HOME » NEWS » State » DCM LAXMAN SAVADI SAYS INCREASE BUS FARES TO COVER THE LOSS OF DISTRESSED CORPORATIONS LG

ಸಂಕಷ್ಟದಲ್ಲಿರುವ ನಿಗಮಗಳ ನಷ್ಟ ಸರಿದೂಗಿಸಲು ಬಸ್ ದರ ಏರಿಕೆ; ಡಿಸಿಎಂ ಲಕ್ಷ್ಮಣ ಸವದಿ

2014ರಿಂದ ಈವರೆಗೂ ಬಸ್​ ಪ್ರಯಾಣ ದರ ಏರಿಸಿರಲಿಲ್ಲ. ಈಗ ನಿಗಮಗಳ ನಷ್ಟ ಸರಿದೂಗಿಸಲು ದರ ಏರಿಕೆ ಮಾಡಿದ್ದೇವೆ. ಸಾರಿಗೆ ನಿಗಮಗಳು ತುಂಬಾ ಸಂಕಷ್ಟದಲ್ಲಿವೆ. ಈ ನಷ್ಟ ಸರಿದೂಗಿಸಲು ಬಸ್​ ದರ ಏರಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

news18-kannada
Updated:February 27, 2020, 1:01 PM IST
ಸಂಕಷ್ಟದಲ್ಲಿರುವ ನಿಗಮಗಳ ನಷ್ಟ ಸರಿದೂಗಿಸಲು ಬಸ್ ದರ ಏರಿಕೆ; ಡಿಸಿಎಂ ಲಕ್ಷ್ಮಣ ಸವದಿ
ಡಿಸಿಎಂ ಲಕ್ಷ್ಣಣ ಸವದಿ
  • Share this:
ಬೆಂಗಳೂರು(ಫೆ.27): ಬಡವರಿಗೆ ಹೊರೆಯಾಗದ ರೀತಿ ಬಸ್​  ಪ್ರಯಾಣ ದರ ಏರಿಕೆ ಮಾಡಿದ್ದೇವೆ. ಮೊದಲು ಕುಮಾರಸ್ವಾಮಿ ಬಸ್​ ದರ ಕುರಿತಾದ ಆದೇಶ ನೋಡಲಿ, ಬಳಿಕ ಮಾತನಾಡಲಿ ಎಂದು ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಗುಡುಗಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಎಚ್​. ಡಿ.ಕುಮಾರಸ್ವಾಮಿಗೆ ತಿರುಗೇಟು ನೀಡಿದರು. ಎಚ್​ಡಿಕೆ ಟೀಕೆ ಮಾಡುವ ಮುನ್ನ ಬಸ್ ದರ ಕುರಿತು ಆದೇಶ ನೋಡಲಿ. 2014ರಿಂದ ಈವರೆಗೂ ಬಸ್​ ಪ್ರಯಾಣ ದರ ಏರಿಸಿರಲಿಲ್ಲ. ಈಗ ನಿಗಮಗಳ ನಷ್ಟ ಸರಿದೂಗಿಸಲು ದರ ಏರಿಕೆ ಮಾಡಿದ್ದೇವೆ. ಸಾರಿಗೆ ನಿಗಮಗಳು ತುಂಬಾ ಸಂಕಷ್ಟದಲ್ಲಿವೆ. ಈ ನಷ್ಟ ಸರಿದೂಗಿಸಲು ಬಸ್​ ದರ ಏರಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

ಎಚ್​.ಎಸ್. ದೊರೆಸ್ವಾಮಿ ಯಾವ ಪಕ್ಷದ ಪರ ಕೆಲಸ ಮಾಡುತ್ತಾರೆಂದು ಗೊತ್ತಿದೆ; ಫೇಸ್​ಬುಕ್​ನಲ್ಲಿ ಯತ್ನಾಳ್ ವಾಗ್ದಾಳಿ

ಮುಂದುವರೆದ ಅವರು, ನಿಗಮಗಳಲ್ಲಿ ಸೋರಿಕೆ ತಡೆಗಟ್ಟಲು ಅಧಿಕಾರಿಗಳಿಗೆ ಖಡಕ್ ಆಗಿ ಸೂಚನೆ ನೀಡಿದ್ದೇನೆ ಎಂದರು.

ಇನ್ನು ಮೂರೂವರೆ ವರ್ಷಗಳ ಕಾಲ ಬಿ.ಎಸ್​.ಯಡಿಯೂರಪ್ಪ ಮುಖ್ಯಮಂತ್ರಿ ಆಗಿರುತ್ತಾರೆ. ಇದರಲ್ಲಿ ಯಾರಿಗೂ ಯಾವುದೇ ಅನುಮಾನ ಬೇಡ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಸಿಎಂ ಪರ, ವಿರುದ್ಧ ಹೈಕಮಾಂಡ್​ಗೆ ಪತ್ರ ಸುಳ್ಳು ಎಂದು ಹೇಳಿದರು.

ದೆಹಲಿಯಲ್ಲಿ ಉದ್ವಿಗ್ನ ಪರಿಸ್ಥಿತಿ: ಸಾವಿನ ಸಂಖ್ಯೆ 34ಕ್ಕೆ ಏರಿಕೆ; 200ಕ್ಕೂ ಹೆಚ್ಚು ಜನರಿಗೆ ಗಾಯ

 
First published: February 27, 2020, 1:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories