• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ʼಎಸ್‌ಸಿಪಿ, ಟಿಎಸ್‌ಪಿ ಸ್ಕೀಮ್‌ ಹಣ ರಸ್ತೆ ಕಾಮಗಾರಿಗೆ ಬಳಸಬೇಡಿʼ - ಅಧಿಕಾರಿಗಳಿಗೆ ಡಿಸಿಎಂ ಗೋವಿಂದ ಕಾರಜೋಳ ಸೂಚನೆ

ʼಎಸ್‌ಸಿಪಿ, ಟಿಎಸ್‌ಪಿ ಸ್ಕೀಮ್‌ ಹಣ ರಸ್ತೆ ಕಾಮಗಾರಿಗೆ ಬಳಸಬೇಡಿʼ - ಅಧಿಕಾರಿಗಳಿಗೆ ಡಿಸಿಎಂ ಗೋವಿಂದ ಕಾರಜೋಳ ಸೂಚನೆ

ಡಿಸಿಎಂ ಗೋವಿಂದ ಕಾರಜೋಳ

ಡಿಸಿಎಂ ಗೋವಿಂದ ಕಾರಜೋಳ

2019ರ ಆಗಸ್ಟ್ ಪ್ರವಾಹ ಪರಿಹಾರದ 1828 ಕಾಮಗಾರಿಗಳನ್ನು 500 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಎಸ್‍ಹೆಚ್‍ಡಿಪಿ-ಫೇಸ್-4, ಹಂತ -1ರಲ್ಲಿ ರೂ. 4500 ಕೋಟಿ ವೆಚ್ಚದಲ್ಲಿ ಕಾಮಗಾರಿಗಳಿಗೆ ಅನುಷ್ಠಾನ ನೀಡಲಾಗಿದೆ ಎಂದರು ಡಿಸಿಎಂ ಗೋವಿಂದ ಕಾರಜೋಳ.

  • Share this:

ದಾವಣಗೆರೆ(ಸೆ.13): ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆ ಹಣವನ್ನು ಸಂಬಂಧಪಟ್ಟವರ ಅಭಿವೃದ್ಧಿಗೆ ಮಾತ್ರ ವಿನಿಯೋಗಿಸಬೇಕೆ ಹೊರತು ರಸ್ತೆ ಕಾಮಗಾರಿಗೆ ಬಳಸಬಾರದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಮತ್ತು ಡಿಸಿಎಂ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದ್ಧಾರೆ. ಈ ಸಂಬಂಧ ಜಿಲ್ಲಾಡಳಿತ ಭವನದಲ್ಲಿ ಸುದ್ದಿಗಾರರ ಜತೆ ಮಾತಾಡಿದ ಗೋವಿಂದ ಕಾರಜೋಳ, ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯ ಹಣವನ್ನು ಸರಿಯಾಗಿ ಬಳಸಿಕೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು. ಹಾಗೆಯೇ ರಾಜ್ಯದಲ್ಲಿ ಒಟ್ಟು 7652 ಕಿ.ಮೀ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳು ನಿರ್ಮಾಣಕ್ಕೆ ಮುಂದಾಗಿದ್ದೇವೆ. 2019-20ನೇ ಸಾಲಿನಲ್ಲಿ 390 ಕಿ.ಮೀ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳು ಅಭಿವೃದ್ಧಿಯಾಗಿದ್ದು, 143 ಸೇತುವೆಗಳ ನಿರ್ಮಾಣ ಮಾಡಿದ್ದೇವೆ ಎಂದರು.


ಹರಿಜನ ಮತ್ತು ಗಿರಿಜನ ಕಲ್ಯಾಣ ಯೋಜನೆಯಡಿ 1958 ಕಿ.ಮಿ ಗುಣಮಟ್ಟದ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಎಸ್‍ಡಿಪಿ ಯೋಜನೆಯಡಿ 588 ಕಿ.ಮೀ ರಸ್ತೆ ಅಭಿವೃದ್ಧಿ ಮತ್ತು ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ದಿ ಯೋಜನೆಯಡಿ 785 ಕಿ.ಮೀ ರಸ್ತೆ ಅಭಿವೃದ್ಧಿಯಾಗಿವೆ. ಕೆಆರ್‌ಡಿಸಿಎಲ್ ವತಿಯಿಂದ ಬೆಂಗಳೂರು ಸುತ್ತಮುತ್ತಲಿನ 155 ಕಿ.ಮೀ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ರಾಜ್ಯಾದ್ಯಂತ 1395 ಕೋಟಿ ರೂ. ವೆಚ್ಚದಲ್ಲಿ 215 ಸೇತುವೆಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ 4762 ಕೋಟಿ ರೂ. ಮೊತ್ತದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಅನುಷ್ಠಾನಕ್ಕೆ ಕ್ರಮ ವಹಿಸಲಾಗಿದೆ. ಸಿಂಗದೂರು ಸೇತುವೆಗೆ 423.15 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಶಂಕುಸ್ಥಾಪನೆ ಮಾಡಲಾಗಿದೆ ಎಂದರು.


ಹೀಗೆ ಮುಂದುವರಿದ ಗೋವಿಂದ ಕಾರಜೋಳ, 220 ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ  ಚಾಲನೆ ನೀಡಲಾಗಿದೆ. ವಿಜಯಪುರದಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ 220 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಕಾಮಗಾರಿ ಪ್ರಗತಿಯಲ್ಲಿದೆ. ನಬಾರ್ಡ್ ಸಹಯೋಗದಲ್ಲಿ ಪ್ರವಾಹ ಪಿಡಿತ ಜಿಲ್ಲೆಗಳಿಗೆ 6143 ಶಾಲ ಕೊಠಡಿಗಳ ಪುನರ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. 17 ಕೋಟಿ ರೂ. ವೆಚ್ಚದಲ್ಲಿ ಬೀದರ್ ವಿಮಾನ ನಿಲ್ದಾಣದ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.


ಹಲವು ವರ್ಷಗಳ ನಂತರ ನಮ್ಮ ಸರ್ಕಾರ ರಸ್ತೆಗಳ ಉನ್ನತೀಕರಣ ಮಾಡಿದೆ. 961 ಕಿ.ಮೀ ರಾಜ್ಯ ಹೆದ್ದಾರಿ ಮತ್ತು 1551 ಕಿ.ಮೀ ಜಿಲ್ಲಾ ಮುಖ್ಯ ರಸ್ತೆಗಳ ಉನ್ನತಿಕರಣಕ್ಕೆ ಸರ್ಕಾರ ಆದೇಶ ಹೊರಡಿಸಿದೆ. ಎಸ್‍ಸಿಪಿ ಯೋಜನೆಯಡಿ ಮಾರ್ಚ್ ಅಂತ್ಯಕ್ಕೆ ಒಟ್ಟು 25.387.20 ಕೋಟಿ ರೂ. ವೆಚ್ಚ ಮಾಡಲಾಗಿದೆ. ಟಿಎಸ್‍ಪಿ ಯೋಜನೆ ಅಡಿಯಲ್ಲಿ 4236.20 ಕೋಟಿ ರೂ. ರಸ್ತೆ ಕಾಮಗಾರಿ ಮಾಡಲಾಗಿದೆ. ಪರಿಶಿಷ್ಟ ಪಂಗಡದ ಗಂಗಾ ಕಲ್ಯಾಣ ಯೋಜನೆಗೆ  ಒಟ್ಟು 8270 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಭೂ ಒಡೆತನ ಯೋಜನೆಗೆ 295.00 ಕೋಟಿ ರೂ. ವೆಚ್ಚದಲ್ಲಿ ಫಲಾನುಭವಿಗಳಿಗೆ 3228.00 ಎಕರೆ ಜಮೀನು ಮಂಜೂರು ಮಾಡಲಾಗಿದೆ ಎಂದರು.


22 ನ್ಯಾಯಾಲಯಗಳು, ನ್ಯಾಯಾಧೀಶರ ವಸತಿ ಗೃಹಗಳು ಹಾಗೂ ಪಿಓಸಿಎಸ್‍ಓ ನ್ಯಾಯಾಲಯಗಳ ಕಟ್ಟಡಗಳ ನಿರ್ಮಾಣ ಮಾಡಲಾಗಿದೆ. ಹರಿಜನ ಮತ್ತು ಗಿರಿಜನ ಕಾಲೋನಿಗಳಲ್ಲಿ ಉತ್ತಮ ಗುಣಮಟ್ಟದ 1958 ಕಿ.ಮೀ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗಿದೆ. ಎಸ್‍ಡಿಪಿ ಯೋಜನೆಯಡಿ 588 ಕಿ.ಮೀ ರಸ್ತೆ ಹಾಗೂ ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ 785 ಕಿ.ಮೀ ರಸ್ತೆಯನ್ನು ಅಭಿವೃದ್ಧಿ ಮಾಡಲಾಗಿದೆ ಎಂದರು.


2019ರ ಆಗಸ್ಟ್ ಪ್ರವಾಹ ಪರಿಹಾರದ 1828 ಕಾಮಗಾರಿಗಳನ್ನು 500 ಕೋಟಿ ರೂ. ವೆಚ್ಚದಲ್ಲಿ  ಕೈಗೊಳ್ಳಲಾಗಿದೆ. ಎಸ್‍ಹೆಚ್‍ಡಿಪಿ-ಫೇಸ್-4, ಹಂತ -1ರಲ್ಲಿ ರೂ. 4500 ಕೋಟಿ ವೆಚ್ಚದಲ್ಲಿ ಕಾಮಗಾರಿಗಳಿಗೆ ಅನುಷ್ಠಾನ ನೀಡಲಾಗಿದೆ ಎಂದರು.


ಇದನ್ನೂ ಓದಿ: Raghuvansh Prasad Death - ಕ್ರಾಂತಿಕಾರಕ ನರೇಗಾ ಯೋಜನೆಯ ರೂವಾರಿ ರಘುವಂಶ್ ಪ್ರಸಾದ್ ವಿಧಿವಶ


ರಾಜ್ಯ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಚಂದ್ರಪ್ಪ, ಶಾಸಕರಾದ ರಾಮಪ್ಪ, ಪ್ರೋ ಲಿಂಗಣ್ಣ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯಿತಿ ಸಿಇಓ ಪದ್ಮಾ ಬಸವಂತಪ್ಪ, ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Published by:Ganesh Nachikethu
First published: