ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ದೆಹಲಿಯಿಂದ ಬೆಂಗಳೂರಿಗೆ (Bengaluru) ಇಂದು ಬೆಳಗಿನ ಜಾವ ವಾಪಾಸ್ ಆಗಿದ್ದಾರೆ. ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru Airport) ಮಾಧ್ಯಮಗಳ ಜೊತೆ ಸಚಿವ ಸಂಪುಟ ರಚನೆ (Cabinet Expansion)x ಕುರಿತು ಮಾತನಾಡಿದರು. ನಮ್ಮ ಮನೆಯಲ್ಲಿ ಒಂದು ಸಣ್ಣ ಕಾರ್ಯಕ್ರಮ ಇರೋ ಕಾರಣ ದೆಹಲಿಯಿಂದ (Delhi) ಬಂದಿದ್ದೇನೆ. ಮತ್ತೆ ಶನಿವಾರ ದೆಹಲಿಗೆ ಹೋಗುತ್ತೇನೆ ಎಂದು ಹೇಳಿದರು. ಕ್ಯಾಬಿನೆಟ್ ರಚನೆಯ ಚರ್ಚೆಗಾಗಿಯೇ ದೆಹಲಿಗೆ ಹೋಗಿದ್ದು, ನಾಳೆ ಒಂದು ದಿನ ಅಷ್ಟೇ, ಎಲ್ಲವನ್ನೂ ತಿಳಿಸುತ್ತೇವೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಸರ್ಕಾರದ ಗ್ಯಾರಂಟಿ ವಿರುದ್ಧ ಸಂಸದ ಪ್ರತಾಪ್ ಸಿಂಹ (MP Pratap Simha) ಪ್ರತಿಕ್ರಿಯೆಗೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದರು. ಜೂನ್ ನಂತರ ಪ್ರತಿಭಟನೆ ಮಾಡೋದಾಗಿ ಪ್ರತಾಪ್ ಸಿಂಹ ಹೇಳಿದ್ದಾರೆ.
ಇಲ್ಲೇ ನಮ್ಮ ಮನೆ ಹತ್ರ ಬಂದು ಮಲಕ್ಕೊಳಕ್ಕೆ ಹೇಳಿ ಎಂದು ವ್ಯಂಗ್ಯ ಮಾಡಿದರು. ಜೂನ್ ಯಾಕೆ ನಾಳೆಯಿಂದಲೇ ಬಂದು ಮಲಕ್ಕೊಳ್ಳಕ್ಕೆ ಹೇಳಿ ಎಂದು ಟಕ್ಕರ್ ನೀಡಿದರು.
ಶನಿವಾರ ಪ್ರಮಾಣ ವಚನ ಸಾಧ್ಯತೆ
ಶನಿವಾರ 11:45ಕ್ಕೆ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ರಾಜಭವನದ ಗಾಜಿನ ಮನೆಯಲ್ಲಿ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಿದ್ದು ಸರ್ಕಾರ ಮನವಿ ಪುರಸ್ಕರಿಸಿದ ರಾಜ್ಯಪಾಲ ಗೆಹ್ಲೋಟ್ ಅವರು ಪ್ರಮಾಣವಚನ ಬೋಧಿಸಲಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಭಾಗಿಯಾಗಿ ತಮ್ಮ ತಮ್ಮವರ ಪರ ಬ್ಯಾಟಿಂಗ್ ಮಾಡ್ತಿದ್ದಾರೆ. ಆದರೆ ಇನ್ನು ಮೂರ್ನಾಲ್ಕು ಬಾರಿ ಮಂತ್ರಿ ಆದವರಿಗೆ ಮತ್ತೆ ಮಂತ್ರಿ ಸ್ಥಾನ ನೀಡದಂತೆ ಡಿಕೆ ಶಿವಕುಮಾರ್ ಹೇಳಿದ್ದಾರಂತೆ.
ಈ ಬಾರಿ ಹೊಸ ಮುಖಗಳಿಗೆ ಅವಕಾಶ ನೀಡೋಣಾ ಅಂತ ಸಿದ್ದರಾಮಯ್ಯ ಲಿಸ್ಟ್ನಲ್ಲಿದ್ದ, ಹೆಚ್.ಸಿ ಮಹದೇವಪ್ಪ, ಪಿರಿಯಾಪಟ್ಟಣ ವೆಂಕಟೇಶ್, ಕೆ.ಎನ್ ರಾಜಣ್ಣ, ಆರ್.ವಿ ದೇಶಪಾಂಡೆ ಹಾಗೂ ರಾಯರೆಡ್ಡಿಗೆ ಮಂತ್ರಿಗಿರಿ ನೀಡಲು ಡಿಕೆ ಶಿವಕುಮಾರ್ ವಿರೋಧ ವ್ಯಕ್ತಿಪಡಿಸಿದ್ದಾರಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ