ದೆಹಲಿ ಚುನಾವಣೆಯನ್ನು ನಗರಸಭೆ ಚುನಾವಣೆಗೆ ಹೋಲಿಸಿದ ಡಿಸಿಎಂ ಕಾರಜೋಳ

ಇದೇ ವೇಳೆ, ಬಿಜೆಪಿ ಸರ್ಕಾರವನ್ನು ದರಿದ್ರ ಸರ್ಕಾರ ಎಂದು ಜರಿದಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ  ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ. "ದರಿದ್ರತನ ಆರಂಭವಾಗಿದ್ದೇ ಸಿದ್ದರಾಮಯ್ಯ ಸರ್ಕಾರದಲ್ಲಿ. ಅತೀ ಹೆಚ್ಚು ಸಾಲ ಮಾಡಿದ್ದು ಸಿದ್ದರಾಮಯ್ಯ. ಅವರು ಮಿತಿಯನ್ನು ಮೀರಿ ಹೆಚ್ಚಾಗಿ ಸಾಲ ಮಾಡಿದ್ದರು. ಆಗಲೇ ದರಿತ್ರನ ಶುರುವಾಗಿದ್ದು," ಎಂದು ಕಿಡಿಕಾರಿದರು.

ಡಿಸಿಎಂ ಕೋವಿಂದ ಕಾರಜೋಳ

ಡಿಸಿಎಂ ಕೋವಿಂದ ಕಾರಜೋಳ

 • Share this:
  ಬಾಗಲಕೋಟೆ(ಫೆ.11): ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್​ ಮುನ್ನಡೆ ಸಾಧಿಸಿದ್ದು, ಬಿಜೆಪಿಗೆ ಹಿನ್ನಡೆಯಾಗಿದೆ. ಈ  ಕುರಿತು ಪ್ರತಿಕ್ರಿಯೆ ನೀಡಿರುವ ಡಿಸಿಎಂ ಗೋವಿಂದ ಕಾರಜೋಳ, ದೆಹಲಿ ಚುನಾವಣೆಯನ್ನು ನಗರಸಭೆ ಮತ್ತು ಮಹಾನಗರ ಪಾಲಿಕೆ ಚುನಾವಣೆಗೆ ಹೋಲಿಸಿದ್ದಾರೆ. ಅಷ್ಟೇ ಅಲ್ಲದೇ ದೆಹಲಿ ಆಡಳಿತ ಬಾಗಲಕೋಟೆ ನಗರಸಭೆ ಆಡಳಿತಕ್ಕೆ ಸೀಮಿತ ಎಂದು ಟೀಕಿಸಿದ್ದಾರೆ.

  ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ರಾಷ್ಟ್ರ ರಾಜಕಾರಣಕ್ಕೂ, ದೆಹಲಿ ರಾಜಕಾರಣಕ್ಕೂ ಸಂಬಂಧ ಇಲ್ಲ. ದೆಹಲಿ ಕೇಂದ್ರಾಡಳಿತ ಪ್ರದೇಶಕ್ಕೆ ಮಾತ್ರ ಸೀಮಿತ. ದೇಶದಲ್ಲಿ ದೊಡ್ಡ ದೊಡ್ಡ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿರುವುದು ಕಾಣುವುದಿಲ್ಲವೇ? ದೆಹಲಿ ಆಡಳಿತ ಬಾಗಲಕೋಟೆ ನಗರಸಭೆ ಆಡಳಿತಕ್ಕೆ ಮಾತ್ರ ಸೀಮಿತ. ಇನ್ನು ದೆಹಲಿ ಚುನಾವಣೆ  ನಗರಸಭೆ, ಮಹಾನಗರ ಪಾಲಿಕೆ ಚುನಾವಣೆಯಂತೆ ಎಂದು ಲೇವಡಿ ಮಾಡಿದರು.

  ಆಪ್ ಐದು ವರ್ಷ ಆಡಳಿತ ನಡೆಸಿದೆ. ಮತ್ತೆ ಅಧಿಕಾರಕ್ಕೆ ಬರಬೇಕೆಂದು ಏನೇನೋ ಗಿಮಿಕ್ ಮಾಡಿದ್ದಾರೆ ಎಂದು ಕಾರಜೋಳ ಕಿಡಿಕಾರಿದರು. ಆಪ್ ಪಕ್ಷ ಜನಪ್ರಿಯ ಕಾರ್ಯಕ್ರಮಗಳನ್ನು ಘೋಷಿಸಿದೆ. ಟ್ಯಾಕ್ಸ್ ಫ್ರೀ, ಬಸ್ ಫ್ರೀ, ವಿದ್ಯುತ್, ರೈಲ್ವೆ ಉಚಿತ ಪ್ರಯಾಣ ಸೌಲಭ್ಯ ನೀಡಿದ್ದಾರೆ. ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದರು ಎಂದು ವಾಗ್ದಾಳಿ ನಡೆಸಿದರು.

  Karnataka Local Body Elections: ಬಿಜೆಪಿ 52, ಕಾಂಗ್ರೆಸ್ 47; ಬಿಜೆಪಿ ವಶಕ್ಕೆ ಹೊಸಕೋಟೆ ನಗರಸಭೆ; ಹುಣಸೂರು, ಸಿಂಧಗಿಯಲ್ಲಿ ಕೈ ಮೇಲುಗೈ

  ಮುಂದುವರೆದ ಅವರು, ಮಮತಾ ಬ್ಯಾನರ್ಜಿ ಕೂಡಾ ಜನಪ್ರಿಯ ಯೋಜನೆ ಘೋಷಣೆ ಮಾಡುತ್ತಾರೆ ಅಂತ ಕೇಳಿದೆ. ಚುನಾವಣೆಗೆ ಹೋಗುವ ಸಂದರ್ಭದಲ್ಲಿ ಈ ರೀತಿ ಜನರಿಗೆ  ಮೋಸ ಮಾಡುವುದು ಕೆಲವೆಡೆ ಆಗುತ್ತಿದೆ. ಬಿಜೆಪಿಗೆ ಹಿನ್ನಡೆ ಏನಲ್ಲ. ನಮ್ಮದೇನು ರಾಜ್ಯವಲ್ಲ. ನಾವೇನು ಕಳೆದುಕೊಂಡಿಲ್ಲ. ಈ ಹಿಂದೆಯೂ ಆಪ್ ಆಡಳಿತ ಮಾಡಿದೆ. ಈಗ ಮತ್ತೆ ಆಪ್ ಅಧಿಕಾರಕ್ಕೆ ಬರಬಹುದೆಂದು ಸಮೀಕ್ಷೆ ಇದೆ ಎಂದು ಹೇಳಿದರು.

  ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ರಾಜಕೀಯ ಗಿಮಿಕ್ ಮಾಡಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣ ಮಾಡಿದ್ದಾರೆ. ಕೇಜ್ರಿವಾಲ್ ಬಹಳ ದೊಡ್ಡ ಆಡಳಿತ ಮಾಡಿದರೆ ನಾವು ದೆಹಲಿಯಲ್ಲಿ ಏಳು ಲೋಕಸಭಾ ಕ್ಷೇತ್ರ ಗೆದ್ದಿದ್ಧೇವೆ. ದೇಶದ ಜನತೆ ಬಹಳ ಬುದ್ದಿವಂತರಿದ್ದಾರೆ. ದೇಶಕ್ಕೆ ಸುಭದ್ರ ಸರ್ಕಾರ, ಸುರಕ್ಷಿತಕ್ಕಾಗಿ ಯಾರಿಗೆ ಕೊಡಬೇಕೆಂದು ನಿರ್ಧರಿಸುತ್ತಾರೆ ಎಂದರು.

  ಇದೇ ವೇಳೆ, ಬಿಜೆಪಿ ಸರ್ಕಾರವನ್ನು ದರಿದ್ರ ಸರ್ಕಾರ ಎಂದು ಜರಿದಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ  ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ. "ದರಿದ್ರತನ ಆರಂಭವಾಗಿದ್ದೇ ಸಿದ್ದರಾಮಯ್ಯ ಸರ್ಕಾರದಲ್ಲಿ. ಅತೀ ಹೆಚ್ಚು ಸಾಲ ಮಾಡಿದ್ದು ಸಿದ್ದರಾಮಯ್ಯ. ಅವರು ಮಿತಿಯನ್ನು ಮೀರಿ ಹೆಚ್ಚಾಗಿ ಸಾಲ ಮಾಡಿದ್ದರು. ಆಗಲೇ ದರಿತ್ರನ ಶುರುವಾಗಿದ್ದು," ಎಂದು ಕಿಡಿಕಾರಿದರು.

  Delhi Election Results; ಮುಂದುವರೆದ ಕೇಜ್ರಿವಾಲ್ ಕಮಾಲ್​; ಮೂರನೇ ಬಾರಿ ದೆಹಲಿ ಗದ್ದುಗೆಯತ್ತ ಆಮ್​ ಆದ್ಮಿ?

  ಸಿದ್ದರಾಮಯ್ಯ ಹೇಳಿದಂತೆ ಸರ್ಕಾರದಲ್ಲಿ ತೊಂದರೆ ಆಗಿಲ್ಲ. ಪ್ರಕೃತಿ ವಿಕೋಪದಿಂದ 35 ಸಾವಿರ ಕೋಟಿ ನಷ್ಠವಾಯಿತು. ಹೀಗಾಗಿ ಸ್ವಲ್ಪ ಆರ್ಥಿಕ ತೊಂದರೆ ಆಗಿದೆ. ಪ್ರಕೃತಿ ವಿಕೋಪದಲ್ಲಿ ಮನೆ, ಬೆಳೆ, ಸಾರ್ವಜನಿಕ ಆಸ್ತಿ-ಪಾಸ್ತಿ ಪರಿಹಾರ ಕೊಟ್ಟಿದ್ದೇವೆ. ನೆರೆ ಸಂತ್ರಸ್ತರಿಗೆ ಸರ್ಕಾರ ಕನಿಷ್ಠ 10 ಸಾವಿರ ಕೋಟಿ ಪರಿಹಾರ ಕೊಟ್ಟಿದೆ ಎಂದು ಸಮರ್ಥಿಸಿಕೊಂಡರು.

  ಮಹೇಶ್ ಕುಮಟಳ್ಳಿ ಎಂಎಸ್ ಐಎಲ್ ಅಧ್ಯಕ್ಷ ಸ್ಥಾನವನ್ನು ನಿರಾಕರಿಸಿದ ವಿಚಾರವಾಗಿ, "ಅವರು ಏನು ಹೇಳಿದ್ದಾರೆ ಅಂತ ನನಗೆ ಗೊತ್ತಿಲ್ಲ‌‌. ಈಗಂತೂ ಸಚಿವ ಸಂಪುಟ ವಿಸ್ತರಣೆ ಆಗಿದೆ. ಇನ್ನು 6 ಹುದ್ದೆ ಖಾಲಿ ಇವೆ. ಮುಂದಿನ ದಿನಗಳಲ್ಲಿ ವಿಸ್ತರಣೆ ಆಗುತ್ತೆ ಎಂದರು.

  ಬಿಎಸ್​ವೈ ಮುಂದಿನ ಮೂರು ವರ್ಷ ಸಿಎಂ ಆಗಿ ಮುಂದುವರೆಯಲು ಶಾಸಕಾಂಗ ಸಭೆ ಕರೆಯಲಿ ಎಂಬ ಯತ್ನಾಳ್ ಹೇಳಿಕೆ ವಿಚಾರವಾಗಿ, ದಯವಿಟ್ಟು ಈ ಬಗ್ಗೆ ನನಗೆ ಕೇಳಬೇಡಿ ಎಂದು ಜಾರಿಕೊಂಡರು.

  ಲೋಕೋಪಯೋಗಿ ಖಾತೆ ಮೇಲೆ ಸಚಿವರು ಕಣ್ಣು ಇಟ್ಟಿರುವ ವಿಚಾರವಾಗಿ, ಯಾರು ಕಣ್ಣಿಟ್ಟಿದ್ದಾರೋ, ಯಾರು ಇಟ್ಟಿಲ್ಲವೋ ನನಗೆ ಗೊತ್ತಿಲ್ಲ. ನಾನು ಯಾವಾಗಲೂ ಹೇಳ್ತಾ ಬಂದಿದ್ದೀನಿ. ಪಕ್ಷ ಮತ್ತು ಸಿಎಂ ಏನು ಜವಾಬ್ದಾರಿ ಕೊಡ್ತಾರೆ ಅದನ್ನು ನಾನು ಮಾಡುತ್ತೇನೆ ಎಂದರು.
  First published: