ಎಂಟಿಬಿ ಸಂಧಾನ ಸಕ್ಸಸ್​: ಪಕ್ಷದಲ್ಲಿ ಮುನಿಸು ಸಹಜ, ಅತೃಪ್ತರು ಮರಳುವ ವಿಶ್ವಾಸವಿದೆ; ಡಿಸಿಎಂ ಜಿ ಪರಮೇಶ್ವರ್​​

ಎಂಟಿಬಿ ನಾಗರಾಜ್​ನಂತಹ ಹಿರಿಯ ನಾಯಕರು ನಮ್ಮ ಪಕ್ಷದ ಅವಿಭಾಜ್ಯ ಅಂಗ. ಕುಟುಂಬದಲ್ಲಿ ಭಿನ್ನಭಿಪ್ರಾಯ ಹಾಗೂ ಅಸಮಾಧಾನಗಳು ಸಹಜ. ಈ ರೀತಿಯ ಭಿನ್ನಮತಗಳು ಪಕ್ಷದಿಂದಲೇ ಶಮನವಾಗುತ್ತವೆ.-ಪರಮೇಶ್ವರ್​​

Seema.R | news18
Updated:July 13, 2019, 2:22 PM IST
ಎಂಟಿಬಿ ಸಂಧಾನ ಸಕ್ಸಸ್​: ಪಕ್ಷದಲ್ಲಿ ಮುನಿಸು ಸಹಜ, ಅತೃಪ್ತರು ಮರಳುವ ವಿಶ್ವಾಸವಿದೆ; ಡಿಸಿಎಂ ಜಿ ಪರಮೇಶ್ವರ್​​
ಎಂಟಿಬಿ ನಾಗರಾಜ್​-ಡಿಕೆ ಶಿವಕುಮಾರ್​-ಜಿ ಪರಮೇಶ್ವರ್​
Seema.R | news18
Updated: July 13, 2019, 2:22 PM IST
ಬೆಂಗಳೂರು (ಜು.13): ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್​ ಮನವೊಲಿಸುವಲ್ಲಿ ಕಾಂಗ್ರೆಸ್​ ನಾಯಕರು ಯಶಸ್ವಿಯಾಗಿದ್ದಾರೆ.

ಇತ್ತೀಚೆಗಷ್ಟೇ  ವಸತಿ ಸಚಿವರಾಗಿದ್ದ ಎಂಟಿಬಿ ನಾಗಾರಾಜ್​ ರಾಜ್ಯದಲ್ಲಿ ನಡೆದ ದಿಢೀರ್​ ಬೆಳವಣಿಗೆ ಹಿನ್ನೆಲೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್​ ನಾಯಕರಿಗೆ ಶಾಕ್​ ನೀಡಿದರು. ಅಲ್ಪಮತಕ್ಕೆ ಕುಸಿಯುತ್ತಿದ್ದ ಮೈತ್ರಿ ಸರ್ಕಾರಕ್ಕೆ ಇವರ ರಾಜೀನಾಮೆ ಇನ್ನಷ್ಟು ಆಘಾತ ನೀಡಿತ್ತು.

DK Shivakumar
ಡಿಕೆ ಶಿವಕುಮಾರ್​, ಎಂಟಿಬಿ ನಾಗರಾಜ್​


ಸರ್ಕಾರ ಉಳಿಸಿಕೊಳ್ಳಲು ಅತೃಪ್ತರ ಮನವೊಲಿಕೆಗೆ ಮುಂದಾಗಿರುವ  ಡಿಕೆ ಶಿವಕುಮಾರ್​ ಸೇರಿದಂತೆ ಹಲವು ಕಾಂಗ್ರೆಸ್​ ನಾಯಕರು ಇಂದು ಎಂಟಿಬಿ ನಾಗರಾಜ್​ ಮನೆಗೆ ಭೇಟಿ ನೀಡಿ ರಾಜೀನಾಮೆ ಹಿಂಪಡೆಯುವಂತೆ ಮನವಿ ಮಾಡಿದರು. ಕಾಂಗ್ರೆಸ್​ ನಾಯಕರ ಸಂಧಾನದ ಬಳಿಕ ಅವರು ರಾಜೀನಾಮೆ ಹಿಂಪಡೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಡಿಸಿಎಂ ಟ್ವೀಟ್​ ಮಾಡಿದ್ದು, ನಮ್ಮ ಪಕ್ಷದ ಹಿರಿಯ ನಾಯಕರಾದ ಎಂಟಿಬಿ ನಮ್ಮ ಪಕ್ಷದಲ್ಲಿಯೇ ಉಳಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.



ಎಂಟಿಬಿ ನಾಗರಾಜ್​ನಂತಹ ಹಿರಿಯ ನಾಯಕರು ನಮ್ಮ ಪಕ್ಷದ ಅವಿಭಾಜ್ಯ ಅಂಗ. ಕುಟುಂಬದಲ್ಲಿ ಭಿನ್ನಭಿಪ್ರಾಯ ಹಾಗೂ ಅಸಮಾಧಾನಗಳು ಸಹಜ. ಈ ರೀತಿಯ ಭಿನ್ನಮತಗಳು ಪಕ್ಷದಿಂದಲೇ ಶಮನವಾಗುತ್ತವೆ. ನಾಗರಾಜ್​ ಮತ್ತು ಇನ್ನಿತರ ಶಾಸಕರು ಕೂಡ ತಮ್ಮ ರಾಜೀನಾಮೆ ವಾಪಸ್ಸು ಪಡೆದು ಸರ್ಕಾರಕ್ಕೆ ಮರಳುತ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

ನಾಗರಾಜ್​ ಜೊತೆ  ಸುಧಾಕರ್​ ಮನವೊಲಿಕೆ ಕೂಡ ಬಹುತೇಕ ಯಶಸ್ವಿಯಾಗಿದ್ದು, ಅತೃಪ್ತರೆಲ್ಲ ಪಕ್ಷಕ್ಕೆ ಮರುಳುತ್ತಾರೆ ಎಂಬ ನಂಬಿಕೆ ಇದೆ, ನಮ್ಮ ಸರ್ಕಾರ ಸುಭದ್ರವಾಗಿದ್ದು, ಬಿಜೆಪಿ ಆಶಯ ಈಡೇರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ತಿಳಿಸಿದರು.

ಇದನ್ನು ಓದಿ: ಪಕ್ಷದಲ್ಲಿ ನಮ್ಮ ತಂದೆಯನ್ನು ಮೂಲೆಗುಂಪು ಮಾಡಿದ್ದು ಸೋಕಾಲ್ಡ್​ ಲೀಡರ್​​; ಸೌಮ್ಯಾ ರೆಡ್ಡಿ

ರಾಜೀನಾಮೆ ಹಿಂಪಡೆಯುವ ಕುರಿತು ಮಾತನಾಡಿದ ಎಂಟಿಬಿ ನಾಗರಾಜ್, ಕಾರಣಾಂತರಗಳಿಂದ ನಾನು ರಾಜೀನಾಮೆ ಕೊಟ್ಟಿದ್ದೆ. ಆದ ಕಾರಣಕ್ಕೆ ನನ್ನ ಮನವೊಲಿಸಲು ಇಷ್ಟೊಂದು ನಾಯಕರು ಬಂದಿದ್ದರು. ನಾನು,‌ ಸುಧಾಕರ್ ಇಬ್ಬರು ಒಂದೇ ದಿನ ರಾಜೀನಾಮೆ ಕೊಟ್ಟಿದ್ವಿ. ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಸಹ ಕರೆ ಮಾಡಿದ್ದರು. ರಾಜೀನಾಮೆ ವಾಪಸ್ ಪಡೆಯುವಂತೆ ಮನವೊಲಿಸಿದ್ದಾರೆ. ನಾನು‌ ಸ್ವಲ್ಪ ಕಾಲಾವಕಾಶ ಕೇಳಿದ್ದೇನೆ. ಸುಧಾಕರ್ ಇಲ್ಲಿಲ್ಲ. ಅವರನ್ನು ಕರೆದು ಮಾತನಾಡುತ್ತೇನೆ. ಸುಧಾಕರ್ ಜೊತೆ ಮಾತನಾಡಿ ನಾನು ರಾಜೀನಾಮೆ ವಾಪಸ್ ಪಡೆಯೋದರ ಬಗ್ಗೆ ತೀರ್ಮಾನ  ಮಾಡುತ್ತೇವೆ ಎಂದು ತಿಳಿಸಿದರು.

First published:July 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...