HOME » NEWS » State » DCM LAXMAN SAVADI MAY WIN IN TODAYS KARNATAKA LEGISLATIVE COUNCIL ELECTION RMD

ಇಂದು ವಿಧಾನ ಪರಿಷತ್​ ಚುನಾವಣೆ; ಲಕ್ಷ್ಮಣ​ ಸವದಿ ಅವಿರೋಧ ಆಯ್ಕೆ ಬಹುತೇಕ ಖಚಿತ?

ಎಂಎಲ್​ಸಿ ಚುನಾವಣೆಯಿಂದ ಕಾಂಗ್ರೆಸ್ ದೂರ ಉಳಿಯುವ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ. ಆದರೆ ಜೆಡಿಎಸ್ ನಡೆ ಮಾತ್ರ  ಇನ್ನೂ ನಿಗೂಢವಾಗಿಯೆ ಇದೆ. ಇದು ಬಿಜೆಪಿಗೆ ವರದಾನ ಆಗುವ ಸಾಧ್ಯತೆ ಇದೆ.

news18-kannada
Updated:February 17, 2020, 7:55 AM IST
ಇಂದು ವಿಧಾನ ಪರಿಷತ್​ ಚುನಾವಣೆ; ಲಕ್ಷ್ಮಣ​ ಸವದಿ ಅವಿರೋಧ ಆಯ್ಕೆ ಬಹುತೇಕ ಖಚಿತ?
ಡಿಸಿಎಂ ಲಕ್ಷ್ಣಣ ಸವದಿ
  • Share this:
ಬೆಂಗಳೂರು (ಫೆ.17): ಇಂದು ವಿಧಾನ ಪರಿಷತ್​ ಚುನಾವಣೆ ನಡೆಯಲಿದ್ದು, ಬಿಜೆಪಿ ಅಭ್ಯರ್ಥಿ ಲಕ್ಷ್ಮಣ​ ಸವದಿ ಗೆಲುವು ಬಹುತೇಕ ಖಚಿತ ಎನ್ನಲಾಗಿದೆ. ರಿಜ್ವಾನ್ ಅರ್ಷದ್​ ಅವರಿಂದ ತೆರವಾದ ಸ್ಥಾನಕ್ಕೆ ಈ ಚುನಾವಣೆ ನಡೆಯುತ್ತಿದೆ.

ಬಿಜೆಪಿ ಅಭ್ಯರ್ಥಿಯಾಗಿ ಡಿಸಿಎಂ ಲಕ್ಷ್ಮಣ ಸವದಿ ಕಣದಲ್ಲಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಅನಿಲಕುಮಾರ್​ ಶನಿವಾರ ಕಣದಿಂದ ನಿವೃತ್ತಿಯಾಗಿದ್ದರು. ಹೀಗಾಗಿ, ಸವದಿ ಅವಿರೋಧ ಆಯ್ಕೆ ಆದರೂ ಅಚ್ಚರಿಯಿಲ್ಲ. ಎಂಎಲ್​ಸಿ ಚುನಾವಣೆಯಿಂದ ಕಾಂಗ್ರೆಸ್ ದೂರ ಉಳಿಯುವ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ. ಆದರೆ ಜೆಡಿಎಸ್ ನಡೆ ಮಾತ್ರ  ಇನ್ನೂ ನಿಗೂಢವಾಗಿಯೆ ಇದೆ. ಈ ಕಾರಣಕ್ಕೆ ಸವದಿ ಎದುರು ಸ್ಪರ್ಧೆ ಮಾಡುವುದು ಅನುಮಾನ ಎನ್ನಲಾಗಿದೆ. ಪಕ್ಷದ ಎಲ್ಲ ಶಾಸಕರು ಸದನಕ್ಕೆ ಹಾಜರಾಗಬೇಕು. ಜೊತೆಗೆ ಕಡ್ಡಾಯವಾಗಿ ಸವದಿಗೆ ವೋಟ್ ಮಾಡುವಂತೆ ಬಿಜೆಪಿ ವಿಪ್ ಜಾರಿ ಮಾಡಿದೆ.

ಉಪಚುನಾವಣೆಯಲ್ಲಿ ಸೋತರೂ ಸಿಎಂ ಬಿ.ಎಸ್​. ಯಡಿಯೂರಪ್ಪನವರ ಸಂಪುಟದ ಮೂವರು ಉಪಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿ ಲಕ್ಷ್ಮಣ ಸವದಿ ಪ್ರಮಾಣವಚನ ಸ್ವೀಕಾರ ಮಾಡಿದ್ದರು. ಚುನಾವಣೆಯಲ್ಲಿ ಸೋತಿದ್ದರೂ ಸಚಿವ ಸ್ಥಾನ ನೀಡಿದ್ದಕ್ಕೆ ಪಕ್ಷದೊಳಗೇ ಕೆಲವರಿಂದ ವಿರೋಧ ವ್ಯಕ್ತವಾಗಿತ್ತು. ಈಗ, ಸವದಿಯನ್ನು ವಿಧಾನ ಪರಿಷತ್​ಗೆ ನಾಮನಿರ್ದೇಶನ ಮಾಡುವ ಮೂಲಕ ಡಿಸಿಎಂ ಸ್ಥಾನದಲ್ಲಿ ಮುಂದುವರೆಯುವಂತೆ ಮಾಡಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಡಿಸಿಎಂ ಸವದಿ ಗೆಲುವಿನ ಹಾದಿ ಸುಗಮ?; ಪರಿಷತ್ ಚುನಾವಣೆಯಿಂದ ಹಿಂದೆ ಸರಿಯಲು ಅನಿಲ್ ಕುಮಾರ್ ನಿರ್ಧಾರ

ಮೂಲತಃ ಜೆಡಿಎಸ್‌ನವರಾದ ಅನಿಲ್ ಕುಮಾರ್‌ ಅವರು ನಂತರ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಅನಿಲ್ ಕುಮಾರ್ ವಿಧಾನ ಪರಿಷತ್​ಗೆ ನಾಮಪತ್ರ ಸಲ್ಲಿಸಿದ್ದರು. ಅನಿಲ್ ಅವರಿಗೆ ಸೂಚಕರಾಗಿ ಮಾಜಿ ಸಚಿವ ಎಚ್‌ಡಿ ರೇವಣ್ಣ ಮತ್ತು ದಿನೇಶ್ ಗುಂಡೂರಾವ್ ಸೇರಿದಂತೆ ಎರಡೂ ಪಕ್ಷದ ಶಾಸಕರು ಸಹಿ ಮಾಡಿದ್ದರು. ಅವರ ಮನವೊಲಿಕೆಗೆ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ನಾಯಕರು ಪ್ರಯತ್ನಪಟ್ಟು ಸೋತಿದ್ದರು.
Youtube Video
First published: February 17, 2020, 7:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories