HOME » NEWS » State » DCM ASHWATH NARAYAN SPEAKS WITH JAPAN AMBASSADOR IN DELHI INVITING JAPANESE INVESTMENT IN KARNATAKA SNVS

ಬಂಡವಾಳ ಹೂಡಿಕೆಗಾಗಿ ಜಪಾನ್ ರಾಯಭಾರಿ ಜೊತೆ ಡಿಸಿಎಂ ಅಶ್ವಥ್ ನಾರಾಯಣ್ ಮಾತುಕತೆ

ವಾಣಿಜ್ಯ, ಕೈಗಾರಿಕೆ ಕ್ಷೇತ್ರಗಳಲ್ಲಿ ಕರ್ನಾಟಕ-ಜಪಾನ್ ನಡುವೆ ಅತ್ಯಂತ ವಿಶ್ವಾಸಪೂರ್ಣ, ಗಾಢ ಬಾಂಧವ್ಯವಿದ್ದು ಅದನ್ನು ಮುಂದೆಯೂ ಮುಂದುವರೆಸಿಕೊಂಡು ಹೋಗುವುದು ಸರಕಾರದ ಇಚ್ಚೆಯಾಗಿದೆ ಎಂದು ಉಪಮುಖ್ಯಮಂತ್ರಿಗಳು ಜಪಾನ್ ಪ್ರತಿನಿಧಿಗಳ ಗಮನಕ್ಕೆ ತಂದರು.

news18-kannada
Updated:June 22, 2020, 10:48 PM IST
ಬಂಡವಾಳ ಹೂಡಿಕೆಗಾಗಿ ಜಪಾನ್ ರಾಯಭಾರಿ ಜೊತೆ ಡಿಸಿಎಂ ಅಶ್ವಥ್ ನಾರಾಯಣ್ ಮಾತುಕತೆ
ವಿಡಿಯೋ ಸಂವಾದದಲ್ಲಿ ಡಿಸಿಎಂ ಅಶ್ವಥ್ ನಾರಾಯಣ್ ಹಾಗೂ ಕರ್ನಾಟಕದ ಅಧಿಕಾರಿಗಳು
  • Share this:
ಬೆಂಗಳೂರು(ಜೂನ್ 22): ಕೋವಿಡ್-19 ಬಿಕ್ಕಟ್ಟಿನಿಂದ ಉದ್ಭವಿಸಿರುವ ಆರ್ಥಿಕ ದುಸ್ಥಿತಿಯನ್ನು ನೀಗಿಸಲು ಪ್ರಯತ್ನಿಸುತ್ತಿರುವ ರಾಜ್ಯ ಸರ್ಕಾರ ಬಂಡವಾಳ ಹೂಡಿಕೆ ಆಕರ್ಷಿಸಲು ಕಸರತ್ತು ನಡೆಸಿದೆ. ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಅವರು ಇಂದು ಬಂಡವಾಳ ಹೂಡಿಕೆಗಾಗಿ ಜಪಾನ್ ರಾಯಭಾರಿ ಜತೆ ಮಾತುಕತೆ ನಡೆಸಿದರು.

ದಿಲ್ಲಿಯ ಜಪಾನ್ ರಾಯಭಾರಿ ಕಚೇರಿಯ ಹಿರಿಯ ಅಧಿಕಾರಿಗಳ ಜತೆ ಡಿಸಿಎಂ ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಹತ್ವದ ಮಾತುಕತೆ ನಡೆಸಿದರು. ದೆಹಲಿಯಲ್ಲಿನ ಜಪಾನ್ ರಾಯಭಾರಿ ಕಚೇರಿಯ ಮುಖ್ಯಸ್ಥ ಶಿಂಗೋ ಮಿಮಯಾಮಟೋ ಮತ್ತಿತರೆ ಹಿರಿಯ ಅಧಿಕಾರಿಗಳ ಜತೆಗಿನ ವಿಡಿಯೋ ಸಂವಾದದಲ್ಲಿ ಡಿಸಿಎಂ ಜೊತೆ ಐಟಿ- ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ, ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವಗುಪ್ತ, ಐಟಿ‌ ನಿರ್ದೇಶಕಿ ಮೀನಾ ನಾಗರಾಜ ಅವರೂ ಇದ್ದರು.

ವಾಣಿಜ್ಯ, ಕೈಗಾರಿಕೆ ಕ್ಷೇತ್ರಗಳಲ್ಲಿ ಕರ್ನಾಟಕ-ಜಪಾನ್ ನಡುವೆ ಅತ್ಯಂತ ವಿಶ್ವಾಸಪೂರ್ಣ, ಗಾಢ ಬಾಂಧವ್ಯವಿದ್ದು ಅದನ್ನು ಮುಂದೆಯೂ ಮುಂದುವರೆಸಿಕೊಂಡು ಹೋಗುವುದು ಸರಕಾರದ ಇಚ್ಚೆಯಾಗಿದೆ ಎಂದು ಡಿಸಿಎಂ, ಜಪಾನ್ ಪ್ರತಿನಿಧಿಗಳ ಗಮನಕ್ಕೆ ತಂದರು.

ಇದನ್ನೂ ಓದಿ: ಐತಿಹಾಸಿಕ ಜಗನ್ನಾಥ ರಥಯಾತ್ರೆಗೆ ಸುಪ್ರೀಂ ಅನುಮತಿ; ಪುರಿ ನಗರದಲ್ಲಿ ರಾತ್ರಿ 8 ರಿಂದಲೇ ಕರ್ಫ್ಯೂ ಜಾರಿ

ರಾಜ್ಯದಲ್ಲಿ ಕೋವಿಡ್ ಪೂರ್ಣವಾಗಿ ಹತೋಟಿಯಲ್ಲಿದ್ದು, ಆರೋಗ್ಯ ಮತ್ತು ಚಿಕಿತ್ಸೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಇಲ್ಲ. ಎಲ್ಲವನ್ನೂ ಅತ್ಯಂತ ಪರಿಣಾಮಕಾರಿಯಾಗಿ ಸರಕಾರ ನಿರ್ವಹಿಸುತ್ತಿದೆ. ಜಪಾನ್ ಉದ್ಯೋಗಿಗಳು ಧೈರ್ಯವಾಗಿ ರಾಜ್ಯದಲ್ಲಿ ತಮ್ಮ ಚಟುವಟಿಕೆಯಲ್ಲಿ ತೊಡಗಬಹುದು ಎಂದು ಉಪ ಮುಖ್ಯಮಂತ್ರಿ ಅಭಯ ನೀಡಿದರು.

ಇದೇ ವೇಳೆ ಈಗಾಗಲೇ ಜಪಾನಿನ ಹೆಸರಾಂತ ಆರೋಗ್ಯ ಸಂಸ್ಥೆ ’ಸಕ್ರಿಯೋ’ ಬೆಂಗಳೂರಿನಲ್ಲಿ ’ಸಕ್ರಿ’ ಎಂಬ ಹೆಸರನಲ್ಲಿ ಅತ್ಯಾಧುನಿಕ ಆಸ್ಪತ್ರೆಯನ್ನು ಸ್ಥಾಪನೆ ಮಾಡಿದೆ. ಅನಾರೋಗ್ಯಕ್ಕೆ ತುತ್ತಾಗುವ ಜಪಾನಿ ಪ್ರಜೆಗಳಿಗೆ ಇಲ್ಲಿ ಅತ್ಯುತ್ತಮ ಚಿಕಿತ್ಸೆ ಸಿಗುತ್ತಿದೆ ಎಂದು ಡಿಸಿಎಂ ಮಾಹಿತಿ ನೀಡಿದರು. ರಾಜ್ಯದಲ್ಲಿ ವಾಣಿಜ್ಯ ಹಾಗೂ ಕೈಗಾರಿಕೆಗೆ ಬೇಕಾದ ಅತ್ಯುತ್ತಮ ಪೂರಕ ವಾತಾವರಣವಿದೆ. ಹೊಸದಾಗಿ ವಿದೇಶಿ ಬಂಡವಾಳ ಹೂಡಿಕೆ ಹಾಗೂ ಕೈಗಾರಿಕೆ ಸ್ಥಾಪಿಸಲು ಸರಕಾರ ನಿಯಮಗಳನ್ನು ಸರಳಗೊಳಿಸಿದೆ. ಮುಖ್ಯ ಅಡ್ಡಿಯಾಗಿದ್ದ ಭೂಸ್ವಾಧೀನಕ್ಕೆ ಈಗ ಯಾವ ಸಮಸ್ಯೆಯೂ ಇಲ್ಲ. ಉದ್ದಿಮೆದಾರರು ನೇರವಾಗಿ ರೈತರಿಂದ ಭೂಮಿಯನ್ನು ಖರೀದಿ ಮಾಡಬಹುದು. ಇಲ್ಲಿ ಯಾವುದೇ ರೆಡ್ ಟೇಪಿಸಂ, ಮಧ್ಯಸ್ಥಿಕೆ ಇರುವುದಿಲ್ಲ ಎಂದು ಡಿಸಿಎಂ ತಿಳಿಸಿದರು.

ಇದನ್ನೂ ಓದಿ: ಸಚಿವ ಸುಧಾಕರ್ ತಂದೆ, ಮಾಗಡಿ ಮಾಜಿ ಶಾಸಕ ಬಾಲಕೃಷ್ಣ ಮಗಳಿಗೆ ಕೊರೋನಾ ಸೋಂಕುಅಲ್ಲದೇ ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆ ಮಾಡಿ ದೇಶದಲ್ಲಿ ಆರೋಗ್ಯ ಕ್ಷೇತ್ರ ವೇಗವಾಗಿ ಬೆಳೆಯುತ್ತಿದೆ. ಕಳೆದ ಸಾಲಿನಲ್ಲಿ ಶೇ 35ರಿಂದ 45 ಅಭಿವೃದ್ಧಿಯನ್ನು ಇದು ದಾಖಲಿಸಿದೆ. ಅದೇ ರೀತಿ ಕರ್ನಾಟಕದಲ್ಲೂ ಈ ಕ್ಷೇತ್ರ ನಾಗಾಲೋಟದಲ್ಲಿ ಮುನ್ನಡೆಯುತ್ತಿದೆ. ನುರಿತ ವೃದ್ಯರ ಜತೆಗೆ, ಅದಕ್ಕೆ ಪೂರಕವಾದ ಅತ್ಯುತ್ತಮ, ಕೌಶಲ್ಯಭರಿತ ಮಾನವ ಸಂಪನ್ಮೂಲ ಕರ್ನಾಟಕದಲ್ಲಿ ಲಭ್ಯವಿರುವುದು ಹೆಚ್ಚು ಸಹಕಾರಿ. ಹೀಗಾಗಿ ಜಪಾನಿನ ಆರೋಗ್ಯ ಕಂಪನಿಗಳು ಹೆಚ್ಚು ಹೆಚ್ಚಾಗಿ ರಾಜ್ಯದಲ್ಲಿ ಹೂಡಿಕೆ ಮಾಡಬೇಕು ಎಂಬುದು ನಮ್ಮ ಆಶಯವಾಗಿದೆ. ಇದರ ಜತೆಗೆ ಸೆಮಿಕಂಡಕ್ಟರ್, ಎಪಿಎಂ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದರೆ ಅಗತ್ಯ ರಿಯಾಯಿತಿ, ಹೆಚ್ಚುವರಿ ಸೌಲಭ್ಯಗಳನ್ನು ನೀಡಲಾಗುವುದು ಎಂದು ಡಿಸಿಎಂ ಉದ್ದಿಮೆದಾರರಿಗೆ ಮುಕ್ತ ಭರವಸೆ ನೀಡಿದರು.ಉತ್ಪಾದನಾ ಕ್ಷೇತ್ರದಲ್ಲಿ ಹಿಂದೆಲ್ಲ ಪ್ರತಿಯೊಬ್ಬರೂ ಚೀನಾ ಕಡೆ ನೋಡುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಈ ವಲಯದಲ್ಲಿ ಭಾರತ ನಾಗಾಲೋಟದಲ್ಲಿ ಮುನ್ನುಗ್ಗುತ್ತಿದೆ. ಕರ್ನಾಟಕ ರಾಜ್ಯವಂತೂ ಅತ್ಯಂತ ವ್ಯವಸ್ಥಿತವಾಗಿ ಮುಂದೆ ಸಾಗುತ್ತದೆ. ಈಗಾಗಲೇ ರಾಜ್ಯದಲ್ಲಿ ಜಪಾನ್ ಹೂಡಿಕೆ ಭಾರೀ ಪ್ರಮಾಣದಲ್ಲಿ ಆಗಿದೆ. ಮುಂದಿನ ದಿನಗಳಲ್ಲಿ ಅದು ಹೆಚ್ಚಾಗಬೇಕು. ಇದಕ್ಕಾಗಿ ಕರ್ನಾಟಕ ಮತ್ತು ಜಪಾನ್ ಜತೆಯಾಗಿ ಕೆಲಸ ಮಾಡಬೇಕಾಗಿದೆ ಎಂದು ಡಿಸಿಎಂ ತಿಳಿಸಿದರು.
First published: June 22, 2020, 10:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories