ಜನರನ್ನು ಭಾವನಾತ್ಮಕವಾಗಿ ಕೆರಳಿಸಲು ಬಾಯಿಗೆ ಬಂದಂತೆ ಮಾತನಾಡೋದು ಸರಿಯಲ್ಲ; ಸಿದ್ದರಾಮಯ್ಯ ವಿರುದ್ಧ ಕಾರಜೋಳ ಗರಂ

ಸಿದ್ದರಾಮಯ್ಯ ಈಗ ಖಾಲಿಯಿದ್ದಾರೆ. ಜನ ಮರೆಯಬಾರದು ಎಂದು ಪ್ರತಿದಿನ ಏನಾದರೊಂದು ಸುದ್ದಿ ಹೇಳುತ್ತಿರುತ್ತಾರೆ. ಸರ್ಕಾರದ ಆದೇಶಗಳು ಬಾಯಿ ಮಾತಿನಲ್ಲಿ ಇರಲ್ಲ. ಕಪ್ಪು-ಬಿಳಿ ಆದೇಶದಲ್ಲಿರುತ್ತವೆ. ಬೇಕಾದರೆ ಸಿದ್ದರಾಮಯ್ಯ  ಪ್ರೊಸೀಡಿಂಗ್ ಓದಲಿ ಎಂದು ತಿರುಗೇಟು ನೀಡಿದರು.

news18-kannada
Updated:January 13, 2020, 12:22 PM IST
ಜನರನ್ನು ಭಾವನಾತ್ಮಕವಾಗಿ ಕೆರಳಿಸಲು ಬಾಯಿಗೆ ಬಂದಂತೆ ಮಾತನಾಡೋದು ಸರಿಯಲ್ಲ; ಸಿದ್ದರಾಮಯ್ಯ ವಿರುದ್ಧ ಕಾರಜೋಳ ಗರಂ
ಡಿಸಿಎಂ ಗೋವಿಂದ ಕಾರಜೋಳ-ಸಿದ್ದರಾಮಯ್ಯ
  • Share this:
ಬಾಗಲಕೋಟೆ(ಜ.13): ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಟ್ಟಿರುವ ನೆರೆ ಪರಿಹಾರ 'ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ'ಯಂತೆ ಎಂದು ಟೀಕಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ಡಿಸಿಎಂ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವಾಗೆಲ್ಲಾ ಪ್ರಕೃತಿ ವಿಕೋಪ ಆಗಿದೆ. ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್​ ಸರ್ಕಾರ ಹೆಚ್ಚು ಪರಿಹಾರ ಕೊಟ್ಟಿದ್ದರೆ ನಿದರ್ಶನ ತೋರಿಸಲಿ.  ಮನಮೋಹನ್ ಸಿಂಗ್​​ ಸರ್ಕಾರಾವಧಿಯಲ್ಲಿ ರಾಜ್ಯಕ್ಕೆ ಉದಾರಾವಾಗಿ ಎಷ್ಟು ಪರಿಹಾರ ಕೊಟ್ಟಿದ್ದಾರೆ ಎಂಬುದನ್ನು ಹೇಳಲಿ. ಜೊತೆಗೆ ಬಿಜೆಪಿ ಸರ್ಕಾರ ಯಾವಾಗ ಕಡಿಮೆ ನೆರೆ ಪರಿಹಾರ ಕೊಟ್ಟಿದೆ ಎನ್ನುವುದನ್ನೂ ತೋರಿಸಲಿ ಎಂದು ಸಿದ್ದರಾಮಯ್ಯಗೆ ಡಿಸಿಎಂ ಕಾರಜೋಳ ಸವಾಲು ಹಾಕಿದ್ದಾರೆ.

ಕಪಾಲಬೆಟ್ಟದ ಗೋಮಾಳದಲ್ಲೇ ಏಸು ಪ್ರತಿಮೆ ನಿರ್ಮಾಣ; ಡಿ.ಕೆ. ಶಿವಕುಮಾರ್ ಭರವಸೆ

ಸಿದ್ದರಾಮಯ್ಯ ಎಲ್ಲಾ ದಾಖಲೆಗಳನ್ನು ತಂದು ಮಾಧ್ಯಮ ಹಾಗೂ ಜನರ ಮುಂದೆ ಇಡಲಿ. ಜನರನ್ನು ಭಾವನಾತ್ಮಕವಾಗಿ ಕೆರಳಿಸಲು ಮನಸ್ಸಿಗೆ ಬಂದಂತೆ ಏನೇನೋ ಹೇಳಬಾರದು. ಹೆಚ್ಚು ನೆರೆ ಪರಿಹಾರ ಕೊಡಿ ಎಂದು ಆಗ್ರಹ ಮಾಡುವುದರಲ್ಲಿ ತಪ್ಪಿಲ್ಲ. ನಮ್ಮ ಜನರಿಗೆ ಹೆಚ್ಚು ಸ್ಪಂದಿಸಿ ಎಂದು ಹೇಳುವುದರಲ್ಲೂ ತಪ್ಪಿಲ್ಲ. ಆದರೆ ಯಾವ ಕೇಂದ್ರ ಸರ್ಕಾರವೂ ಗೈಡ್​​ಲೈನ್​ ಮೀರಿ ಪರಹಾರ ಕೊಟ್ಟಿಲ್ಲ. ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೆಚ್ಚು ಪರಿಹಾರ ನೀಡಿದೆ ಎಂದು ಕಾರಜೋಳ ಸಮರ್ಥಿಸಿಕೊಂಡರು.

ವಾಗ್ಧಾಳಿ ಮುಂದುವರೆಸಿದ ಅವರು, ಸಿದ್ದರಾಮಯ್ಯ ಈಗ ಖಾಲಿಯಿದ್ದಾರೆ. ಜನ ಮರೆಯಬಾರದು ಎಂದು ಪ್ರತಿದಿನ ಏನಾದರೊಂದು ಸುದ್ದಿ ಹೇಳುತ್ತಿರುತ್ತಾರೆ. ಸರ್ಕಾರದ ಆದೇಶಗಳು ಬಾಯಿ ಮಾತಿನಲ್ಲಿ ಇರಲ್ಲ. ಕಪ್ಪು-ಬಿಳಿ ಆದೇಶದಲ್ಲಿರುತ್ತವೆ. ಬೇಕಾದರೆ ಸಿದ್ದರಾಮಯ್ಯ  ಪ್ರೊಸೀಡಿಂಗ್ ಓದಲಿ ಎಂದು ತಿರುಗೇಟು ನೀಡಿದರು.

ಅಮಿತ್ ಶಾ ಕೇಂದ್ರ ಗೃಹ ಮಂತ್ರಿ. ಅವರ ಅಧ್ಯಕ್ಷತೆಯಲ್ಲಿ ಎನ್ ಡಿಆರ್ ಎಫ್, ಎಸ್ ಡಿ ಆರ್ ಎಫ್ ಸಮಿತಿ ಇರುತ್ತವೆ. ಮಾನದಂಡದ ಪ್ರಕಾರ ನೆರೆ ಪರಿಹಾರ ನಿರ್ಧರಿಸಿರುತ್ತಾರೆ.  ಅವರು ಕೊಡುವ ಪರಿಹಾರದಲ್ಲಿ ಏನಾದರೂ ತಪ್ಪಿದ್ದರೆ ಹೇಳಲಿ ಎಂದರು.

2012ರ ನಿರ್ಭಯಾ ಅತ್ಯಾಚಾರ ಪ್ರಕರಣ: ತಿಹಾರ್ ಜೈಲಿನಲ್ಲಿ ನಾಲ್ವರು ಅಪರಾಧಿಗಳ ಗಲ್ಲಿಗೇರಿಸುವ ಅಣಕು ತಾಲೀಮುಇದೇ ವೇಳೆ, ಕೇಂದ್ರ ಸರ್ಕಾರದಿಂದ ಎರಡನೇ ಕಂತು ನೆರೆ ಪರಿಹಾರ ಎಷ್ಟು ಬಂದಿದೆ ಎಂಬುದನ್ನು ಹೇಳಲು ಡಿಸಿಎಂ ಗೋವಿಂದ ಕಾರಜೋಳ ತಡವರಿಸಿದರು. ಎರಡನೇ ಕಂತು ಬಂದಿರುವ ಬಗ್ಗೆ ಪ್ರೊಸೀಡಿಂಗ್ಸ್  ಇರುತ್ತೆ. ಅದನ್ನು ನೋಡಬೇಕು ಎಂದು ಹೇಳಿ  ಜಾರಿಕೊಂಡರು. ಮಾಧ್ಯಮದವರು ಎಷ್ಟೇ ಕೇಳಿದರೂ ಅ ಬಗ್ಗೆ ಪ್ರತಿಕ್ರಿಯೆ ನೀಡಲಿಲ್ಲ.

 

 

 
First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ