• Home
  • »
  • News
  • »
  • state
  • »
  • Belagavi: ಗಡಿ ವಿಷಯದಲ್ಲಿ ಪುಂಡಾಡಿಕೆ ಮಾಡಿದವರನ್ನು ಒಳಗೆ ಹಾಕ್ತೀವಿ: ಕಾರಜೋಳ ಎಚ್ಚರಿಕೆ

Belagavi: ಗಡಿ ವಿಷಯದಲ್ಲಿ ಪುಂಡಾಡಿಕೆ ಮಾಡಿದವರನ್ನು ಒಳಗೆ ಹಾಕ್ತೀವಿ: ಕಾರಜೋಳ ಎಚ್ಚರಿಕೆ

ಗೋವಿಂದ ಕಾರಜೋಳ

ಗೋವಿಂದ ಕಾರಜೋಳ

ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಗಡಿ ವಿಷಯದಲ್ಲಿ ಪುಂಡಾಡಿಕೆ ಮಾಡಿದವರನ್ನು ಒಳಗೆ ಹಾಕ್ತೀವಿ ಎಂದು ಎಚ್ಚರಿಸಿದ್ದಾರೆ.

  • News18 Kannada
  • Last Updated :
  • Belgaum, India
  • Share this:

    ಬೆಳಗಾವಿ(ಡಿ.06): ಬೆಳಗಾವಿಯಲ್ಲಿ (Belagavi) ಕನ್ನಡ ಬಾವುಟ ಹಿಡಿದು ಡ್ಯಾನ್ಸ್ ಮಾಡಿದ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಬಳಿಕ ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ (Maharashtra Border Issue) ಮತ್ತೆ ಭುಗಿಲೆದ್ದಿದೆ. ಇದರ ಬೆನ್ನಲ್ಲೇ ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ನಿರ್ಬಂಧ ವಿಚಾರವೂ ಅಷ್ಟೇ ಸದ್ದು ಮಾಡಿತ್ತು. ಆದರೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ (Govind Karjol) ಗಡಿ ವಿಷಯದಲ್ಲಿ ಪುಂಡಾಡಿಕೆ ಮಾಡಿದವರನ್ನು ಒಳಗೆ ಹಾಕ್ತೀವಿ ಎಂದು ಎಚ್ಚರಿಸಿದ್ದಾರೆ.


    ಇದನ್ನೂ ಓದಿ: Untouchability: ದಲಿತ ಮಹಿಳೆ ನೀರು ಕುಡಿದಿದ್ದಕ್ಕೆ ಟ್ಯಾಂಕ್ ಖಾಲಿ; ಗೋಮೂತ್ರದಿಂದ ಶುದ್ಧಿ!​


    ಪತ್ರದ ಮೂಲಕ ಎಚ್ಚರಿಕೆ


    ಹೌದು ಗಡಿ ವಿಚಾರವಾಗಿ ಮಾತನಾಡಿದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಗಡಿ ಸಮಸ್ಯೆ ಎತ್ತಿ, ಕನ್ನಡಿಗರು ಹಾಗೂ ಮರಾಠಿಗರ ನಡುವೆ ವಿಷ ಬೀಜ ಬಿತ್ತುವ ಕೆಲಸವನ್ನು ಮಹಾರಾಷ್ಟ್ರ ನಾಯಕರು ಮಾಡುತ್ತಿದ್ದಾರೆ. ಈಗ ಸಚಿವರ ಬೆಳಗಾವಿ ಪ್ರವೇಶಕ್ಕೆ ನಿರ್ಬಂಧ ಹೇರಿದ್ದೇವೆ ಗುಡುಗಿದ್ದಾರೆ. ಅಲ್ಲದೇ ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ ಎಂದ ಕಾರಜೋಳ ಅದಕ್ಕೆ ನಾವು ಯಾವಾಗಲೂ ಕಟಿಬದ್ದರಾಗಿರ್ತೇವೆ. ಗಡಿ ಸಮಸ್ಯೆ ತೆಗೆಯುವ ಪುಂಡರನ್ನು ಸರ್ಕಾರ ಸಹಿಸೋದಿಲ್ಲ, ಅಲ್ಲಿನ ಸಚಿವರು ಯಾವ ಕಾರಣಕ್ಕೂ ಇಲ್ಲಿಗೆ ಬರಲು ಬಿಡುವುದಿಲ್ಲ. ಅವರಿಗೆ ತಿಳಿವಳಿಕೆ ಹೇಳಿ, ಬಂದ್ರೆ ಕಾನೂನು ರೀತಿ ಕಠಿಣ ಕ್ರಮ ತಗೊಳ್ಳುತ್ತೇವೆ ಎಂದು ಪತ್ರದ ಮೂಲಕ ಎಚ್ಚರಿಕೆ ಕೂಡ ಕೊಟ್ಟಿದ್ದೇವೆ ಎಂದಿದ್ದಾರೆ.


    ಇದನ್ನೂ ಓದಿ: RTI ಅರ್ಜಿ ನಿರಾಕರಿಸಿದರೆ 25,000 ರೂಪಾಯಿ ದಂಡ; ಸರ್ಕಾರದ ಖಡಕ್ ಎಚ್ಚರಿಕೆ


    ಎಂಇಎಸ್ ಸಭೆಗೂ ಅವಕಾಶ ಇಲ್ಲ


    ಇದೇ ವೇಳೆ ಎಂಇಎಸ್​ ಸಭೆ ಬಗ್ಗೆ ಉಲ್ಲೇಖಿಸಿದ ಕಾರಜೋಳ ಮಹಾ ಸಚಿವರು ಗಡಿಗೆ ಬರದಂತೆ ತಡೆಯಲು ಅಗತ್ಯ ಕ್ರಮ ಕೈಗೊಂಡಿದ್ದೇವೆ. ಈಗಾಗಲೇ ಅವ್ರು ಕರ್ನಾಟಕಕ್ಕೆ ಬರುವುದನ್ನು ರದ್ದು ಮಾಡಿದ್ದಾರೆ, ಅವ್ರು ಯಾವುದೇ ಕಾರಣಕ್ಕೂ ಇಲ್ಲಿಗೆ ಬರಬಾರದು. ಬೆಳಗಾವಿಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಬೆಳಗಾವಿ ಜಿಲ್ಲೆ ಶಾಂತಿಯುತವಾಗಿದೆ. ಯಾವುದೇ ಎಂಇಎಸ್ ಸಭೆಗೂ ಅವಕಾಶ ಇಲ್ಲ, ಗಡಿ ವಿಷಯದಲ್ಲಿ ಪುಂಡಾಡಿಕೆ ಮಾಡಿದವರನ್ನು ಒಳಗೆ ಹಾಕ್ತೀವಿ ಎಂದೂ ಎಚ್ಚರಿಕೆ ನೀಡಿದ್ದಾರೆ.


    ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ಇದೆ ಗೆಲ್ಲುವ ವಿಶ್ವಾಸವಿದೆ


    ಇದೇ ಸಂದರ್ಭದಲ್ಲಿ ಸಿಎಂ ಬಸವರಾಜ್​ ಬೊಮ್ಮಾಯಿ ಕೂಡಾ ಮಹಾರಾಷ್ಟ್ರ ಗಡಿ ತಗಾದೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಬಹಳ ವರ್ಷದಿಂದ ವಿವಾದ ಮಾಡಿಕೊಂಡು ಬಂದಿದ್ದಾರೆ. ಜನರ ನಡುವೆ ಸಾಮರಸ್ಯ ಇದೆ. ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ಇದೆ ಗೆಲ್ಲುವ ವಿಶ್ವಾಸವಿದೆ. ಚುನಾವಣೆ ದೃಷ್ಟಿಯಿಲ್ಲ ವಿವಾದ ಎಬ್ಬಿಸಲ್ಲ. ಜನರ ರಕ್ಷಣೆಗೆ ನಾವು ಬದ್ದವಾಗಿದ್ದೇವೆ. ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ರಕ್ಷಣೆ ಮಾಡಲು ಸರ್ಕಾರ ಸಿದ್ದವಾಗಿದೆ ಎಂದಿದ್ದಾರೆ

    Published by:Precilla Olivia Dias
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು