ವಿನಯ್​ ಗುರೂಜಿ ಭೇಟಿ ಬಳಿಕ ವೆಂಟಿಲೇಟರ್​ನಲ್ಲಿದ್ದ ಮಗ ಚೇತರಿಕೆ; ಡಿಸಿಎಂ ಗೋವಿಂದ ಕಾರಜೋಳ

ವಿನಯ್ ಗುರೂಜಿ ಬೆಂಗಳೂರಿಗೆ ಬಂದು ನಿಮ್ಮ ಮಗನಿಗೆ ಏನೂ ಆಗಲ್ಲ. ದೇವರು ಒಳ್ಳೆಯದು ಮಾಡುತ್ತಾನೆ ಎಂದು ಆರ್ಶೀವಾದ ಮಾಡಿ ಹೋಗಿದ್ದರು. ಈಗ ನನ್ನ ಮಗ  ಚೆನ್ನಾಗಿದ್ದಾನೆ

ಡಿಸಿಎಂ ಗೋವಿಂದ ಕಾರಜೋಳ

ಡಿಸಿಎಂ ಗೋವಿಂದ ಕಾರಜೋಳ

  • Share this:
ಚಿಕ್ಕಮಗಳೂರು (ಫೆ. 27): ನಾನು ಸಾಮಾನ್ಯವಾಗಿ ವಿವಾದಗಳ ಜೊತೆ ಇರಲ್ಲ. ಆದ್ರೂ ನೀವು ಕೇಳ್ತಿದ್ದೀರಾ ಎಂದು ಹೇಳ್ತೀನಿ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ ಹಾಸ್ಯಾಸ್ಪದ. ಪ್ರಧಾನಿ ಮೋದಿ ನೇತೃತ್ವದಲ್ಲಿ ಇಡೀ ದೇಶವೇ ಭಾರತೀಯ ಜನತಾ ಪಕ್ಷ ಆಗಿದೆ. 23 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಹಾಗಾದ್ರೆ, ಕುಮಾರಸ್ವಾಮಿಯವರ ಆಶೀರ್ವಾದದಿಂದಲೇ ಬಂದಿದೆಯಾ ಎಂದು ಎಂದು ಮಾಜಿ ಸಿಎಂ ಹೆಚ್ಡಿಕೆ ವಿರುದ್ಧ ವ್ಯಂಗ್ಯವಾಡಿದರು. ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆ ಅವದೂತ ವಿನಯ್ ಗುರೂಜಿಯವರ ಆರ್ಶೀವಾದ ಪಡೆಯಲು ಆಗಮಿಸಿದ ವೇಳೆ ಮಾತನಾಡಿದ ಅವರು, ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಬಿಜೆಪಿ ಸದೃಢವಾಗಿದೆ. 2009ರಲ್ಲೇ ಮೋದಿ ಭಾರತ ಕಾಂಗ್ರೆಸ್ ಮುಕ್ತ ಭಾರತವಾಗುತ್ತದೆ ಎಂದಿದ್ದರು. ಇವತ್ತು ಕಾಂಗ್ರೆಸ್ ಮುಕ್ತ ಭಾರತವಾಗಿದ್ದು,  ಪಂಜಾಬ್ ಅಲ್ಲಿ-ಇಲ್ಲಿ ಒಂದೆರಡು ಬಿಟ್ಟರೇ ಎಲ್ಲಿದೆ ಕಾಂಗ್ರೆಸ್ ಎಂದರು.

ಇನ್ನು ಕಾಂಗ್ರೆಸ್ ಪಕ್ಷ ಒಡೆದ ಮನೆಯಾಗಿದ್ದು ಸಿದ್ದರಾಮಯ್ಯನವರದ್ದು ಒಂದು ಗುಂಪು, ಡಿ.ಕೆ.ಶಿವಕುಮಾರ್ ಒಂದು ಗುಂಪು ಹಾಗೂ ಮಲ್ಲಿಕಾರ್ಜುನ ಖರ್ಗೆಯವರದ್ದು ಒಂದು ಗುಂಪು . ಈ ಮೂರು ಗುಂಪುಗಳ ಮಧ್ಯೆ ದಿನದ 24 ಗಂಟೆಯೂ ಒಳಗೆ ಗುದ್ದಾಟ ನಡೆಯುತ್ತಿರುತ್ತೆ. ಆ ಗುದ್ದಾಟ ಹೊಸದಲ್ಲ, ಅದರಲ್ಲೇ ಕಾಂಗ್ರೆಸ್ ನೆಲಕಚ್ಚಿದೆ ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದರು.

ಇದೇ ವೇಳೆ, ವಿನಯ್​ ಗುರೂಜಿ ಭೇಟಿ ಕಾರಣ ಬಿಚ್ಚಿಟ್ಟ ಅವರು, ನಾನು ಅವದೂತ ವಿನಯ್ ಗುರೂಜಿ ಅವರನ್ನ ಭೇಟಿಯಾಗಿ ಆಶೀರ್ವಾದ ಪಡೆಯಲು ಬಂದಿದ್ದೇನೆ. ನನ್ನ ಮಗ ಎರಡೂವರೆ ತಿಂಗಳು ವೆಂಟಿಲೇಟರ್​ನಲ್ಲಿದ್ದ. ಆಗ ವಿನಯ್ ಗುರೂಜಿ ಬೆಂಗಳೂರಿಗೆ ಬಂದು ನಿಮ್ಮ ಮಗನಿಗೆ ಏನೂ ಆಗಲ್ಲ. ದೇವರು ಒಳ್ಳೆಯದು ಮಾಡುತ್ತಾನೆ ಎಂದು ಆರ್ಶೀವಾದ ಮಾಡಿ ಹೋಗಿದ್ದರು. ಈಗ ನನ್ನ ಮಗ  ಚೆನ್ನಾಗಿದ್ದಾನೆ. ಹಾಗಾಗಿ ಅವರ ದರ್ಶನಕ್ಕೆ ಚಿಕ್ಕಮಗಳೂರಿಗೆ ಬಂದಿದ್ದೇನೆ.  ಅವರ ಆರ್ಶೀವಾದ ಪಡೆಯುತ್ತೇನೆ ಎಂದರು. ಜೊತೆಗೆ, ಅವರೊಂದು ರಸ್ತೆ ಹೇಳಿದ್ದರು. ಈಗ ಅದೂ ಮುಗಿದಿದೆ. ಹಾಗಾಗಿ, ಪೂಜೆಗೆ ಕರೆಯಲು ಬಂದಿದ್ದೇನೆ ಎಂದರು.
Published by:Seema R
First published: