ಮೂರೂವರೆ ವರ್ಷದ ನಂತರ ಬಿಜೆಪಿಗೆ ವಾಪಸ್ ಬಾ: ರಾಜು ಕಾಗೆಗೆ ಡಿಸಿಎಂ ಸವದಿ ಬಹಿರಂಗ ಆಹ್ವಾನ

ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಕೂಡ ಅಥಣಿ ಮತ್ತು ಕಾಗವಾಡ ಕ್ಷೇತ್ರಗಳು ಮಹೇಶ್ ಕುಮಟಳ್ಳಿ ಮತ್ತು ಶ್ರೀಮಂತ ಪಾಟೀಲ್ ಅವರಿಗೇ ಫಿಕ್ಸ್ ಆಗಿದೆ ಎಂಬುದನ್ನು ಸವದಿ ಪರೋಕ್ಷವಾಗಿ ಒಪ್ಪಿಕೊಂಡರು. ಈ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ಟಿಕೆಟ್ ತನಗೆ ಸಿಗಬಹುದೆಂಬ ನಿರೀಕ್ಷೆಯನ್ನು ಸವದಿ ಬಿಟ್ಟಂತೆ ತೋರುತ್ತಿದೆ.

news18
Updated:December 8, 2019, 4:38 PM IST
ಮೂರೂವರೆ ವರ್ಷದ ನಂತರ ಬಿಜೆಪಿಗೆ ವಾಪಸ್ ಬಾ: ರಾಜು ಕಾಗೆಗೆ ಡಿಸಿಎಂ ಸವದಿ ಬಹಿರಂಗ ಆಹ್ವಾನ
ಲಕ್ಷ್ಮಣ ಸವದಿ(ಬಲತುದಿ) ಮತ್ತು ರಾಜು ಕಾಗೆ (ಎಡತುದಿ)
  • News18
  • Last Updated: December 8, 2019, 4:38 PM IST
  • Share this:
ಬೆಳಗಾವಿ(ಡಿ. 08): ಬಿಜೆಪಿ ಮಾಜಿ ಶಾಸಕ ರಾಜು ಕಾಗೆ ಮತ್ತು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಗಮನಾರ್ಹವೆಂದರೆ ಸವದಿ ಅವರು ರಾಜು ಕಾಗೆ ಸಮ್ಮುಖದಲ್ಲೇ ನೇರಾ ನೇರ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿ ಮಾತನಾಡಿದರು. ಬಿಜೆಪಿ ತೊರೆದು ಕಾಂಗ್ರೆಸ್​ಗೆ ಹೋಗಿರುವ ನೀನು ಮೂರೂವರೆಗೆ ವರ್ಷ ಸಹಕಾರಿ ಕ್ಷೇತ್ರಕ್ಕೆ ತಲೆಹಾಕದಿರು ಎಂದು ಲಘುವಾಗಿ ತಾಕೀತು ಮಾಡಿದರು. ಮೂರೂವರೆ ವರ್ಷದ ಬಳಿಕ ಬಿಜೆಪಿ ವಾಪಸ್ ಬಾ ಎಂದು ಆಹ್ವಾನ ಕೂಡ ಮಾಡಿದರು. ಕಾಗವಾಡದಲ್ಲಿ ನಡೆದ ಪಿಕೆಪಿಎಸ್ ಸೊಸೈಟಿಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸವದಿ ಹಾಸ್ಯದ ಮಾತುಗಳಲ್ಲೇ ಎಲ್ಲವನ್ನೂ ಹೇಳಿದರು.

ನೀನು ಡಿಸಿಸಿ ಬ್ಯಾಂಕ್ ಚುನಾವಣೆಗೆ ನಿಲ್ಲಬೇಡ. ನಮ್ಮನ್ನು ಬಿಟ್ಟು ಹೋಗಿರುವ ನೀನು ಸಹಕಾರಿ ಕ್ಷೇತ್ರಕ್ಕೆ ಈಗ ಬರಬೇಡ. ಈ ಮೂರೂವರೆ ವರ್ಷ ಕಳೆದ ನಂತರ ಮುಂದೆ ಮತ್ತೆ ನೋಡೋಣ. ಆಗ ಅಲ್ಲಿಂದ ಬಿಟ್ಟು ಮತ್ತೆ ನಮ್ಮ ಕಡೆ ಬರುವಿಯಂತೆ ಎಂದು ರಾಜು ಕಾಗೆ ಅವರಿಗೆ ಸವದಿ ಆಹ್ವಾನ ಕೊಟ್ಟರು.

ಇದನ್ನೂ ಓದಿ: ವಿಶ್ವನಾಥ್ ಸೋತರೆ ಪ್ರಪಂಚ ಮುಳುಗೋಗುತ್ತಾ?; ಸಂಸದ ಶ್ರೀನಿವಾಸ್​ ಪ್ರಸಾದ್​​

ಮೂರೂವರೆ ವರ್ಷದ ನಂತರವೂ ಅಥಣಿಯಲ್ಲಿ ಮಹೇಶ್ ಕುಮಟಳ್ಳಿ, ಕಾಗವಾಡದಲ್ಲಿ ಶ್ರೀಮಂತ ಪಾಟೀಲ್ ಅವರು ಇರುತ್ತಾರೆ. ನಿನಗೆ ಒಂದು ಹೊಸ ಜಾಗ ಹುಡುಕಿಕೊಡುತ್ತೇನೆ ಎಂದು ಸವದಿ ಅಚ್ಚರಿಯ ಹೇಳಿಕೆಯನ್ನೂ ನೀಡಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಕೂಡ ಅಥಣಿ ಮತ್ತು ಕಾಗವಾಡ ಕ್ಷೇತ್ರಗಳು ಮಹೇಶ್ ಕುಮಟಳ್ಳಿ ಮತ್ತು ಶ್ರೀಮಂತ ಪಾಟೀಲ್ ಅವರಿಗೇ ಫಿಕ್ಸ್ ಆಗಿದೆ ಎಂಬುದನ್ನು ಸವದಿ ಪರೋಕ್ಷವಾಗಿ ಒಪ್ಪಿಕೊಂಡರು. ಈ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ಟಿಕೆಟ್ ತನಗೆ ಸಿಗಬಹುದೆಂಬ ನಿರೀಕ್ಷೆಯನ್ನು ಸವದಿ ಬಿಟ್ಟಂತೆ ತೋರುತ್ತಿದೆ.

ಇದನ್ನೂ ಓದಿ: ಬಿಜೆಪಿ ಮತ್ತು ಜೆಡಿಎಸ್​​ಗೆ ನನ್ನ ಕಂಡರೆ ಭಯ; ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ

ಇದೇ ವೇಳೆ, ತಾನು ಮತ್ತು ರಾಜು ಕಾಗೆ ಇಬ್ಬರೂ ಜೋಡೆತ್ತುಗಳೆಂದು ಹೇಳಿ ತಮ್ಮ ಹಳೆಯ ಸ್ನೇಹ ಮತ್ತು ವಿಶ್ವಾಸವನ್ನು ಸವದಿ ಸ್ಮರಿಸಿದರು. ಜೋಡೆತ್ತು ಯಾವಾಗಲೂ ಅಗಲಬಾರದು, ಕೂಡಿಯೇ ಇರಬೇಕು. ಟೈಮ್ ಸುಮಾರು ನಸೀಬ್ ಕೆಟ್ಟು ನಮ್ಮ ಕೈಯಿಂದ ನೀ ಜಾರಿಕೊಂಡು ಹೋದಿ. ಮುಂದಿನ ದಿನಗಳಲ್ಲಿ ನಿನ್ನನ್ನ ಒಳಗೆ ತಂದು ಬೇರೆ ವ್ಯವಸ್ಥೆ ಮಾಡುತ್ತೇನೆ ಎಂದು ರಾಜು ಕಾಗೆಗೆ ಭರವಸೆ ನೀಡಿದ ಸವದಿ, ನೀನು ಬೈದರೆ ಬೈಸಿಕೊಳ್ಳುತ್ತೇನೆ. ಆದರೆ ಶಾಪ ಮಾತ್ರ ಹಾಕಬೇಡ. ಚುನಾವಣೆ ಬಂದಾಗ ಮಾತ್ರ ನಾವು ರಾಜಕಾರಣ ಮಾಡಬೇಕು ಎಂದು ಕಿವಿ ಮಾತು ಹೇಳಿದರು.ಕಾಗವಾಡದ ಕಾಂಗ್ರೆಸ್ ಶಾಸಕರಾಗಿದ್ದ ಶ್ರೀಮಂತ ಪಾಟೀಲ್ ಅವರು ರಾಜೀನಾಮೆ ನೀಡಿ ಅನರ್ಹಗೊಂಡ ಬಳಿಕ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಉಪಚುನಾವಣೆಯಲ್ಲಿ ಬಿಜೆಪಿಯಿಂದ ಶ್ರೀಮಂತ ಪಾಟೀಲ್ ಅವರಿಗೆ ಟಿಕೆಟ್ ನೀಡಲಾಯಿತು. ಇದೇ ಕ್ಷೇತ್ರದ ಮಾಜಿ ಬಿಜೆಪಿ ಶಾಸಕರಾದ ರಾಜು ಕಾಗೆ ಅಸಮಾಧಾನಗೊಂಡು ಕಾಂಗ್ರೆಸ್​ಗೆ ಹೋಗಿ ಆ ಪಕ್ಷದಿಂದ ಸ್ಪರ್ಧೆ ಮಾಡಿದ್ದಾರೆ. ಜಿದ್ದಾಜಿದ್ದಿನಿಂದ ನಡೆದಿರುವ ಉಪಚುನಾವಣೆಯ ಫಲಿತಾಂಶ ನಾಳೆ ಪ್ರಕಟವಾಗುತ್ತದೆ. ಸಿವೋಟರ್​ನ ಚುನಾವಣೋತ್ತರ ಸಮೀಕ್ಷೆಯು ಶ್ರೀಮಂತ ಪಾಟೀಲ್​ಗೆ ಗೆಲುವು ಸಿಗಬಹುದೆಂದು ಅಂದಾಜಿಸಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: December 8, 2019, 4:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading