HOME » NEWS » State » DCM GOVIND KARAJOL REACTS MOCKS AT MLA MP RENUKACHARYA LG

ರೇಣುಕಾಚಾರ್ಯ ತಮ್ಮ ಕ್ಷೇತ್ರಕ್ಕೆ ರೈಲು ಬಿಡಿಸಲು ದೆಹಲಿಗೆ ಹೋಗಿದ್ದಾರೆ; ಡಿಸಿಎಂ ಗೋವಿಂದ ಕಾರಜೋಳ ವ್ಯಂಗ್ಯ

ಒಂದಿಂಚು ನೆಲವನ್ನೂ ನಾವು ಬಿಟ್ಟುಕೊಡಲು ಸಾಧ್ಯವಿಲ್ಲ. ನೆಲಜಲದ ಪ್ರಶ್ನೆ ಬಂದಾಗ, ಕರ್ನಾಟಕದಲ್ಲಿರುವ ಎಲ್ಲ ರಾಜಕೀಯ ಪಕ್ಷಗಳು ಒಂದುಗೂಡುತ್ತೇವೆ. ಕನ್ನಡಿಗರೆಲ್ಲ ಒಟ್ಟಾಗಿ ಹೋರಾಟ ಮಾಡಿರೋದು 50 ವರ್ಷಗಳ ಇತಿಹಾಸವಿದೆ.ಅದನ್ನ ಮುಂದುವರೆಸಿಕೊಂಡು ಹೋಗ್ತೇವೆ. ಮಹಾರಾಷ್ಟ್ರ ಸಿಎಂ ಗಡಿ ಕ್ಯಾತೆ ಬೆನ್ನಲ್ಲೇ  ಡಿಸಿಎಂ ಕಾರಜೋಳ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.

news18-kannada
Updated:January 19, 2021, 5:18 PM IST
ರೇಣುಕಾಚಾರ್ಯ ತಮ್ಮ ಕ್ಷೇತ್ರಕ್ಕೆ ರೈಲು ಬಿಡಿಸಲು ದೆಹಲಿಗೆ ಹೋಗಿದ್ದಾರೆ; ಡಿಸಿಎಂ ಗೋವಿಂದ ಕಾರಜೋಳ ವ್ಯಂಗ್ಯ
ಡಿಸಿಎಂ ಗೋವಿಂದ ಕಾರಜೋಳ
  • Share this:
ಬಾಗಲಕೋಟೆ (ಜ,19):ಯಡಿಯೂರಪ್ಪ ಸಿಎಂ ಆದರೆ ಪ್ರವಾಹ, ಮಳೆ ಕಾಟ ಶುರುವಾಗುತ್ತದೆ.ಯಡಿಯೂರಪ್ಪ ಸಿಎಂ ಆದಾಗ ಭೂಮಿ ತುಂಬ ನೀರೆ ನೀರು. ಯಡಿಯೂರಪ್ಪ ಕಾಲ್ಗುಣ ಏನು ಅಂದರೆ ಸಿಎಂ ಆದಾಗ ಒಣಬರ ಬೀಳೋದಿಲ್ಲ ಹಸಿ ಬರ ಬೀಳುತ್ತದೆ. ಹಸಿ ಬರ ಬಿದ್ದರೆ ಜನರು ಬದುಕ್ತಾರೆ. ದನಕರುಗಳು, ಪಕ್ಷಿಗಳು ಬದುಕುತ್ತವೆ. ಯಡಿಯೂರಪ್ಪನವರ ಕಾಲ್ಗುಣ ವೈಶಿಷ್ಟ್ಯ ಅಂದರೆ,  ಅವರು ಸಿಎಂ ಆದಾಗ ಮಳೆ ಜಾಸ್ತಿಯಾಗುತ್ತದೆ. ಸಿದ್ದರಾಮಯ್ಯ ಸಿಎಂ ಆದಾಗ ಒಣ ಬರ ಬೀಳುತ್ತದೆ. ಒಣಬರ ಬಿದ್ದರೆ ಹಾದಿಬೀದಿಯಲ್ಲಿ ದನಕರುಗಳು ಸತ್ತು ಹೋಗುತ್ತವೆ. ಜನ ಗುಳೆ ಹೋಗ್ತಾರೆ ಎಂದು ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮೆಟಗುಡ್ಡ ಗ್ರಾಮದಲ್ಲಿ ಡಿಸಿಎಂ ಗೋವಿಂದ ಕಾರಜೋಳ ವ್ಯಂಗ್ಯ ಮಾಡಿದರು.

ಮೆಟಗುಡ್ಡ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ವಿತರಣೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಗೋವಿಂದ ಕಾರಜೋಳ, ಕೋವಿಡ್ ಪರಿಕರ ಖರೀದಿಯಲ್ಲಿ ಎಳ್ಳಷ್ಟೂ ಅವ್ಯವಹಾರವಾಗಿಲ್ಲ.ಭ್ರಷ್ಟಾಚಾರ ಆಗಿದೆ ಎಂದು ದೊಡ್ಡ ಸುದ್ದಿ ಮಾಡಿದ್ರು. ಕೋವಿಡ್ ನಿರ್ವಹಣೆ ವಿಚಾರದಲ್ಲಿ ಭ್ರಷ್ಟಾಚಾರ ಆಗಿದೆ ಅನ್ನೋದು ಮಹಾಪಾಪ. ವಿರೋಧ ಪಕ್ಷದವರು ರಾಜಕಾರಣಗೋಸ್ಕರ ಟೀಕೆ ಮಾಡೋದಕ್ಕೆ ಬಹಳ ಮಹತ್ವ ಕೊಡಬೇಕಿಲ್ಲ.ಕೋವಿಡ್ ನಿರ್ವಹಣೆಯಲ್ಲಿ  ಬಿಎಸ್ವೈ ಸರ್ಕಾರ ಉತ್ತಮ ಕೆಲಸ ಮಾಡಿದೆ. ಭ್ರಷ್ಟಾಚಾರವಾಗಿದೆ ಅನ್ನೋದು ಸರಿಯಲ್ಲ.ಕೋವಿಡ್ ಪರಿಕರ ಖರೀದಿಯಲ್ಲಿ ಭ್ರಷ್ಟಾಚಾರದ ಆರೋಪದ ಬಳಿಕ ಕೋವಿಡ್ ಖರೀದಿ, ನಿರ್ವಹಣೆ ಸಮಿತಿಗೆ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ.

ಆರಂಭದಲ್ಲಿ ಮಾಸ್ಕ್ ಪಿಪಿಇ ಕಿಟ್, ಹ್ಯಾಂಡ್ ಗ್ಲೋಸ್ ಸಿಗುತ್ತಿರಲಿಲ್ಲ. ಆಗ ಹಣ ಮುಖ್ಯವಾಗಿರಲಿಲ್ಲ.ಜೀವ ಮುಖ್ಯ ಆಗಿತ್ತು. ಸುರಕ್ಷಿತ ಪರಿಕರ ಕೊಡಲು ನಮ್ಮ ಸರ್ಕಾರ ಬಳಿ ಇರಲಿಲ್ಲ. ಆಗ ಯಾವ ಉತ್ಪಾದನಾ ಕಂಪನಿಯಲ್ಲಿದ್ದವು, ಅವರು ಹೇಳಿದಂತೆ ದುಡ್ಡು ಕೊಟ್ಟು ಖರೀದಿಸಿದ್ದೇವೆ.ಆ ಬಳಿಕ ಬೇರೆ ಕಂಪನಿಯವರು ಪರಿಕರ ತಯಾರಿ ಮಾಡಿದರು.ಉತ್ಪಾದನೆ ಹೆಚ್ಚಾಯ್ತು ಆಗ ದರದಲ್ಲಿ  ಸ್ಪರ್ಧೆ ಬಂದು ಕಡಿಮೆ ಆಗಿದೆ. ಟೆಂಡರ್ ಕರೆದು ಖರೀದಿಸಿದ್ದೀವಿ ಅಂದ್ರೆ ಜನ ನಮ್ಮನ್ನು  ಬಿಟ್ಟು ಅಗಲುತ್ತಿದ್ದರು. ಈಗಾಗಲೇ ಎರಡ್ಮೂರು ಸಭೆ ಮಾಡಿದ್ದೇವೆ. ಹಾಗಾಗಿ ಖಚಿತವಾಗಿ ಹೇಳುತ್ತಿದ್ದೇನೆ ಭ್ರಷ್ಟಾಚಾರ ಆಗಿಲ್ಲವೆಂದು ಸ್ಪಷ್ಟಪಡಿಸಿದರು.

ಬೆಳಗಾವಿ ಮಹಾರಾಷ್ಟ್ರದ ಆಕ್ರಮಿತ ಪ್ರದೇಶದ- ಸಿಎಂ ಉದ್ಧವ್  ಠಾಕ್ರೆ ಟ್ವೀಟ್ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ  ಡಿಸಿಎಂ ಗೋವಿಂದ ಕಾರಜೋಳ, ಮಹಾರಾಷ್ಟ್ರದ ಉದ್ಧವ್ ಠಾಕ್ರೆಗೆ ಸಿಎಂ ಸ್ಥಾನ ಕಳೆದುಕೊಳ್ಳುವ ಭೀತಿ. ಹಾಗಾಗಿ ಜನರ ಗಮನ ಬೇಡೆಕಡೆಗೆ ಸೆಳೆಯಲು ಅರಾಜಕತೆ ಉಂಟುಮಾಡ್ತಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ.ಮಹಾ ಸಿಎಂ ಉದ್ಧವ್ ಠಾಕ್ರೆಗೆ ಕನಿಷ್ಠ ಜ್ಞಾನ ಇರಬೇಕು. ಪಾಕಿಸ್ತಾನದವರು ಪಾಕ್ ಆಕ್ರಮಿತ ಕಾಶ್ಮೀರ ಅಂತ ಹೇಳಿದಂತೆ. ಇವ್ರು ಬೆಳಗಾವಿಯನ್ನು  ಆಕ್ರಮಣ ಮಾಡಿಕೊಂಡಿದ್ದೀವಿ  ಅನ್ನೋದು ಯಾವ ನ್ಯಾ‌ಯ. ಈ ದೇಶದ ಒಕ್ಕೂಟ ವ್ಯವಸ್ಥೆ ಸರ್ಕಾರದಲ್ಲಿ  ರಾಜಮಹಾರಾಜರ ತರಹ ಮಾತನಾಡಲು ಬರಲ್ಲ. ಅವನು ಎಲ್ಲೋ ಹುಚ್ಚು ಭ್ರಮೆಯಲ್ಲಿದ್ದಾನೆ. ಇಷ್ಟರಲ್ಲೇ ಅಧಿಕಾರ ಕಳೆದುಕೊಳ್ತೀನಿ ಅನ್ನೋ ಭೀತಿ ಶುರುವಾಗಿದೆ. ಮಹಾರಾಷ್ಟ್ರದಲ್ಲಿ ಎನ್.ಸಿಪಿ ಹಾಗೂ ಕಾಂಗ್ರೆಸ್ ಜತೆಗೂಡಿರುವ ಸಮ್ಮಿಶ್ರ ಸರ್ಕಾರವಿದೆ.ಹಾಗಾಗಿ ಅವನಿಗೂ ಕಾಂಗ್ರೆಸ್ ನವರ ಚಾಳಿ  ಶುರುವಾಗಿದೆ.ಉದ್ಧವ್ ಠಾಕ್ರೆಗೆ ಡಿಸಿಎಂ ಕಾರಜೋಳ ಏಕವಚನದಲ್ಲೇ  ಆಕ್ಷೇಪ ವ್ಯಕ್ತಪಡಿಸಿದರು.

ಮಹಾರಾಷ್ಟ್ರದವರು ಭಾಷಾವಾರು ಪ್ರಾಂತ್ಯಗಳು ರಚನೆಯಾದಾಗಿನಿಂದ ಕ್ಯಾತೆ ತೆಗೆಯುತ್ತಲ್ಲೇ ಇದ್ದಾರೆ. ನಾವು ಒಂದು ಸಾರಿ ಹೇಳಿಬಿಟ್ಟಿದ್ದೀವಿ. ಕೇಂದ್ರ ಸರ್ಕಾರವೂ ಮಹಾಜನ ವರದಿನೇ ಅಂತಿಮ ಎಂದು ಹೇಳಿದೆ. ಇದನ್ನ ನಾನು ಖಂಡಿಸುತ್ತೇನೆ. ಒಂದಿಂಚು ನೆಲವನ್ನೂ ನಾವು ಬಿಟ್ಟುಕೊಡಲು ಸಾಧ್ಯವಿಲ್ಲ. ನೆಲಜಲದ ಪ್ರಶ್ನೆ ಬಂದಾಗ, ಕರ್ನಾಟಕದಲ್ಲಿರುವ ಎಲ್ಲ ರಾಜಕೀಯ ಪಕ್ಷಗಳು ಒಂದುಗೂಡುತ್ತೇವೆ. ಕನ್ನಡಿಗರೆಲ್ಲ ಒಟ್ಟಾಗಿ ಹೋರಾಟ ಮಾಡಿರೋದು 50 ವರ್ಷಗಳ ಇತಿಹಾಸವಿದೆ.ಅದನ್ನ ಮುಂದುವರೆಸಿಕೊಂಡು ಹೋಗ್ತೇವೆ. ಮಹಾರಾಷ್ಟ್ರ ಸಿಎಂ ಗಡಿ ಕ್ಯಾತೆ ಬೆನ್ನಲ್ಲೇ  ಡಿಸಿಎಂ ಕಾರಜೋಳ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.

ಉದ್ಧವ್​ ಠಾಕ್ರೆ ಬೆಳಗಾವಿಗೆ ಕಾಲಿಟ್ಟು ನೋಡಲಿ; ಕನ್ನಡಿಗರೇನು ಕೈಗೆ ಬಳೆ ತೊಟ್ಟುಕೊಂಡು ಕೂತಿಲ್ಲ; ಶಾಸಕ ಶರಣಬಸ್ಸಪ್ಪಗೌಡ ಎಚ್ಚರಿಕೆ

ನಾವು ತಾಂತ್ರಿಕವಾಗಿ ಸೂಕ್ಷ್ಮವಾಗಿ ಹೇಳಿದ್ದೇನೆ.ಬೆಳಗಾವಿ ಜಿಲ್ಲೆ ವಿಭಜನೆ ಮಾಡೋದಿಲ್ಲ. ವಿಭಜನೆ ಮಾಡದೇ ಯಾಕೆ ಮುಂದುವರೆಸಿಕೊಂಡು ಬಂದಿದ್ದೇವೆ ಎಂದು ಎಲ್ಲರಿಗೂ ಗೊತ್ತಿದೆ.ಅದರಲ್ಲಿ ಯಾರು ರಾಜಕಾರಣ ಮಾಡಬಾರದು.ಬೆಳಗಾವಿ ವಿಭಜನೆ ಮಾಡಬೇಕು ಎನ್ನುತ್ತಿರುವ ರಾಜಕಾರಣಿಗಳಿಗೆ ಕಾರಜೋಳ ಸಲಹೆ ನೀಡಿದರು.ಅತೃಪ್ತ ಶಾಸಕ ರೇಣುಕಾಚಾರ್ಯ ದೆಹಲಿ ಭೇಟಿ ನೀಡಿದ್ಯಾಕೆ ಎನ್ನುವ ಕುರಿತು ಕಾರಜೋಳ ರೈಲು ಯೋಜನೆ ತರಲು ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು. ಅವರು ತಮ್ಮ ಕ್ಷೇತ್ರಕ್ಕೆ ಇನ್ನೂ ಹೆಚ್ಚು ಅನುದಾನ, ರೈಲು ಮಾರ್ಗ ತರಲು ಯಾವಾಗಲೂ ಪ್ರಯತ್ನ ಮಾಡ್ತಿರುತ್ತಾರೆ.ರೈಲುಗಳನ್ನು ಹೆಚ್ಚು ಅವರ ಕ್ಷೇತ್ರಕ್ಕೆ ಬಿಡಬೇಕು ಅನ್ನೋದಕ್ಕೆ ದೆಹಲಿ ಹೋಗಿದ್ದಾರೆ. ರೈಲು ಹಳಿ ಹಾಕಿಸಲು ಹೋಗಿದ್ದಾರೆಂದರು.ಬಿ ಎಸ್ ವೈ ಹಾಗೂ ಸರಕಾರಕ್ಕೆ  ಯತ್ನಾಳ್ ಮುಜುಗರದ  ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಕಾರಜೋಳ.ನಮ್ಮ ದೇಶದ ಪ್ರಧಾನಿ,ದೇಶದ ಗೃಹಮಂತ್ರಿ,ಪಕ್ಷದ ರಾಜ್ಯಾಧ್ಯಕ್ಷ,ರಾಜ್ಯದ ಉಸ್ತುವಾರಿ ಎಲ್ಲರೂ ಯಡಿಯೂರಪ್ಪ ಸರಕಾರ ಉತ್ತಮ ಕಾರ್ಯ‌ ಮಾಡಿದೆ ಅಂತ ಹೇಳಿದ್ದಾರೆ‌‌.ಕೋವಿಡ್ ನಿರ್ವಹಣೆಯಲ್ಲೂ ದೇಶದಲ್ಲಿ ಪ್ರಥಮ ಸ್ಥಾನದಲ್ಲಿದೆ.ಗುಡ್ ಅಡ್ಮಿನಿಸ್ಟ್ರೇಷನ್ ಅಂತ ಸರ್ಟಿಫಿಕೇಟ್ ಕೊಟ್ಟಿದಾರೆ.ಹೀಗಿದ್ದ ಮೇಲೆ ಪದೆ ಪದೆ ಚರ್ಚೆ ಮಾಡುವ ಅವಶ್ಯತಕೆಯಿಲ್ಲ.ಯತ್ನಾಳ್ ಹೇಳಿಕೆ ಬಗ್ಗೆ ಉತ್ತರಿಸಲು ನಿರಾಕರಿಸುತ್ತಲೇ  ಕಾರಜೋಳ ತಿರುಗೇಟು ನೀಡಿದ್ದಾರೆ.

ಬಜೆಟ್ ನಂತರ ಸಿಎಂ ಬಿಎಸ್ ವೈ ಅವರನ್ನು ಕೆಳಗಿಳಿಸ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಕಾರಜೋಳ ತಿರುಗೇಟು ನೀಡಿ,ನಾವು ಬಿಜೆಪಿ ಅವರು ದೇಶದಲ್ಲಾಗಲಿ ,ರಾಜ್ಯದಲ್ಲಾಗಲಿ ಸಿದ್ದರಾಮಯ್ಯ ಅವರನ್ನು ವಕ್ತಾರರನ್ನಾಗಿ ನೇಮಿಸಿಕೊಂಡಿಲ್ಲ.ನಮ್ಮ ಪಕ್ಷದ ಆಂತರಿಕ ವಿಚಾರದ ಬಗ್ಗೆ ಅವರು ಮಾತನಾಡೋದು ಶೋಭೆ ತರುವದಿಲ್ಲ. ಸಿದ್ದರಾಮಯ್ಯ ಸುಳ್ಳಿನ ಸರದಾರರಾಗುತ್ತಿದ್ದಾರೆ. ಪದೆ ಪದೆ ಡೇಟ್ ಕೊಡೋದು ಈಗ ನೋಡ್ರಿ ಆಗ ನೋಡ್ರಿ ಅನ್ನೋದು. ನಾವುಸಣ್ಣವರಿದ್ದಾಗ ನಮಗೆ ಗರ್ದಿ ಗಮ್ಮತ್ತು ತೋರಿಸ್ತಿದ್ರು.ದೊಡ್ಡ ದೊಡ್ಡ ಡಬ್ಬಿ ಹೊತ್ತು ಊರೂರಿಗೆ ಬರ್ತಿದ್ರು‌.ಮುಂಬೈ ನೋಡ್ರಿ,ಹೇಮಾಮಾಲಿನಿ ನೋಡ್ರಿ ಅಂತ ಗರ್ದಿ ಗಮ್ಮತ್ತು ತೋರಿಸ್ತಿದ್ರು.ಹಂಗ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆಂದರು. ರಾಜ್ಯದಲ್ಲಿ ಮೀಸಲಾತಿಗಾಗಿ ಪಾದಯಾತ್ರೆಗೆ ಡಿಸಿಎಂ ಗೋವಿಂದ ಕಾರಜೋಳ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದರು.

ಆಯಾ ಜನಾಂಗದವರು ಮೀಸಲಾತಿ ಸಿಗಬೇಕು ಅಂತ ನಿರಂತರವಾಗಿ ಪ್ರಯತ್ನ ಮಾಡುತ್ತಿರುತ್ತಾರೆ.ನಮ್ಮ ದೇಶದಲ್ಲಿ ಸಂವಿಧಾನವಿದೆ..ಸಂವಿಧಾನ ಪ್ರಕಾರವೇ  ಮಾಡಬೇಕು.ಯಾರನ್ನು ಬೇಕಾದರೆ ಎಸ್ ಸಿ ಗೆ ಸೇರಿಸೋದು ಎಸ್ ಟಿ ಗೆ ಸೇರಿಸೋದು.ಹಿಂದುಳಿದವರು ಅಂತ ಮಾಡೋದು ಮುಂದುವರೆದವರು ಅಂತ ಮಾಡೋದಕ್ಕೆ ಅವಕಾಶ ಯಾರಿಗೂ ಇಲ್ಲ.ಸಂವಿಧಾನ ಬಹಳ ಶ್ರೇಷ್ಠವಾಗಿದೆ..ಕುಲಶಾಸ್ತ್ರ ಅಧ್ಯಯನದ ಪ್ರಕಾರ ಅರ್ಹತೆ ಇದ್ದವರಿಗೆ ಮೀಸಲಾತಿ ಸಿಗುತ್ತದೆ.ಅರ್ಹತೆ ಇದ್ದೋರಿಗೆ ಸಿಗುತ್ತದೆ,ಇಲ್ಲದವರಿಗೆ ಸಿಗೋದಿಲ್ಲ.ಈಶ್ವರಪ್ಪ ಕುರುಬ ಎಸ್ ಟಿ ಮೀಸಲಾತಿ ಹೋರಾಟದಲ್ಲಿ ಭಾಗಿ ವಿಚಾರ.ಈಶ್ವರಪ್ಪನವರು ಹಿರಿಯರಿದ್ದಾರೆ.ಅವರನ್ನೇ ಕೇಳೋದು ಒಳ್ಳೆಯದು ಎಂದರು.

ಮೆಟಗುಡ್ಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ  ಕಾಯಕಲ್ಪ ಪ್ರಶಸ್ತಿ!!
ಬಾಗಲಕೋಟೆ ಜಿಲ್ಲೆಯಲ್ಲೇ ಮೆಟಗುಡ್ಡ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ರಾಜ್ಯ ಸರ್ಕಾರದ ಕಾಯಕಲ್ಪ ಪ್ರಶಸ್ತಿಗೆ ಭಾಜನವಾಗಿದೆ.ಜಿಲ್ಲೆಯಲ್ಲಿ ಮೆಟಗುಡ್ಡ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಥಮ, ಕುಂದರಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ದ್ವಿತೀಯ ಸ್ಥಾನಪಡೆದುಕೊಂಡಿದೆ‌.ಮೆಟಗುಡ್ಡ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಯಾವುದೇ ಖಾಸಗಿ ಆಸ್ಪತ್ರೆಗೆ ಕಡಿಮೆ ಇಲ್ಲ.ಎಲ್ಲರೀತಿಯ ಮೂಲಸೌಕರ್ಯ ಹೊಂದಿದ್ದು ಗ್ರಾಮೀಣ ಪ್ರದೇಶದ ಬಡಜನರ ಪಾಲಿಗೆ ಆರೋಗ್ಯ ಸಂಜೀವಿನಿಯಾಗಿದೆ.
Published by: Latha CG
First published: January 19, 2021, 5:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories