ಸಿದ್ಧರಾಮಯ್ಯ ಬ್ರೀಡ್ ಹೇಳಿಕೆಗೆ ಆಕ್ರೋಶ; ಹಿರಿಯರಿಂದ ಕ್ಷುಲ್ಲಕ ಹೇಳಿಕೆ ಸಲ್ಲ ಎಂದ ಲಕ್ಷ್ಮಣ ಸವದಿ, ಸೋಮಣ್ಣ

ಮೊಳಕಾಲ್ಮುರು ಕ್ಷೇತ್ರವನ್ನು 371(ಜೆ) ವ್ಯಾಪ್ತಿಗೆ ಸೇರಿಸೋದು ಅಷ್ಟು ಸುಲಭವಾಲ್ಲ. ಕೇಂದ್ರ ಸರ್ಕಾರ ಮತ್ತೊಮ್ಮೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗುತ್ತದೆ. ಸದ್ಯಕ್ಕೆ ರಾಜ್ಯ ಸರ್ಕಾರದ ಮುಂದೆ ಮೊಳಕಾಲ್ಮುರು ಸೇರಿಸೋ ವಿಚಾರವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಡಿಸಿಎಂ ಲಕ್ಷ್ಮಣ ಸವದಿ

ಡಿಸಿಎಂ ಲಕ್ಷ್ಮಣ ಸವದಿ

  • Share this:
ಕಲಬುರ್ಗಿ (ಡಿ.02): ಹಿಂದೂ-ಮುಸ್ಲಿಂ ಕ್ರಾಸ್ ಬ್ರೀಡ್ ಕುರಿತ ಸಿದ್ದರಾಮಯಯ್ಯ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಿದ್ದರಾಮಯ್ಯ ಹೇಳಿಕೆಯನ್ನು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ, ವಸತಿ ಸಚಿವ ಸೋಮಣ್ಣ ಖಂಡಿಸಿದ್ದಾರೆ. ಹಿರಿಯ ನಾಯಕರೆನಿಸಿಕೊಂಡ ಸಿದ್ದರಾಮಯ್ಯ ಈ ರೀತಿಯ ಕ್ಷುಲ್ಲಕ ಹೇಳಿಕೆ ನೀಡಿ ಸಮಾಜವನ್ನು ತುಚ್ಛೀಕರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಕ್ರಾಸ್ ಬ್ರೀಡ್ ಹೇಳಿಕೆಗೆ ಡಿಸಿಎಂ ಲಕ್ಷ್ಮಣ ಸವದಿ ಕಿಡಿಕಾರಿದ್ದಾರೆ. ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಐದು ವರ್ಷ ಪೂರ್ಣಾವಧಿ ಸಿಎಂ ಆದವರು. ಇಂತಹ ಶಬ್ದ ಬಳಕೆಯಿಂದ ಸಮಾಜದ ಮೇಲೆ ಏನಾಗುತ್ತದೆ ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. ಒಂದು ಸಮಾಜವನ್ನು ತುಚ್ಛೀಕರಿಸಲು ಈ ರೀತಿಯ ಹೇಳಿಕೆ ನೀಡಿರೋದು ಸರಿಯಲ್ಲ ಎಂದು ಕಿಡಿಕಾರಿದರು.

ಮತ್ತೊಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ ಕ್ರಾಸ್ ಬ್ರೀಡ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರೋ ವಸತಿ ಸಚಿವ ವಿ.ಸೋಮಣ್ಣ, ಸಿದ್ಧರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ಹಿಂದೂ, ಮುಸ್ಲಿಂ ಅಂತ ಏನಿಲ್ಲ, ಮಿಕ್ಸ್ ಬ್ರೀಡ್ ಆಗಿದೆ ಅನ್ನೋ ಸಿದ್ಧರಾಮಯ್ಯ ಹೇಳಿಕೆಯನ್ನು ಖಂಡಿಸಿದ್ದಾರೆ. ಸಿದ್ದರಾಮಯ್ಯನವರು ಈ ಹಿಂದೆ ಸಿಎಂ ಆದವರು. ಈ ರೀತಿಯಾಗಿ ಕ್ಷುಲ್ಲಕವಾಗಿ ಮಾತನಾಡುವುದು ಅವರಿಗೆ ಶೋಭೆ ತರುವಂಥದ್ದಲ್ಲ. ಸೂಕ್ಷ್ಮತೆಯನ್ನು ಅರಿತುಕೊಂಡು ಮಾತನಾಡಬೇಕೆಂದರು.

ಸಿಎಂ ಬದಲಾವಣೆ ಅಂತ ಕಾಗೆ ಹಾರಿಸ್ತಿದಾರೆ

ಸಿಎಂ ಬಿ ಎಸ್ ವೈ ಬದಲಾವಣೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಲಕ್ಷ್ಮಣ ಸವದಿ, ಯಡಿಯೂರಪ್ಪ ಬದಲಾವಣೆ ಕೇವಲ ಗಾಳಿ ಮಾತು. ಇಲ್ಲದೆ ಇರೋದಕ್ಕೆ ರೆಕ್ಕೆ ಪುಕ್ಕ ಕಟ್ಟಿ ಕಾಗೆ ಹಾರಿಸಲಾಗುತ್ತಿದೆ. ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ವಿಚಾರದ ಪ್ರಶ್ನೆಯೇ ಇಲ್ಲ ಎಂದರು.

ಕುಮಾರಸ್ವಾಮಿ-ಡಿಕೆಶಿ ಜೊತೆಗಿನ ವೈರತ್ವವೇ ಯೋಗೇಶ್ವರ್​​ಗೆ ವರದಾನ; ಇದೇ ಕಾರಣಕ್ಕೆ ಸಿಪಿವೈಗೆ ಮಂತ್ರಿ ಭಾಗ್ಯ?

ತನ್ನ ಸೋಲಿಗೆ ಯೋಗೇಶ್ವರ್​​ ಕಾರಣ ಎಂಬ ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸವದಿ, ವಿಶ್ವನಾಥ್ ಅನುಭವಿ ರಾಜಕಾರಣಿ, ಸಾಹಿತಿ. ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡೋದು ಸಿಎಂ ಮತ್ತು ರಾಷ್ಟ್ರೀಯ ಅಧ್ಯಕ್ಷರಿಗೆ ಬಿಟ್ಟ ವಿಚಾರ. ಕೆಲವರು ತಮ್ಮ ಸಚಿವ ಸ್ಥಾನ ತಪ್ಪುತ್ತೆ ಅಂತಾ ಮತ್ತೊಬ್ಬರ ಸಚಿವ ಸ್ಥಾನಕ್ಕೆ ಆಕ್ಷೇಪ ವ್ಯೆಕ್ತಪಡಿಸುವುದು ಸಾಮಾನ್ಯ ಎಂದು ಪರೋಕ್ಷವಾಗಿ ಸಿ ಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯಗೆ ಸವದಿ ಟಾಂಗ್ ಕೊಟ್ಟಿದ್ದಾರೆ.

ಮೊಳಕಾಲ್ಮುರು ಕ್ಷೇತ್ರವನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ಸೇರಿಸುವ ಕುರಿತ ಸಚಿವ ಶ್ರೀರಾಮುಲು ಹೇಳಿಕೆಗೆ ಪ್ರತಿಕ್ರಿಯಿಸಿದ ಸವದಿ, ಅಲ್ಲಿನ ಜನ ಮನವಿ ಕೊಟ್ಟಿದ್ದಾರೆ. ವಿಶೇಷ ಸ್ಥಾನಮಾನದ ವ್ಯಾಪ್ತಿಗೆ ತಮ್ಮ ಕ್ಷೇತ್ರವನ್ನೂ ಸೇರಿಸುವಂತೆ ಕೇಳಿಕೊಂಡಿದ್ದಾರೆ. ಮನವಿ ಸ್ವೀಕರಿಸಿ, ಸೂಕ್ತ ಕ್ರಮ ಕೈಗೊಳ್ಳೋದಾಗಿ ಹೇಳಿದ್ದಾರೆ ಅಷ್ಟೆ. ಆದರೆ ಮೊಳಕಾಲ್ಮುರು ಕ್ಷೇತ್ರವನ್ನು 371(ಜೆ) ವ್ಯಾಪ್ತಿಗೆ ಸೇರಿಸೋದು ಅಷ್ಟು ಸುಲಭವಾಲ್ಲ. ಕೇಂದ್ರ ಸರ್ಕಾರ ಮತ್ತೊಮ್ಮೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗುತ್ತದೆ. ಸದ್ಯಕ್ಕೆ ರಾಜ್ಯ ಸರ್ಕಾರದ ಮುಂದೆ ಮೊಳಕಾಲ್ಮುರು ಸೇರಿಸೋ ವಿಚಾರವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕುರುಬರ ಹೋರಾಟದ ಹಿಂದೆ ಆರ್.ಎಸ್.ಎಸ್. ಕೈವಾಡ ಹೇಳಿಕೆಗೆ ಖಂಡನೆ:

ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸೋ ವಿಚಾರದಲ್ಲಿ ಆರ್ ಎಸ್ ಎಸ್ ಕೈವಾಡ ಅನ್ನೋ ಸಿದ್ದರಾಮಯ್ಯ ಹೇಳಿಕೆಯನ್ನ ಸೋಮಣ್ಣ ಖಂಡಿಸಿದ್ದಾರೆ. ಸಿದ್ದರಾಮಯ್ಯನವರಿಗೆ ಯಾವಾಗ ಕನಸು ಬೀಳುತ್ತೋ ಗೊತ್ತಿಲ್ಲಾ. ಎಲ್ಲರಿಗೂ ರಾತ್ರಿ ಕನಸು ಬಿದ್ರೆ ಸಿದ್ದರಾಮಯ್ಯನವರಿಗೆ ಹಗಲು ಕನಸು ಬೀಳುತ್ತದೆ. ಅವರು ದೊಡ್ಡ ನಾಯಕರು, ದೊಡ್ಡ ನಾಯಕರಾಗಿಯೇ ಇರಬೇಕು. ತನ್ನ ಕೈಲಿ ಆಗಲ್ಲ ಅನ್ನೋದನ್ನು ಮರೆಮಾಚಲು ಸಿದ್ಧರಾಮಯ್ಯ ಈ ರೀತಿ ಹೇಲಿಕೆ ನೀಡುದ್ತಿದ್ದಾರೆ. ಸಿದ್ಧರಾಮಯ್ಯ ಹಾಗೂ ಈಶ್ವರಪ್ಪ ಇಬ್ಬರು ಕುರುಬ ಸಮಾಜದ ಕೊಂಡಿಗಳಾಗಿರಬೇಕು. ಎಸ್.ಟಿ. ಮೀಸಲಾತಿಗಾಗಿ ಪ್ರಯತ್ನ ಮಾಡಬೇಕು. ಅದನ್ನು ಬಿಟ್ಟು ಈ ರೀತಿ ಗೊಂದಲಕಾರಿ ಹೇಳಿಕೆ ನೀಡೋದು ಸರಿಯಲ್ಲ ಎಂದರು.ಯೋಗೆಶ್ವರ್ ಗೆ ಮಂತ್ರಿ ಮಾಡ್ತೀನಿ ಅನ್ನೋ ಸಿಎಂ ವಿಚಾರಕ್ಕೆ ಪ್ರತಿಕ್ರಿಸಿಯಿದ ಸೋಮಣ್ಣ, ಮುಖ್ಯಮಂತ್ರಿ ಅವರಿಗೆ ಅವರದೇ ಆದ ಮಾಹಿತಿ ಇರುತ್ತದೆ. ಆ ಹಿನ್ನೆಲೆಯಲ್ಲಿ ಅನೇಕರನ್ನು ಮಂತ್ರಿ ಮಾಡ್ತಾರೆ. ಕಲಬುರ್ಗಿ ಜಿಲ್ಲೆಗೆ ಕೂಡ ಮಂತ್ರಿ ಸ್ಥಾನ ಸಿಗಬೇಕು. ಕಲಬುರ್ಗಿಗೆ ಮಂತ್ರಿ ಸ್ಥಾನ ಕೊಡುವಂತೆ ನಾವೂ ಒತ್ತಡ ಹಾಕ್ತೇವೆ ಎಂದರು.
Published by:Latha CG
First published: