ಹೈಕಮಾಂಡ್​​ ಕೃಪೆಯಿದ್ದರೂ ತಪ್ಪದ ಬವಣೆ; ರಾಜ್ಯ ಬಿಜೆಪಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಏಕಾಂಗಿ?

ಇನ್ನು ಈ ರಾಜಕೀಯ ಬೆಳವಣಿಗೆಗಳಿಂದ ಡಿಸಿಎಂ ಲಕ್ಷ್ಮಣ ಸವದಿಗೆ ಭಾರೀ ಬೇಸರವಾಗಿದೆ. ಅಲ್ಲದೇ ಇದೆಲ್ಲವನ್ನೂ ಗಮನಿಸುತ್ತಿರುವ ಬಿಜೆಪಿ ಹೈಕಮಾಂಡ್ ಯಾವ ಕ್ಷಣದಲ್ಲಾದರೂ ಮಧ್ಯ ಪ್ರವೇಶಿಸುವ ಸಾಧ್ಯತೆಯಿದೆ.

news18
Updated:September 10, 2019, 8:47 AM IST
ಹೈಕಮಾಂಡ್​​ ಕೃಪೆಯಿದ್ದರೂ ತಪ್ಪದ ಬವಣೆ; ರಾಜ್ಯ ಬಿಜೆಪಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಏಕಾಂಗಿ?
ಲಕ್ಷ್ಮಣ ಸವದಿ, ಬಿ.ಎಸ್​. ಯಡಿಯೂರಪ್ಪ, ಉಮೇಶ್ ಕತ್ತಿ.
  • News18
  • Last Updated: September 10, 2019, 8:47 AM IST
  • Share this:
ಬೆಂಗಳೂರು(ಸೆ.09): ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತರು ಬಿಜೆಪಿ ಹೈಕಮಾಂಡ್​​​ ಕೃಪೆಯಿಂದ ಲಕ್ಷ್ಮಣ ಸವದಿಗೆ ಡಿಸಿಎಂ ಜೊತೆಗೆ ಸಚಿವ ಸ್ಥಾನ ಸಿಕ್ಕಿದೆ. ಬಿಜೆಪಿ ಹೈಕಮಾಂಡ್​​ ಅಮಿತ್​​ ಶಾ ಅವರೇ ಈ ವರ್ಷಾಂತ್ಯಕ್ಕೆ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಉಸ್ತುವಾರಿ ಜವಾಬ್ದಾರಿ ನೀಡಿದ್ದಾರೆ. ಈ ಮಧ್ಯೆ ಪಕ್ಷದ ವಿರಿಷ್ಠರ ಕೃಪೆಯಿದ್ದರೂ ಡಿಸಿಎಂ ಲಕ್ಷ್ಮಣ ಸವದಿ ರಾಜ್ಯ ಬಿಜೆಪಿಯಲ್ಲಿ ಏಕಾಂಗಿಯಾಗಿದ್ದಾರಾ? ಎಂಬ ಪ್ರಶ್ನೆ ಕಾಡುತ್ತಿದೆ.

ಕರ್ನಾಟಕ ಬಿಜೆಪಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಏಕಾಂಗಿಯಾಗಿದ್ದಾರೆ. ತಮಗೆ ಆತ್ಮೀಯರಾಗಿದ್ದ ನಾಯಕರೇ ಈಗ ದೂರವಾಗಿದ್ದಾರೆ. ರಾಜ್ಯದ ಸಚಿವರು, ಶಾಸಕರು ಸವದಿಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಡಿಸಿಎಂ ಲಕ್ಷ್ಮಣ ಸವದಿ ಆಂತರಿಕವಾಗಿ ಭಾರೀ ನೋವು ಅನುಭವಿಸುತ್ತಿದ್ದಾರೆ ಎನ್ನಲಾಗಿದೆ.

ಸದ್ಯ ರಾಜ್ಯ ಬಿಜೆಪಿಯಲ್ಲಿ ಡಾ. ಅಶ್ವಥನಾರಾಯಣ, ಗೋವಿಂದ ಕಾರಜೋಳಗೆ ಸಿಕ್ಕಷ್ಟು ಪ್ರಾಶಸ್ತ್ಯ ಸವದಿಗಿಲ್ಲ. ದೆಹಲಿಗೆ ಹೋದಾಗಲೂ ಸಿಎಂ ಯಡಿಯೂರಪ್ಪ ಸವದಿಯನ್ನ ಕರೆಯಲಿಲ್ಲ. ತಮ್ಮ ರಾಜ್ಯದ ಉಸ್ತವಾರಿಯಾದರೂ ಮಹಾರಾಷ್ಟ್ರ ಸಿಎಂ ಫಡ್ನವೀಸ್ ಭೇಟಿ ವೇಳೆ ಸವದಿಗೆ ಯಾವುದೇ ಆಹ್ವಾನ ನೀಡಿಲ್ಲ. ಇವರ ಬದಲಿಗೆ ಸಿಎಂ ಬಿ.ಎಸ್​ ಯಡಿಯೂರಪ್ಪ ಡಾ. ಅಶ್ವಥನಾರಾಯಣ ಮತ್ತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಕರೆದೊಯ್ದಿದ್ದರು.

ಇನ್ನು ಈ ರಾಜಕೀಯ ಬೆಳವಣಿಗೆಗಳಿಂದ ಡಿಸಿಎಂ ಲಕ್ಷ್ಮಣ ಸವದಿಗೆ ಭಾರೀ ಬೇಸರವಾಗಿದೆ. ಅಲ್ಲದೇ ಇದೆಲ್ಲವನ್ನೂ ಗಮನಿಸುತ್ತಿರುವ ಬಿಜೆಪಿ ಹೈಕಮಾಂಡ್ ಯಾವ ಕ್ಷಣದಲ್ಲಾದರೂ ಮಧ್ಯ ಪ್ರವೇಶಿಸುವ ಸಾಧ್ಯತೆಯಿದೆ. ಬಿಜೆಪಿಯೊಳಗಿನ ಆಂತರಿಕ ಭಿನ್ನಮತ ಶಮನಕ್ಕಾಗಿ ಹೈಕಮಾಂಡ್​​ ಸದ್ಯದಲ್ಲೇ ಮುಂದಾಗಲಿದೆ ಎನ್ನುತ್ತಿವೆ ಮೂಲಗಳು.

ಇದನ್ನೂ ಓದಿ: ಐಎಂಎ ವಂಚನೆ ಪ್ರಕರಣ; 20 ಜನ ಆರೋಪಿಗಳ ವಿರುದ್ಧ ಸಿಬಿಐ ಚಾಜ್೯ ಶೀಟ್ ಸಲ್ಲಿಕೆ

ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರೂ ಹೈಕಮಾಂಡ್‌ ವರದಿಂದ ಸಚಿವ ಸ್ಥಾನದ ಜೊತೆಗೆ ಡಿಸಿಎಂ ಸ್ಥಾನ ಅಲಂಕರಿದ ಬಳಿಕವೇ ಲಕ್ಷ್ಮಣ ಸವದಿ ರಾಜ್ಯ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೀಗಾಗಾಗಿಯೇ ಯಾರ ಜೊತೆಗೂ ಮಾತಾಡದೇ ಹೆಚ್ಚೂ ಕಡಿಮೆ ಸವದಿ ಏಕಾಂಗಿಯಾಗಿದ್ದಾರೆ ಎಂಬುದು ಸ್ಪಷ್ಟ.

ರಾಜ್ಯ ಬಿಜೆಪಿಯ ಹಿರಿಯ ಲಕ್ಷ್ಮಣ ಸವದಿ ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದು ಹಿಡಿಸಲಿಲ್ಲ. ತಮ್ಮ ಮಾತು ಕೇಳದೆ ಹೈಕಮಾಂಡ್​​ ಸವದಿಗೆ ಡಿಸಿಎಂ ಹುದ್ದೆ ನೀಡಿದ್ದಾರೆ.  ಅದಕ್ಕೂ ಮುನ್ನವೇ ಮಹಾರಾಷ್ಟ್ರದ ಚುನಾವಣೆಯ ಉಸ್ತುವಾರಿಯನ್ನಾಗಿ ಮಾಡಿದ್ದಾರೆ. ಆದ್ದರಿಂಲೇ ಸವದಿ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಈ ರೀತಿ ಕತ್ತಿ ಮಸೆಯುತ್ತಿದ್ದಾರೆ.ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ
----------
First published: September 10, 2019, 8:38 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading