ಶಾಸಕರು, ಸಂಸದರು, ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲಿ; ಡಿಸಿಎಂ ಗೋವಿಂದ ಕಾರಜೋಳ

ಸರಕಾರ ಹಾಗೂ ಸುಧಾ ಮೂರ್ತಿಯವರಂತಹ ಸಹಕಾರ ನಿರಂತರವಾಗಿದ್ದಲ್ಲಿ ಸರಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗೆ ಹಿಂದೆ ಬೀಳಲಾರವು. ಪಾಲಕರು ಮುಂದೊಂದು ದಿನ ತಮ್ಮ ಮಕ್ಕಳನ್ನು  ಸರಕಾರಿ ಶಾಲೆಗೆ ಪ್ರವೇಶ ಪಡೆಯಬೇಕಾದರೆ ಸರದಿ ಸಾಲಿನಲ್ಲಿ ನಿಲ್ಲುವ ಸಮಯ ಸನ್ನಿತವಾಗಲಿದೆ ಎಂದರು.

ಡಿಸಿಎಂ ಗೋವಿಂದ ಕಾರಜೋಳ

ಡಿಸಿಎಂ ಗೋವಿಂದ ಕಾರಜೋಳ

  • Share this:
ಬಾಗಲಕೋಟೆ(ಜ.23):  ಸರಕಾರಿ ಶಾಲೆಗಳು ಉತ್ತಮಗೊಳ್ಳಬೇಕಾದರೆ ಶಾಸಕರು, ಸಂಸದರು, ಐಎಎಸ್, ಐಪಿಎಸ್ ಅಧಿಕಾರಿಗಳು ಸೇರಿದಂತೆ ಸರ್ಕಾರಿ ನೌಕರರು ತಮ್ಮ  ಮಕ್ಕಳನ್ನು ಸರಕಾರಿ ಶಾಲೆಗಳಲ್ಲಿ ಕಲಿಸಲು ಮುಂದಾಗಬೇಕೆಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ  ಹುಲ್ಯಾಳ ಕ್ರಾಸ್‍ನಲ್ಲಿರುವ ರಾನಡೆ ಸ್ಮಾರಕ ಶಿಕ್ಷಣ ಸಂಸ್ಥೆಯ ವಿದ್ಯಾಭವನ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿಂದು ಇನ್ಪೋಸಿಸ್ ಫೌಂಡೇಶನ್ ವತಿಯಿಂದ ಸರಕಾರ ಶಾಲೆಗಳಿಗೆ 400 ಕಂಪ್ಯೂಟರ್ ಮತ್ತು 100 ಶಾಲೆಗಳಿಗೆ ಗ್ರಂಥಾಲಯದ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರಿ ಶಾಲೆ ಶಿಕ್ಷಕರು ಸಿಇಟಿ ಮೂಲಕ ಆಯ್ಕೆಯಾಗಿರುವರು ಪ್ರತಿಭಾವಂತರಿರುತ್ತಾರೆ. ಆದರೆ ಖಾಸಗಿ ಶಾಲೆ ಶಿಕ್ಷಕರು ಯಾವುದೇ ಸಿಇಟಿ ಮೂಲಕ ಆಯ್ಕೆ ಆಗಿರುವುದಿಲ್ಲ. ಪೋಷಕರು ಮಕ್ಕಳನ್ನು ಖಾ‌ಸಗಿ ಶಾಲೆಗೆ ದಾಖಲಿಸುತ್ತಾರೆ. ನಾವು ಹಿಂದೆ ವಿರೋಧ ಪಕ್ಷದಲ್ಲಿದ್ದಾಗ ಅಧಿವೇಶನದಲ್ಲಿ ನಾನು ಸರ್ಕಾರಿ ನೌಕರರು, ಶಾಸಕ ಸಂಸದರ, ಐಎಎಸ್ ಐಪಿಎಸ್ ಅಧಿಕಾರಿಗಳ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಕಲಿಸಬೇಕೆಂದು ಮಾತನಾಡಿದ್ದೆ ಎಂದರು.

ಗದಗ್​​ನಲ್ಲಿ ಕಪ್ಪತ್ತ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ಸಿ.ಸಿ.ಪಾಟೀಲ್

ರಾಜ್ಯದಲ್ಲಿ ಯಾವ ಮಕ್ಕಳೂ ಸಹ ವಿದ್ಯೆಯಿಂದ ವಂಚಿತರಾಗಬಾರದು.  ಶಿಕ್ಷಕರ ನೇಮಕಾತಿ ಮೆರಿಟ್ ಹಾಗೂ ಸಿಇಟಿ, ರೋಸ್ಟರ್ ಪದ್ಧತಿಯಂತೆ ನೇಮಕಾತಿಯನ್ನು  ಮಾಜಿ ಶಿಕ್ಷಣ ಸಚಿವ ಗೋವಿಂದಗೌಡರು ಜಾರಿಗೆ ತಂದಿದ್ದರು. ನಾವು ಅವರನ್ನು ಸ್ಮರಿಸಬೇಕಾಗಿದೆ ಎಂದು ಹೇಳಿದರು. ಜಮಖಂಡಿ ನೆಲ ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿಯಂತಹ ಅಗ್ರಗಣ್ಯರ ತಾಣವಾಗಿದೆ. ಇನ್ಪೋಸಿಸ್ ಸಂಸ್ಥೆ ಪ್ರಾರಂಭಿಸಿ ದೇಶ-ವಿದೇಶಗಳಲ್ಲಿ ಹೆಸರು ಮಾಡಿ ಜಮಖಂಡಿಯನ್ನು ರಾಷ್ಟ್ರ ಮಟ್ಟದಲ್ಲಿ ಪರಿಚಯಿಸುವ ಕಾರ್ಯ ಮಾಡಿದ್ದನ್ನು ಗಮನಿಸಿದರೆ, ಇವರ ಕಾರ್ಯ 12ನೇ ಶತಮಾನದ ಶರಣರ ಬದುಕನ್ನು ನೆನಪಿಸುತ್ತಿದೆ ಎಂದರು.

ಶಿಕ್ಷಣ ಸಚಿವ ಸುರೇಶ್​ಕುಮಾರ್ ಮಾತನಾಡಿ, ಇನ್ಪೋಸಿಸ್ ಫೌಂಡೇಸನ್ ಸಂಸ್ಥಾಪಕಿ ಡಾ.ಸುಧಾ ಮೂರ್ತಿಯವರು ಜಮಖಂಡಿ ತಾಲೂಕಿನ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸರಕಾರಿ ಶಾಲೆಗಳಿಗೆ 400 ಕಂಪ್ಯೂಟರ್ ಗಳನ್ನು ನೀಡುವ ಮೂಲಕ ಮಾತೃ ಹೃದಯಿ ಮಹಿಳೆಯಾಗಿದ್ದಾರೆ. ದೇಶ ವಿದೇಶಗಳಲ್ಲಿ ತಮ್ಮ ಪ್ರತಿಭೆ ತೋರಿ ಪ್ರಸಿದ್ಧರಾದ ಅನೇಕ ಜನ ಸರಕಾರಿ ಶಾಲೆಗಳಲ್ಲಿಯೇ ಕಲಿತ ವಿದ್ಯಾರ್ಥಿಗಳಾಗಿದ್ದಾರೆ. ಸರಕಾರ ಹಾಗೂ ಸುಧಾ ಮೂರ್ತಿಯವರಂತಹ ಸಹಕಾರ ನಿರಂತರವಾಗಿದ್ದಲ್ಲಿ ಸರಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗೆ ಹಿಂದೆ ಬೀಳಲಾರವು. ಪಾಲಕರು ಮುಂದೊಂದು ದಿನ ತಮ್ಮ ಮಕ್ಕಳನ್ನು  ಸರಕಾರಿ ಶಾಲೆಗೆ ಪ್ರವೇಶ ಪಡೆಯಬೇಕಾದರೆ ಸರದಿ ಸಾಲಿನಲ್ಲಿ ನಿಲ್ಲುವ ಸಮಯ ಸನ್ನಿತವಾಗಲಿದೆ ಎಂದರು.

ಸಾನಿಧ್ಯ ವಹಿಸಿದ್ದ ಜಪಾನಂದ ಸ್ವಾಮೀಜಿಯವರು ಮಾತನಾಡಿ,ಸುಧಾ ಮೂರ್ತಿಗಳು ಕೇವಲ ಜಮಖಂಡಿಗೆ ಅವರ ಕಾರ್ಯ ಸೀಮಿತವಾಗಿಲ್ಲ. ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸೀಮಿತವಾಗಿರದೇ ನೆರೆ ರಾಜ್ಯಗಳಾದ ಕೇರಳ, ತಮಿಳುನಾಡುಗಳಲ್ಲಿ ಪ್ರವಾಹ ಸಂದರ್ಭದಲ್ಲಿಯೂ ಕೂಡಾ ನೆರವಿನ ಹಸ್ತ ನೀಡಿದ್ದಾರೆ. ಅನೇಕ ಕಡುಬಡವರಿಗೆ, ರೋಗಿಗಳಿಗೆ, ಅಶಕ್ತರಿಗೆ, ಅಂಗವಿಕಲರಿಗೆ ದಾರಿದೀಪವಾಗಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಉತ್ತಮ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ನಗದು ಪ್ರೋತ್ಸಾಹಧನದ ಚೆಕ್‍ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷರು ಆಗಿರುವ ತೇರದಾಳ ಶಾಸಕ ಸಿದ್ದು ಸವದಿ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಇನ್ಪೋಸಿಸ್‍ನ ರಾಘವೇಂದ್ರ ಕುಲಕರ್ಣಿ, ಜಿ.ಪಂ ಸಿಇಓ ಟಿ.ಭೂಬಾಲನ್, ಉಪವಿಭಾಗಾಧಿಕಾರಿ ಸಿದ್ದು ಹುಳ್ಳೊಳ್ಳಿ, ಧಾರವಾಡ ವಿಭಾಗದ ಶಿಕ್ಷಣ ಇಲಾಖೆಯ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ, ಇನ್ಪೋಸಿಸ್‍ನ ಸಂಚಾಲಕ ಎನ್.ಆರ್.ಕುಲಕರ್ಣಿ ಇದ್ದರು.
Published by:Latha CG
First published: