HOME » NEWS » State » DCM LAXMAN SAVADI SAYS GOVERNMENT COMMITTED TO MEET NINE DEMANDS OF TRANSPORT WORKERS SESR PTH

ಸಾರಿಗೆ ನೌಕರರ ಒಂಬತ್ತು ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ದ; ಸಾರಿಗೆ ಸಚಿವ ಲಕ್ಷ್ಮಣ ಸವದಿ

ಲಾಕ್ ಡೌನ್ ಪ್ರಾರಂಭಕ್ಕೂ ಮುನ್ನ 4.20 ಕೋಟಿ ಜನರು ಪ್ರಯಾಣಿಸುತ್ತಿದ್ದರು. ಪ್ರಯಾಣಿಕರ ಸಂಖ್ಯೆ ಇಳೆಯಿಂದಾಗಿ ಸಾರಿಗೆ ಆದಾಯ ಕುಂಠಿತವಾಗಿದೆ

news18-kannada
Updated:January 23, 2021, 9:58 PM IST
ಸಾರಿಗೆ ನೌಕರರ ಒಂಬತ್ತು ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ದ;  ಸಾರಿಗೆ ಸಚಿವ ಲಕ್ಷ್ಮಣ ಸವದಿ
ಸಾರಿಗೆ ಸಚಿವ ಲಕ್ಷ್ಮಣ ಸವದಿ
  • Share this:
ಹುಬ್ಬಳ್ಳಿ (ಜ.23):  ಕೊರೊನಾ ಲಾಕ್ ಡೌನ್ ನಿಂದಾಗಿ ಸಾರಿಗೆ ಇಲಾಖೆಯ ನಾಲ್ಕು ವಿಭಾಗದಿಂದ 3700 ಕೋಟಿ ನಷ್ಟ ಸಂಭವಿಸಿದೆ‌. ಇಂತಹ ಸಂದರ್ಭದಲ್ಲಿ ಸಂಸ್ಥೆಯ 1.30 ಲಕ್ಷ ನೌಕರಿಗೆ ತೊಂದರೆಯಾಗಬಾರದು ಎಂದು  ರಾಜ್ಯ ಸರ್ಕಾರದಿಂದ ಸಾರಿಗೆ ನೌಕರರ ಸಂಬಳಕ್ಕೆ 1746 ಕೋಟಿ ನೆರವು‌ ನೀಡಲಾಗಿದೆ. ಜೊತೆಗೆ ನೌಕರರ ಒಂಬತ್ತು ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ದವಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು. ಇಲ್ಲಿನ‌ ಕಲಘಟಗಿ ನೂತನ ಬಸ್ ಘಟಕದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದ ಅವರು, ಸಾರಿಗೆ ಸಚಿವನಾಗಿ ಅಧಿಕಾರಿ ಸ್ವೀಕರಿಸದ ಸಂದರ್ಭದಲ್ಲಿ ಸಾರಿಗೆ ಸಂಸ್ಥೆಯ ನಷ್ಟದ ಪ್ರಮಾಣ 3000 ಕೋಟಿ ಇತ್ತು. ಸರ್ಕಾರದಿಂದ 2980 ಕೋಟಿ ಬರುವುದು ಬಾಕಿ ಇತ್ತು.‌ ಇದರೊಂದಿಗೆ ಅನೀರಿಕ್ಷಿತ ಕೊರೊನಾ ಲಾಕ್ ಡೌನ್ ನಿಂದಾಗಿ ನಷ್ಟದ ಪ್ರಮಾಣ ಹೆಚ್ಚಾಗಿದೆ. ಲಾಕ್ ಡೌನ್ ನಂತರ ಸಾರಿಗೆ ಸಂಚಾರ ಪುನಃ ಪ್ರಾರಂಭಿಸಲಾಗಿದೆ‌‌. ಪ್ರತಿದಿನ 1 ಕೋಟಿ ಜನರು ಪ್ರಯಾಣಿಸುತ್ತಿದ್ದಾರೆ. ಲಾಕ್ ಡೌನ್ ಪ್ರಾರಂಭಕ್ಕೂ ಮುನ್ನ 4.20 ಕೋಟಿ ಜನರು ಪ್ರಯಾಣಿಸುತ್ತಿದ್ದರು. ಪ್ರಯಾಣಿಕರ ಸಂಖ್ಯೆ ಇಳೆಯಿಂದಾಗಿ ಸಾರಿಗೆ ಆದಾಯ ಕುಂಠಿತವಾಗಿದೆ ಎಂದರು. 

ಕೇಂದ್ರ ಸರ್ಕಾರ 350 ಎಲೆಕ್ಟ್ರಿಕಲ್ ಬಸ್ ಖರೀದಿಗೆ ಅನುಮೋದಿಸಿ, ಪ್ರತಿ ಬಸ್ ಗೆ 55 ಲಕ್ಷ ರೂಪಾಯಿ ಸಬ್ಸಿಡಿ ನೀಡಿದೆ. ಬಸ್ ಖರೀದಿ ಪ್ರಕ್ರಿಯೆ ಚಾಲನೆಯಲ್ಲಿದೆ. ಬೆಂಗಳೂರಿಗೆ 300 ಹಾಗೂ ಹುಬ್ಬಳ್ಳಿ ಧಾರವಾಡ ನಗರಕ್ಕೆ 50 ಎಲೆಕ್ಟ್ರಿಕಲ್ ಬಸ್ ಗಳನ್ನು ನೀಡಲಾಗುವುದು. ಸಂಸ್ಥೆಯ 2000 ಬಸ್ ಗಳು 9 ಲಕ್ಷಕ್ಕೂ ಹೆಚ್ಚು ದೂರ ಕ್ರಮಿಸಿದ್ದು, ಅವುಗಳನ್ನು ನಿಷ್ಕ್ರಿಯ ಗೊಳಿಸಲಾಗುವುದು. ಹಳೆ ಬಸ್ ಗಳನ್ನು ಗುಜರಿಯವರಿಗೆ ಹರಾಜು ನೀಡದೆ. ಸಾರ್ವಜನಿಕ ಸ್ಥಳಗಳಲ್ಲಿ ಬಸ್ ಗಳನ್ನು ಬಳಸಿ ಸುಸಜ್ಜಿತ ಶೌಚಾಲಯ, ಸ್ನಾನ ಗೃಹಗಳನ್ನು ನಿರ್ಮಿಸಲಾಗುವುದು‌. ಇದರಿಂದ ಹಣದ ಉಳಿತಾಯವಾಗಲಿದೆ ಎಂದರು.

ನೌಕರರ ಹಿತರಕ್ಷಣೆಗೆ ಬದ್ಧ

ನೌಕರರು ಯಾರೋದೋ ಮಾತು ಕೇಳಿ ಪ್ರತಿಭಟನೆಗೆ ಇಳಿಯಬಾರದು. ಇಲಾಖೆ ಕಾರ್ಮಿಕರ ಹಿತರಕ್ಷಣೆಗೆ ಬದ್ದವಾಗಿದೆ. ಅಧಿಕಾರಿಗಳಿಂದ ಕೆಳ ಹಂತದ ನೌಕರರಿಗೆ ಉಂಟಾಗುವ ಕಿರುಕುಳ ತಪ್ಪಿಸಬೇಕು. ವರ್ಗಾವಣೆ ನಿಯಮಗಳನ್ನು ಬದಲಿಸಲಾಗುವುದು. ವಾ.ಕ.ರ.ಸಾ.ಸಂಸ್ಥೆ ನಿವೃತ್ತಿ ನೌಕರರ ಉಪದಾನ ನಗದೀಕರಣ ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡಲು ಅಲ್ಪಾವಧಿ ಸಾಲ ಪಡೆಯುವಂತೆ ವ್ಯವಸ್ಥಾಪಕ ನಿರ್ದೇಶಕರಿಗೆ ಸಚಿವರು ಸೂಚಿಸಿದರು.

ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಅಂತರ ನಿಗಮ ವರ್ಗಾವಣೆ ಬಗ್ಗೆ ಸರಳ ನಿಯಮ ರೂಪಿಸಬೇಕು. ಪತಿ ಪತ್ನಿ ಪ್ರಕರಣಗಳಲ್ಲಿ ಆದ್ಯತೆ ಮೇರೆಗೆ ವರ್ಗಾವಣೆ ಮಾಡಬೇಕು. ಕಾರ್ಮಿಕರ ಸಂತೋಷ ಮಟ್ಟ ಹೆಚ್ಚಾದರೆ ಸಾರಿಗೆ ಸಂಸ್ಥೆಗಳು ಸಮೃದ್ಧವಾಗುತ್ತವೆ. ದೇಶದಲ್ಲಿ ಅಪಘಾತಗಳಿಂದ ಮೃತರಾಗುವವರ ಸಂಖ್ಯೆ ಹೆಚ್ಚಿದೆ. ಇದು ಕಡಿಮೆಯಾಗಬೇಕು. ಸುರಕ್ಷಿತ ಪ್ರಯಾಣ ಕೇಂದ್ರ ಸರ್ಕಾರದ ಗುರಿಯಾಗಿದೆ. ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆಯಡಿ 80 ಸಾವಿರ ಕೋಟಿ ರೂಪಾಯಿಗಳ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ 1.25 ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ. ಕರ್ನಾಟಕ ರಾಜ್ಯಕ್ಕೆ ಸಾವಿರ ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಇದರಲ್ಲಿ 3200 ಕಿ.ಮೀ.ಗ್ರಾಮೀಣ ರಸ್ತೆ ನಿರ್ಮಿಸಲಾಗುವುದು. ಕಲಘಟಗಿ ನಗರದಲ್ಲಿ ಕ್ರೀಡಾ ಸಮುಚ್ಚಯ ನಿರ್ಮಾಣಕ್ಕಾಗಿ ಎನ್.ಪಿ.ಸಿ.ಐ.ಎಲ್ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ 5 ಕೋಟಿ ರುಪಾಯಿಗಳನ್ನು ಮಂಜೂರು ಮಾಡಲಾಗಿದೆ. ಓ.ಎನ್.ಜಿ.ಸಿ. ವತಿಯಿಂದ ಕಲಘಟಗಿ ತಾಲೂಕಿನ ಸರ್ಕಾರಿ ಶಾಲೆಗಳಿಗೆ 4000 ಡೆಸ್ಕ್ ನೀಡಲಾಗಿದೆ ಎಂದರು.
Published by: Seema R
First published: January 23, 2021, 9:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories