ಅನ್ಯಾಯ ಆಗಿದೆ ಅಂತ ಪ್ರತ್ಯೇಕ ರಾಜ್ಯದ ಕೂಗು ಸರಿಯಲ್ಲ; ಡಿಸಿಎಂ ಲಕ್ಷ್ಮಣ ಸವದಿ

ಹೆಸರು ಬದಲಾಯಿಸಿದರೆ ಕಲ್ಯಾಣ ಮಾಡಬಹುದೆಂಬ ಸದಿಚ್ಚೆಯಿಂದ ಮಾಡಿದ್ದೇವೆ. ಕಲ್ಯಾಣ ಕರ್ನಾಟಕ ಶ್ರೀಮಂತ ಆಗಲಿ ಅಂತಾ ನಮ್ಮ ಬಯಕೆ. ಒಂದಲ್ಲ ಒಂದು ದಿನ ಈ ಭಾಗದ ಕಲ್ಯಾಣ ಆಗಿಯೇ ಆಗುತ್ತದೆ. ಆಶಾವಾದ ಇರಬೇಕು ನಿರಾಶಾವಾದ ಬೇಡ ಎಂದರು.

ಸಾರಿಗೆ ಸಚಿವ ಲಕ್ಷ್ಮಣ ಸವದಿ

ಸಾರಿಗೆ ಸಚಿವ ಲಕ್ಷ್ಮಣ ಸವದಿ

  • Share this:
ಕಲಬುರ್ಗಿ(ಫೆ.18): ಕಲ್ಯಾಣ ಕರ್ನಾಟಕ ಭಾಗದ ಒಂದೊಂದೇ ಯೋಜನೆಗಳು ಬೇರೆ ಭಾಗದ ಪಾಲಾಗಲಾರಂಭಿಸಿವೆ. ನಿಮ್ಜ್ ಸ್ಥಾಪನೆ ಉದ್ದೇಶ ಕೈ ಬಿಡಲಾಗಿದೆ. ವಿಶೇಷ ಆರ್ಥಿಕ ವಲಯ ಸ್ಥಾಪನೆಯೂ ನೆನೆಗುದಿಗೆ ಬಿದ್ದಿದೆ. ಕಲಬುರ್ಗಿ ರೈಲ್ವೆ ವಿಭಾಗೀಯ ಕೇಂದ್ರ ಸ್ಥಾಪನೆಗೂ ಗ್ರಹಣ ಕವಿಯುವಂತಾಗಿದೆ. ಕಲಬುರ್ಗಿಯ ಇ.ಎಸ್.ಐ. ಆಸ್ಪತ್ರೆಯಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಏಮ್ಸ್ ಸಹ ಹುಬ್ಬಳ್ಳಿ ಪಾಲಾಗಿದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಕಲ್ಯಾಣ ಕರ್ನಾಟಕದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಪ್ರತ್ಯೇಕ ರಾಜ್ಯದ ಕೂಗೂ ಏಳಲಾರಂಭಿಸಿದೆ. ಈ ಭಾಗಕ್ಕೆ ಅನ್ಯಾಯ ಆಗಿದೆ ಅಂದ ಕೂಡಲೇ ಪ್ರತ್ಯೇಕ ರಾಜ್ಯ ಬೇಕೆಂದು ಕೂಗೆತ್ತುವುದು ಸರಿಯಲ್ಲ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅಭಿಪ್ರಾಯಪಟ್ಟಿದ್ದಾರೆ.

ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಏಮ್ಸ್ ಸೇರಿದಂತೆ ವಿವಿಧ ಯೋಜನೆಗಳ ಕಲಬುರ್ಗಿ ಕೈ ತಪ್ಪಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಕೆಲವೊಂದು ಯೋಜನೆಗಳು ಕೈ ತಪ್ಪಿದಾಗ ಅಸಮಾಧಾನ ಆಗೋದು ಸಹಜ. ಹಾಗೆಂದು ಪ್ರತ್ಯೇಕ ರಾಜ್ಯದ ಕೂಗೆತ್ತುವುದು ಸರಿಯಲ್ಲ ಎಂದಿದ್ದಾರೆ. ಐಐಟಿ ಬಂದಾಗ ಮುಂಬೈ ಕರ್ನಾಟಕದ ಧಾರವಾಡಕ್ಕೆ ಕೊಟ್ಟಿದ್ದೇವೆ. ಐಐಐಟಿ ಬಂದಾಗ ಕಲ್ಯಾಣ ಕರ್ನಾಟಕದ ರಾಯಚೂರಿಗೆ ಕೊಟ್ಟಿದ್ದೇವೆ. ಹೀಗೆ ಹೊಸ ಯೋಜನೆಗಳು ಬಂದಾಗ ಆ ಭಾಗಕ್ಕೆ ಒಂದು, ಈ ಭಾಗಕ್ಕೆ ಒಂದು ಕೊಡ್ತಿದ್ದೇವೆ. ಏಮ್ಸ್ ಗೆ ಎಲ್ಲರ ಬೇಡಿಕೆ ಇರುತ್ತೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಏನು ನಿರ್ಣಯ ತೆಗೆದುಕೊಳ್ಳುತ್ತೆ ಎಂದರು.

Health Tips: ದಢೂತಿ ಹೊಟ್ಟೆಯನ್ನು ಕರಗಿಸಬೇಕೆ?; ಹಾಗಿದ್ರೆ ಈ 5 ಆಹಾರಗಳನ್ನು ಸೇವಿಸಿ..!

ಅಭಿವೃದ್ಧಿ ಬಗ್ಗೆ ತಾರಾತಮ್ಯ ಆದಾಗ ಬಗ್ಗೆ ಕೇಳಬೇಕು. ಅದನ್ನೇ ನೆಪ ಮಾಡಿಕೊಂಡು ಪ್ರತ್ಯೇಕ ರಾಜ್ಯ ಕೇಳೋದು ಸರಿಯಲ್ಲ.  ನಮ್ಮ ಪೂರ್ವಜರು ಅಖಂಡ ಕರ್ನಾಟಕ್ಕೆ ಕಟ್ಟಲು ಸಾಕಷ್ಟು ಪರಿಶ್ರಮ ವಹಿಸಿದ್ದಾರೆ. ಅವರ ತ್ಯಾಗ - ಬಲಿದಾನಗಳಿಂದ ನಮ್ಮ ಕರ್ನಾಟಕ ರೂಪುಗೊಂಡಿದೆ. ಎಲ್ಲ ಪ್ರದೇಶಗಳನ್ನು ಬ್ಯಾಲೆನ್ಸ್ ಮಾಡಲೆಂದು ಕೇಂದ್ರ ಸರ್ಕಾರ ಏಮ್ಸ್ ನ್ನು ಹುಬ್ಬಳ್ಳಿಗೆ ಕೊಟ್ಟಿರಬಹುದು. ಈ ಭಾಗಕ್ಕೆ ಆಗಿರುವ ಅನ್ಯಾಯಗಳನ್ನು ಸರಿಪಡಿಸುವ ಪ್ರಯತ್ನ ಮಾಡ್ತೇವೆ ಎಂದು ಹೇಳಿದರು.

ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಅಂತಾ ನಾಮಕರಣ ಮಾಡಿರೋದು ಈ ಭಾಗದ ಕಲ್ಯಾಣ ಆಗಲಿ ಅಂತಾ. ಹೆಸರು ಬದಲಾಯಿಸಿದರೆ ಕಲ್ಯಾಣ ಮಾಡಬಹುದೆಂಬ ಸದಿಚ್ಚೆಯಿಂದ ಮಾಡಿದ್ದೇವೆ. ಕಲ್ಯಾಣ ಕರ್ನಾಟಕ ಶ್ರೀಮಂತ ಆಗಲಿ ಅಂತಾ ನಮ್ಮ ಬಯಕೆ. ಒಂದಲ್ಲ ಒಂದು ದಿನ ಈ ಭಾಗದ ಕಲ್ಯಾಣ ಆಗಿಯೇ ಆಗುತ್ತದೆ. ಆಶಾವಾದ ಇರಬೇಕು ನಿರಾಶಾವಾದ ಬೇಡ ಎಂದರು.

ಉತ್ತರ ಕರ್ನಾಟಕಕ್ಕೆ ಬರಬೇಕಾದ್ದನ್ನು ತರಲು ಪ್ರಯತ್ನ ಮಾಡೋಣ. ಕೊರೋನಾ, ಅತಿವೃಷ್ಟಿ ಇತ್ಯಾದಿಗಳ ಕಾರಣದಿಂದಾಗಿ ರಾಜ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ. ಹೀಗಾಗಿ ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಬಹುದು. ಕಷ್ಟದ ದಿನಗಳ ಹೋಗಿ ಒಳ್ಳೆಯ ದಿನಗಳು ಬರಲಿವೆ. ಆಗ ಎಲ್ಲರ ಅಸಮಾಧಾನವೂ ಸರಿಹೋಗಬಹುದು ಎಂದು ಲಕ್ಷ್ಮಣ ಸವದಿ ಅಭಿಪ್ರಾಯಪಟ್ಟರು.
Published by:Latha CG
First published: