ಸಿದ್ದರಾಮಯ್ಯ ಓರ್ವ ಬೊಗಳೆ ದಾಸ; ಡಿಸಿಎಂ ಗೋವಿಂದ ಕಾರಜೋಳ ಲೇವಡಿ

ಕಾಂಗ್ರೆಸ್​​ 12 ಕ್ಷೇತ್ರ ಗೆದ್ದರೆ ಸಿದ್ದರಾಮಯ್ಯರಿಗೆ ಒಂದು ತೊಲೆ ಬಂಗಾರ ನೀಡಿ ಸನ್ಮಾನ ಮಾಡುತ್ತೇವೆ. ಅಥಣಿಯಲ್ಲಿ ಒಂದು ತೊಲೆ ಬಂಗಾರ ಹಾಕಿ ಅವರನ್ನು ಭರ್ಜರಿ ಮೆರವಣಿಗೆ ಮಾಡುತ್ತೇವೆ. ಅಷ್ಟು ಕ್ಷೇತ್ರ ಗೆದ್ದು ತೋರಿಸಲಿ ನಾನು ಸವದಿ ಸೇರಿ ಸಿದ್ದರಾಮಯ್ಯನವರ ಮೆರವಣಿಗೆ ಮಾಡುತ್ತೇವೆ ಎಂದು ಸವಾಲು ಹಾಕಿದರು.

Latha CG | news18-kannada
Updated:November 26, 2019, 11:17 AM IST
ಸಿದ್ದರಾಮಯ್ಯ ಓರ್ವ ಬೊಗಳೆ ದಾಸ; ಡಿಸಿಎಂ ಗೋವಿಂದ ಕಾರಜೋಳ ಲೇವಡಿ
ಡಿಸಿಎಂ ಗೋವಿಂದ ಕಾರಜೋಳ-ಸಿದ್ದರಾಮಯ್ಯ
  • Share this:
ಬೆಳಗಾವಿ(ನ.26): ಮಾಜಿ ಸಿಎಂ ಸಿದ್ದರಾಮಯ್ಯ ಓರ್ವ ಬೊಗಳೆ ದಾಸ. ಅವರು 5 ವರ್ಷ ಸಿಎಂ ಆಗಿ ಏನು ಮಾಡಿದ್ದಾರೆ ಎಂಬುದನ್ನು ಹೇಳಬೇಕು. ಕಾಂಗ್ರೆಸ್​ ಜನರಿಗೆ ಮಾಡಿರುವ ಮೋಸಗಳಲ್ಲಿ ಸಿದ್ದರಾಮಯ್ಯ ಕೂಡ ಪಾಲುದಾರ ಎಂದು ಡಿಸಿಎಂ ಗೋವಿಂದ ಕಾರಜೋಳ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಅಥಣಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ಸಿದ್ದರಾಮಯ್ಯ ಕಾಲದಲ್ಲಿಯೂ ನೆರೆ, ಬರ ಬಂದಿತ್ತು. ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಸಿದ್ದರಾಮಯ್ಯ ಏನು ಮಾಡಿದ್ದಾರೆ?  ಯಡಿಯೂರಪ್ಪ ಸಿಎಂ ಆಗಿದ್ದಾಗ ಒಬ್ಬರೇ ಇದ್ದರೂ ಪ್ರವಾಹ ಬಂದಾಗ ಓಡಾಡಿದ್ದಾರೆ ಎಂದು ಬಿಎಸ್​ವೈ ಪರ ಬ್ಯಾಟಿಂಗ್​ ಮಾಡಿದರು.

ಸಿದ್ದರಾಮಯ್ಯ ತಾವು ಸಿಎಂ ಆಗಿದ್ದಾಗ ಅಥಣಿ ನೆನಪಾಗಿರಲಿಲ್ಲ. ಈಗ ಉಪಚುನಾವಣೆ ಬಂದಾಗ ಅವರಿಗೆ ಅಥಣಿ ನೆನಪಾಗುತ್ತಿದೆ. ಡಾ.ಬಿ.ಆರ್​.ಅಂಬೇಡ್ಕರ್​ ತೀರಿಕೊಂಡಾಗ ಅಂತ್ಯಸಂಸ್ಕಾರ ಮಾಡಲು ಕಾಂಗ್ರೆಸ್‌ನವರು 6 ಅಡಿ ಜಾಗ ಕೊಡಲಿಲ್ಲ. ಕಾಂಗ್ರೆಸ್ಸಿಗೆ ಅಂಬೇಡ್ಕರ್​​​, ಸಂವಿಧಾನ ಮತ್ತು ದೀನ-ದಲಿತರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಕಾಂಗ್ರೆಸ್ ಆ ನೈತಿಕತೆಯನ್ನು ಕಳೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂಗನವಾಡಿಯಲ್ಲಿ ಮೂತ್ರ ಮಾಡಿದ್ದಕ್ಕೆ ಮಗು ಮೇಲೆ ಚಾಕುವಿನಿಂದ ಹಲ್ಲೆ

ಕಾಂಗ್ರೆಸ್‌ನವರು ಅಂದರೆ ಬೊಗಳೆ ದಾಸರು. ಕಾಂಗ್ರೆಸ್ಸಿಗೆ ಈಗ ವೋಟ್ ಬ್ಯಾಂಕ್ ಉಳಿದಿಲ್ಲ. ಹೀಗಾಗಿ ಅವರು ಹತಾಶರಾಗಿದ್ದಾರೆ. ದಲಿತರು, ಅಲ್ಪಸಂಖ್ಯಾತರು ಕಾಂಗ್ರೆಸ್‌ನಿಂದ ದೂರು ಹೋಗಿದ್ದಾರೆ. ಇದರಿಂದ ಕಾಂಗ್ರೆಸ್ ಹುಚ್ಚಾಗಿ ಮೈ ಪರಚಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಂಗಿ ಹರಿದುಕೊಂಡು ಓಡಾಡುತ್ತದೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್​​ 12 ಕ್ಷೇತ್ರ ಗೆದ್ದರೆ ಸಿದ್ದರಾಮಯ್ಯರಿಗೆ ಒಂದು ತೊಲೆ ಬಂಗಾರ ನೀಡಿ ಸನ್ಮಾನ ಮಾಡುತ್ತೇವೆ. ಅಥಣಿಯಲ್ಲಿ ಒಂದು ತೊಲೆ ಬಂಗಾರ ಹಾಕಿ ಅವರನ್ನು ಭರ್ಜರಿ ಮೆರವಣಿಗೆ ಮಾಡುತ್ತೇವೆ. ಅಷ್ಟು ಕ್ಷೇತ್ರ ಗೆದ್ದು ತೋರಿಸಲಿ ನಾನು ಸವದಿ ಸೇರಿ ಸಿದ್ದರಾಮಯ್ಯನವರ ಮೆರವಣಿಗೆ ಮಾಡುತ್ತೇವೆ ಎಂದು ಸವಾಲು ಹಾಕಿದರು.

ಬೆಂಗಳೂರು ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಎಲ್​ಸಿ ಪುಟ್ಟಣ್ಣ; ಸಿಎಂ ಬಿಎಸ್​ವೈ ಘೋಷಣೆ
First published: November 26, 2019, 11:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading