ಡ್ರಗ್ ಮಾಫಿಯಾದಲ್ಲಿ ಯಾರೇ ಇರಲಿ, ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ; ಡಿಸಿಎಂ ಲಕ್ಷ್ಮಣ ಸವದಿ

ಡ್ರಗ್ ಜಾಲದಲ್ಲಿ ಇದ್ದವರನ್ನ ಸರ್ಕಾರ ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆಯೇ ಇಲ್ಲ, ಅಂತಹವರ ಮೇಲೆ ನಿರ್ದಾಕ್ಷಿಣ್ಯ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಸರ್ಕಾರ ಈಗಾಗಲೇ ಸಿದ್ದವಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಡಿಸಿಎಂ ಲಕ್ಷ್ಣಣ್ ಸವದಿ

ಡಿಸಿಎಂ ಲಕ್ಷ್ಣಣ್ ಸವದಿ

  • Share this:
ಚಿಕ್ಕೋಡಿ(ಆ.31): ಇತ್ತೀಚಿನ ದಿನಗಳಲ್ಲಿ ಡ್ರಗ್ ಮಾಫಿಯಾ ಕರ್ನಾಟಕವನ್ನು ಬೆಂಬಿಡದೆ ಕಾಡುತ್ತಿದೆ. ಅದರಲ್ಲೂ ಕನ್ನಡ ಚಿತ್ರರಂಗವೆ ಡ್ರಗ್ ಮಾಫಿಯಾಲ್ಲಿ ಇದೆ ಎಂದು ನಟ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಹೇಳಿಕೆ ಬಳಿಕವಂತೂ ಡ್ರಗ್ ಮಾಫಿಯಾ ಕುರಿತು ಈಗ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಶುರುವಾಗಿದೆ. ಇನ್ನು ಇಂದ್ರಜಿತ್ ಲಂಕೇಶ್ ಮಾಡಿರುವ ಆರೋಪದ ಕುರಿತು ಡಿಸಿಎಂ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದು, ಡ್ರಗ್ ಮಾಫಿಯಾದಲ್ಲಿ ಭಾಗಿಯಾದವರ ಮೇಲೆ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಿದೆ ಎಂದು ಹೇಳಿಕೆ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಲು ಬಂದಿದ್ದ ಡಿಸಿಎಂ ಸವದಿ ತಮ್ಮ ಕ್ಷೇತ್ರದ ಜನರ ಸಮಸ್ಯೆಗಳ ಕುರಿತು ಸಭೆ ನಡೆಸಿದ್ದಾರೆ. ಪ್ರವಾಹ ಬಂದು ಕೃಷ್ಣಾ ತೀರದ ಸಾವಿರಾರು ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿದ್ದು, ಸರ್ಕಾರದಿಂದ ಹೆಚ್ಚಿನ ಪರಿಹಾರವನ್ನು ಕೊಡಿಸುವಂತೆ ಇಲ್ಲಿನ ರೈತರು ಬೇಡಿಕೆ ಇಟ್ಟಿದ್ದಾರೆ. ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಲಕ್ಷ್ಮಣ ಸವದಿ, ಇಂದ್ರಜಿತ್ ಲಂಕೇಶ್ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ.

ಯಾದಗಿರಿಯಲ್ಲಿ ಸೇವೆ ನಿಲ್ಲಿಸಿದ ಆ್ಯಂಬುಲೆನ್ಸ್​​ಗಳು​​​; ಕೋವಿಡ್​ ರೋಗಿಗಳ ಪರದಾಟ

ಕಳೆದ ಎರಡು ದಿನಗಳಿಂದ ಮಾಧ್ಯಮಗಳಲ್ಲಿ ಸುದ್ದಿಯನ್ನು ನೋಡಿದ್ದೇನೆ.  ಕರ್ನಾಟಕದಲ್ಲಿ ಡ್ರಗ್ ಮಾಫಿಯಾ ದೊಡ್ಡ ಪ್ರಮಾಣದಲ್ಲಿ ಹಬ್ಬಿದೆ ಎನ್ನುವುದನ್ನು ಮಾಧ್ಯಮದ ಮೂಲಕ ಕೇಳಿದ್ದೇನೆ. ಇಂದ್ರಜಿತ್ ಲಂಕೇಶ್ ಮಾಡಿದ ಆರೋಪದ ಬಳಿಕ ಅವರ ಹೇಳಿಕೆ ಪಡೆಯಲು ಪೊಲೀಸರು ಕರೆದಿದ್ದಾರೆ. ಇಂದ್ರಜಿತ್ ಬಳಿ ಇರುವ ದಾಖಲೆಗಳು ಹಾಗೂ ಅವರ ಹೇಳಿಕೆಯನ್ನು ಇವತ್ತು ನೀಡಬೇಕು. ಅವರ ಹೇಳಿಕೆ ಪಡೆದು ಡ್ರಗ್ ಮಾಫಿಯಾದಲ್ಲಿ ಯಾರೇ ಇರಲಿ, ಎಂತಹ ಬಲಾಢ್ಯರೇ ಇರಲಿ, ಅಂತಹವರನ್ನ ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಬಿಡಲ್ಲ. ಡ್ರಗ್ ಜಾಲದಲ್ಲಿ ಇದ್ದವರನ್ನ ಸರ್ಕಾರ ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆಯೇ ಇಲ್ಲ, ಅಂತಹವರ ಮೇಲೆ ನಿರ್ದಾಕ್ಷಿಣ್ಯ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಸರ್ಕಾರ ಈಗಾಗಲೇ ಸಿದ್ದವಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಡ್ರಗ್ ಮಾಫಿಯಾ ಎನ್ನುವುದು ಒಂದು ಸಮಾಜಘಾತುಕ ಶಕ್ತಿಯಾಗಿದೆ. ಇದನ್ನ ತಡೆಯುವುದರಲ್ಲಿ ಯಾವುದೇ ತರಹದ ಮುಲಾಜು ಇಟ್ಟುಕೊಳ್ಳಲ್ಲ. ನಾವು ಯಾರನ್ನೂ ಸಹಿಸಿಕೊಳ್ಳಲ್ಲ, ಡ್ರಗ್ ಜಾಲವನ್ನ ಮಟ್ಟ ಹಾಕಲು ನಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಈಗಾಗಲೇ ಇಂದ್ರಜಿತ್ ಲಂಕೇಶ್ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ, ಸದ್ಯ ವಿಚಾರಣೆ ಆರಂಭವಾಗಿದ್ದು, ಇಂದ್ರಜಿತ್ ಲಂಕೇಶ್ ಅವರ ಹೇಳಿಕೆಗಳನ್ನು ರೆಕಾರ್ಡ್ ಮಾಡಲಾಗುತ್ತಿದೆ. ಯಾರ ಯಾರ ಹೆಸರು ಬೆಳಕಿಗೆ ಬರಲಿದೆ, ಇದಕ್ಕೆ ಸರ್ಕಾರ ಯಾವ ರೀತಿಯಲ್ಲಿ ಕ್ರಮಕ್ಕೆ ಮುಂದಾಗಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
Published by:Latha CG
First published: