ಮಂಗಳೂರು ಹಿಂಸಾಚಾರ ವಿಡಿಯೋ ಬಗ್ಗೆ ಡಿಕೆಶಿ ಅನುಮಾನ; ಡಿಸಿಎಂ ಗೋವಿಂದ ಕಾರಜೋಳ ಪ್ರತಿಕ್ರಿಯೆ ಏನು ಗೊತ್ತಾ?

ವಿಡಿಯೋಗಳಲ್ಲಿ ನೋಡಿದಂತೆ ಮಂಗಳೂರಿನ ಈ ಹಿಂಸಾಚಾರ ಘಟನೆ ಪೂರ್ವ ನಿಯೋಜಿತವಾಗಿದೆ. ಈ ಘಟನೆಯ ಸತ್ಯಾಂಶ ಬಹಿರಂಗವಾಗಬೇಕಿದೆ. ತನಿಖೆ ಬಳಿಕ ಸತ್ಯಾಸತ್ಯತೆ ಹೊರ ಬರಲಿದೆ ಎಂದು ಡಿಸಿಎಂ ಹೇಳಿದ್ಧಾರೆ.

news18
Updated:December 25, 2019, 9:16 PM IST
ಮಂಗಳೂರು ಹಿಂಸಾಚಾರ ವಿಡಿಯೋ ಬಗ್ಗೆ ಡಿಕೆಶಿ ಅನುಮಾನ; ಡಿಸಿಎಂ ಗೋವಿಂದ ಕಾರಜೋಳ ಪ್ರತಿಕ್ರಿಯೆ ಏನು ಗೊತ್ತಾ?
ಗೋವಿಂದ ಕಾರಜೋಳ
  • News18
  • Last Updated: December 25, 2019, 9:16 PM IST
  • Share this:
ವಿಜಯಪುರ(ಡಿ. 25): ಮಂಗಳೂರು ಗೋಲಿಬಾರ್​ನಲ್ಲಿ ಸಾವಿಗೀಡಾದವರಿಗೆ ಈ ಹಿಂದೆ ಪರಿಹಾರ ನೀಡಲು ನಿರ್ಧರಿಸಲಾಗಿತ್ತು. ಆದರೆ, ಈಗ ಆ ಘಟನೆಯ ವಿಡಿಯೋಗಳ ಬಿಡುಗಡೆ ಬಳಿಕ ಸತ್ಯ ಬೇರೆ ಇದೆ ಎನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪರಿಹಾರ ನೀಡುವುದನ್ನು ತಡೆ ಹಿಡಿಯಲಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆಯ ಅಲಿಯಾಬಾದ್ ವಿಮಾನ ನಿಲ್ದಾಣ ಸ್ಥಳ ಪರಿಶೀಲನೆ ಬಳಿಕ ಮಾತನಾಡಿದ ಅವರು, ವಿಡಿಯೋಗಳಲ್ಲಿ ನೋಡಿದಂತೆ ಈ ಘಟನೆ ಪೂರ್ವ ನಿಯೋಜಿತವಾಗಿದೆ. ಈ ಘಟನೆಯ ಸತ್ಯಾಂಶ ಬಹಿರಂಗವಾಗಬೇಕಿದೆ. ತನಿಖೆ ಬಳಿಕ ಸತ್ಯಾಸತ್ಯತೆ ಹೊರ ಬರಲಿದೆ ಎಂದು ಹೇಳಿದರು.

ಇದನ್ನೂ ಓದಿ: ಬಿಎಸ್​ವೈ ನಿಜವಾದ ಹೋರಾಟಗಾರರಾಗಿದ್ದರೆ ಪರಿಹಾರ ನೀಡಲಿ, ಇಲ್ಲವೇ ತಮ್ಮದು ಕೊಲೆಗಡುಕ ಸರ್ಕಾರ ಎಂದು ಒಪ್ಪಲಿ; ಎಚ್​ಡಿಕೆ

ಪೊಲೀಸರು ಬಿಡುಗಡೆ ಮಾಡಿರುವ ವಿಡಿಯೋದ ಬಗ್ಗೆ ಡಿಕೆಶಿ ಅನುಮಾನ ವ್ಯಕ್ತಪಡಿಸಿದ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಡಿ.ಕೆ. ಶಿವಕುಮಾರ್ ಇಂತಹ ವಿಚಾರದಲ್ಲಿ ಪರಿಣಿತರು. ಡಿಕೆಶಿ ಅನುಮಾನದ ಬಗ್ಗೆ ನಾನು ಹೆಚ್ಚಿಗೆ ಮಾತನಾಡುವುದಿಲ್ಲ. ಘಟನೆಯ ಬಗ್ಗೆ ಯಾರೂ ರಾಜಕೀಯ ಮಾಡಬಾರದು ಎಂದು ಅವರು ಕೋರಿಕೊಂಡರು.

ವಿಜಯಪುರ ಜಿಲ್ಲೆಯ ಬುರಣಾಪುರ ವಿಮಾನ ನಿಲ್ದಾಣ ಕಾಮಗಾರಿ ವಿಳಂಬ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, 2008 ರಲ್ಲಿ ಅಂದಿನ ಬಿಜೆಪಿ ಸರಕಾರ ವಿಜಯಪುರ ವಿಮಾನ ನಿಲ್ದಾಣಕ್ಕೆ ಅಡಿಗಲ್ಲು ಹಾಕಿತ್ತು. ಖಾಸಗಿ ಹಾಗೂ ಸರಕಾರಕ್ಕೆ ಸೇರಿದ 727 ಎಕರೆ ಭೂಮಿಯನ್ನು ನೀಡಲಾಗಿತ್ತು. ಇದೀಗ ಮತ್ತೆ ನಮ್ಮ ಸರಕಾರ ಬಂದಿದೆ. ವಿಮಾನ ನಿಲ್ದಾಣದ ಕಾಮಗಾರಿಗೆ ಸರಕಾರ ಕ್ರಮ ಕೈಗೊಂಡಿದೆ. ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ನಡೆಸುತ್ತಿದ್ದೇವೆ. ಶಿವಮೊಗ್ಗ ಹಾಗೂ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಇದೀಗ ನಡೆಯಲಿದೆ. ಇದರಿಂದ ಮುಂದಿನ ವರ್ಷಗಳಲ್ಲಿ ವಿಜಯಪುರ ಜಿಲ್ಲೆ ಹೆಚ್ಚಿನ ಅಭಿವೃದ್ಧಿ ಹೊಂದಲಿದೆ ಎಂದು ಅವರು ಆಶಿಸಿದರು.

ಇದನ್ನೂ ಓದಿ: ರಾಜ್ಯದಲ್ಲಿ ಮೊದಲ ಡಿಟೆನ್ಷನ್ ಸೆಂಟರ್ ಪ್ರಾರಂಭ; ಎನ್ಆರ್​ಸಿಗಾಗಿ ಅಲ್ಲ, ಅದು ಅಕ್ರಮ ಆಫ್ರಿಕನ್ನಿರಿಸುವ ಕೇಂದ್ರವಾ?

ಮುಳುವಾಡ ಬಳಿ ವಿಮಾನ ನಿಲ್ದಾಣ ಸ್ಥಳಾಂತರ ಮಾಡುವಂತೆ ಕೋರಿ ಪತ್ರ ಬರೆದ ಬಗ್ಗೆ ಮಾತನಾಡಿದ ಅವರು, ನಾನು ಯಾವುದೇ ಉದ್ದೇಶ ಇಟ್ಟುಕೊಂಡು ವಿಮಾನ ನಿಲ್ದಾಣದ ಸ್ಥಳಾಂತರಕ್ಕೆ ಪತ್ರ ಬರೆದಿರಲಿಲ್ಲ. ಯಾರೋ ರಾಜಕಾರಣಿಯೊಬ್ಬರು ಇದನ್ನು ವಿವಾದ ಮಾಡಲು ಪ್ರಯತ್ನಿಸಿದ್ದಾರೆ.  ಕಾರಜೋಳ ಅವರು ಭೂಮಿ ಬೆಲೆ ಹೆಚ್ಚಿಸಬೇಕು ಎಂಬ ಕಾರಣದಿಂದ ವಿಮಾನ ನಿಲ್ದಾಣ ಸ್ಥಳಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ಅದೆಲ್ಲ ಸುಳ್ಳು. ನನ್ನ ಊರು ಕಾರಜೋಳ. ನಮ್ಮ ಭೂಮಿ ಕಾರಜೋಳದಲ್ಲಿದೆ. ಮುಳವಾಡ ಬಳಿ ನಮ್ಮ ಜಮೀನು ಇಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.ಕೇರಳದಲ್ಲಿ ಸಿಎಂ ಬಿಎಸ್​ವೈಗೆ ಸಿಪಿಐ ಕಾರ್ಯಕರ್ತರು ಘೇರಾವ್ ಹಾಕಿದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮತ್ತೊಂದು ರಾಜ್ಯದ ಮುಖ್ಯಮಂತ್ರಿಗೆ ರಕ್ಷಣೆ ನೀಡಲಾರದ ಅಸಹಾಯಕ ಸ್ಥಿತಿಯಲ್ಲಿ ಕೇರಳ ಸಿಎಂ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

Published by: Vijayasarthy SN
First published: December 25, 2019, 9:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading