ಡಿಸಿಸಿ ಬ್ಯಾಂಕ್ ಅಧ್ಯಕ್ಷ  ಹುದ್ದೆಯ ಮೇಲೆ ಜಾರಕಿಹೊಳಿ ಮತ್ತು ಕತ್ತಿ ಬಣದ ನಡುವೇ ಡಿಸಿಎಂ ಸವದಿ ಆಪ್ತ ಶಾಸಕನ ಕಣ್ಣು

ಇದಾದ ನಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತಾಡಿದ ಡಿಸಿಎಂ ಲಕ್ಷ್ಮಣ ಸವದಿ, ಕಾಂಗ್ರೆಸ್​​ ಮತ್ತು ಜೆಡಿಎಸ್ ಪಕ್ಷದಲ್ಲಿ ಸೋತ ಅಂದರೆ ಸತ್ತ ಎಂದೇ ಅರ್ಥ. ಆದರೆ, ಬಿಜೆಪಿಯಲ್ಲಿ ಮಾತ್ರ ಬೆನ್ನಿಗೆ ಚೂರಿ ಹಾಕಿವುದಿಲ್ಲ. ಸೋತರೂ ಗುರುತಿಸಿ ಸ್ಥಾನಮಾನ ನೀಡುತ್ತಾರೆ. ಇದಕ್ಕೆ ನಾನೇ ಉದಾರಣೆ ಎಂದರು.

ಡಿಸಿಎಂ ಲಕ್ಷ್ಣಣ್ ಸವದಿ

ಡಿಸಿಎಂ ಲಕ್ಷ್ಣಣ್ ಸವದಿ

  • Share this:
ಬೆಳಗಾವಿ(ಮಾ.09): ಹಿಂದಿನ ಬೆಳಗಾವಿ ಪಿಎಲ್​​​ಡಿ ಬ್ಯಾಂಕ್​​ ಚುನಾವಣೆಯ ಕಿತ್ತಾಟ ಇಡೀ ರಾಜ್ಯದಲ್ಲಿ ಸದ್ದು ಮಾಡಿತ್ತು. ಈ ಜಗಳ ಮುಂದೆ ರಾಜ್ಯದ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾಣವಾಗಿದ್ದು ಇತಿಹಾಸ. ಆದರೀಗ, ಬೆಳಗಾವಿ ರಾಜಕೀಯ ದಿಕ್ಕನ್ನು ಬದಲಿಸುವ ಅತ್ಯಂತ ಪ್ರಮುಖ ಚುನಾವಣೆಗೆ ಜಿಲ್ಲೆಯ ಎಲ್ಲಾ ನಾಯಕರು ಸಿದ್ದತೆ ಮಾಡುಕೊಳ್ಳುತ್ತಿದ್ದಾರೆ. ಇದೇ ವರ್ಷದ ಮೇ ತಿಂಗಳಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ನಡೆಯಲಿದೆ. ಡಿಸಿಸಿ ಬ್ಯಾಂಕ್ ಮೇಲೆ ಹಿಡಿತ ಸಾಧಿಸಲು ಜಾರಕಿಹೊಳಿ ಸಹೋದರರ ಬಣ, ಕತ್ತಿ ಸಹೋದರರ ಬಣ ಹಾಗೂ ಸವದಿ ಬಣದ ನಡುವೆ ತುರುಸಿನ ಸ್ಪರ್ಧೆ ಏರ್ಪಡೊದು ಬಹುತೇಕ ಖಚಿತವಾಗಿದೆ. ಈ ನಡುವೆ ಡಿಸಿಎಂ ಲಕ್ಷ್ಮಣ ಸವದಿ ಆಪ್ತ ಶಾಸಕ ಮಹಾಂತೇಶ ದೊಡ್ಡಗೌಡ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಡಿಸಿಎಂ ಲಕ್ಷ್ಮಣ ಸವದಿಯನ್ನು ಒಂದೇ ವೇದಿಕೆಗೆ ತರುವ ಯತ್ನ ಮಾಡಲಾಗಿದೆ.

ಹೌದು, ಕಿತ್ತೂರು ತಾಲೂಕಿನ ಎಂ ಕೆ ಹುಬ್ಬಳ್ಳಿಯಲ್ಲಿ ಪಿಕೆಪಿಎಸ್ ನಿರ್ದೇಶಕರು ಹಾಗೂ ಬಿಜೆಪಿ ಮಂಡಳ ಕಾರ್ಯಕರ್ತರ ಸಮಾವೇಶ ಆಯೋಜನೆ ಮಾಡಲಾಗಿತ್ತು. ಸಚಿವ ರಮೇಶ ಜಾರಕಿಹೊಳಿ ಹಾಗೂ ಡಿಸಿಎಂ ಲಕ್ಷ್ಮಣ ಸವದಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಕಾರ್ಯಕ್ರಮದಲ್ಲಿ ಮಾತ್ರ ಇಬ್ಬರು ಮುಖಾಮುಖಿ ಆಗಲೇ ಇಲ್ಲ.

ಇನ್ನು, ಕಾರ್ಯಕ್ರಮದ ಆರಂಭದಲ್ಲೇ ಬಂದು ಮಾತಾಡಿದ ರಮೇಶ ಜಾರಕಿಹೊಳಿ, ಕಿತ್ತೂರು ಕ್ಷೇತ್ರ ಅಭಿವೃದ್ಧಿಗೆ ನಾನು ಬದ್ದ. ಈ ಕ್ಷೇತ್ರದ ನೀರಾವರಿ ಯೋಜನೆ ಬಗ್ಗೆ ಚರ್ಚಿಸಲು ಒಂದು ದಿನ ಸಮಯ ಕೊಡುತ್ತೇನೆ. ನೀರಾವರಿ ವಿಚಾರದಲ್ಲಿ ರಾಜಕೀಯ ಇಲ್ಲ ಎಂದು ಹೇಳಿದರು. ಹೀಗೆಂದು ಹೇಳಿದ ನಂತರ ಸಚಿವ ರಮೇಶ ಜಾರಕಿಹೊಳಿ ಈ ಕಾರ್ಯಕ್ರಮದಿಂದ ನಿರ್ಗಮಿಸಿದರು.

ಇದಾದ ನಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತಾಡಿದ ಡಿಸಿಎಂ ಲಕ್ಷ್ಮಣ ಸವದಿ, ಕಾಂಗ್ರೆಸ್​​ ಮತ್ತು ಜೆಡಿಎಸ್ ಪಕ್ಷದಲ್ಲಿ ಸೋತ ಅಂದರೆ ಸತ್ತ ಎಂದೇ ಅರ್ಥ. ಆದರೆ, ಬಿಜೆಪಿಯಲ್ಲಿ ಮಾತ್ರ ಬೆನ್ನಿಗೆ ಚೂರಿ ಹಾಕಿವುದಿಲ್ಲ. ಸೋತರೂ ಗುರುತಿಸಿ ಸ್ಥಾನಮಾನ ನೀಡುತ್ತಾರೆ. ಇದಕ್ಕೆ ನಾನೇ ಉದಾರಣೆ ಎಂದರು.

ಇದನ್ನೂ ಓದಿ: ಕರ್ನಾಟಕಕ್ಕೆ ಕೊರೋನಾ ಪ್ರವೇಶ; ಒಬ್ಬ ವ್ಯಕ್ತಿಗೆ ಸೋಂಕು; ಐದನೇ ತರಗತಿಯವರೆಗಿನ ಶಾಲಾ ಮಕ್ಕಳಿಗೆ ರಜೆ ಘೋಷಣೆ

ನಾನು ಪಕ್ಷಕ್ಕೆ ಎಂದು ದ್ರೋಹ ಮಾಡಿಲ್ಲ ಎಂಬುದು ಹೈಕಮಾಂಡ್ ಗುರುತಿಸಿದೆ. ಮಹಾಂತೇಶ ದೊಡ್ಡಗೌಡರ್ ನನಗೆ ಶಾಸಕ ಸ್ಥಾನ ಬಿಟ್ಟುಕೊಡಲು ಸಿದ್ಧರಾಗಿದ್ದರು. ಒಡಹುಟ್ಟಿದ ಸಹೋದರರು ಸಹ ಇಂತಹ ಮಾತು ಹೇಳಲ್ಲ. ಮಹಾಂತೇಶ ದೊಡ್ಡಗೌಡರ ಬಗ್ಗೆ ನನಗೆ ಹೆಮ್ಮೆ ಇದೆ. ನಿನ್ನ ಬೆನ್ನ ಹಿಂದೆ ನಾನು ಇರುತ್ತೇನೆ  ಎಂದು ಡಿಸಿಎಂ ಲಕ್ಷ್ಮಣ ಸವದಿ ಭರವಸೆ ಕೊಟ್ಟರು.

ಸಚಿವ ರಮೇಶ ಜಾರಕಿಹೊಳಿ ಈಗಾಗಲೇ ಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಜಾರಕಿಹೊಳಿ ಬಣ ಹಾಗೂ ಕತ್ತಿ ಬಣ ಒಟ್ಟಿಗೆ ಮಾಡಲಿದೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿ ಮಾತ್ರ ತಮ್ಮ ಆಪ್ತ ಶಾಸಕ ಮಹಾಂತೇಶ ದೊಡ್ಡಗೌಡ ಪರ ಬ್ಯಾಟಿಂಗ್ ಮಾಡಿದ್ದಾರೆ. ಒಟ್ಟಾರೆ ಮುಂಬುರುವ ಡಿಸಿಸಿ ಬ್ಯಾಂಕ್ ಚುನಾವಣೆ ಅತ್ಯಂತ ಪ್ರತಿಷ್ಠತವಾಗಿದ್ದು, ಹೇಗೆಲ್ಲ ತಿರುವು ಪಡೆದುಕೊಳ್ಳಲಿದೆ ಎಂಬುದು ಕಾದು ನೋಡಬೇಕಿದೆ.
First published: