರೂ ನಾವು ಸುಮ್ಮನಿರಲ್ಲ. ಈ ವಿಚಾರ ಡಿಕೆ ಶಿವಕುಮಾರ್ ಗೆ ನೀವು ಸ್ವಲ್ಪ ಹೇಳಿ, ಎಲ್ಲ ನೋವನ್ನೂ ನಾವು ಸಹಿಸಿಕೊಂಡು ಬಂದಿದ್ದೇವೆ. ಇನ್ನೂ ಮುಂದೆ ಇದೆಲ್ಲವೂ ಆಗಲ್ಲ ಎಂದು ಹೇಳಿದ್ದಾರೆನ್ನಲಾಗಿದೆ.
First published:September 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...