ಮಲ್ಲಿಕಾರ್ಜುನ ಖರ್ಗೆ ಬಣ್ಣದ ಕಾಗೆ ಹಾರಿಸಲ್ಲ, ಉಹಾಪೋಹ ಹುಟ್ಟುಹಾಕಲ್ಲ; ಡಿಸಿಎಂ ಲಕ್ಷ್ಮಣ ಸವದಿ

ಚುನಾವಣೆ ಆದ ಒಂದು ವಾರದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ. ಒಂದು ಒಳ್ಳೆಯ ದಿನ ನೋಡಿ ಪಕ್ಷದ ಮುಖಂಡರನ್ನು ಕೇಳಿ ವಿಸ್ತರಣೆ ಆಗುತ್ತದೆ. ಉಮೇಶ ಕತ್ತಿಯವರಿಗೂ ಮಂತ್ರಿ ಸ್ಥಾನ ಸಿಗಬಹುದು.

news18-kannada
Updated:December 4, 2019, 2:04 PM IST
ಮಲ್ಲಿಕಾರ್ಜುನ ಖರ್ಗೆ ಬಣ್ಣದ ಕಾಗೆ ಹಾರಿಸಲ್ಲ, ಉಹಾಪೋಹ ಹುಟ್ಟುಹಾಕಲ್ಲ; ಡಿಸಿಎಂ ಲಕ್ಷ್ಮಣ ಸವದಿ
ಡಿಸಿಎಂ ಲಕ್ಷ್ಣಣ ಸವದಿ
  • Share this:
ಬೆಳಗಾವಿ(ಡಿ.04):  ಡಿ. 9ರ ಬಳಿಕ ಎರಡೂ ಪಕ್ಷಗಳಲ್ಲಿ ಬದಲಾವಣೆ ಆಗುತ್ತದೆ. ಡಿ. 9ರ ಬಳಿಕ ಸಿಹಿ ಸುದ್ದಿ ಅಂತಾ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಅವರ ಪಕ್ಷದ ಕಾರ್ಯಕರ್ತರ ಪಾಲಿಗೆ ಸಿಹಿ ಸುದ್ದಿಯಾಗಲಿದೆ. ಖರ್ಗೆ ಅನುಭವಿಗಳು, ಹಿರಿಯರು, ಅವರ ಮಾತಿನಲ್ಲಿ ಬಹಳ ಅರ್ಥವಿದೆ. ಅವರದು ಲೂಸ್ ಟಾಕಿಂಗ್ ಅಲ್ಲ, ಅವರ ಮಾತಿಗೆ ಬಹಳ ಮೌಲ್ಯವಿದೆ. ಅವರು ಮಾತುಗಳನ್ನು ಪಕ್ಷದ ಮುಖಂಡರು ಕೇಳುತ್ತಾರೆ. ಏನು ಮಾಡುತ್ತಾರೆ ಎಂದು ನಾವು ಕಾತುರದಿಂದ ಕಾಯುತ್ತಿದ್ದೇವೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಖರ್ಗೆ ಬಗ್ಗೆ ವ್ಯಂಗ್ಯ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಮಾತನಾಡಿದ ಅವರು, ಖರ್ಗೆಯವರ ಮಾತುಗಳನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಅವರು ಯಾವತ್ತೂ ಹಗುರವಾದ ಮಾತು ಹೇಳುವುದಿಲ್ಲ. ಊಹಾಪೋಹ ಹುಟ್ಟು ಹಾಕುವವರು ಅವರಲ್ಲ. ಬಣ್ಣದ ಕಾಗೆಯನ್ನು ಹಾರಿಸುವವರು ಅವರಲ್ಲ. ಖರ್ಗೆಯವರಿಗಿಂತ ದೇವೇಗೌಡರ ಅನುಭವ ದೊಡ್ಡದು. ಇಬ್ಬರೂ ಸೇರಿದರೆ ಏನಾದರೂ ಮಾಡುತ್ತಾರೆ. ಎರಡು ಹಳೇ ಹುಲಿಗಳು ಒಂದೆಡೆ ಸೇರಿದರೆ ಏನಾಗುತ್ತೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಒಟ್ಟಿನಲ್ಲಿ ಏನೋ ಆಗಲಿದೆ ಎಂದರು.

ಕೇಂದ್ರ ಸಂಪುಟ ಸಭೆಯಲ್ಲಿ ಅಂಗೀಕಾರವಾದ ಪೌರತ್ವ ತಿದ್ದುಪಡಿ ಮಸೂದೆ; ಮುಂದಿನ ವಾರ ಸಂಸತ್​ನಲ್ಲಿ ಮಂಡನೆ ಸಾಧ್ಯತೆ?

ಇವತ್ತು ಮನೆ ಮನೆಗೆ ಭೇಟಿ ಮಾಡಿ ಪ್ರಚಾರ ಮಾಡಲಿದ್ದೇವೆ. ಬಹಳ ದೊಡ್ಡ ಅಂತರದಿಂದ ನಾವು ಗೆದ್ದು ಬರುತ್ತೇವೆ. ಲೋಕಸಭೆ ಚುನಾವಣೆಯಲ್ಲಿ ಪಡೆದ ಅಂತರವನ್ನು ದಾಟಿ ಹೋಗುವ ನಿರೀಕ್ಷೆ ಇದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಗೆಲುವಿನ ಹತ್ತಿರಕ್ಕೆ ಬಂದಿದ್ದೇವೆ. ವಿರೋಧ ಪಕ್ಷಗಳ ಕಸನು ಭಗ್ನವಾಗುತ್ತೆ, ನಿರಾಶೆಯಾಗುತ್ತೆ

ಮನುಷ್ಯ ಆಸೆ ಪಡುವುದು ತಪ್ಪಿಲ್ಲ. ಸಿದ್ದರಾಮಯ್ಯ ಇನ್ನೊಮ್ಮೆ ಸಿಎಂ ಆಗುತ್ತೇನೆ ಅಂತಾರೆ. ನನಗೆ ಅವಕಾಶ ಸಿಕ್ಕರೆ ಪ್ರಧಾನಿಯಾಗಬೇಕು ಅಂತಾ ಆಸೆ ಇದೆ. ಆದರೆ ಆಗದೇ ಇರುವುದನ್ನು ಹೇಳೋದು ಸರಿಯಲ್ಲ ಅಲ್ಲವೇ? ಎಂದು ಲೇವಡಿ ಮಾಡಿದರು.

ಚುನಾವಣೆ ಆದ ಒಂದು ವಾರದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ. ಒಂದು ಒಳ್ಳೆಯ ದಿನ ನೋಡಿ ಪಕ್ಷದ ಮುಖಂಡರನ್ನು ಕೇಳಿ ವಿಸ್ತರಣೆ ಆಗುತ್ತದೆ. ಉಮೇಶ ಕತ್ತಿಯವರಿಗೂ ಮಂತ್ರಿ ಸ್ಥಾನ ಸಿಗಬಹುದು. ಬೆಳಗಾವಿ ಜಿಲ್ಲೆ ಬಗ್ಗೆ ಚರ್ಚೆ ಮಾಡಿದರೆ ನಾನು ಕತ್ತಿಯವರ ಹೆಸರನ್ನು ಹೇಳುವೆ. ಯತ್ನಾಳರಿಗೂ ಮಂತ್ರಿಯಾಗಬೇಕು ಅಂತಿದೆ. ಅವರಿಗೂ ಸಚಿವ ಸ್ಥಾನ ಕೊಟ್ಟರೆ ತಪ್ಪಿಲ್ಲ. ವಿಜಯಪುರ ಜಿಲ್ಲೆಗೆ ಪ್ರಾತಿನಿಧ್ಯ ಇಲ್ಲದೇ ಇರುವುದರಿಂದ ಅವರಿಗೆ ಕೊಡಬೇಕಿದೆ. ಅದನ್ನು ಸಿಎಂ ನಿರ್ಣಯಿಸಲಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.

ಕರ್ನಾಟಕ ಉಪ ಚುನಾವಣೆ; ಜಿದ್ದಾಜಿದ್ದಿ ಹೋರಾಟಕ್ಕೆ ಸಿದ್ದವಾದ ಹೊಸಕೋಟೆ; ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್​ ಸರ್ಪಗಾವಲು
First published: December 4, 2019, 2:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading