ಹೊಸ ಸರ್ಕಾರವಲ್ಲ, ಫಲಿತಾಂಶದ ಬಳಿಕ ಕಾಂಗ್ರೆಸ್​ ಕಚೇರಿಗೆ ದೀಪ ಹಚ್ಚೋರೂ ಗತಿಯಿರಲ್ಲ; ಡಿಸಿಎಂ ಗೋವಿಂದ ಕಾರಜೋಳ ವ್ಯಂಗ್ಯ

ಏನೇ ತಿಪ್ಪರಲಾಗ ಹಾಕಿದರೂ ಕಾಂಗ್ರೆಸ್​​-ಜೆಡಿಎಸ್​​ ಒಳ ಒಪ್ಪಂದ ವರ್ಕೌಟ್​ ಆಗಲ್ಲ. ಮಗನಿಗೆ ಕಾಂಗ್ರೆಸ್ ಕನ್ಯೆಯನ್ನು ಮರುಮದುವೆ ಮಾಡಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ- ಡಿಸಿಎಂ ಗೋವಿಂದ ಕಾರಜೋಳ

Latha CG | news18-kannada
Updated:December 2, 2019, 5:56 PM IST
ಹೊಸ ಸರ್ಕಾರವಲ್ಲ, ಫಲಿತಾಂಶದ ಬಳಿಕ ಕಾಂಗ್ರೆಸ್​ ಕಚೇರಿಗೆ ದೀಪ ಹಚ್ಚೋರೂ ಗತಿಯಿರಲ್ಲ; ಡಿಸಿಎಂ ಗೋವಿಂದ ಕಾರಜೋಳ ವ್ಯಂಗ್ಯ
ಡಿಸಿಎಂ ಗೋವಿಂದ ಕಾರಜೋಳ
  • Share this:
ಬೆಂಗಳೂರು(ಡಿ.02): ರಾಜ್ಯದಲ್ಲಿ ಕಾಂಗ್ರೆಸ್​-ಜೆಡಿಎಸ್​ ಮರುಮೈತ್ರಿ ಮಾಡಿಕೊಳ್ಳಲಿವೆ ಎಂಬ ವಿಚಾರಕ್ಕೆ ಡಿಸಿಎಂ ಗೋವಿಂದ ಕಾರಜೋಳ ವ್ಯಂಗ್ಯ ಮಾಡಿದ್ದಾರೆ. "ಗತಿಯಿಲ್ಲದ ಕಾಂಗ್ರೆಸ್​​ಗೆ ಬೇರೆ ದಾರಿ ಇಲ್ಲ. ಫಲಿತಾಂಶ ಬಂದ ಬಳಿಕ ಹೊಸ ಸರ್ಕಾರವಲ್ಲ, ಕಾಂಗ್ರೆಸ್​ ಕಚೇರಿಗೆ ದೀಪ ಹಚ್ಚೋರು ಗತಿಯಿರಲ್ಲ ಎಂದು ಡಿಸಿಎಂ ಲೇವಡಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​​-ಜೆಡಿಎಸ್​​ ಮರುಮೈತ್ರಿ ಬಗ್ಗೆ ಟೀಕೆ ಮಾಡಿದರು. "ಏನೇ ತಿಪ್ಪರಲಾಗ ಹಾಕಿದರೂ ಕಾಂಗ್ರೆಸ್​​-ಜೆಡಿಎಸ್​​ ಒಳ ಒಪ್ಪಂದ ವರ್ಕೌಟ್​ ಆಗಲ್ಲ. ಮಗನಿಗೆ ಕಾಂಗ್ರೆಸ್ ಕನ್ಯೆಯನ್ನು ಮರುಮದುವೆ ಮಾಡಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ," ಎಂದರು.

ನನ್ನ ಬಳಿ ಹಣ ಇದ್ದರಲ್ಲವೇ ಜನರಿಗೆ ಹಂಚೋದು; ಆರೋಪಕ್ಕೆ ಹೆಚ್​.ವಿಶ್ವನಾಥ್​​ ತಿರುಗೇಟು

ಕಾಂಗ್ರೆಸ್​ಗೆ ಬೇರೆ ಗತಿಯಿಲ್ಲದೇ ಜೆಡಿಎಸ್​  ಬಾಗಿಲು ತಟ್ಟುತ್ತಿದೆ. ಆ ಮೂಲಕ ಜನರ ದಾರಿ ತಪ್ಪಿಸಲು ಈ ರೀತಿ ಹೇಳುತ್ತಿದ್ದಾರೆ. 15 ಕ್ಷೇತ್ರಗಳಲ್ಲೂ ನಾವು ಗೆದ್ದೇ ಗೆಲ್ಲುತ್ತೇವೆ. ಜನರ ಹಾದಿ ತಪ್ಪಿಸುವುದಕ್ಕೆ ಮರುಮೈತ್ರಿ ಮಾತನಾಡುತ್ತಿದ್ದಾರೆ. ಫಲಿತಾಂಶ ಬಂದ ಬಳಿಕ ಬಿಜೆಪಿ ಸರ್ಕಾರ ಮತ್ತಷ್ಟು ಗಟ್ಟಿಯಾಗುತ್ತೆ ಎಂದು ಕಾರಜೋಳ ಹೇಳಿದರು.

ಭಾಗ್ಯಗಳ ಸರ್ಕಾರ ಬರುತ್ತದೆ ಎಂಬ ಎಂಬಿ ಪಾಟೀಲ್ ಹೇಳಿಕೆ ವಿಚಾರಕ್ಕೆ ಡಿಸಿಎಂ ಗೋವಿಂದ ಕಾರಜೋಳ ವ್ಯಂಗ್ಯ ಮಾಡಿದರು. ಎಂ.ಬಿ. ಪಾಟೀಲ್​​ಗೆ ಮತ್ತೆ ಜಲಸಂಪನ್ಮೂಲ ಖಾತೆ ಮೇಲೆ ಕಣ್ಣು ಬಿದ್ದಿದೆ. ಲಿಂಗಾಯತ ನಾಯಕ ತಾನೇ ಸಿಎಂ ಆಗಬೇಕು ಅನ್ನೋ ಕನಸು ಅವರಿಗೆ. ಅದಕ್ಕಾಗಿ ಬೇಕಾಬಿಟ್ಟಿ ಮಾತನಾಡುತ್ತಿದ್ದಾರೆ. ಸಿಎಂ ಆಗುವ ಅವರ ಕನಸು ನನಸ್ಸಾಗಲ್ಲ ಬಿಡಿ ಎಂದು ಲೇವಡಿ ಮಾಡಿದರು.

ಅಯೋಧ್ಯೆ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ನೀಡಿದ ತೀರ್ಪಿಗೆ ಮೊದಲ ಮರುಪರಿಶೀಲನಾ ಅರ್ಜಿ ಸಲ್ಲಿಕೆ

First published:December 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...