ಲಕ್ಷ್ಮಣ ಸವದಿ ಹಾಗೂ ಮಹೇಶ್ ಕುಮಟಳ್ಳಿ ನಡುವೆ ಶೀತಲ ಸಮರ; ಇದು 'ಅಂತ್ಯವಲ್ಲ ಆರಂಭ' ಎಂದ ಡಿಸಿಎಂ ಬೆಂಬಲಿಗರು

ಇದು ಅಂತ್ಯವಲ್ಲ ಆರಂಭ ಎಂಬ ಬರಹದ ಬ್ಯಾನರ್ ಗಳನ್ನ ಹಾಕಲಾಗಿತ್ತು. ಅಂತ್ಯವಲ್ಲ ಆರಂಭ ಪದ ಸದ್ಯ ಅಥಣಿ ಕ್ಷೇತ್ರದ ರಾಜಕೀಯ ವಲಯದಲ್ಲಿ ಸಂಚಲನವನ್ನೇ ಉಂಟು ಮಾಡಿದೆ

ಡಿಸಿಎಂ ಲಕ್ಷ್ಮಣ ಸವದಿ ಭಾವಚಿತ್ರವಿರುವ ಪೊಸ್ಟರ್​

ಡಿಸಿಎಂ ಲಕ್ಷ್ಮಣ ಸವದಿ ಭಾವಚಿತ್ರವಿರುವ ಪೊಸ್ಟರ್​

 • Share this:
  ಚಿಕ್ಕೋಡಿ (ಫೆ.21) : ಡಿಸಿಎಂ ಲಕ್ಷ್ಮಣ ಸವದಿ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಅಥಣಿ ಪಟ್ಟಣಕ್ಕೆ ಆಗಮಿಸಿದರು. ಇದೆ ವೇಳೆ ಕಾರ್ಯಕರ್ತರು 500 ಕೆ.ಜಿ ಸೇಬು ಹಣ್ಣಿನ ಹಾರ ಹಾಕಿ ಭರ್ಜರಿ ಸ್ವಾಗತವನ್ನು ಕೋರಿದರು. ಅಲ್ಲದೆ, ಇದೇ ವೇಳೆ ಸವದಿ ಪೋಟೊ ಹಾಕಿ ಸ್ವಾಗತ ಕೊರಿದ್ದ ಬ್ಯಾನರ್ ಒಂದು ಇದೀಗ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ.

  ಲಕ್ಷ್ಮಣ ಸವದಿ ಸದ್ಯ ರಾಜಕೀಯದಲ್ಲಿ ಮುಂಚೂಣಿಯಲ್ಲಿರುವ ರಾಜಕಾರಣಿ. ಚುನಾವಣೆಯಲ್ಲಿ ಸೋತರು ರಾಜ್ಯದ ಉಪ ಮುಖ್ಯಮಂತ್ರಿ ಯಾಗುವುದರ ಮೂಲಕ ರಾಜ್ಯದ ಗಮನ ಸೆಳೆದಿದ್ದರು. ಸಂಪುಟ ವಿಸ್ತರಣೆ ಬಳಿಕ ಡಿಸಿಎಂ ಸ್ಥಾನ ಹೋಗುತ್ತೆ ಅಂತೆಲ್ಲಾ ಕೆಲವರು ಮಾತನಾಡಿದರು. ಆದರೆ, ಸವದಿಗೆ ಪರಿಷತ್ ಸ್ಥಾನ ನೀಡುವ ಮೂಲಕ ಬಿಜೆಪಿ ಲಿಂಗಾಯತ ಸಮುದಾಯದ ನಾಯಕನ ಸ್ಥಾನಮಾನಕ್ಕೆ ಯಾವುದೆ ದಕ್ಕೆ ಇಲ್ಲಾ ಎಂಬುದನ್ನು ಖಚಿತ ಮಾಡಿತ್ತು.

  ಇನ್ನು ಪರಿಷತ್ ಸದಸ್ಯರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಸ್ವಂತ ಕ್ಷೇತ್ರ ಅಥಣಿ ಪಟ್ಟಣಕ್ಕೆ ನಿನ್ನೆ ಲಕ್ಷ್ಮಣ ಸವದಿ ಆಗಮಿಸಿದ್ದರು. ಇದೆ ವೇಳೆ ಸವದಿ ಕಾರ್ಯಕರ್ತರು ಭರ್ಜರಿ ಸ್ವಾಗತವನ್ನು ಕೋರಿದ್ದಾರೆ. ಪಟ್ಟಣದ ಶಿವಾಜಿ ವೃತ್ತದಿಂದ ಮೆರವಣಿಗೆ ಮೂಲಕ ಪಟ್ಟಣಕ್ಕೆ ಸ್ವಾಗತ ಕೋರಿದರು. ಅಲ್ಲದೆ, ಅಂಬೇಡ್ಕರ್ ವೃತ್ತದಲ್ಲಿ 500 ಕೆ.ಜಿಯ ಸೇಬಿನ ಹಾರ ಹಾಕಿ ಸ್ವಾಗತ ಕೋರಿದರು.

  apple
  ಸೇಬು ಹಣ್ಣಿನ ಹಾರ


  ಇನ್ನು ಲಕ್ಷ್ಮಣ ಸವದಿ ಆಗಮಿಸುವ ಹಿನ್ನಲೆ ಪಟ್ಟಣದ ತುಂಬೆಲ್ಲ ಬ್ಯಾನರ್ ಗಳನ್ನ ಅಳವಡಿಸಲಾಗಿತ್ತು. ಸ್ವಾಗತ ಅಥವಾ ಶುಭಾಶಯ ಕೋರುವ ಬದಲಾಗಿ ಇದು ಅಂತ್ಯವಲ್ಲ ಆರಂಭ ಎಂಬ ಬರಹದ ಬ್ಯಾನರ್ ಗಳನ್ನ ಹಾಕಲಾಗಿತ್ತು. ಅಂತ್ಯವಲ್ಲ ಆರಂಭ ಪದ ಸದ್ಯ ಅಥಣಿ ಕ್ಷೇತ್ರದ ರಾಜಕೀಯ ವಲಯದಲ್ಲಿ ಸಂಚಲನವನ್ನೇ ಉಂಟು ಮಾಡಿದೆ.

  ಇದನ್ನೂ ಓದಿ : ಪ್ರವಾಹದಲ್ಲಿ ಮಗನ ಜೊತೆಗೆ ಮನೆಯನ್ನೂ ಕಳೆದುಕೊಂಡ ತಾಯಿಗೆ ಇನ್ನೂ ಸಿಕ್ಕಿಲ್ಲಾ ಪರಿಹಾರ

  ಕೆಲವರು ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಪರೋಕ್ಷ ಎಚ್ಚರಿಕೆ ಗಂಟೆಯನ್ನ ಸವದಿ ತಮ್ಮ ಕಾರ್ಯಕರ್ತರ ಮೂಲಕ ಕೊಟ್ಟಿದ್ದಾರೆ. ಇನ್ನೆನಿದ್ದರೂ ಕ್ಷೇತ್ರದಲ್ಲಿ ನನ್ನದೆ ಹವಾ ಎಂದು ಪರೋಕ್ಷವಾಗಿ ಹೇಳಿದ್ದಾರೆ ಎನ್ನುವ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ.

  ಇನ್ನು ಇದು ಮಹೇಶ್ ಕುಮಟಳ್ಳಿ ಅವರಿಗೆ ಎಚ್ಚರಿಕೆ ಗಂಟೆ ಅಂತ ಆಡಿಕೊಳ್ಳುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು, "ಮಹೇಶಣ್ಣ ಹುಶಾರು ಡಿಸಿಎಂ ಸವದಿಯವರು ಎಚ್ಚರಿಕೆ ನೀಡುತ್ತಿರುವುದು ನಿಮಗೆ" ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿ ಮಹೇಶ್ ಕುಮಟಳ್ಳಿ ಕಾಲೆಳೆಯುತ್ತಿದ್ದಾರೆ.

  ಆದರೆ, ಇದ್ಯಾವುದಕ್ಕೂ ಪ್ರತಿಕ್ರಿಯೆ ನೀಡದ ಡಿಸಿಎಂ ಲಕ್ಷ್ಮಣ ಸವದಿ ಸುಮ್ಮನಾಗಿದ್ದಾರೆ. ಆದರೆ, ಅಥಣಿ ಕ್ಷೇತ್ರದಲ್ಲಿ ಮಾತ್ರ ಯಾರಿಗೆ ಅಂತ್ಯವೊ ಯಾರಿಗೆ ಆರಂಭವೋ? ಎಂಬ ಚರ್ಚೆ ಮಾತ್ರ ಸಖತ್ ಬಿಸಿಬಿಸಿಯಾಗಿ ಕಾವೇರುತ್ತಿದೆ.

   (ವರದಿ : ಲೋಹಿತ್​ ಶಿರೋಳ)

   
  First published: