ಆನಂದ್​ ಸಿಂಗ್​ ಮೇಲೆ ಅರಣ್ಯ ಒತ್ತುವರಿ, ನಾಶ ಸೇರಿದಂತೆ ಒಂದೇ ಒಂದು ಪ್ರಕರಣವಿಲ್ಲ: ಡಿಸಿಎಂ ಸವದಿ

ಹೀಗೆ ಮಾತು ಮುಂದುವರಿಸಿದ ಡಿಸಿಎಂ ಲಕ್ಷ್ಮಣ ಸವದಿ, ಇನ್ನೇನು ಕೆಲವೇ ದಿನಗಳಲ್ಲಿ ಉಮೇಶ್​ ಕತ್ತಿಯವರಿಗೆ ಸಚಿವ ಸ್ಥಾನ ಸಿಗಲಿದೆ. ನಾವೆಲ್ಲಾ ಒಟ್ಟಿಗೆ ನಿಂತು ಉತ್ತರ ಕರ್ನಾಟಕ ಅಭಿವೃದ್ದಿಗೆ ಕೆಲಸ ಮಾಡುತ್ತೇವೆ. ಮಧ್ಯಾಹ್ನ 2 ಗಂಟೆಯ ನಂತರ ಎಂಎಲ್​​ಸಿ ಚುನಾವಣೆ ಬಗ್ಗೆ ಗೊತ್ತಾಗಲಿದೆ ಎಂದು ಸವದಿ ಹೇಳಿದರು.

news18-kannada
Updated:February 14, 2020, 4:21 PM IST
ಆನಂದ್​ ಸಿಂಗ್​ ಮೇಲೆ ಅರಣ್ಯ ಒತ್ತುವರಿ, ನಾಶ ಸೇರಿದಂತೆ ಒಂದೇ ಒಂದು ಪ್ರಕರಣವಿಲ್ಲ: ಡಿಸಿಎಂ ಸವದಿ
ಡಿಸಿಎಂ ಲಕ್ಷ್ಣಣ್ ಸವದಿ
  • Share this:
ಬೆಂಗಳೂರು(ಫೆ.14): ನೂತನ ಸಚಿವ ಆನಂದ್ ಸಿಂಗ್​​ಗೆ ಅರಣ್ಯ ಖಾತೆ ನೀಡಿರುವುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರನ್ನು ತರಾಟೆ ತೆಗೆದುಕೊಂಡಿದ್ದಾರೆ. ಕರ್ನಾಟಕ ಅರಣ್ಯ ಕಾಯ್ದೆ ಉಲ್ಲಂಘನೆ ಸೇರಿದಂತೆ 15ಕ್ಕೂ ಹೆಚ್ಚು ಕೇಸುಗಳನ್ನು ಎದುರಿಸುತ್ತಿರುವ ಆನಂದ್ ಸಿಂಗ್​​​​​ಗೆ ಹೇಗೆ ಅರಣ್ಯ ಖಾತೆ ನೀಡಿದ್ದೀರಿ? ಎಂದು ನೇರವಾಗಿಯೇ ಪ್ರಶ್ನಿಸುತ್ತಿದ್ದಾರೆ. ಈ ಮಧ್ಯೆಯೇ ಆನಂದ್​​ ಸಿಂಗ್​​ ಬ್ಯಾಟ್​​ ಮಾಡಲು ಹೋಗಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪೇಚೆಗೆ ಸಿಲುಕಿದಂತಾಗಿದೆ. ಇಲ್ಲಿಯವರೆಗೂ ಸಚಿವ ಆನಂದ್​​ ಸಿಂಗ್ ವಿರುದ್ಧ ಯಾವುದೇ ಕೇಸ್​ ದಾಖಲಾಗಿಲ್ಲ ಎಂದು ನೀಡಿರುವ ಹೇಳಿಕೆಯೀಗ ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇಂದು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆಗೆ ಮಾತಾಡಿದ ಡಿಸಿಎಂ ಲಕ್ಷ್ಮಣ ಸವದಿ, ಆನಂದ್​​ ಸಿಂಗ್​​​ ಮೇಲೆ ಯಾವುದೇ ದೂರುಗಳು ಇಲ್ಲ. ಆನಂದ್​ ಸಿಂಗ್​​ಗೆ ಅರಣ್ಯ ಇಲಾಖೆ ನೀಡಿರುವ ವಿಚಾರದ ಬಗ್ಗೆ ಚರ್ಚೆ ಮಾಡುತ್ತೇನೆ. ಆದರೆ, ನನಗೆ ಗೊತ್ತಿರುವ ಮಾಹಿತಿ ಪ್ರಕಾರ ಆನಂದ್​​ ಸಿಂಗ್​ ಮೇಲೆ ಕರ್ನಾಟಕ ಅರಣ್ಯ ಕಾಯ್ದೆ ಉಲ್ಲಂಘನೆಯಡಿ ಯಾವುದೇ ಕೇಸ್​​ ದಾಖಲಾಗಿಲ್ಲ ಎಂದು ಬ್ಯಾಟ್​​ ಮಾಡಿದ್ದಾರೆ.

ಇನ್ನು, ಬಳ್ಳಾರಿ ಕಾರು ಅಪಘಾತ ಪ್ರಕರಣದ ಬಗ್ಗೆ ಏನು ಮಾಹಿತಿ ಇಲ್ಲ. ಈ ಕುರಿತಂತೆ ಪೊಲೀಸರು ಮತ್ತು ಆರ್​​. ಅಶೋಕ್​​ ಕೂಡ ಹೇಳಿಕೆ ನೀಡಿದ್ದಾರೆ. ಮಾಹಿತಿ ಇಲ್ಲದೆ ಮಾತಾಡುವುದು ಸರಿಯಲ್ಲ. ದೇಶದ ಕಾನೂನು ಎಲ್ಲರಿಗೂ ಒಂದೇ. ಭಾರತದ ರಾಷ್ಟ್ರಪತಿಯಿಂದ ಸಾಮಾನ್ಯ ಪ್ರಜೆಯವರಗೂ ತಪ್ಪು ಮಾಡಿದರೆ ಶಿಕ್ಷೆ ಅನುಭವಿಸಲೇಬೇಕು ಎಂದರು  ಸವದಿ.

ಹೀಗೆ ಮಾತು ಮುಂದುವರಿಸಿದ ಡಿಸಿಎಂ ಲಕ್ಷ್ಮಣ ಸವದಿ, ಇನ್ನೇನು ಕೆಲವೇ ದಿನಗಳಲ್ಲಿ ಉಮೇಶ್​ ಕತ್ತಿಯವರಿಗೆ ಸಚಿವ ಸ್ಥಾನ ಸಿಗಲಿದೆ. ನಾವೆಲ್ಲಾ ಒಟ್ಟಿಗೆ ನಿಂತು ಉತ್ತರ ಕರ್ನಾಟಕ ಅಭಿವೃದ್ದಿಗೆ ಕೆಲಸ ಮಾಡುತ್ತೇವೆ. ಮಧ್ಯಾಹ್ನ 2 ಗಂಟೆಯ ನಂತರ ಎಂಎಲ್​​ಸಿ ಚುನಾವಣೆ ಬಗ್ಗೆ ಗೊತ್ತಾಗಲಿದೆ ಎಂದು ಸವದಿ ಹೇಳಿದರು.

ಇದನ್ನೂ ಓದಿ: ಅರಣ್ಯ ಸಚಿವ ಆನಂದ್ ಸಿಂಗ್ ಮೇಲಿನ ಪ್ರಕರಣಗಳ ಮಾಹಿತಿ ಕೇಳಿದ ಹೈಕಮಾಂಡ್

ಇತ್ತೀಚೆಗೆ ಸಂಪುಟ ವಿಸ್ತರಣೆ ವೇಳೆ ಆನಂದ್​ ಸಿಂಗ್​​ಗೆ ಆರಂಭದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ನೀಡಲಾಗಿತ್ತು. ಆದರೆ ಕೇವಲ 24 ಗಂಟೆಗಳಲ್ಲಿಯೇ ಅವರ ಖಾತೆ ಬದಲಾವಣೆಯಾಗಿ ಅರಣ್ಯ ಖಾತೆ ನೀಡಲಾಗಿದೆ. ಈ ನಡುವೆ ಹಿಂದಿನ ಚುನಾವಣೆ ವೇಳೆ ತಾವು ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ಟಿನಲ್ಲಿ 15 ಕೇಸುಗಳ ವಿಚಾರಣೆ ಬಾಯಿ ಇವೆ. ಮೀಸಲು ಅರಣ್ಯದಲ್ಲಿ ನಿಷೇಧಕಾರಿ ಚಟುವಟಿಕೆಗಳನ್ನು ನಡೆಸಿದ ಆರೋಪಗಳು ಇವೆ. ಹೀಗಿರುವಾಗ ಅರಣ್ಯ ಖಾತೆ ಆನಂದ್​​ ಸಿಂಗ್​ಗೆ ನೀಡಿರುವುದು ಎಷ್ಟು ಸರಿ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರು ಮಾತಾಡಿದ್ದಾರೆ. ಕುರಿ ಕಾಯಲು ತೋಳವನ್ನು ಬಿಟ್ಟಂತೆ ಆಗಿದೆ. ಇದನ್ನು ಒಪ್ಪಲು ಖಂಡಿತಾ ಸಾಧ್ಯವಿಲ್ಲ ಎನ್ನುವ ಮೂಲಕ ಆನಂದ್​ ಸಿಂಗ್​​ಗೆ ನೀಡಿರುವ ಖಾತೆಯ ಬಗ್ಗೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ 15 ಕೇಸುಗಳು ಇರುವಾಗ ಆನಂದ್ ಸಿಂಗ್​​ಗೆ ಅರಣ್ಯ ಖಾತೆ ನೀಡಿದ್ದು ಸರಿಯಲ್ಲ. ಅರಣ್ಯ ಕಾಯ್ದೆಯಡಿ ಗಂಭೀರ ಆರೋಪ ಎದುರಿಸುತ್ತಿರುವವರನ್ನು ಅದೇ ಖಾತೆಯ ಸಚಿವರನ್ನಾಗಿ ಹೇಗೆ ನೇಮಕ ಮಾಡಲಾಗುತ್ತದೆ ಎಂದು ಟೀಕಿಸಿದ್ದಾರೆ. ಇದನ್ನು ಜೆಡಿಎಸ್​​ ಕೂಡ ಖಂಡಿಸಿದೆ.
First published: February 14, 2020, 4:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading