ಕಾಂಗ್ರೆಸ್​​-ಜೆಡಿಎಸ್ ವಾರ್​ ಡಿಕ್ಲೇರ್​​ ಮಾಡಿವೆ; ಹೊಂದಾಣಿಕೆ ಸಾಧ್ಯವೇ ಇಲ್ಲ; ಡಿಸಿಎಂ ಅಶ್ವಥ್​​ ನಾರಾಯಣ

ಕಾಂಗ್ರೆಸ್​ ಮತ್ತು ಜೆಡಿಎಸ್​​ ನಡುವೆ ಹೊಂದಾಣಿಕೆ ಸಾಧ್ಯವೇ ಇಲ್ಲ. ಈಗಾಗಲೇ ಎರಡು ಪಕ್ಷಗಳು ವಾರ್​​ ಡಿಕ್ಲೇರ್​​ ಮಾಡಿವೆ. ಕಾಂಗ್ರೆಸ್​-ಜೆಡಿಎಸ್​​ ಮಧ್ಯೆ ಹೊಂದಾಣಿಕೆ ಬದಲಿಗೆ ವೈರತ್ವ ಇದೆ ಎಂದು ಡಿಸಿಎಂ ಕುಟುಕಿದರು.

news18-kannada
Updated:November 22, 2019, 10:48 AM IST
ಕಾಂಗ್ರೆಸ್​​-ಜೆಡಿಎಸ್ ವಾರ್​ ಡಿಕ್ಲೇರ್​​ ಮಾಡಿವೆ; ಹೊಂದಾಣಿಕೆ ಸಾಧ್ಯವೇ ಇಲ್ಲ; ಡಿಸಿಎಂ ಅಶ್ವಥ್​​ ನಾರಾಯಣ
ಅಶ್ವತ್ಥ್ ನಾರಾಯಣ್
  • Share this:
ಮೈಸೂರು(ನ.22): ಕಾಂಗ್ರೆಸ್​​-ಜೆಡಿಎಸ್​​ ನಡುವೆ ವಾರ್​​ ಡಿಕ್ಲೇರ್​​​ ಆಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಉಪಚುನಾವಣೆಯಲ್ಲಿ ಒಂದೇ ಒಂದು ಕ್ಷೇತ್ರ ಗೆಲ್ಲೋದಿಲ್ಲ ನೋಡ್ತಿರಿ ಎಂದು ಬಿಜೆಪಿ ಹಿರಿಯ ನಾಯಕ ಮತ್ತು ಡಿಸಿಎಂ ಅಶ್ವಥ್​​ ನಾರಾಯಣ ಸವಾಲ್​​​ ಹಾಕಿದರು.

ಇಂದು ಮಂಡ್ಯದ ಕೆ.ಆರ್​​ ಪೇಟೆಯಲ್ಲಿ ಅನರ್ಹ ಶಾಸಕ ನಾರಾಯಣಗೌಡ ಪರವಾಗಿ ಉಪ ಮುಖ್ಯಮಂತ್ರಿ ಅಶ್ವಥ್​​ ನಾರಾಯಣ ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ಸುದ್ದಿಗಾರರ ಜತೆ ಮಾತಾಡಿದ ಡಿಸಿಎಂ, ಕಾಂಗ್ರೆಸ್​ ಮತ್ತು ಜೆಡಿಎಸ್​​ ನಡುವೆ ಹೊಂದಾಣಿಕೆ ಸಾಧ್ಯವೇ ಇಲ್ಲ. ಈಗಾಗಲೇ ಎರಡು ಪಕ್ಷಗಳು ವಾರ್​​ ಡಿಕ್ಲೇರ್​​ ಮಾಡಿವೆ. ಕಾಂಗ್ರೆಸ್​-ಜೆಡಿಎಸ್​​ ಮಧ್ಯೆ ಹೊಂದಾಣಿಕೆ ಬದಲಿಗೆ ವೈರತ್ವ ಇದೆ ಎಂದು ಕುಟುಕಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್​ನಲ್ಲಿ ಏಕಾಂಗಿಯಾಗಿದ್ದಾರೆ. ರಾಜ್ಯ ಕಾಂಗ್ರೆಸ್​ ನಾಯಕರು ಸಿದ್ದರಾಮಯ್ಯರನ್ನು ಏಕಾಂಗಿ ಮಾಡಬೇಕೆಂದು ನಿರ್ಧರಿಸಿದ್ದಾರೆ. ಹಾಗಾಗಿ ಸಿದ್ದರಾಮಯ್ಯರ ವಿರುದ್ಧ ಕಾಂಗ್ರೆಸ್​ ಸಮರ ಸಾರುತ್ತಿದೆ. ಕಾಂಗ್ರೆಸ್​​ 15 ಕ್ಷೇತ್ರಗಳ ಪೈಕಿ ಒಂದೇ ಒಂದು ಕ್ಷೇತ್ರ ಗೆಲ್ಲೋದಿಲ್ಲ. ನಮ್ಮ ಬಗ್ಗೆಯೇನು ಸಿದ್ದರಾಮಯ್ಯ ಮಾತಾಡೋದು ಎಂದು ಡಿಸಿಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅಥಣಿ ಉಪಚುನಾವಣೆ: ಎಂ.ಬಿ ಪಾಟೀಲ್​​ ಸಂಧಾನ ಯಶಸ್ಸು; ಕಾಂಗ್ರೆಸ್​ ಬಂಡಾಯ ಅಭ್ಯರ್ಥಿಗಳ ನಾಮಪತ್ರ ವಾಪಸ್​

ಕೆ.ಆರ್​​ ಪೇಟೆ ಉಪಚುನಾವಣೆಯೀಗ ರಂಗೇರಿದೆ. ಮೂರು ಪಕ್ಷಗಳು ಮತದಾರರನ್ನು ಸೆಳೆಯಲು ಸಾಕಷ್ಟು ಸರ್ಕಸ್​​ ಮಾಡುತ್ತಿವೆ. ಜೆಡಿಎಸ್ ತನ್ನ ಭದ್ರ ಕೋಟೆಯನ್ನು ಉಳಿಸಿಕೊಳ್ಳಬೇಕೆಂದು ಜಿದ್ದಿಗೆ ಬಿದ್ದಿದೆ. ಇನ್ನೊಂದೆಡೆ ಕಾಂಗ್ರೆಸ್ ಗೆಲ್ಲುವ ಮೂಲಕ ಮತ್ತೆ ಕೆ.ಆರ್​​ ಪೇಟೆ ಮತ್ತೆ ವಶಕ್ಕೆ ಪಡೆಯಬೇಕೆಂದು ಮುಂದಾಗಿದೆ. ಈ ಮಧ್ಯೆ ಬಿಜೆಪಿಯೂ ಗೆಲ್ಲುವ ಮೂಲಕ ಬಾವುಟ ಹಾರಿಸಬೇಕೆಂಬ ಕನಸು ಕಾಣುತ್ತಿದೆ.

ಕೆ.ಆರ್ ಪೇಟೆ ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳೇ ನಿರ್ಣಾಯಕ. ಈ ಕ್ಷೇತ್ರದಲ್ಲಿ 90 ಸಾವಿರಕ್ಕೂ ಹೆಚ್ಚು ಒಕ್ಕಲಿಗರ ಮತಗಳು ಇವೆ. ಈ ಮತಗಳೇ ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅಸ್ತ್ರವಾಗಿವೆ. ಇನ್ನೊಂದೆಡೆ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಕೂಡ ಒಕ್ಕಲಿಗರ ಮತಗಳ ಸೆಳೆಯಲು ಮುಂದಾಗಿದ್ದಾರೆ. ಬಿಜೆಪಿಯೂ ಒಕ್ಕಲಿಗ ಸಮುದಾಯದ ಪ್ರಬಲ ನಾಯಕರಾದ ಅಶ್ವಥ್ ನಾರಾಯಣ್ ಹಾಗೂ ಆರ್. ಅಶೋಕ್‍ಗೆ ಕೆ.ಆರ್ ಪೇಟೆ ಚುನಾವಣೆ ಉಸ್ತುವಾರಿ ನೀಡಿದೆ.
First published:November 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ