‘ಬಿಜೆಪಿಯಂತೆಯೇ ರಾಜ್ಯಪಾಲರಿಗೂ ಸರ್ಕಾರ ಉರುಳಿಸುವ ಅವಸರ’; ಕಿಡಿಕಾರಿದ ಡಿಸಿಎಂ ಜಿ. ಪರಮೇಶ್ವರ್

ವಿಶ್ವಾಸಮತ ಯಾಚನೆಗೆ ಒಂದು ಗಡುವಿನ ನಂತರ ಇನ್ನೊಂದು ಗಡುವು ನೀಡುತ್ತಿರುವ ರಾಜ್ಯಪಾಲರಿಗೂ ಬಿಜೆಪಿಯಂತೆಯೇ ಸರಕಾರ ಉರುಳಿಸುವ ಅವಸರ. ಆದರೆ, ಅನುಸರಿಸಬೇಕಾದ ಕ್ರಮಗಳನ್ನು ಅನುಸರಿಸಿದ ನಂತರವೇ ವಿಶ್ವಾಸಮತ ಮಂಡಿಸುತ್ತೇವೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

MAshok Kumar | news18
Updated:July 20, 2019, 9:19 AM IST
‘ಬಿಜೆಪಿಯಂತೆಯೇ ರಾಜ್ಯಪಾಲರಿಗೂ ಸರ್ಕಾರ ಉರುಳಿಸುವ ಅವಸರ’; ಕಿಡಿಕಾರಿದ ಡಿಸಿಎಂ ಜಿ. ಪರಮೇಶ್ವರ್
ಡಾ.ಜಿ. ಪರಮೇಶ್ವರ್​
  • News18
  • Last Updated: July 20, 2019, 9:19 AM IST
  • Share this:
ಬೆಂಗಳೂರು (ಜುಲೈ.20); ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಬಿಜೆಪಿ ತುದಿಗಾಲಲ್ಲಿ ನಿಂತಿದೆ. ಆದರೆ, ಸರ್ಕಾರ ಬೀಳಿಸಲು ರಾಜ್ಯಪಾಲರೂ ಸಹ ಬಿಜೆಪಿಯಷ್ಟೇ ಅವಸರ ಮಾಡುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಆರೋಪಿಸಿದ್ದಾರೆ.

ರಾಜ್ಯಪಾಲರ ನಡೆಯ ಕುರಿತು ಟ್ವೀಟ್ ಮೂಲಕ ತಮ್ಮ ಅಸಮಾಧಾನ ಹೊರಹಾಕಿರುವ ಜಿ. ಪರಮೇಶ್ವರ್, “ವಿಶ್ವಾಸಮತ ಯಾಚನೆಗೆ ಒಂದು ಗಡುವಿನ ನಂತರ ಇನ್ನೊಂದು ಗಡುವು ನೀಡುತ್ತಿರುವ ರಾಜ್ಯಪಾಲರಿಗೂ ಬಿಜೆಪಿಯಂತೆಯೇ ಸರಕಾರ ಉರುಳಿಸುವ ಅವಸರ. ಆದರೆ, ಅನುಸರಿಸಬೇಕಾದ ಕ್ರಮಗಳನ್ನು ಅನುಸರಿಸಿದ ನಂತರವೇ ವಿಶ್ವಾಸಮತ ಮಂಡಿಸುತ್ತೇವೆ” ಎಂದು ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ, “ಅಧಿಕಾರಕ್ಕೇರಲು ಬಿಜೆಪಿಗಿರುವ ಚಡಪಡಿಕೆ, ದಾಹಕ್ಕೋಸ್ಕರ ಮನಬಂದಂತೆ ನಡೆದುಕೊಳ್ಳಲಾಗುತ್ತದೆಯೇ?” ಎಂದು ಪ್ರಶ್ನೆ ಮಾಡಿರುವ ಅವರು, ಯಾವುದೇ ಕಾರಣಕ್ಕೂ ವಿಶ್ವಾಸಮತ ನಿರ್ಣಯದ ಮೇಲೆ ವಿಸ್ಕೃತ ಚರ್ಚೆಯಾಗದೆ ಮೈತ್ರಿ ಸರ್ಕಾರ ವಿಶ್ವಾಸಮತ ಯಾಚನೆ ಮಾಡುವುದಿಲ್ಲ ಎಂಬುದನ್ನು ಮತ್ತೊಮ್ಮೆ ಮಾರ್ಮಿಕವಾಗಿ ಉಚ್ಚರಿಸಿದ್ದಾರೆ.

ಮೈತ್ರಿ ನಾಯಕರನ್ನು ಕೆಣಕಿದ ಮಾಜಿ ಕಾನೂನು ಸಚಿವ ಸುರೇಶ್ ಕುಮಾರ್

ಶನಿವಾರದ ಅಧಿವೇಶನದಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಎರಡು ಬಾರಿ ಆದೇಶ ನೀಡಿದ್ದರೂ ಸಹ ಮೈತ್ರಿ ನಾಯಕರು ಹಾಗೂ ಸಿಎಂ ಕುಮಾರಸ್ವಾಮಿ ಈ ಕುರಿತು ತಲೆ ಕೆಡಿಸಿಕೊಂಡಿರಲಿಲ್ಲ. ಪರಿಣಾಮ ಬಿಜೆಪಿ ನಾಯಕರ ಆಕ್ರೋಶದ ನಡುವೆಯೂ ಸಭಾಧ್ಯಕ್ಷರು ಸದನವನ್ನು ಸೋಮವಾರಕ್ಕೆ ಮುಂದೂಡಿದರು.ಈ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರದ ಪರ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿರುವ ಬಿಜೆಪಿ ಹಿರಿಯ ನಾಯಕ ಮಾಜಿ ಕಾನೂನು ಸಚಿವ ಸುರೇಶ್ ಕುಮಾರ್, “100 ಶಾಸಕರಿರುವ ಆಡಳಿತ ಪಕ್ಷ, 107 ಶಾಸಕರಿರುವ ವಿರೋಧ ಪಕ್ಷ. ಇತಿಹಾಸದಲ್ಲೇ ಇದೇ ಮೊದಲು” ಎಂದು ಕಿಡಿಕಾರಿದ್ದಾರೆ.
First published:July 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ