ಇಲಾಖೆಗಳ ವಿಭಜನಾ ಪ್ರಕ್ರಿಯೆ ಕೂಡಲೇ ಕೈಗೆತ್ತಿಕೊಳ್ಳಿ; ಅಧಿಕಾರಿಗಳಿಗೆ ಡಿಸಿಎಂ ಗೋವಿಂದ ಕಾರಜೋಳ‌‌ ಸೂಚನೆ

ಹಾಗೆಯೇ ನೀರಾವರಿ ಸಚಿವರು ಹಾಗೂ ಗ್ರಾಮೀಣಾವೃದ್ಧಿ ಸಚಿವರು ಇಲಾಖೆಗಳನ್ನು ವಿಭಜನೆ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿ, ಸಹಕರಿಸಿದ ಆಯಾ ಇಲಾಖೆಯ ಸಚಿವರಿಗೆ ಡಿಸಿಎಂ ಕಾರಜೋಳ ಅವರು ಧನ್ಯವಾದ  ತಿಳಿಸಿದರು.

ಇಲಾಖೆಗಳನ್ನು ವಿಭಜಿಸುವ ಕುರಿತು ಡಿಸಿಎಂ ಗೋವಿಂದ ಕಾರಜೋಳ ಅವರು ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಇಲಾಖೆಗಳನ್ನು ವಿಭಜಿಸುವ ಕುರಿತು ಡಿಸಿಎಂ ಗೋವಿಂದ ಕಾರಜೋಳ ಅವರು ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

  • Share this:
ಬೆಂಗಳೂರು: ಲೋಕೋಪಯೋಗಿ ಇಲಾಖೆ, ನೀರಾವರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯನ್ನು ಶೀಘ್ರವಾಗಿ ವಿಭಜಿಸುವಂತೆ  ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ಸೂಚಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಇಲಾಖೆಗಳನ್ನು ವಿಭಜಿಸುವ  ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಇಲಾಖೆಗಳನ್ನು ವಿಭಜಿಸಲು ಕಳೆದ ಹಲವಾರು ವರ್ಷಗಳಿಂದ ಪ್ರಯತ್ನಿಸಲಾಗುತ್ತಿದೆ. ಇಂಜಿನಿಯರ್​ಗಳು ಹಾಗೂ ಇಂಜಿನಿಯರಿಂಗ್ ಸಂಘದ ಪದಾಧಿಕಾರಿಗಳ ಅಭಿಪ್ರಾಯವನ್ನು ಪಡೆಯಲಾಗಿದೆ. ಈ ಮೂರು ಇಲಾಖೆಗಳಿಂದ ಮಾಹಿತಿ ಕ್ರೂಡೀಕರಿಸಲಾಗಿದೆ. ಸಾಧಕ- ಬಾದಕಗಳ ಕುರಿತು ಚರ್ಚಿಸಲಾಗಿದೆ. ವಿಭಜಿಸುವ ನಿರ್ಣಯ ಕೈಗೊಳ್ಳಲಾಗಿದೆ. ಇದು ಉತ್ತಮ ನಿರ್ಧಾರವಾಗಿದೆ. ಶೀಘ್ರವಾಗಿ ವಿಭಜನೆಯ ಪ್ರಕ್ರಿಯೆಯನ್ನು ಕೂಡಲೇ ಪ್ರಾರಂಭಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು. ಹಾಗೆಯೇ ನೀರಾವರಿ ಸಚಿವರು ಹಾಗೂ ಗ್ರಾಮೀಣಾವೃದ್ಧಿ ಸಚಿವರು ಇಲಾಖೆಗಳನ್ನು ವಿಭಜನೆ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿ, ಸಹಕರಿಸಿದ ಆಯಾ ಇಲಾಖೆಯ ಸಚಿವರಿಗೆ ಡಿಸಿಎಂ ಕಾರಜೋಳ ಅವರು ಧನ್ಯವಾದ  ತಿಳಿಸಿದರು.

ಇದನ್ನು ಓದಿ: ಹೊರ ರಾಜ್ಯಗಳ ಪ್ರಯಾಣಿಕರಿಗೆ 14 ದಿನ ಕ್ವಾರಂಟೈನ್; ಮತ್ತೆ ನಿಯಮ ಬದಲಿಸಿದ ಕರ್ನಾಟಕ ಸರ್ಕಾರ

ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಕೆ.ಎಸ್. ಈಶ್ವರಪ್ಪ, ಬೃಹತ್ ನೀರಾವರಿ ಸಚಿವರಾದ ರಮೇಶ್ ಜಾರಕಿಹೊಳಿ, ಲೋಕೋಪಯೋಗಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಕಾರ್ಯದರ್ಶಿ ಬಿ. ಗುರುಪ್ರಸಾದ್, ನೀರಾವರಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರಾಕೇಶ್ ಸಿಂಗ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್, ಡಿಸಿಎಂ ಅವರ ಆಪ್ತ ಕಾರ್ಯದರ್ಶಿ ವಿ. ಶ್ರೀನಿವಾಸ್, ವಿವಿಧ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
First published: