ಸಿಎಎ ಬಗ್ಗೆ ಕಾಂಗ್ರೆಸ್​ ನಡವಳಿಕೆ ಕಂಡು ಆಶ್ಚರ್ಯ ಆಗ್ತಿದೆ; ಡಿಸಿಎಂ ಗೋವಿಂದ ಕಾರಜೋಳ

ಪೌರತ್ವ ಬೇಡ, ದೇಶ ಬೇಕು ಅಂದರೆ ಹೇಗೆ? ಪೌರತ್ವವೂ ಬೇಕು ದೇಶವೂ ಬೇಕು. ಇಂದಿರಾ ಗಾಂಧಿ ಕಾಲದ ಬಾಂಗ್ಲಾ ನಿರಾಶ್ರಿತರು ದೇಶದಲ್ಲಿ ಇದ್ದಾರೆ, ಪಾಕ್‌ ನಿಂದ ಬಂದ ನಿರಾಶ್ರಿತರು ಇದ್ದಾರೆ. ಅವರೆಲ್ಲ ನೊಂದು ಬಂದವರು. ಪಾಕ್, ಬಾಂಗ್ಲಾ ದೇಶಗಳಲ್ಲಿ ದೌರ್ಜನ್ಯ ಆದಾಗ ದೇಶ ಬಿಟ್ಟು ಇಲ್ಲಿಗೆ ಬಂದಿದ್ದಾರೆ. 

ಡಿಸಿಎಂ ಗೋವಿಂದ ಕಾರಜೋಳ

ಡಿಸಿಎಂ ಗೋವಿಂದ ಕಾರಜೋಳ

 • Share this:
  ಧಾರವಾಡ(ಜ.18): ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಕಾಂಗ್ರೆಸ್​ ನಡವಳಿಕೆ ಕಂಡು ಆಶ್ಚರ್ಯ ಆಗುತ್ತಿದೆ. ನೆಹರೂ, ಇಂದಿರಾ ಗಾಂಧಿ, ರಾಜೀವ್  ಗಾಂಧಿ ಕಾಲದಲ್ಲಿಯೂ ಈ ಬಗ್ಗೆ ಚರ್ಚೆ ಆಗಿದೆ. ಅಟಲ್​ ಬಿಹಾರಿ ವಾಜಪೇಯಿ ಕಾಲದಲ್ಲಿಯೂ ಕಾಯ್ದೆ ತಿದ್ದುಪಡಿ ಬಗ್ಗೆ ಚರ್ಚೆ ಆಗಿತ್ತು. ಆದರೆ ಬಿಲ್ ಪಾಸಾಗಿರಲಿಲ್ಲ. ಇನ್ನು, ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಕಾಲದಲ್ಲಿ ಪೌರತ್ವ ಕಾಯ್ದೆ ಬಗ್ಗೆ ಚರ್ಚೆ ಆದಾಗ ಕಾಂಗ್ರೆಸ್​​ನವರು ವಿರೋಧ ಮಾಡಿಲ್ಲ. ಆದರೆ ಇಂದು ಪ್ರಧಾನಿ ನರೇಂದ್ರ ಮೋದಿ, ಅಮಿತ್​ ಶಾ ಅಧಿಕಾರವಧಿಯಲ್ಲಿ ಪೌರತ್ವ ಕಾಯಿದೆ ಬಿಲ್​ ಪಾಸಾಗಿದೆ. ಈಗ ಕಾಂಗ್ರೆಸ್​​ನವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಕಿಡಿಕಾರಿದ್ದಾರೆ.

  ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. "ಪೌರತ್ವ ಬೇಡ, ದೇಶ ಬೇಕು ಅಂದರೆ ಹೇಗೆ? ಪೌರತ್ವವೂ ಬೇಕು ದೇಶವೂ ಬೇಕು. ಇಂದಿರಾ ಗಾಂಧಿ ಕಾಲದ ಬಾಂಗ್ಲಾ ನಿರಾಶ್ರಿತರು ದೇಶದಲ್ಲಿ ಇದ್ದಾರೆ, ಪಾಕ್‌ ನಿಂದ ಬಂದ ನಿರಾಶ್ರಿತರು ಇದ್ದಾರೆ. ಅವರೆಲ್ಲ ನೊಂದು ಬಂದವರು. ಪಾಕ್, ಬಾಂಗ್ಲಾ ದೇಶಗಳಲ್ಲಿ ದೌರ್ಜನ್ಯ ಆದಾಗ ದೇಶ ಬಿಟ್ಟು ಇಲ್ಲಿಗೆ ಬಂದಿದ್ದಾರೆ. ಅವರಿಗೆ ಪೌರತ್ವ ಕೊಡುವ ಬಗ್ಗೆ ಮೊದಲಿನಿಂದಲೂ ಚರ್ಚೆ ಆಗಿವೆ. ಕಾಂಗ್ರೆಸ್​​ನವರು ಯಾಕೆ ವಿರೋಧ ಮಾಡುತ್ತೇವೆ ಅಂತಾ ಹೇಳುತ್ತಿಲ್ಲ? ವೋಟ್ ಬ್ಯಾಂಕ್ ಕಳೆದುಹೋಗುವ ಆತಂಕಕ್ಕೆ ಕಾಂಗ್ರೆಸ್ ಪೌರತ್ವ ಕಾಯ್ದೆ ವಿರೋಧ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  ಅರಮನೆ ಮೈದಾನದಲ್ಲಿ ವಿವೇಕದೀಪಿನೀ ಕಾರ್ಯಕ್ರಮ; ಅಮಿತ್ ಶಾ ಭಾಗಿ

  ಡಾ. ಬಿ.ಆರ್​.ಅಂಬೇಡ್ಕರ ಮೊಮ್ಮಗ ಪ್ರಕಾಶ ಅಂಬೇಡ್ಕರ ಸಿಎಎಗೆ ವಿರೋಧ ವ್ಯಕ್ತಪಡಿಸಿದ ವಿಚಾರವಾಗಿ, ಅವರು ಸಂವಿಧಾನ ಬರೆದವರ ಮೊಮ್ಮಗ ಇರಬಹುದು, ಆದರೆ ಅವರು ಸಂವಿಧಾನ ತಜ್ಞ ಅಲ್ಲ ಎಂದು ತಿರುಗೇಟು ನೀಡಿದರು.

  ಹುಬ್ಬಳ್ಳಿಯಲ್ಲಿ ಅಮಿತ್​ ಶಾ ಜೊತೆ ಸಚಿವ ಸಂಪುಟ ವಿಸ್ತರಣೆ ಚರ್ಚೆ ವಿಚಾರವಾಗಿ, ಸಚಿವ ಸಂಪುಟದ ಬಗ್ಗೆ ಚರ್ಚೆ ಆಗುತ್ತದೆ ಇಲ್ಲವೋ ಗೊತ್ತಿಲ್ಲ. ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ, ನಮ್ಮ ನಾಯಕ ಯಡಿಯೂರಪ್ಪನವರಿಗೆ ಅವಕಾಶ ಕೊಟ್ಟರೆ ಚರ್ಚೆ ‌ಆಗುತ್ತದೆ ಎಂದರು.
  First published: