ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ನಗರಾಭಿವೃದ್ಧಿ (Bengaluru Development) ಖಾತೆ ವಹಿಸಿಕೊಂಡ ಬಳಿಕ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಫುಲ್ ಆಕ್ಟೀವ್ ಆಗಿದ್ದಾರೆ. ಮಿನಿ ಅಸೆಂಬ್ಲಿ (Assembly) ಎಂದೆ ಕರೆಯಲ್ಪಡುವ ಬಿಬಿಎಂಪಿ ಚುನಾವಣೆ (BBMP Election) ಗೆಲ್ಲಲು ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ. ಈ ಸಂಬಂಧ ಇವತ್ತು ಮಾಜಿ ಮೇಯರ್‌ಗಳ (Mayor) ಸಭೆ ನಡೆಸಿದ ಡಿಕೆಶಿ ಕೆಲ ಮಹತ್ವದ ಸೂಚನೆಗಳ ನೀಡಿದ್ದಾರೆ.
ಬಿಬಿಎಂಪಿ ಟಾರ್ಗೆಟ್, ಮಾಜಿ ಮೇಯರ್‌ಗಳ ಮೀಟಿಂಗ್
ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್, ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಕೆಶಿವಕುಮಾರ್ ಇದೀಗ ರಾಜಧಾನಿ ಕಂಟ್ರೋಲ್ ತೆಗೆದುಕೊಳ್ಳೋಕೆ ಭರ್ಜರಿ ಪ್ಲಾನ್ ಮಾಡಿದ್ದಾರೆ. ಜಲಸಂಪನ್ಮೂಲ ಖಾತೆ ಜೊತೆ ಬೆಂಗಳೂರು ಹೊಣೆ ಹೊತ್ತಿರೋ ಡಿಕೆ ಶಿವಕುಮಾರ್ ಈ ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಿ ಅಧಿಕಾರ ಹಿಡಿಯುವ ಸ್ಕೆಚ್ ಹಾಕಿದ್ದಾರೆ. ಹೀಗಾಗಿ ಮೊನ್ನೆಯಷ್ಟೇ ಬಿಬಿಎಂಪಿ ಅಧಿಕಾರಿಗಳ ಸಭೆ ನಡೆಸಿದ್ದ ಡಿಕೆ ಶಿವಕುಮಾರ್, ಮಾಜಿ ಮೇಯರ್‌ಗಳ ಸಭೆ ನಡೆಸಿದ್ದಾರೆ.
ಡಿಕೆಶಿ ಮಾಜಿ ಮೇಯರ್‌ಗಳಾದ ವೆಂಕಟೇಶ್ ಮೂರ್ತಿ, ಸಂಪತ್ ರಾಜ್, ಪದ್ಮಾವತಿ, ಮಂಜುನಾಥ್ ರೆಡ್ಡಿ, ರಾಮಚಂದ್ರಪ್ಪ ಹಾಗೂ ಪಿ.ಆರ್.ರಮೇಶ್ ಸೇರಿ ಹಲವು ಮುಖಂಡರ ಜೊತೆ ಸಭೆ ನಡೆಸಿದ್ದರು. ಪಾಲಿಕೆಯಲ್ಲಿ ಮತ್ತೆ ಅಧಿಕಾರ ಹಿಡಿಯುವ ಸಂಬಂಧ ಚರ್ಚೆ ನಡೆದಿದೆ.
ಸಭೆಯಲ್ಲಿ ಡಿಕೆಶಿ ಚರ್ಚಿಸಿರುವ ವಿಷಯಗಳೇನು?
ಬಿಬಿಎಂಪಿ ಚುನಾವಣೆಗೆ ಎಲ್ಲರೂ ಸಿದ್ದರಾಗಿ ಅಂತ ಕಾಂಗ್ರೆಸ್ ಮಾಜಿ ಮೇಯರ್‌ಗಳಿಗೆ ಸಲಹೆ ನೀಡಿದ್ದಾರೆ. ಅಲ್ಲದೇ ಬೆಂಗಳೂರಿನ 28 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಸದಸ್ಯರೇ ಹೆಚ್ಚು ಆಯ್ಕೆಯಾಗಬೇಕು ಅಂತ ಹೇಳಿದ್ದಾರೆ.
ಶೀಘ್ರದಲ್ಲೇ ಬಿಬಿಎಂಪಿ ಚುನಾವಣೆ ನಡೆಯಲಿದ್ದು, ಸರ್ಕಾರವೇ ಕಾನೂನಾತ್ಮಕ ಹೋರಾಟ ನೋಡಿಕೊಳ್ಳಲಿದೆ ಮೀಸಲಾತಿ, ವಾರ್ಡ್ ಮರುವಿಂಗಡಣೆ ವಿಚಾರ ಸರ್ಕಾರಕ್ಕೆ ಬಿಡಿ ಎಂದು ಸೂಚನೆ ಕೊಟ್ಟಿದ್ದಾರೆ. ಕಾಂಗ್ರೆಸ್ ಸೋತಿರುವ ಕ್ಷೇತ್ರಗಳಲ್ಲಿ ಹೆಚ್ಚು ಆ್ಯಕ್ಟೀವ್ ಆಗಬೇಕು. ಜನೋಪಯೋಗಿ ಯೋಜನೆಗಳ ಬಗ್ಗೆ ಗಮನ ಹರಿಸಿ ಅಂತ ಸೂಚನೆ ಕೊಟ್ಟಿದ್ದಾರೆ. ಅಲ್ಲದೇ ಬಿಬಿಎಂಪಿಯನ್ನು 4 ವಿಭಾಗಗಳನ್ನಾಗಿ ಮಾಡುವ ಸಾಧಕಬಾಧಕಗಳ ಚರ್ಚೆ ನಡೆದಿದೆ.
ಸಭೆಯ ಆರಂಭದಲ್ಲಿ ಬೆಂಗಳೂರು ಅಭಿವೃದ್ಧಿ ಕುರಿತಂತೆ ಸಲಹೆ ಕೇಳಿದ ಡಿಕೆಶಿ , ಮಾಜಿ ಮೇಯರ್‌ಗಳ ಸಲಹೆಯಂತೆ ತ್ಯಾಜ್ಯ ವಿಲೇವಾರಿಗೆ ಕ್ರಮ, 5% ಡಿಸ್ಕೌಂಟ್ ಟ್ಯಾಕ್ಸ್ ಪೇ ಅವಧಿಯನ್ನ ಜೂನ್ 30 ರವರೆಗೆ ವಿಸ್ತರಣೆ ಮಾಡಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದಂತೆಯೇ ಮುಂಬರುವ ಪಾಲಿಕೆ ಚುನಾವಣೆಯಲ್ಲೂ ಹೆಚ್ಚಿನ ಸ್ಥಾನ ಗಳಿಸಿ ತಮ್ಮ ಸಾಮರ್ಥ್ಯ ತೋರಿಸಲು ಡಿಕೆಶಿ ಮುಂದಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ