ಬೆಂಗಳೂರು ಮಳೆಪೀಡಿತ ಪ್ರದೇಶಗಳಿಗೆ ಡಿಸಿಎಂ ಭೇಟಿ; ಅಕ್ರಮ ಕಟ್ಟಡ ತೆರವು, ಇಂಗು ಗುಂಡಿ ನಿರ್ಮಾಣಕ್ಕೆ ಸೂಚನೆ

ನಗರದಲ್ಲಿ ಅಕ್ರಮ ಬಡಾವಣೆಗಳ ಜತೆಗೆ ರೆವಿನ್ಯೂ ಲೇಔಟ್‌ಗಳು ಹೆಚ್ಚಾಗಿದ್ದು, ಅಂಥ ಕಡೆ ಮಳೆ ನೀರು ಹರಿದು ಹೋಗುತ್ತಿಲ್ಲ. ಅವೈಜ್ಞಾನಿಕ ಕಟ್ಟಡಗಳ ನಿರ್ಮಾಣದಿಂದ ಈ ಸಮಸ್ಯೆಗಳು ಉಂಟಾಗಿವೆ.

news18-kannada
Updated:October 21, 2020, 9:09 PM IST
ಬೆಂಗಳೂರು ಮಳೆಪೀಡಿತ ಪ್ರದೇಶಗಳಿಗೆ ಡಿಸಿಎಂ ಭೇಟಿ; ಅಕ್ರಮ ಕಟ್ಟಡ ತೆರವು, ಇಂಗು ಗುಂಡಿ ನಿರ್ಮಾಣಕ್ಕೆ ಸೂಚನೆ
ಮಳೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಡಿಸಿಎಂ ಅಶ್ವತ್ಥನಾರಾಯಣ
  • Share this:
ಬೆಂಗಳೂರು(ಅಕ್ಟೋಬರ್​. 21): ಮಳೆ ನೀರಿನಿಂದ ನೆರೆ ಉಂಟಾಗಿ ಸಂಕಷ್ಟಕ್ಕೆ ಒಳಗಾಗಿದ್ದ ರಾಜರಾಜೇಶ್ವರಿ ನಗರದ ಗುರುದತ್ತ ಬಡಾವಣೆಗೆ ಬುಧವಾರ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ, ಕೂಡಲೇ ಅಗತ್ಯ ಜಾಗಗಳಲ್ಲಿ ಇಂಗು ಗುಂಡಿಗಳನ್ನು ತೋಡುವುದು ಹಾಗೂ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ಮತ್ತಿತರೆ ಅಧಿಕಾರಿಗಳೊಂದಿಗೆ ಆಗಮಿಸಿದ ಡಿಸಿಎಂ, ಹಾನಿಗೊಳಗಾದ ಸ್ಥಳಗಳನ್ನು ಪರಿಶೀಲಿಸಿದರು. ಕಾಲುವೆಗಳ ಒತ್ತುವರಿ ಮತ್ತು ಕಾಂಕ್ರಿಟ್‌ ಹೆಚ್ಚುತ್ತಿರುವ ಕಾರಣದಿಂದ ಮಳೆ ನೀರು ಇಂಗುವುದಕ್ಕೆ ಆಗುತ್ತಿಲ್ಲ. ಹೀಗಾಗಿ ಸುರಿದ ಮಳೆಯಲ್ಲ ರಸ್ತೆಗಳಲ್ಲಿ ಪ್ರವಾಹವಾಗಿ ಹರಿದು ಮನೆಗಳಿಗೆ ನೀರು ನುಗ್ಗುತ್ತಿದೆ. ತುರ್ತು ಆದ್ಯತೆಯ ಮೇರೆಗೆ ಇಂಗು ಗುಂಡಿಗಳನ್ನು ಮಾಡಲು ಸೂಚಿಸಲಾಗಿದೆ ಎಂದರು. ಒತ್ತುವರಿ ತೆರವುಈಗಾಗಲೇ ರಾಜಕಾಲುವೆ ಹಾಗೂ ಮಳೆ ನೀರು ಹರಿದುಹೋಗುವ ಜಾಗಗಳಲ್ಲಿ ಅಕ್ರಮವಾಗಿ ನಿರ್ಮಾಣವಾಗಿದ್ದ 1,100 ಕಟ್ಟಡಗಳನ್ನು ತೆರವು ಮಾಡಲಾಗಿದೆ ಎಂದು ತಿಳಿಸಿದರು.

ಇನ್ನೂ 700 ಕಟ್ಟಡಗಳನ್ನು ತೆರವು ಮಾಡಬೇಕಿದೆ. ಕೋವಿಡ್‌ ಕಾರಣದಿಂದ ಈ ತೆರವು ವಿಳಂಬವಾಗಿದೆ. ನ್ಯಾಯಾಲಯವೂ ಈ ವೈರಸ್‌ ಪೀಡಿಯಿರುವ ಕಾಲದಲ್ಲಿ ತೆರವುಗೊಳಿಸಬೇಡಿ ಎಂದು ಆದೇಶ ನೀಡಿದ್ದು, ನವೆಂಬರ್‌ ನಂತರ ಮಾಡಿ ಎಂದು ಸೂಚಿಸಿದೆ. ಹೀಗಾಗಿ ಮಳೆಗಾಲದ ನಂತರ ಉಳಿದ ಅಕ್ರಮ ನಿರ್ಮಾಣಗಳನ್ನು ತಪ್ಪದೇ ತೆರವು ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಮಳೆಯ ನೀರು ಹರಿಯುವ ನಗರದ ಒಟ್ಟು 800 ಕಿ.ಮೀ ಉದ್ದದ ಕಾಲುವೆಗಳಲ್ಲಿ 400 ಕಿ.ಮೀ ಉದ್ದದ ಕಾಲುವೆಗಳನ್ನು ಆಧುನಿಕವಾಗಿ ನವೀಕರಣ ಮಾಡಲಾಗಿದೆ. ಉಳಿದ 400 ಕಿ.ಮೀ ಉದ್ದದ ಕಾಲುವೆಗಳನ್ನು ಆದಷ್ಟು ಬೇಗ ನವೀಕರಣ ಮಾಡಲಾಗುವುದು. ಮತ್ತೊಂದೆಡೆ ಅಕ್ರಮ ಕಟ್ಟಡಗಳ ತೆರವು ಎರಡನ್ನೂ ಯುದ್ಧೋಪಾದಿಯಲ್ಲಿ ಕೈಗೊಳ್ಳಲಾಗುವುದು ಎಂದರು.

ಅಕ್ರಮ ಬಡಾವಣೆ, ರೆವಿನ್ಯೂ ಲೇಔಟ್‌:

ನಗರದಲ್ಲಿ ಅಕ್ರಮ ಬಡಾವಣೆಗಳ ಜತೆಗೆ ರೆವಿನ್ಯೂ ಲೇಔಟ್‌ಗಳು ಹೆಚ್ಚಾಗಿದ್ದು, ಅಂಥ ಕಡೆ ಮಳೆ ನೀರು ಹರಿದು ಹೋಗುತ್ತಿಲ್ಲ. ಅವೈಜ್ಞಾನಿಕ ಕಟ್ಟಡಗಳ ನಿರ್ಮಾಣದಿಂದ ಈ ಸಮಸ್ಯೆಗಳು ಉಂಟಾಗಿವೆ. ಇದೆಲ್ಲಕ್ಕೂ ಶಾಶ್ವತ ಪರಿಹಾರವನ್ನು ರೂಪಿಸುವ ನಿಟ್ಟಿನಲ್ಲಿ ಬಿಬಿಎಂಪಿ, ಜಲ ಮಂಡಳಿ, ಒಳ ಚರಂಡಿ ಮಂಡಳಿಗಳನ್ನು ಒಟ್ಟಾಗಿಸಿ ಕೆಲಸ ಮಾಡಲಾಗುತ್ತಿದೆ. ಅದರ ಫಲಿತಾಂಶ ಕೆಲ ದಿನಗಳಲ್ಲೇ ನಿಮಗೆ ಗೋಚರವಾಗಲಿವೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ಇನ್ನು ಬಿಬಿಎಂಪಿ ಕಮಿಷಿನರ್ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಬೆಂಗಳೂರಿನಲ್ಲಿ ಮಳೆಯಿಂದಾಗಿ ಮೂವತ್ತು ವಾರ್ಡಿನಲ್ಲಿ 160 ಮಿ.ಮೀಗಿಂತಲೂ ಹೆಚ್ಚು ಮಳೆಯಾಗಿ ಸಮಸ್ಯೆಯಾಗಿದೆ. ಬೆಳಗ್ಗೆ ಹಲವು ಕಡೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಆರ್ ಆರ್ ನಗರ, ಕೋರಮಂಗಲ, ಬೊಮ್ಮನಹಳ್ಳಿ ಲಿ ಹೆಚ್ಚಿನ ಮಳೆಯಾಗಿದೆ. ಹೊಸಕೆರೆ ಹಳ್ಳಿ ರಾಜಕಾಲುವೆಗೆ ಆರ್ ಸಿಸಿ ತಡೆಗೋಡೆ ನಿರ್ಮಿಸಿ ಶಾಶ್ವತವಾಗಿ ಸಮಸ್ಯೆ ಬಗೆಹರಿಸಲಾಗಿದೆ.‌ ಒಂದು ತಿಂಗಳ ಕಾಲ ಕಾಮಗಾರಿ ಜರುಗಲಿದ್ದು, ರಾಜಕಾಲುವೆ ಪಕ್ಕದಲ್ಲಿ ಇರುವ ಮನೆಯ ನಿವಾಸಿಗಳಿಗೆ ತಾತ್ಕಾಲಿಕ ಪರ್ಯಾಯ ವಸತಿ ವ್ಯವಸ್ಥೆ ಮಾಡಲಾಗುವುದು. ಇಂದು ಸಹ ಬೆಂಗಳೂರಿನಲ್ಲಿ ಹೆಚ್ಚು ಮಳೆಯಾಗಲಿದ್ದು ಇದಕ್ಕೆ ಬೇಕಾದ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಇದನ್ನೂ ಓದಿ : ನಮಗೇನು ತಿನ್ನುವುದಕ್ಕೆ ಅನ್ನ ಸಿಗುತ್ತಿದೆ.. ಜಾನುವಾರುಗಳ ಗತಿಯೇನು - ಭೀಮೆ ಸಂತ್ರಸ್ತರ ಗೋಳುಇಂದು ಬೆಂಗಳೂರಿನಲ್ಲಿ ಇನ್ನೆಡು ಭಾರೀ ಮಳೆ ಸಾಧ್ಯತೆಯಿದೆ. ಮಳೆ ಎದುರಿಸಲು ಬಿಬಿಎಂಪಿ ಸರ್ವ ರೀತಿಯಲ್ಲಿ ಸಜ್ಜಾಗಿದೆ. ಈಗಾಗಲೇ ಸೂಕ್ಷ್ಮ‌ ಪ್ರದೇಶಗಳಲ್ಲಿ ಬಿಬಿಎಂಪಿ ಸಿಬ್ಬಂದಿ ತಂಡ ಕಾರ್ಯನಿರ್ವಹಿಸುತ್ತಿದೆ. ನಿನ್ನೆ ಮಳೆಯಿಂದಾದ ಸಮಸ್ಯೆಗೆ ತಕ್ಷಣ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಬಿಬಿಎಂಪಿ ಕಂಟ್ರೋಲ್ ರೂಮ್ ನಲ್ಲಿ ಬರುವ ದೂರುಗಳನ್ನು ಬಗೆಹರಿಸಲಾಗುವುದು. ಕಂಟ್ರೋಲ್ ರೂಮ್ ದೂರುಗಳ ಮೇಲೆ ನಿಗಾವಹಿಸಲಾಗುವುದು. ನಿನ್ನೆ ರಾತ್ರಿಯೆಲ್ಲ ಬಿಬಿಎಂಪಿ ಕೆಲಸ ಮಾಡಲಾಗಿದೆ. ಇಂದು ಸಹ ರಾತ್ರಿ ಅಧಿಕಾರಿ, ಸಿಬ್ಬಂದಿ ಸನ್ನದ್ಧರಾಗಿದ್ದಾರೆ ಎಂದರು.
Published by: G Hareeshkumar
First published: October 21, 2020, 9:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading